Girl in a jacket

Author kendhooli_editor

ಹಾಸಿಗೆ ಇದ್ದಷ್ಟು ಕಾಲು ಚಾಚು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ           ‌‌ ಸಿದ್ಧಸೂಕ್ತಿ : ಹಾಸಿಗೆ ಇದ್ದಷ್ಟು ಕಾಲು ಚಾಚು. ಹಾಸಿಗೆ =ಆದಾಯ, ಸಂಪತ್ತು, ಶಕ್ತಿ, ಸಾಮರ್ಥ್ಯ. ಚಿಕ್ಕ ಹಾಸಿಗೆಯಲ್ಲಿ ಎತ್ತೆಂದರತ್ತ ಕಾಲು ಚಾಚಿದರೆ ಹಾಸಿಗೆ ಸಾಲದು. ಹಾಸಿಗೆ ದೊಡ್ಡದಿರಬಾರದೆಂದಿಲ್ಲ! ಆದರೆ ಮನ ಬಂದಂತೆ ಕಾಲು ಚಾಚಿದೆಡೆಯಲ್ಲೆಲ್ಲ ಹಾಸಿಗೆ ಇರಲಾದೀತೇ? ಎಲ್ಲೆಂದರಲ್ಲಿ, ನಮ್ಮದಲ್ಲದರಲ್ಲೂ, ಕಾಲು ಚಾಚುವ, ಮೂಗು ತೂರಿಸುವ, ಕಣ್ಣು ಇಣುಕಿಸುವ, ನಾಲಿಗೆ ಹರಿಬಿಡುವ, ಕಿವಿ ಕೊಡುವ, ಕೈ ತೂರಿಸುವ, ಚಪಲ! ಚಪಲ ಚನ್ನಿಗರಾಯರಿಗೆ ಎಂದಿಗೂ ಇಲ್ಲ ತೃಪ್ತಿ!…

ಕೃಷಿ ಸಚಿವರ ವರ್ತನೆಗೆ ಕಾಂಗ್ರೆಸ್ ಟೀಕೆ

ಬೆಂಗಳೂರು,ಜೂ,24: ಮುಂಗಾರು ಸಮಯದಲ್ಲಿ ಬಿತ್ತನೆ ಬೀಜ ಸಿಗದೆ ರೈತರು ಪರದಾಡುತ್ತಿದ್ದರೆ ಕೃಷಿ ಸಚಿವರು ಮೈಮರೆತು ಮಲಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಆಕ್ಸಿಜನ್, ಲಸಿಕೆಗಳ ನಂತರ ಈ ಸರ್ಕಾರದ ‘ಇಲ್ಲ’ಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿರುವುದು ಗೊಬ್ಬರ, ಬಿತ್ತನೆ ಬೀಜ. ಈ ಹದವಾದ ಮುಂಗಾರಿನ ವಾತಾವರಣದಲ್ಲಿ ರೈತರು ಬೆಳೆ ಹಾಕಲು ತುರಾತುರಿಯಲ್ಲಿದ್ದರೂ ಬಿತ್ತನೆ ಬೀಜ, ಗೊಬ್ಬರ ಸಿಗದೆ ಪರದಾಡುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್‌ ಚಾದರ ಹೊದ್ದು ಮಲಗಿದ್ದಾರೆ. ಈ ಅಯೋಗ್ಯತನಕ್ಕೆ ಏಕೆ ಮಂತ್ರಿಗಿರಿ’…

