Girl in a jacket

Author kendhooli_editor

೨೫ ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಒದಗಿಸಲು ಸಿಎಂ ಸೂಚನೆ

ಪ್ರತಿಮನೆಗೂ ಕುಡಿಯುವ ನೀರಿನ ಸೌಲಭ್ಯ ಒದಿಸುವ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆಯಡಿ ೨೫ ಲಕ್ಷ ಗ್ರಾಮೀಣ ಮನೆಗಳಿಗೆ ನೀರು ಒದಿಸುವ ಕುರಿತು ಇಂದು ನಡೆದ ಸಭೆಯಲ್ಲಿ ಕೂಡಲೇ ನೀರು ಒದಗಿಸುವಂತೆ ಅಧಿಕಾರಿಗೆ ಸಿಎಂ ಸೂಚಿಸಿದ್ದಾರೆ. ಬೆಂಗಳೂರು, ಜೂ.೨೨: ಜಲಜೀವನ್ ಮಿಷನ್ ಯೋಜನೆಯಡಿ ೨೫ಲಕ್ಷ ಗ್ರಾಮೀಣಭಾಗದ ಮನೆಗಳಿಗೆ ಕುಡಿಯುವ ನೀರು ಬದಗಿಸುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಜಲಜೀವನ್ ಮಿಷನ್ ಯೋಜನೆ ಪ್ರಗತಿ ಪರಿಶೀಲನೆ ನಡೆಸಿದ ಅವರು,…

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ. ನೇರಳೆ ಹಣ್ಣಿನ ರಾಶಿಯ ಬಗ್ಗೆ ಆಡಿದ ಸಿದ್ಧನ ಮಾತು, ಹುಡುಗರ ಜ್ಞಾನದ ಕಣ್ಣನ್ನು ತೆರೆಸಿತು! ಈಶನನ್ನು ,ಈಶರೂಪಿ ಸಿದ್ಧನನ್ನು ಮರೆತಿದ್ದಕ್ಕೆ ಮರುಕಪಟ್ಟರು. ” ತಾವು ತಪ್ಪು ಮಾಡಿರುವುದರಿಂದ ಇನ್ನು ಹಣ್ಣು ತಿನ್ನುವುದು ಬೇಡ, ಇವುಗಳನ್ನು ಇಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗೋಣ” – ಎಂದರು. ಆಗ ಸಿದ್ಧ ಹೇಳಿದನು; ” ಹಣ್ಣು ಬಿಡಬಹುದು, ಆದರೆ ಅವುಗಳನ್ನು ನೋಡುವ ಕಣ್ಣುಗಳನ್ನು ಬಿಡಲಾಗದು”. ಹಣ್ಣು ಹೆಣ್ಣು ಗಂಡು ಹೊನ್ನು ಮಣ್ಣು ಮತ್ತೊಂದು ಇವೆಲ್ಲ ವಿಷಯಗಳು . ಈ ಎಲ್ಲಾ ಪ್ರಾಪಂಚಿಕ…

ಪ್ರಕೃತಿ,ಮಾನವಸಂಘರ್ಷ ಕುರಿತ ಹೊಸ ಚಿತ್ರ

ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷ ಕುರಿತ ಕತೆಯೊಂದನ್ನು ರಿಷಿಬ್ ಶೆಟ್ಟಿ ಸಿನಿಮಾ ಮಾಡಲಿದ್ದಾರೆ.ಹಾಗಂತ ಟ್ವೀಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಮತ್ತೊಂದು ಹೊಸ ಚಿತ್ರ ಮಾಡುತ್ತಿದ್ದೆನೆ ನಿಮ್ಮ ಪ್ರೀತಿ,ವಿಶ್ವಾಸ ಹಾರೈಕೆ ಹೀಗೆಯೇ ಇರಲಿ ಎಂದು ಅವರು ಕೋರಿಕೊಂಡಿದ್ದಾರೆ ಕೋವಿಡ್ ಎರಡನೇ ಅಲೆಯ ವೇಳೆ ನನ್ನ ಊರಿನಲ್ಲಿ ನಾನು ಕ್ಯಾಂಪಿಂಗ್ ಮಾಡುವಾಗ ಹೊಳೆದ ಕಥೆ ಇದಾಗಿದೆ, ಶೀಘ್ರದಲ್ಲೆ ಕಥೆಯ ಬಗ್ಗೆ ಅಧಿಕೃತವಾಗಿ ಹೆಚ್ಚಿನ ವಿವರ ಹಂಚಿಕೊಳ್ಳುವೆ ಎಂದು ಹೇಳಿದ್ದಾರೆ. ದೊಡ್ಡ ಬಜೆಟ್ ಸಿನಿಮಾ ಮಾಡಲು ರಿಷಬ್ ಶೆಟ್ಟಿ ಪ್ಲಾನ್ ಮಾಡಿದ್ದಾರೆ.,…

