Girl in a jacket

Author kendhooli_editor

ಯುವತಿ ಮೇಲೆ ಅತ್ಯಾಚಾರವೆಸಗಿ ಗ್ರಾ.ಪಂ.ಸದಸ್ಯ ನಾಪತ್ತೆ

ಆನೇಕಲ್,ಜೂ,೧೭: ಗ್ರಾಮಪಂಚಾಯಿತ ಸದಸ್ಯನೊಬ್ಬ ಯುವತಿಯನ್ನು ಮನೆಗೆ ಕರೆಸಿಕೊಂಡು ಆಕೆಗೆ ಗನ್ ತೋರಿಸಿ ಅತ್ಯಚರವೆಸಗಿದ ಘಟನೆ ಬನ್ನೇರುಘಟ್ಟ ಸಮೀಪದ ಶಾನಬೋಗನ ಹಳ್ಳಿಯಲ್ಲಿ ಜರುಗಿದೆ. ಬಿಲ್ಲವಾರದಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಹಮದ್ ಪಾಷಾಅತ್ಯಾಚಾರ ಮಾಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಫೇಸ್‌ಬುಕ್‌ನಲ್ಲಿ ಯುವತಿಯ ಪರಿಚಯವಾಗಿದ್ದು ಆಕೆಗೆ ಮಾಡಲಿಂಗ್ ಕ್ಷೇತ್ರದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ಮೂಡಿಸಿದ್ದ. ಹೆಬ್ಬಾಳ ಮೂಲದ ಆ ಯುವತಿಗೆತಾನು ಬನ್ನೇರುಘಟ್ಟ ಕಾರ್ಪೋರೇಟರ್ ಎಂದೂ ಹೇಳಿಕೊಂಡಿದ್ದ. ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಆಹಾರ್ ಕಿಟ್ ವಿತರಣೆ ಮಾಡುತ್ತಿರುವ ಫೋಟೋಗಳನ್ನೂ ಆಕೆಗೆ ವಾಟ್ಸಪ್ ಮೂಲಕ…

ಗಜ಼ಲ್

ವಿಶಾಲಾ ಆರಾಧ್ಯ ಗಜ಼ಲ್ ಏನು ಮಾಯೆಯೇ ಗೆಳತಿ ಯಾವ ಛಾಯೆಯೇ … ಏನು ಮಾಯೆ ಯಾವ ಛಾಯೆ ಸೆಳೆಯಿತೆನ್ನ ಭವದ ಮಾಯೇ ಕರೆದಲ್ಲಿಗೆ ಕೊಳಲ ಕರೆಗೆ ಕೊರಳು ಸಾಗಿದೇ..!! ಮನದ ವೀಣೆ ನುಡಿದಿದೆ ಭಾವ ತಂತಿ ಮೀಟಿ ಎದೆಯ ಮರುಗ ಘಮಿಸಿದೆ ಜೀವ ಸೀಮೆ ದಾಟಿ ಸಾಗಿ ಬಂದು ಪ್ರೇಮ ತೀರದಿ ಮನವು ಅಲೆದಿದೆ ಒಲವ ಅರಸಿದೆ..!! ಭಾವಗಳಿಗೆ ಚಿಗುರು ಮೂಡಿ ಕಾವ್ಯದಲ್ಲಿ ಇಣುಕಿವೆ ಜೀವವಿಂದು ಹಗುರವಾಗಿ ಬಾನಿನಲ್ಲಿ ತೇಲಿದೆ ಮನದ ಬಸಿರು ಬಲಿತು ರಾಗ ಮೋಹನನ…

ಖಾಸಗಿ ಶಿಕ್ಷಣ ಶಾಲೆಗಳ ಆರ್ ಟಿ ಇ ಹಣ ಬಿಡುಗಡೆ

ಬೆಂಗಳೂರು, ಜೂ,17: ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿ ಇ) ಅಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ದಾಖಲಾದ ವಿದ್ಯಸರ್ಥಿಗಳ ಶುಲ್ಕವನ್ನು ಮರುಪಾವತಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ ಅನ್ಬುಕುಮಾರ್ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ 12 (1) ಸಿ ಅಡಿಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2012-13ನೇ ಸಾಲಿನಿಂದ ಶೇ.25ರಷ್ಟು ವಿದ್ಯಾರ್ಥಿಗಳಿಗೆ ಉಚಿತವಾಗಿ ಸೀಟು ಹಂಚಿಕೆ ಮಾಡಿ,…