ಸಂತೆ ಎಂಬ ಸಾಂಸ್ಕೃತಿಕ ಸಂಕಥನ

ಸಂತೆ ಎನ್ನುವುದು ಭಾರತೀಯ ಸಂಸ್ಕೃತಿಯ ಒಂದು ಹೆಗ್ಗರಿತು, ಈ ಮೂಲಕವೇ ಜಾನಪದ ಪರಂಪರೆಯ ಉನ್ನತೀಕರಣವೂ ಕೂಡ ಇಂತ ಸಂತೆ ಈಗ ಬದಲಾವಣೆಗೊಂಡಿದೆ ಮಾಲ್‌ಗಳ ಸಂಸ್ಕೃತಿಯಾಗಿದೆ ಈ ಬಗ್ಗೆ ಕುರಿತು ಡಾ.ಶಿವಕುಮಾರ್ ಕಂಪ್ಲಿ ಅವರ ಲೇಖನ ಸ್ತುತ್ಯರ್ಹವಾಗಿದೆ. ಸಂತೆ ಎಂಬ ಸಾಂಸ್ಕೃತಿಕ ಸಂಕಥನ ಆನ್ ಲೈನ್ ಶಾಪಿಂಗ್ ,ಬಿಗ್ ಬಜಾರ್,ಸೂಪರ್ ಮಾರ್ಕೆಟ್ ಗಳಂತಹ ಪದಾರ್ಥ ಕೇಂದ್ರಿತ ಮಾರುಕಟ್ಟೆಗಳ ನೆನಪುಗಳು ಹಳ್ಳಿ ನೆನಪುಗಳ ಸಾಂಸ್ಕೃತಿಕ ಸಂತೆಯನ್ನ ನೆನಪಿಸಿತು.” ಅವ್ವನ ಸೆರಗ ಚುಂಗಿಡಿದು ಹೊಲಗಳ ಹಸಿರು,ಕರಿ ಕಲ್ಲು ದಾರಿಗಳ ಕಾಲು ನಡಿಗೆಯಲ್ಲಿ…

ಸಿದ್ದು ಡಿಕೆಶಿ ನಡುವೆ ನಿಲ್ಲದ ಕಾದಾಟ

ಕರ್ನಾಟಕದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ಪದಚ್ಯುತಿ ಯತ್ನ ಆಡಳಿತ ಪಕ್ಷದೊಳಗಡೆ ಗುದಮುರಗಿ ನಡೆಸಿದೆ. ಅದೇ ಕಾಲಕ್ಕೆ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನ ಅಜೆಂಡವಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನೆ ಭವಿಷ್ಯದ ಮುಖ್ಯಮಂತ್ರಿ ಎಂದು ಟಾಂಟಾಂ ಮಾಡುತ್ತಿದ್ದಾರೆ. ಡಿಕೆಶಿ ಬೆಂಬಲಿಗರು ಬಾಯಿ ಬಿಡುತ್ತಿಲ್ಲ ಹಾಗಂತ ಬಾಯಿಬಾಯಿ ಬಿಡುತ್ತಲೂ ಇಲ್ಲ. ಏತನ್ಮಧ್ಯೆ ಬಾಯಿ ಮುಚ್ಚಿ ಕೂರುವಂತೆ ಸಿದ್ದು ಬೆಂಬಲಿಗರನ್ನೂ ಒಳಗೊಂಡಂತೆ ಕಾಂಗ್ರೆಸ್ಸಿಗರಿಗೆ ಏಐಸಿಸಿ ತಾಕೀತು ಮಾಡಿದೆ. ಕೆಪಿಸಿಸಿ ಪುನಾರಚನೆಗೆ ಡಿಕೆಶಿ ಮುಂದಾಗಿದ್ದಾರೆ ಆದರೆ ಅದಕ್ಕೆ…

೨೪ ಗಂಟೆಯೊಳಗೆ ಮಾಜಿ ಕಾರ್ಪೋರೇಟರ್ ಹತ್ಯೆ ಆರೋಪಿಗಳ ಬಂಧನ-ಸಿಎಂ

ಬೆಂಗಳೂರು ,ಜೂ, ೨೪: ಮಗರದ ಚಲವಾದಿಪಾಳ್ಯದಲ್ಲಿ ಕೊಲೆಯಾದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಗೆ ಕಿಬ್ಬೊಟ್ಟೆಯ ಭಾಗಕ್ಕೆ ಡ್ರ್ಯಾಗರ್ ನಿಂದ ಮೂರು ಬಾರಿ ಇರಿದಿದ್ದ ಹಂತಕ, ಮತ್ತೊಬ್ಬ ಕತ್ತಿಗೆ ಹಾಕಿ ಒಂದೇ ಬಾರಿಗೆ ಕೊಯ್ದಿದ್ದ. ಕೋಳಿ ಕಟ್ ಮಾಡುವ ಮಚ್ಚಿನಿಂದ ತಲೆಗೆ ಹೊಡೆದು ಎಸ್ಕೇಪ್ ಆಗಿರೋ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಿಬ್ಬೊಟ್ಟೆಯ ಬಳಿ…