ಮೆಟ್ರೋದಲ್ಲಿ ಜುಲೈನಿಂದ ಟೋಕನ್ ವ್ಯವಸ್ಥೆ ಜಾರಿ?

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು ಈಗ ಜುಲೈತಿಂಗಳಲ್ಲಿ ಮೆಟ್ರೋ ಟೋಕನ್ ವ್ಯವಸ್ಥೆ ಜಾರಿಗೊಳಿಸುವ ಕುರಿತು ಸರ್ಕಾರ ಹೇಳಿದೆ ಬೆಂಗಳೂರು, ಜೂ, ೨೨;ಕೊರೊನಾ ಒಂದನೇ ಅಲೆಯಿಂದ ಮೆಟ್ರೋ ಪ್ರಯಾಣಿಕರಿಗೆ ಟೋಕನ್ ವ್ಯವಸ್ಥೆ ಇಲ್ಲದೆ ಸಂಚಾರಕ್ಕೆ ತೊಂದರೆಯಾಗಿದ್ದು ಮುಂದಿನ ಮಾರ್ಗಸೂಚಿ ಅನ್ವಯ ಬಹುತೇಕ ಅಥವ ಜುಲೈ ಒಂದರಿಂದ ಟೋಕನ್ ವ್ಯವಸ್ಥೆಯನ್ನು ಕಲ್ಪಿಸುವ ಸಾದ್ಯತೆಗಳಿವೆ ಎಂದು ಸರ್ಕಾರ ಹೇಳಿದೆ. ಕಳೆದ ವರ್ಷದ ಲಾಕ್ ಡೌನ್ ನಂತರ ಕೇವಲ ಮೆಟ್ರೋ ಕಾರ್ಡ್ ದಾರರಿಗೆ…

ಶ್ರೀ ಮೈಲಾರಲಿಂಗೇಶ್ವರ ಕಾರ್ಣೀಕದ ಗೊರವಯ್ಯ ಮಾಲತೇಶಪ್ಪ ನಿಧನ

ಹೂವಿನ ಹಡಗಲಿ,ಜೂ,22: ತಾಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ ಇಂದು ಬೆಳಗಿನಜಾವ ನಿಧನರಾದರು. 31 ವರ್ಷ ಕಾಲ ಕಾರ್ಣಿಕ ನುಡಿದಿದ್ದ ಮಾಲತೇಶಪ್ಪ ಅವರು ಕೆಲ ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು. ಸಂಕಷ್ಟದಲ್ಲಿದ್ದ ಗೊರವಯ್ಯ ಮಾಲತೇಶಪ್ಪ ಅವರಿಗೆ ಮನೆ ನಿರ್ಮಿಸಿಕೊಡಲು ನಾಡಿನ ಜನರು ಸಹಾಯಹಸ್ತ ಚಾಚಿದ್ದರು. ಆದರೆ ಮನೆ ನಿರ್ಮಾಣ ಆಗುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಮಾಲತೇಶಪ್ಪ ನಿಧನಕ್ಕೆ ನಾಡಿನ ಹಲವಾರು ಮಠಾಧೀಶರು,ಸ್ವಾಮೀಜಿಗಳು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕೋವಿಡ್ ಲಸಿಕೆ ಪಡೆದುಕೊಳ್ಳಲು ಸಲಹೆ : ಅನಿತಾ ಕುಮಾರ್ ಸ್ವಾಮಿ

ರಾಮನಗರ, ಜೂ, 22: ಲಸಿಕೆ ತಗೆದುಕೊಳ್ಳುವುದರಿಂದ ಕೋವಿಡ್ ಬಂದರು ಸಹ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರದಂತೆ ನಿಯಂತ್ರಿಸುತ್ತದೆ. ರಾಮನಗರ ಜಿಲ್ಲೆಯ ಎಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದುಕೊಳ್ಳಿ ಹಾಗೂ ನಿಮ್ಮ ಸುತ್ತಮುತ್ತಲಿನ ಜನರಿಗೂ ಸಹ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಿ ಎಂದು ರಾಮನಗರ ತಾಲ್ಲೂಕು ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರ್ ಸ್ವಾಮಿ ಅವರು ತಿಳಿಸಿದ್ದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ನಡೆದ…