ಹರ ಮುನಿದರೂ ಗುರು ಕಾಯುವನು

        ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ ಹರ ಮುನಿದರೂ ಗುರು ಕಾಯುವನು. ಹರ ಶಿವ ಪರಮಾತ್ಮ ದೇವರು. ಅಂತ್ಯಗಾಣಿಸುವ, ಪಾಪ ಕಳೆಯುವ ವರನೀಡುವ ಕರುಣಾಮಯಿ ದೀನಾದಿ ರಕ್ಷಕ! ಆಯುಷ್ಯ ತೀರಿದ ಮಾರ್ಕಂಡೇಯನ ಹರ ಬದುಕಿಸಿದ! ಗುರು =ಅರಿವು, ಜ್ಞಾನದಾತ. ಸಿಟ್ಟಿನಲಿ ಧ್ವಂಸಕೆ ಕೈ ಹಾಕಿದವ, ಅರಿವಾಗುತ್ತಲೇ ರಕ್ಷಿಸುವ!ಉರಿಗಣ್ಣಿನಿಂದ ಮನ್ಮಥನ ಸುಟ್ಟ ಹರ, ರತಿದೇವಿ ಅಂಗಲಾಚಿ ಗೋಳಿಟ್ಟುದ ಕಂಡು ಕರಗಿ ಗುರುವಾಗಿ ಬದುಕಿಸಿದ! ಇಂದ್ರ ತ್ರಿಶಂಕುವಿಗೆ ಸ್ವರ್ಗ ಪ್ರವೇಶ ತಿರಸ್ಕರಿಸಿ ನೂಕಿದ! ಗುರು ವಿಶ್ವಾಮಿತ್ರ…

ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದಾರೆ; ಅರುಣ್ ಸಿಂಗ್

ಬೆಂಗಳೂರು,ಜೂ,16: ರಾಜ್ಯ ಬಿಜೆಪಿ ಘಟಕದಲ್ಲಿ ಯಾವ ಸಮಸ್ಯೆಗಳು ಇಲ್ಲ ಎಲ್ಲರೂ ಒಗ್ಗಾಟ್ಟಾಗಿದ್ದಾರೆ ಎಂದಿರುವ ಕರ್ನಾಟ ಉಸ್ತುವಾರಿ ಅರುಣ್ ಸಿಂಗ್ ಬಿ.ಎಸ್ ಯಡಿಯೂರಪ್ಪ ನಾಯಕತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದ್ದಾರೆ. ಮೂರು ದಿನಗಳ ಭೇಟಿಗೆ ರಾಜ್ಯಕ್ಕೆ ಆಗಮಿಸಿರುವ ಅವರು, ಯಡಿಯೂರಪ್ಪನವರನ್ನು ನಾಯಕತ್ವದಿಂದ ಬದಲಾವಣೆ ಮಾಡಲಾಗುತ್ತದೆ ಎಂಬ ಊಹಾಪೋಹಗಳ ಮಧ್ಯೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ವಿಷಯ ಬಗ್ಗೆ ಈಗಾಗಲೇ ಹೇಳಿದ್ದೇನೆ, ಹೀಗಾಗಿ ಯಾವುದೇ ನೇರ ಹೇಳಿಕೆ ನೀಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ಎಲ್ಲಾ ನಮ್ಮ…

ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ.

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌               ಸಿದ್ಧಸೂಕ್ತಿ : ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ. ಅಕ್ಷಿ=ಕಣ್ಣು. ಸಾಕ್ಷಿ=ಪ್ರತ್ಯಕ್ಷದರ್ಶಿ. ಘಟನೆಯಲ್ಲಿ ಭಾಗಿಯಾಗದ ಪ್ರತ್ಯಕ್ಷದರ್ಶಿ, ರಾಗ ದ್ವೇಷ ಪಕ್ಷಪಾತರಹಿತ, ಯಥಾವತ್ತಾಗಿ ನುಡಿಯುವಾತ ನಿಜ ಸಾಕ್ಷಿ. ಸತ್ಯ ಸುಳ್ಳೆಂಬ ವ್ಯಾಜ್ಯ ತೀರ್ಪಿಗೆ ಬೇಕು ಬಲಸಾಕ್ಷಿ! ಸಾಕ್ಷಿ ಹೆದರಿ, ಕೈಯೊಡ್ಡಿ ಶಾಮೀಲಾಗಿ ತಿರುಗಿಬಿದ್ದರೆ ನ್ಯಾಯ ಸತ್ತಿತು! ಅಷ್ಟು ಕೊಟ್ಟರೆ ಅವರಂತೆ, ಇಷ್ಟು ಕೊಟ್ಟರೆ ಇವರಂತೆ ಹೇಳುವ ಹಿರಿಯರು ಸಾಕ್ಷಿಗಳು ಜಗದಗಲ! ಕಳ್ಳನ ಬಿಡಿಸಲು,…