೧೨ನೇ ತರಗಿ ಪರೀಕ್ಷೆ ವೇಳೆ ಯಾರೇ ಸಾವಪ್ಪಿದರೂ ಸರ್ಕಾರವೇ ಹೊಣೆ-ಸುಪ್ರೀಂ

ನವ ದೆಹಲಿ,ಜೂ, ೨೪;ಕೊರೊನಾ ಸೋಂಕಿನ ಸಂಕಷ್ಟದಲ್ಲಿಯೂ ಆಂಧ್ರ ಸರ್ಕಾರ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿರು ಸುಪ್ರೀಂಕೋರ್ಟ್ ಒಂದು ವೇಳೆ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ಸಾವಾದರೂ ಅದಕ್ಕೆ ಆ ಸರ್ಕಾರವೇ ನೇರ ಹೊಣೆಯಾಗಲಿದ್ದು ಸಾವನ್ನಪ್ಪಿದ ವಿದ್ಯಾರ್ಥಿ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡುವಂತೆ ಎಚ್ಚರಿಸಿದೆ ಆಂಧ್ರಪ್ರದೇಶ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ನಿರ್ಣಯವನ್ನು ಖಂಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಯ ವಿಚಾರಣೆಗೆ ಮುಂದಾದ ನ್ಯಾಯಮೂರ್ತಿಗಳಾದ…

ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ

ಬೆಂಗಳೂರು,ಜೂ,24:ಹಾಡು ಹಗಲೇ ಜನನಿನಿಡಿ ಪ್ರದೇಶದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘೋರ ಘಟನೆಛಲವಾದಿಪಾಳ್ಯದ ಫ್ಲವರ್ ಗಾರ್ಡನ್ ನಲ್ಲಿ ಜರುಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅವರ ಕಚೇರಿ ಮುಂದೆಯೇ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಒಳಗಿದ್ದ ರೇಖಾ ಕದಿರೇಶ್ ಅವರನ್ನು ಹೊರಗೆ ಕರೆದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ. ರಕ್ತಸ್ರಾವವಾಗಿ ಕೆಳಗೆ ಬಿದ್ದ ಅವರನ್ನು ಸ್ಥಳದಲ್ಲಿದ್ದವರು ಕೂಡಲೇ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.ರೇಖಾ ಅವರು ಮೃತಪಟ್ಟ…

ಭಾರತದ ಭದ್ರತೆಗೆ ಬೆದರಿಕೆ ಒಡ್ಡುತ್ತಿರುವ ಸಿಮ್ ಬಾಕ್ಸ್ ರಾಕೆಟ್!!

ತಂತ್ರಜ್ಞಾನ ಬೆಳದಂತೆ  ಹಲವಾರು ರೀತಿಯವಂಚನೆಗಳು ನಡೆಯುತ್ತಿವೆ .ಈ ಮೂಲಕ ಸೈಬರ್ ಭಯೋತ್ಪಾದನೆ ಜಾಸ್ತಿಯಾಗುತ್ತಿದೆ, ಇದಕ್ಕೆ ಉದಾಹರಣೆ ಎನ್ನುವಂತೆ ಸಿಮ್  ಬಾಕ್ಸ್ ವಂಚನೆ ರಾಷ್ಟಮಟ್ಟದಲ್ಲಿ ದೊಡ್ಡ ಘಟನೆ ಈ   ಬಗ್ಗೆ ಇಲ್ಲಿ ವಿವರ  ನೀಡಲಾಗಿದೆ. Writing; ಪರಶಿವ ಧನಗೂರು ಭವಿಷ್ಯದ ಪ್ರಪಂಚಕ್ಕೆ ಅತ್ಯಂತ ದೊಡ್ಡ ಗಂಡಾಂತರ ವೇನಾದರೂ ಒಂದಾಗಿ ಬರುವುದಿದ್ದರೇ ಅದೂ ಇಂಟರ್ನೆಟ್ ನಿಂದ ಮಾತ್ರ ಸಾಧ್ಯ!. ಸೈಬರ್ ಟೆರರಿಸಂ. ಡಾರ್ಕ್ ನೆಟ್ ಮಾಫಿಯಾ. ಗಳು ಬಗ್ಗೆ ಅರಿವಿದ್ದವರಿಗೇ ಈ ಸೈಬರ್ ವಾರ್, ಇಂಟರ್ನೆಟ್ ಥ್ರೆಟ್ ಗಳ ಭಯಾನಕತೆ…