ಶಾಲೆ ಆರಂಭ ಕುರಿತ ವರದಿ ಸಲ್ಲಿಸಿದ ತಜ್ಞರ ಸಮಿತಿ

ಸರ್ಕಾರ ಆಯಾ ಪ್ರದೇಶದಲ್ಲಿ ಸುರಕ್ಷತೆ ಬಗ್ಗೆ ಅರಿತು ಸ್ಥಳೀಯವಾಗಿ ನಿರ್ಧಾರ ಮಾಡಬೆಕು ಎಂದಿರುವ ಅರು ಕೊರೊನಾ ಇಳಿಮುಖವಾಗಿದೆ ಎಂಬ ಒಂದೇ ಒಂದು ಕಾರಣಕ್ಕೆ ಏಕಾ ಏಕಿ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂದು ವರದಿಯಲ್ಲಿ ತಿಳಿಸಿದೆ ಬೆಂಗಳೂರು,ಜೂ.೨೨:ಮಕ್ಕಳಿಗೆ ಶಾಲೆ ಪುನರಾರಂಭ ಮಾಡುವುದರಿಂದ ಉಪಯೋಗ ಮತ್ತು ಸಮಸ್ಯೆ ಎರಡೂ ಇವೆ ಎರಡನ್ನು ಕೂಲಂಕುಷವಾಗಿ ಪರಿಶೀಲಿಸಿ ಶಾಲೆ ಆರಂಭ ಮಾಡಬೇಕೆ ಬೇಡವೇ ಎನ್ನುವ ಕುರಿತು ನಿರ್ಧಾರ ಮಾಡಬಹುದು. ಇದು ಡಾ.ದೇವಿಶೆಟ್ಟಿ ನೇತೃತ್ವದ ಮೂರನೇ ಅಲೆ ಸಿದ್ದತೆ ಕುರಿತು ರಚಿಸಿರುವ ಉನ್ನತ ಮಟ್ಟದ…

ಮತ್ತೇ ಬಿಜೆಪಿಯ ಆಂತರ್ಯದ ನಿಗೂಢತೆ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಸಿಟಿ ರವಿ

ಮೋಡ ಸೂರ್ಯನನ್ನು ಮರೆಮಾಚಿದರೂ ಎಷ್ಟು ಕಾಲ ಎಂದು ಬಿಜೆಪಿಯೊಳಗಿನ ಬೆಳವಣಿಗೆ ಕುರಿತು ಮತ್ತೇ ಒಳಾರ್ಥದ ನಿಗೂಢತೆಯ ಬಗ್ಗೆ ಹೇಳುತ್ತಲೇ ,ನಾನು ನೀಡಿದ ಹೇಳಿಕೆಸದುದ್ದೇಶದಿಂದ ಕೂಡಿರುತ್ತದೆ ಯಾವುದೇ ದುರುದ್ದೇಶವಿಲ್ಲ ಎನ್ನುವ ಮೂಲಕ ಎಲ್ಲರಲ್ಲಿ ಮತ್ತಷ್ಟು ಅಚ್ಚರಿಯನ್ನು ಸಿ ಟಿ ರವಿ ಮೂಡಿಸಿದ್ದಾರೆ. ಬೆಂಗಳೂರು,ಜೂ,೨೧: ಮೋಡ ಸೂರ್ಯನನ್ನು ಮರೆ ಮಾಚಿದರೂ ಎಷ್ಟು ಕಾಲ? ಕೆಲವು ಕಾಲ ಮಾತ್ರ ಸಾಧ್ಯ. ನಾನು ಹೇಳಿದ್ದನ್ನು ಅವರವರು ಹೇಗೆ ಗ್ರಹಿಸುಯತ್ತಾರೋ ಹಾಗೆಯೇ ಅದರ ಅರ್ಥವಾಗುತ್ತದೆ. ಒಳ್ಳೆಯ ದೃಷ್ಟಿಯಿಂದ ಗ್ರಹಿಸಿದರೆ ಒಳ್ಳೆಯದ್ದಾಗುತ್ತದೆ. ಕೆಟ್ಟ ದೃಷ್ಟಿಯಿಂದ…