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಇಳಿಮುಖ

ಬೆಂಗಳೂರು,ಜೂ,೧೫:ಲಾಕ್‌ಡೌನ್ ಎಫೆಕ್ಟ್ ಮತ್ತು ಕೊರೊನಾ ನಿಯಂತ್ರಣಕ್ಕೆ ತಗೆದುಕೊಂಡಿರುವ ಕೆಲ ನಿರ್ಧಾರಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಇಳಿಮುಖ ಕಾಣುತ್ತಿದೆ. ಇದರ ಪರಿಣಾಮವಾಗಿ ಮಂಗಳವಾರ ೫,೦೪೧ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ಸೋಂಕಿತರ ಸಂಖ್ಯೆ ೨೭,೭೭,೦೧೦ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಹಾಮಾರಿಗೆ ೧೧೫ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೩,೧೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೯೮೫ ಮಂದಿಗೆ ಸೋಂಕು ದೃಢಪಟ್ಟಿದ್ದು,…

ಖಾಸಗಿ ಶಾಲೆಗಳ ಶುಲ್ಕವನ್ನುಸರ್ಕಾರ ನಿರ್ಧರಿಸಬೇಕು-ಸಿಎಂಗೆ ಸಿದ್ದು ಪತ್ರ

ಬೆಂಗಳೂರು, ಜೂ.೧೫:ಶೈಕ್ಷಣಿಕ ವರ್ಷ ಆರಂಭವಾಗಿರುವ ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪೋಷಕರು ಪಾವತಿಸಬೇಕಾದ ರಿಯಾಯ್ತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಮತ್ತು ಸರ್ಕಾರದ ನಿರ್ಧಾರ ಕಟ್ಟುನಿಟ್ಟಿನ ಜಾರಿ ಆಗುವಂತೆ ಕ್ರಮ ವಹಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆ ಹಿಡಿದಿರುವ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್ಗಳಿಗೆ ಪಾವತಿಸಬೇಕಾದ…

ಭೂತಾಯಿ ಮಡಿಲು ಸೇರಿದ ಸಂಚಾರಿ ವಿಜಯ್

ಚಿಕ್ಕಮಗಳೂರು,ಜೂ,೧೫: ಬೈಕ್‌ನಲ್ಲಿ ಬಿದ್ದು ಅಫಘಾತಕ್ಕೀಡಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ನಟ ಸಂಚಾರಿ ವಿಜಯ್ ಅವರ ಅಂತ್ಯ ಕ್ರಿಯೇ ಇಂದು ಅವರ ಸ್ವಗ್ರಾಮದಲ್ಲಿ ನೆರವೇರಿತು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿರುವ ವಿಜಯ್ ಬಾಲ್ಯದ ಸ್ನೇಹಿತ ರಘು ಅವರ ತೋಟದಲ್ಲೇ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು. ಕಪ್ಪೂರು ಶ್ರೀಗಳ ನೇತೃತ್ವದಲ್ಲಿ ವಿಜಯ್ ಸಹೋದರನಿಂದ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಯಿತು. ಅಂತ್ಯಕ್ರಿಯೆ ಮೊದಲು ಪೊಲೀಸರು ಮೂರು ಸುತ್ತು ಕುಶಾಲು ತೋಪು ಸಿಡಿಸಿ ಸರ್ಕಾರಿ ಗೌರವ ಸಲ್ಲಿಸಲಾಯಿತು. ಫಿಲಂ ಚೇಂಬರ್ ಬೆಂಗಳೂರಿನಲ್ಲೇ…

ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ

ಬೆಂಗಳೂರು, ಜೂ, ೧೫:ನಗರದಲ್ಲಿ ಹಂತ ಹಂತವಾಗಿ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿರುವ ಸರ್ಕಾರ ಈ ವೇಳೆ ಪಿಜಿಯಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚಿಸಿದೆ. ಯಾವುದೇ ಕಾರಣಕ್ಕೂ ಪಿಜಿಯಲ್ಲಿ ಇರುವ ಅವಕಾಶ ನೀಡಬಾರದು ಎಲ್ಲರನ್ನೂ ಅವರವರ ಊರುಗಳಿಗೆ ಕಳಿಸಿಕೊಡಿ ಎಂದು ಪಿಜಿ ಮಾಲೀಕರಿಗೆ ಬಿಬಿಎಂಪಿ ನೊಟೀಸ್ ಜಾರಿಮಾಡಿದೆ. ಒಂದು ವೇಳೆ ಅನಿವಾರ್ಯ ಕಾರಣಗಳಿಗಿಂದಾಗಿ ವಿದ್ಯಾರ್ಥಿಗಳನ್ನು ಪಿಜಿಯಲ್ಲಿ ಉಳಿಸಿಕೊಂಡಲ್ಲಿ ಪಿಜಿಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ೧೧೦ ಚದುರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ…

ಶೀಘ್ರ ಕೇಂದ್ರ ಸಚಿವ ಸಂಪುಟ ವಿಸ್ತರಣೆ?

ನವದೆಹಲಿ,ಜೂ,೧೫: ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ .ಹೀಗಾಗಿಯೇ ಮೋದಿ ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ ಇದೇ ವೇಳೆ ರಾಜ್ಯ ಬಿಜೆಪಿ ಸಂಸದರು ಕೂಡ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಲಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇರುವ ಮತ್ತು ಕೆಲವರ ಖಾತೆಗಳನ್ನು ಬದಲಾವನೆ ಮಾಡಲಾಗುತ್ತಿದೆ ಹೀಗಾಗಿ ಯಾರಿಗೆ ಯಾವ ಖಾತೆ ದೊರೆಯುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕೇಂದ್ರದ ಕೆಲವು ಸಚಿವರು ರಾಜೀನಾಮೆ, ನಿಧನದಿಂದ ಕೇಂದ್ರದ ಸಚಿವ ಸ್ಥಾನಗಳು ತೆರವಾಗಿವೆ. ರಾಮ್ ವಿಲಾಸ್ ಪಾಸ್ವಾನ್,…

ಜಗವಿದು ಪರಮಾತ್ಮನ ಸೃಷ್ಟಿ!

ಜಗವಿದು ಪರಮಾತ್ಮನ ಸೃಷ್ಟಿ! ಒಮ್ಮೆ ಸಿದ್ಧನು ಕೆಲವು ಹಡಗರೊಂದಿಗೆ ಒಂದು ತೋಟಕ್ಕೆ ಹೋದನು. ಅಲ್ಲಿ ನೇರಳೆ ಹಣ್ಣಿನ ಗಿಡದ ಕೆಳಗೆ ಬಿದ್ದಿರುವ ಹಣ್ಣಗಳನ್ನು ಕಾಣುತ್ತಲೇ ಹುಡುಗರು ಎಲ್ಲ ಮರೆತು ಹಣ್ಣು ಆಯ್ದು ತಿನ್ನಲಾರಂಭಿಸಿದರು. ಸಿದ್ಧ ನಿಂತು ನೋಡಿ ಆಲೋಚಿಸಿದ. ಈ ಹುಡುಗರಿಗೆ ಬುದ್ಧಿ ಕಲಿಸಬೇಕೆಂದು ಒಂದು ನೇರಳೆ ಹಣ್ಣನ್ನು ಚೆಲ್ಲಿದನು.ಅಲ್ಲಿ ನೇರಳೆ ಹಣ್ಣಿನ ರಾಶಿಯೇ ಉಂಟಾಯಿತು! ಹುಡುಗರು ಆ ರಾಶಿಯನ್ನು ಕಂಡು ಧಾವಿಸಿದರು, ಆಶ್ಚರ್ಯಪಟ್ಟರು. ಆಗ ಸಿದ್ಧನು ಹೀಗೆ ಹೇಳಿದನು: ಪರಮಾತ್ಮನ ಲೀಲೆ ಅತಿ ವಿಚಿತ್ರ. ಒಂದೇ…

ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’