ಡೆಲ್ಟಾ ಪ್ಲೆಸ್ ಕೊರೊನಾ ರೂಪಾಂತರ ತಳಿ ಹೆಚ್ಚಿಸಿದ ಆತಂಕ

ಕೊರೊನಾ ಮೂರನೆ ಅಲೆಯ ಆತಂಕದಲ್ಲಿರುವ ಸಂದರ್ಭದಲ್ಲಿ ಡೆಲ್ಟಾ ಪ್ಲೆಸ್ ಕೊರೊನಾ ರೂಪಾಂತರ ತಳಿ ಕಾಣಿಸಿಕೊಂಡು ಆತಂಕ ಹುಟ್ಟಿಸಿದೆ. ಬೆಂಗಳೂರು ಜೂ,24: ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ತಳಿಯ ವೈರಸ್ ಇದೀಗ ಬೆಂಗಳೂರಿನಲ್ಲಿಯೂ ಕಾಣಿಸಿಕೊಂಡಿದೆ. ಡೆಲ್ಟಾ ಪ್ಲಸ್ ವೈರಸ್ ಮೊದಲ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿತ್ತು. ಇದೀಗ ಬೆಂಗಳೂರಿನಲ್ಲಿಯೂ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ದೃಢಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಧಾಕರ್ ಅವರು, ಮಂಗಳವಾರ ಮೈಸೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು. ಬುಧವಾರ ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ…

ಕನ್ನಡಿಗರು ಮರೆಯಲಾಗದ ಜಯದೇವಿತಾಯಿ ಲಿಗಾಡೆ

ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಧಕಿ.ಕರ್ನಾಟಕ ಏಕೀಕರಣಕ್ಕೆ ಹೋರಾಟಗಾರ್ತಿ.ಕನ್ನಡವೇ ಉಸಿರಾಗಿಸಿಕೂಂಡು ಬದುಕಿದ ಶರಣೆ “ಜಯದೇವಿತಾಯಿ ಲಿಗಾಡೆ “ಅವರ  ಜನುಮ ದಿನದ ಈ  ಸಂದರ್ಭದಲ್ಲಿ ಅವರನ್ನು ನೆನದು   ಅವರ ಕುರಿತು ‘ಕೆಂಧೂಳಿ’ ಲೇಖನದ ಮೂಲಕ ಗೌರವ ಸಲ್ಲಿಸುತ್ತದೆ ಕನ್ನಡಿಗರು ಮರೆಯಲಾಗದ ಜಯದೇವಿತಾಯಿ ಲಿಗಾಡೆ ಜಯದೇವಿತಾಯಿ ಲಿಗಾಡೆ ಅವರು ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ…