ತೃತೀಯ ರಂಗ ರಚನೆಗೆ ಪುಷ್ಟಿ ನೀಡಿದ ಕಿಶೋರ್ ,ಶರದ್ ಪವಾರ್ ಮಾತುಕತೆ

ಬಿಜೆಪಿಯೇತರ ತೃತೀಯ ರಂಗ ಉದಯವಾಗಲಿದೆ ಎಂಬ ಉಹಾಪೋಗಳ ಮಧ್ಯೆ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಮತ್ತು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ನಡೆಸಿದ ಮಾತುಕತೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತದೆ ನವದೆಹಲಿ,ಜೂ,21: ಬಿಜೆಪಿಯೇತರ ತೃತೀಯ ರಂಗ  ರಚನೆಯಾಗುವ ಲಕ್ಷಣಗಳು ಇತ್ತೀಚಗೆ ಬಲವಾಗಿ ಗೋಚರಿಸುತ್ತವೆ. ಇದಕ್ಕೆ ಪುಷ್ಟಿ ನೀಡುವಂತೆ ರಸಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಎನ್ ಸಿಪಿ ಮುಖ್ಯಸ್ಥ ಶರದ್ ಪವರ್ ಜತೆ ಮಾತುಕತೆ ನಡೆಸಿರುವುದು ಮತ್ತಷ್ಟು ಊಹಾಪೋಹಗಳು ಎದ್ದಿವೆ. ಶರದ್ ಪವಾರ್ ಅವರ ನಿವಾಸದಲ್ಲಿ…

ಕೊವಿಡ್ 3 ನೇ ಅಲೆ ಎದುರಿಸಲು ಸಕಲ ಸಿದ್ಧತೆ; ಶಶಿಕಲಾ ಜೊಲ್ಲೆ

ಬೆಂಗಳೂರು,ಜೂ,21: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಕೊವಿಡ್ 3 ಅಲೆ ನಿಯಂತ್ರಣ ಕುರಿತು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ನಂತರ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೆ ಅಲೆಯಲ್ಲಿ ಸುಮಾರು 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಬಾಲ…

ಅಕ್ರಮ ಪಿಸ್ತೂಲ್; ಓರ್ವನ ಬಂಧನ

ವಿಜಯಪುರ,ಜೂ,21:ಅಕ್ರಮವಾಗಿ ಗನ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಭೀಮಾತೀರದ ಪೊಲೀಸರು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲೋಣಿ ಕೆ. ಡಿ ಗ್ರಾಮದ ಮಹಾದೇವ ಅಣ್ಣಾರಾಯ್ ಪಾಂಡ್ರೇ ಬಂಧಿತ ಆರೋಪಿ. ಬಂಧಿತನಿಂದ ಒಂದು ನಾಡ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ‌. ನಾಡ ಪಿಸ್ತೂಲ್ ಗನ್ ಬೆಲೆ ಸುಮಾರು 30 ಸಾವಿರ ಹಾಗೂ ನಾಲ್ಕು ಗುಂಡುಗಳ ಬೆಲೆ 1 ಸಾವಿರ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕುರಿತು ಇಂಡಿ…

ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗ ಆಶಾಕಿರಣ; ಮೋದಿ

ನವದೆಹಲಿ,ಜೂ,21: ಭಾರತೀಯ ಮೂಲದ ಯೋಗ ಪದ್ದತಿಯನ್ನು ಅಳವಡಿಸಿಕೊಂಡಿದ್ದು,ಇದರಿಂದ ಕೊರೊನಾ ಕಾಲದ ಈ ಸಮಯದಲ್ಲಿ ಯೋಗಾಭ್ಯಾಸ ಒಂದು ಉತ್ತಮ ಅಂಶವಾಗಿದೆ ಇದರಿಂದ ದೇಹ ಮತ್ತು ಮನಸ್ಸು ಮತ್ತಷ್ಟು ದೃಡವಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು,ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎನ್ನುವ ಮೂಲಕ ಮಾತು ಆರಂಭಿಸಿ, ಕೊರೊನಾ ನಡುವೆ ಯೋಗ ಆಶಾಕಿರಣವಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗದಿಂದ ಬಲ ಸಿಕ್ಕಿದೆ ಎಂದು ತಿಳಿಸಿದ್ದಾರೆ. ವಿಶ್ವದ ಮೂಲೆಮೂಲೆಯಲ್ಲಿ ಲಕ್ಷಾಂತರ ಜನರು…