ತುರುವನೂರು ಮಂಜುನಾಥ ಹೊಸ ಕಾವ್ಯಲೋಕದ ತಾತ್ವಿಕತೆಯ ಬಿಂಬ ‘ದೇವಸ್ಮಶಾನ’ ಈ ಬದುಕಿನಲ್ಲಿ ಮನುಷ್ಯ ತನಿಗರಿವಿಲ್ಲದೆ ಮಾನವೀಯತೆಯನ್ನು ಕಳೆದುಕೊಂಡು ಸಂಬಂಧಗಳ ಬಂಧಿಯೂ ಆಗದೆ,ಬೆಂಕಿಯಂತೆ ಬೆಸೆಯುವ ‘ಮನಸುಮನಗಳ ಅನಿಷ್ಟತೆತೆಗೆ ಸಾಗುವ ಬುದ್ದಿಗಳಿಗೆ ಬಂಧಿಯಾದಾಗಲೇ ಮನುಷ್ಯತ್ವವನ್ನು ಸುಟ್ಟು ಅನಿಷ್ಟತೆತೆಯನ್ನು ಹೆಗಲಮೇಲೇರಿಕೊಂಡು ಸಾಗುತ್ತಿದ್ದಾನೆ. ಹೌದು ಇಂಥ ಬಿರುಸಿನಿಂದ ಸಾಗುವ ತಾಂತ್ರಿಕ ಯುಗದಲ್ಲಿ,ತಂತ್ರಗರಿಕೆಯಲ್ಲೇ ತನ್ನೆಲ್ಲ ಮಾನವ ಸಂಬಂಧಗಳನ್ನು ಬೆಸದು ಯಾಂತ್ರಿಕವಾಗಿ ಸಾಗುತ್ತಿದಾನೆ. ಹಾಗಾಗಿಯೇ ಆಚೀಚಿನ ಸಂಬಂಧ ಮನುಸಗಳ ಮಾನವೀಯತೆಗಳಿಗೆ ಬೆಲೆಯಿಲ್ಲದೆ ಸೊಗಲಾಡಿ ಜೀವಗಳು ಜಗಜ್ಜಾಹಿರವಾಗಿ ಬಿಂಬಿತವಾಗುತ್ತಿವೆ. ಇಂತದ್ದೊಂದು ‘ಅನಾಮಿಕ ಜೀವಗಳ ಮಧ್ಯೆ ಮನುಷ್ಯ…

ಹೊರಗಿನಿಂದ ಬರುವವರಿಗೆ ಕೋವಿಡ್ ಪರೀಕ್ಷೆಗೆ ಆದ್ಯತೆ: ಬಿಬಿಎಂಪಿ

ಬೆಂಗಳೂರು.ಜೂ,೧೪: ಹೊರಗಿನಿಂದ ನಗರಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಹೆಚ್ಚಾಗುಯತ್ತಿರುವ ಕಾರಣ ಕೋವಿಡ್ ಮತ್ತಷ್ಟು ಹರಡುವ ಸಾಧ್ಯತೆಗಳಿರುವ ಕಾರಣ ಹೊರಗಿನಿಂದ ಬರುವವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಆರೋಗ್ಯಾಧಿಕಾರಿಗಳಿವೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸೂಚಿಸಿದ್ದಾಋಎ ಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ವರ್ಚುವಲ್ ರೂಪದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಸಾರ್ವಜನಿಕರು ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸಿದರೆ, ಮಾತ್ರ ಈ ಸೋಂಕಿನ ವಿರುದ್ಧದ ಹೋರಾಟ ಯಶಸ್ಸು ಕಾಣಲು ಸಾಧ್ಯ. ಕೋವಿಡ್ ಪರೀಕ್ಷೆ, ಕಂಟೈನ್ಮೆಂಟ್…

ಅಧಿಕಾರ ದಾಹ ಬಿಟ್ಟು ಕೆಲಸ ಮಾಡಿ-ಎಂ.ಬಿ.ಪಾಟೀಲ್

ಹಾವೇರಿ.ಜೂ,೧೪: ಕೊರೊನಾ ಸೋಂಕಿನಿಂದ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ ಇಂತ ಸಮಯದಲ್ಲಿ ಅಧಿಕಾರ ದಾಹಕ್ಕೆ ಕುರ್ಚಿಗಾಗಿ ಕಿತ್ತಾಟ ನಡೆಸುವ ಕೆಲಸ ಬಿಡಿ ಕೆಲಸ ಮಾಡಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬರಿಗೊಬ್ಬರು ತಾಳ ಮೇಳ ಇಲ್ಲ. ಸಿಎಂ ಬದಲಾವಣೆ ಮಾಡಬೇಕು ಅಂತಾರೆ. ಪರಸ್ಪರ ಸಹಕಾರವಿಲ್ಲ. ಕೊರೊನಾ ಸಂದರ್ಭದಲ್ಲಿ ಜನರ ಜೀವ ಉಳಿಸೋ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಕೋವಿಡ್‌ನಲ್ಲಿ ಸುರೇಶ್ ಅಂಗಡಿಯವರನ್ನ…