ಹಾಲಿಂದು ಹಾಲಿಗೆ,ನೀರಿಂದು ನೀರಿಗೆ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹಾಲಿಂದು ಹಾಲಿಗೆ, ನೀರಿಂದು ನೀರಿಗೆ. ಹೆಚ್ಚಿನ ಹಣದಾಶೆಗೆ ಹಾಲಿಗೆ ನೀರು ಬೆರೆಸುವುದುಂಟು! ಅಕ್ಕಿ ಬೇಳೆ ಎಣ್ಣೆ, ತುಪ್ಪ ಜೇನು ಔಷಧಿ, ಹಣ ಬಂಗಾರ ಕಟ್ಟಿಗೆ, ಬಣ್ಣ ಇಂಧನ ಸಿಮೆಂಟ್, ವಿಭೂತಿ ರುದ್ರಾಕ್ಷಿ ಕುಂಕುಮ ಮಂತ್ರ ದೇವರು ಧರ್ಮ, ಶ್ಲೋಕ ಸಾಹಿತ್ಯ, ಸಂನ್ಯಾಸ ರಾಜಕಾರಣ ಅಧಿಕಾರ, ಕೃಷಿ ವ್ಯಾಪಾರ, ಎಲ್ಲೆಲ್ಲೂ ಇದೆ ಕಲಬೆರಕೆಯ ಹಾವಳಿ! ನೆನಪಿರಲಿ :ಕಲಬೆರಕೆ ಕೈ ಹಿಡಿಯದು! ಹಾಲಿನ ವ್ಯಾಪಾರಿಯ ಹಣದ ಚೀಲ ಕದ್ದ ಮಂಗ, ಒಂದು ನಾಣ್ಯವ…

ವಿದ್ಯಾರ್ಥಿಗಳಿಗೆ ಸ್ಮಾರ್ಟ್ ತರಗತಿಯ ಟ್ಯಾಬ್ಲೆಟ್ ಪಿ.ಸಿ.ವಿತರಣೆ

ಬೆಂಗಳೂರು,ಜೂ,23: ಡಿಜಿಟಲ್ ಕಲಿಕಾ ಯೋಜನೆಯಡಿ 2500 ಸ್ಮಾರ್ಟ್ ತರಗತಿಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿ.ಸಿ.ಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ಸರ್ಕಾರಿ ಕಾಲೇಜುಗಳಲ್ಲಿ 2,500 ತರಗತಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳಾಗಿ ಉನ್ನತೀಕರಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 6,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿಗಳಾಗಿ ಪರಿವರ್ತಿಸಲಾಗುವುದು ಎಂದರು. 2021-22ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು. ಡಿಜಿಟಲ್ ಕಲಿಕೆ…

ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ನೆರವು ನೀಡಲು ಕೆಯುಡಬ್ಲ್ಯೂಜೆ ತೀರ್ಮಾನ

ಬೆಂಗಳೂರು,ಜೂ,23:ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬಗಳಿಗೆ ತಲಾ 10 ಸಾವಿರ ಪರಿಹಾರ ನೀಡಲು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀರ್ಮಾನಿಸಿದೆ. ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ಕಳೆದ ವರ್ಷ ನೀಡಿದಂತೆ ಸರ್ಕಾರದಿಂದ 5ಲಕ್ಷ‌ರೂ ನೆರವು ಕೊಡಿಸಲು ನಿರ್ಣಯಿಸಲಾಗಿದೆ. ಪತ್ರಕರ್ತರ ಕುಟುಂಬಕ್ಕೆ ಪಡಿತರ ಕಿಟ್ ಕೊಡಿಸಲು ತೀರ್ಮಾನಿಸಲಾಗಿದೆ.ಬೆಂಗಳೂರಿನಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಶೀಘ್ರವಾಗಿ ಶಂಕುಸ್ಥಾಪನೆ ಮಾಡಿಸಲು…

ಕೊರೊನಾ ಕಾಲದ ಹೋಟೆಲ್- ರೆಸಾರ್ಟ್ ನ ವಿದ್ಯುತ್,ನೀರು ಶುಲ್ಕ ಮನ್ನಾ ಮಾಡಲು ಸಿಎಂಗೆ ಸಿದ್ದು ಪತ್ರ