ಯೋಗ ಮತ್ತು ಅದರ ತಿಳುವಳಿಕೆ

ನಂದಿನಿ ಪ್ರಸಾದ್ ನಂದಿನಿ ಪ್ರಸಾದ್ ಅವರು ಕಳೆದ 15 ವರ್ಷಗಳಿಂದ ಯೋಗ ತರಬೇತಿ ನೀಡುತ್ತಿದ್ದಾರೆ,ಹಲವಾರು ಯೋಗ ಸಮಾವೇಶ,ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.ಹಾಗೆಯೇ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಇವರು ಇನ್ನೂ ಮುಂದೆ ಪ್ರತಿ ದಿನ ನಿತ್ಯಯೋಗ ದಲ್ಲಿ ಯೋಗ ಕುರಿತು ಬರೆಯುತ್ತಾರೆ      ಯೋಗ ಮತ್ತು ಅದರ ತಿಳುವಳಿಕೆ ಕೋವಿಡ್-19 ಸಂದರ್ಭದಲ್ಲಿ ಮನೆಯಲ್ಲಿಯೇ ಕುಟುಂಬದ ಜೊತೆಗೆ 7 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸೋಣ. ಯೋಗದಿಂದ ಜನರಿಗೆ ತಮ್ಮ ರೋಗ ನಿರೋಧಕ ಶಕ್ತಿಯ ಅರಿವು, ಬಲವಾದ ಮನಸ್ಸು ಮತ್ತು…

ಆಗುವುದೆಲ್ಲ ಒಳ್ಳೆಯದಕ್ಕೆ

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌   ಸಿದ್ಧಸೂಕ್ತಿ : ಆಗುವುದೆಲ್ಲ ಒಳ್ಳೆಯದಕ್ಕೆ. ಅನಗತ್ಯ ತೊಂದರೆ ನಿರಾಶೆಯುಂಟಾಗಿ ಕೊನೆಯಲಿ ಒಳಿತುಂಟಾದಾಗ ಆಡುವ ಮಾತಿದು. ಸಜ್ಜನ ಸತ್ಕಾರ್ಯಗಳಿಗೆ ಅನೇಕ ಅಡ್ಡಿಯುಂಟಾಗಿ ಅಂತ್ಯದಲಿ ಜಯ ಪ್ರಾಪ್ತಿ ಸಹಜ. ಅಡ್ಡಿ ಆತಂಕಾದಿಗಳು ವ್ಯಕ್ತಿಯ ಸತ್ತ್ವ ಮಹಿಮೆಗಳನು ಹಿರಿದಾಗಿಸುತ್ತವೆ! ಆಗಲಿದ್ದ ಅನಾಹುತಗಳನ್ನು ತಪ್ಪಿಸುತ್ತವೆ! ಬಸ್ಸು ತಪ್ಪಿಸಿಕೊಂಡವನಿಗೆ ಸುದ್ದಿ ಬಂತು, ಬಸ್ಸು ನದಿಗೆ ಬಿತ್ತು! ಒಂದು ಪಕ್ಷದ ದೌರ್ಜನ್ಯ ಮತ್ತೊಂದು ಪಕ್ಷಕ್ಕೆ ಅನುಕಂಪ ಜಯ! ಕೌರವರ ದೌರ್ಜನ್ಯ, ಪಾಂಡವರಿಗೆ ಜಯ! ರಾಜ ಮಂತ್ರಿ ಕಾಡಲಿ ಹೋಗುವಾಗ…