ಬೆಂಗಳೂರು ,ಜೂ23: ಹೋಟೆಲ್-ರೆಸಾರ್ಟ್-ವಸತಿಗೃಹಗಳ ಕೊರೋನಾ ಕಾಲದ ವಿದ್ಯುತ್, ನೀರಿನ ಶುಲ್ಕವನ್ನು ಮನ್ನಾ ಮಾಡುವುದು ಸೇರಿದಂತೆ ಈ ಉದ್ಯಮ ನೆಲಕಚ್ಚದಂತೆ ಅಗತ್ಯ ನೆರವನ್ನು ನೀಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬರೆದಿದ್ದು,ಕರ್ನಾಟಕ ಸರ್ಕಾರಕ್ಕೆ ಹೋಟೆಲ್ ಕಾರ್ಮಿಕರು, ದೀಪಾಲಂಕಾರದ ಕೆಲಸಗಾರರು, ಫೋಟೋಗ್ರಾಫರ್ ಗಳು ಸೇರಿ ಇನ್ನಿತರೆ ನಾನಾ ಜನ ಸಮುದಾಯಗಳು ಪಡುತ್ತಿರುವ ಕಷ್ಟ ಕಣ್ಣಿಗೆ ಬಿದ್ದಿಲ್ಲ.ಬೆಂಗಳೂರು ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಸಾವಿರಾರು ಹೋಟೆಲ್‍ಗಳು…

ಸ್ವಂತ ಮಕ್ಕಳ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಬಂಧನ

ಬೆಂಗಳೂರು ,ಜೂ, ೨೩; ಮಲತಾಯಿ ಮಾತು ಕೇಳಿ ಮೂವರು ಮಕ್ಕಳ ಮೇಲೆ ತಂದೆಯೇ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ತಂದೆಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸೆಲ್ವಾ ಕ್ರೂಸರ್ ಚಾಲಕನಾಗಿದ್ದು. ಆತನ ಎರಡನೇ ಹೆಂಡತಿ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನೋವನ್ನು ತಡೆಯಲಾರದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ.…

ಸಿಂಧೂರಿಗೆ ಹಿನ್ನೆಡೆ-ಅನುಮತಿ ಇಲ್ಲದೆ ಈಜು ಕೊಳ ನಿರ್ಮಾಣ

ಬೆಂಗಳೂರು,ಜೂ,೨೩: ಸಂಸದ ಪ್ರತಾಪ್ ಸಿಂಹ ಎತ್ತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅನುಮತಿ ಇಲ್ಲದೆ ಈಜುಕೊಳ ನಿರ್ಮಿಸಿದ್ದರು ಎನ್ನುವ ಅಂಶ ಈಗ ತನಿಖಾ ವರದಿಯಿಂದ ಗೊತ್ತಾಗಿದೆ. ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಹೇಳಿದೆ. ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಸಂಬಂಧ ಪ್ರಾದೇಶಿಕ ಆಯುಕ್ತರು ರಾಜ್ಯ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಈಜುಕೊಳ ನಿರ್ಮಾಣಕ್ಕೆ ೩೨…

ಆಟ ಆಡಿ ಪಾಠ ಕಲಿ

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಆಟ ಆಡಿ ಪಾಠ ಕಲಿ. ವ್ಯಕ್ತಿ ಸದಾ ಬೆಳೆಯಬೇಕು. ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ ನೈತಿಕ ಬೆಳವಣಿಗೆಯೂ ಆಗಬೇಕು. ದೇಹಬೆಳವಣಿಗೆಗೆ ಆಹಾರವಷ್ಟೇ ಸಾಲದು. ದೈಹಿಕ ಚಟುವಟಿಕೆ ಆಹಾರ ಜೀರ್ಣ ಮಾಡಿ ದೇಹದ ಒಳಹೊರಗನ್ನು ಬೆಳೆಸುವುದು. ಆಟೋಟಗಳು ದೈಹಿಕ ಚಟುವಟಿಕೆ ನೀಡಿ ಆರೋಗ್ಯ ನೀಡುವವು,ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವವು, ಪಾಠ ಕಲಿಸುವವು! ಆಟ ಪ್ರಾಯೋಗಿಕ! ಅದು ಬೌದ್ಧಿಕ ಜ್ಞಾನ ವೃದ್ಧಿಸುವುದು, ಗಟ್ಟಿಗೊಳಿಸುವುದು.ಓದಿನಲ್ಲೂ ಪೈಪೋಟಿ ಹುಟ್ಟಿಸುವುದು! ಬದುಕೇ ನಿಜ ಆಟ. ಬದುಕಾಟ…

ನ ಕಲಿ ಟಿಆರ್‌ಪಿ ಹಗರಣ: ಅರ್ನಬ್ ಆರೋಪಿ

ಮುಂಬೈಜೂ,೨೨: ನಕಲಿ ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯಕ್ಕೆ ಮುಂಬೈ ಪೊಲೀಸರು ಮಂಗಳವಾರ ಎರಡನೇ ಚಾರ್ಜ್‌ಶೀಟ್ ಸಲ್ಲಿಸಿದ್ದು, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಆರೋಪಿಯನ್ನಾಗಿ ಉಲ್ಲೇಖಿಸಲಾಗಿದೆಹಗರಣ ಕುರಿತು ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್‌ನ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (ಸಿಐಯು) ಈ ಚಾರ್ಜ್‌ಶೀಟನ್ನು ಸಲ್ಲಿಸಿದೆ.ಚಾರ್ಜ್‌ಶೀಟ್‌ನಲ್ಲಿ ಹಲವು ಆರೋಪಿಗಳ ಹೆಸರುಗಳಿದ್ದು, ಅರ್ನಬ್ ಗೋಸ್ವಾಮಿ ಹಾಗೂ ಎಆರ್‌ಜಿ ಔಟ್‌ಲಿಯರ್ ಸಂಸ್ಥೆಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ’ ಎಂದು ಗೋಸ್ವಾಮಿ ಪರ ವಕೀಲರು ತಿಳಿಸಿದ್ದಾರೆನಕಲಿ ಟಿಆರ್‌ಪಿ ಹಗರಣ ಕಳೆದ ವರ್ಷ ಅಕ್ಟೋಬರ್‌ನಲ್ಲಿ…

ಶಿವಣ್ಣ ನಟನೆಯ ಭಜರಂಗಿ-೨ ಚಿತ್ರೀಕರಣ ಆರಂಭ

ಲಾಕ್ ಡೌನ್‌ನಿಂದ ಹಲವಾರು ಚಿತ್ರಗಳ ಶೂಟಿಂಗ್ ಮತ್ತು ಬಿಡುಗಡೆಯನ್ನು ಮುಂದೂಡಿದ್ದವು ಆನ್‌ಲಾಕ್ ಬೆನ್ನಲ್ಲೆ ಈಗ ನಿಧಾನವಾಗಿ ಹಲವು ಸಿನಿಮಾ ತಯಾರಕರು ಅರ್ಧಕ್ಕೆ ನಿಂತಿರುವ ಚಿತ್ರೀಕರಣವನ್ನು ಪೂರ್ಣಗೊಳಿಸಲು ಮುಂದಾಗಿದ್ದಾರೆ ಎ ಹರ್ಷ ನಿರ್ದೇಶನದ ಶಿವರಾಜ್ ಕುಮಾರ್ ನಟನೆಯ ಭಜರಂಗಿ-೨ ಸಿನಿಮಾ ಶೇ.೬೦ ರಷ್ಟು ಪೂರ್ಣಗೊಂಡಿದ್ದು ಚಿತ್ರದ ಶೂಟಿಂಗ್ ಮುಂದುವರಿಸಲು ತಯಾರಾಗಿದ್ದಾರೆ. ಚಿತ್ರೀಕರಣ ಆರಂಭಿಸಲು ನಿರ್ಧರಿಸಿದ್ದು ಉಳಿದ ಶೇ.೪೦ ರಷ್ಟು ಶೂಟಿಂಗ್ ಪೂರ್ಣಗೊಳಿಸಲಿದ್ದೇವೆ, ಸಂಗೀತ್ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೂಡಿ ಕೆಲಸ ಪುನಾರಂಭಿಸಲಿದ್ದೇವೆ ಎಂದು ನಿರ್ದೇಶಕ ಹರ್ಷ ತಿಳಿಸಿದ್ದಾರೆ. ಇಂದಿನಿಂದ…

1 71 72 73 74 75 98
Girl in a jacket