ಬಳ್ಳಾರಿಯಲ್ಲಿ ಮತ್ತೆ ಅಕ್ರಮ ಅದಿರು ಸಾಗಾಟ;೨೦ ಲಾರಿಗಳ ವಶ

ಬಳ್ಳಾರಿ,ಜೂ,೨೦: ಮತ್ತೇ ಗಣಿನಾಡಿನಲ್ಲಿ ಅಕ್ರಮ ಗಣಿಗಾರಿಕೆ ಶುರುವಾಗಿದೆ. ಈ ಸಂಬಂಧ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಅಕ್ರಮ ಅದಿರು ಸಾಗಾಟದ ೨೦ಕ್ಕೂ ಹೆಚ್ಚು ಲಾರಿಗಳನ್ನು ಬಳ್ಳಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಗಣಿನಾಡು ಬಳ್ಳಾರಿ ಅಂದರೆ ಅಕ್ರಮ ಗಣಿಗಾರಿಕೆ, ಅಕ್ರಮ ಗಣಿ ಸಾಗಾಟ ಎನ್ನುವುದು ಇಡೀ ದೇಶಕ್ಕೇ ಸಾರಿತು. ಮಾಜಿ ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಸಿಬಿಐ ತನಿಖೆ ಆರಂಭಿಸಿದ ಬಳಿಕ ಸುಪ್ರೀಂ ಕೋರ್ಟ್ ಗಣಿ ರಪ್ತಿಗೆ ನಿಷೇಧ ಹೇರಿತ್ತು. ಪ್ಲಾಂಟ್ ಇದ್ದವರಿಗೆ ಗಣಿಗಾರಿಕೆ ಮಾತ್ರ…

ಕ್ಲೋಜರ್ ಕಾಮಗಾರಿ ಟೆಂಡರ್ ರದ್ದುಗೊಳಿಸದಿದ್ದರೆ ಧರಣಿ;ಎಚ್ಚರಿಕೆ

ಆಲಮಟ್ಟಿ,ಜೂ,20: ಲಾಲಬಹದ್ದೂರಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಕರೆಯಲಾದ ಕ್ಲೋಜರ್ ಮತ್ತು ವಿಶೇಷ ದುರಸ್ತ ಕಾಮಗಾರಿಗಳ ಟೆಂಡರ್ ರದ್ದುಗೊಳಿಸಬೇಕು. ಇಲ್ಲದಿದ್ದರೆ ಕೊವಿಡ್-೧೯ನಿಯಮ ಸಡಿಲಿಕೆಯಾದ ನಂತರ ಅನಿರ್ಧಿಷ್ಟ ಧರಣಿ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಅಖಂಡ ಕರ್ನಾಟಕ ರೈತಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು. ಆಲಮಟ್ಟಿಯಲ್ಲಿರುವ ಕೆಬಿಜೆನ್ನೆಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಅಖಂಡಕರ್ನಾಟಕ ರೈತಸಂಘದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು ಕ್ಲೋಜರ್ ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳನ್ನು ಬೇಸಿಗೆಯಲ್ಲಿ ಟೆಂಡರ್ ಕರೆದು ಮಳೆಗಾಲಕ್ಕೂ ಮುಂಚೆ ಕಾಮಗಾರಿಗಳನ್ನು ಮುಗಿಸಿ…

ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಆಲಮಟ್ಟಿ,ಜೂ,20:ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಮುಂದುವರೆದಿದೆ. ಗರಿಷ್ಠ ೫೧೯.೬೦ ಮೀಟರ್ ಎತ್ತರದಲ್ಲಿ ೧೨೩.೦೮೧ ಟಿಎಂಸಿ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ ಬೆಳಗ್ಗೆ ೫೧೩.೫೬ ಮೀಟರ್ ಎತ್ತರದಲ್ಲಿ ೫೧.೪೦೭ ಟಿಎಂಸಿ ನೀರು ಸಂಗ್ರಹವಾಗಿದ್ದರೆ ಒಳಹರಿವಿನ ಪ್ರಮಾಣ ೧೫೦೭೫೦ ಕ್ಯೂಸೆಕ್ ಇತ್ತು. ಸಂಜೆ ೬ಕ್ಕೆ ೫೧೪.೧೯ ಮೀಟರ್ ಎತ್ತರದಲ್ಲಿ ೫೬.೧೮೮ ಟಿಎಂಸಿ ನೀರು ಸಂಗ್ರಹವಾಗಿತ್ತು ಆಗ ಒಳಹರಿವಿನ ಪ್ರಮಾಣ ೧೩೧೯೪೪ ಕ್ಯೂಸೆಕ್‌ನಷ್ಟಿತ್ತು. ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ೬೪ ಎಂಎಂ, ಕೊಯ್ನಾದಲ್ಲಿ ೪೫ ಎಂಎಂ, ನಾವಜಾದಲ್ಲಿ ೬೩…

ಶೈಲಜಾ ಟೀಚರ್ ಗೆ ಯುರೋಪಿಯನ್ ಓಪನ್ ಸೊಸೈಟಿ ಪ್ರಶಸ್ತಿ

ತಿರುವನಂತಪುರಂ,ಜೂ,29: ಕೇರಳ ಸರ್ಕಾರದ ಮಾಜಿ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ಸಮುದಾಯ ಆರೋಗ್ಯ ಸೇವೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರತಿಷ್ಟಿತ ಸೆಂಟ್ರಲ್ ಯುರೋಪಿಯನ್ ಯೂನಿವರ್ಸಿಟಿಯ ‘ಓಪನ್ ಸೊಸೈಟಿ‘ ಪ್ರಶಸ್ತಿ ದೊರಕಿದೆ. ಇತ್ತೀಚೆಗೆ ವರ್ಚುವಲ್ ಮೂಲಕ ನಡೆದ ಯೂನಿವರ್ಸಿಟಿಯ 30 ನೇ ಪದವಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ. 1994 ರಲ್ಲಿ ತತ್ವಶಾಸ್ತ್ರಜ್ಞ ಸರ್ ಕಾರ್ಲ್ ಪಾಪರ್ ಅವರಿಗೆ ‘ಓಪನ್ ಸೊಸೈಟಿ‘ಯ ಮೊದಲ ಪ್ರಶಸ್ತಿ ಸಂದಿತ್ತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿವಿಯ ಅಧ್ಯಕ್ಷ ಮಿಚೆಲ್…

ಕನ್ನಡಕ್ಕಾಗಿರುವ ಅನ್ಯಾಯವನ್ನು ತಾಕತ್ತಿದ್ದರೆ ಬಿಜೆಪಿ ಸಂಸದರು ಸರಿಪಡಿಸಲು ಎಚ್ ಡಿಕೆ ಸವಾಲು

ಬೆಂಗಳೂರು, ಜೂ.20: ಬಿಜೆಪಿಯು ಮೂಲಭೂತವಾಗಿ ಕನ್ನಡ ವಿರೋಧಿಯಾಗಿದೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಾವು ಕನ್ನಡ ವಿರೋಧಿಗಳಲ್ಲ ಎಂದಾದರೆ ಈಗ ಆಗಿರುವ ಪ್ರಮಾದವನ್ನು ಬಿಜೆಪಿ ತಾಕತ್ತಿದ್ದರೆ ಸರಿಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಕಡೆಗಣಿಸಿರುವ ಲೋಕಸಭಾ ಸಚಿವಾಲಯದ ‘ಪಾರ್ಲಿಮೆಂಟರಿ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ಫಾರ್ ಡೆಮಾಕ್ರಸಿ’ (ಪ್ರೈಡ್) ಸಂಸ್ಥೆ ಗುಜರಾತಿ, ಬಂಗಾಳಿ, ಮರಾಠಿ, ಒಡಿಯಾ, ತಮಿಳು, ತೆಲುಗಿಗೆ ಆದ್ಯತೆ ನೀಡಿದೆ. ಕನ್ನಡಭಿಮಾನವಿಲ್ಲದ 25 ಮಂದಿಯನ್ನು ಲೋಕಸಭೆಗೆ ಆರಿಸಿ ಕಳಿಸಿದ್ದರ ಫಲವಿದು…

ಚುನಾವಣೆಗೂ ಮುನ್ನವೆ ಕಾಂಗ್ರಸ್ ನಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ;ಈಶ್ವರಪ್ಪ ಲೇವಡಿ

ಶಿವಮೊಗ್ಗ,ಜೂ,20:ಕಾಂಗ್ರೆಸ್ ನಲ್ಲಿ ಈಗಲೇ ಸಿಎಂ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಿಎಂ ಸ್ಥಾನಕ್ಕೆ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಗುಂಪಿನ ನಡುವೆ ಕಿತ್ತಾಟ ನಡೆಯುತ್ತಿದೆ. ಮೊದಲು ಚುನಾವಣೆಯಲ್ಲಿ ಗೆದ್ಧು ಶಾಸಕರಾಗಿ ಬರಲಿ. ನಂತರ ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ನವರು ಕಿತ್ತಾಡಲಿ ಎಂದು ಟಾಂಗ್ ನೀಡಿದರು. ಸಿದ್ಧರಾಮಯ್ಯ ಕ್ಷೇತ್ರ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೆ.ಎಸ್…

1 72 73 74 75 76 98
Girl in a jacket