ಸುರೇಶ್ ರೈನಾ ‘ಬಿಲೀವ್’ ಪುಸ್ತಕ ಬಿಡುಗಡೆ

ಮುಂಬೈ,ಜೂ,೧೪: ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನ್ ಬರೆದಿರುವ ಅವರ ಆತ್ಮಚರಿತ್ರೆ ‘ಬಿಲೀವ್ ಎಂಬ ಪುಸ್ತಕ ಇಂದು ಬಿಡುಗಡೆಗೊಂಡಿದೆ ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ರೈನಾ ಆತ್ಮೀಯ ಗೆಳೆಯ ಮಹೇಂದ್ರ ಸಿಂಗ್ ಧೋನಿಯೊಂದಿಗೆ ೨೦೨೦ರ ಆಗಸ್ಟ್‌ನಲ್ಲಿ ಅಂತರಾಷ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಇದೀಗ ನಿವೃತ್ತಿಯ ಬಳಿಕ ತಮ್ಮ ವೈಯಕ್ತಿಕ ಬದುಕು ಮತ್ತು ಕ್ರಿಕೆಟ್ ವೃತ್ತಿ ಜೀವನದ ಕುರಿತಾಗಿ ಆತ್ಮಚರಿತ್ರೆಯೊಂದನ್ನು ಬರೆದಿದ್ದಾರೆ. ರೈನಾ ತಮ್ಮ ಆತ್ಮ ಚರಿತ್ರೆಗೆ ಸಚಿನ್ ತೆಂಡುಲ್ಕರ್ ಅವರು ನೀಡಿರುವ ಸ್ಪೂರ್ತಿಯ ಪದ ‘ಬಿಲೀವ್’…

ಕೊರೊನಾ ದಿಂದ ಸಾವನ್ನಪ್ಪಿದ ಕುಟುಂಬಕ್ಕೆ ೧ ಲಕ್ಷ ರೂ ಪರಿಹಾರ

ಬೆಂಗಳೂರು, ಜೂ, ೧೪; ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದ ದುಡಿಯುವ ಒಬ್ಬ ವ್ಯಕ್ತಿಗೆ ಒಂದು ಲಕ್ಷರೂಗಳನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಮೂಲಕ ಕೊರೊನಾದಿಂದ ಸತ್ತವರ ಕುಟುಂಬಗಳಿಗೆ ೧ಲಕ್ಷ ರೂ ನೀಡುವ ಘೋಷಣೆ ಮಾಡಿದ ಮೊದಲ ಸರ್ಕಾರ ಎಂಬ ಹೆಗ್ಗಳಿಕೆಗೆ ರಾಜ್ಯ ಸರ್ಕಾರ ಪಾತ್ರವಾಗಿದೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ ಅವರು, “ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದಲ್ಲಿ ಕೋವಿಡ್‌ನಿಂದ ದುಡಿಯುವ ವ್ಯಕ್ತಿ ಮೃತಪಟ್ಟಿದ್ದರೆ ಒಬ್ಬರಿಗೆ ಪರಿಹಾರವನ್ನು ನೀಡಲಾಗುತ್ತದೆ. ಇದರಿಂದ ಒಟ್ಟು ೨೦…

ಅಗಲಿದ ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಶ್ರದ್ಧಾಂಜಲಿ

ಬೆಂಗಳೂರು,ಜೂ,14:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ಕೇಂದ್ರ ಕಚೇರಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. kuwj ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ನಾಡಿನ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಹಿರಿಯ ಪತ್ರಕರ್ತರಾದ ಸುರೇಶ್ ಚಂದ್ರ, ದವಡಬೆಟ್ಟ ನಾಗರಾಜ್, ದಾವಣಗೆರೆಯ ಹೆಚ್.ಎನ್.ಮುನೇಶ್ ರವರಿಗೂ, ರಾಷ್ಟ ಪ್ರಶಸ್ತಿ ವಿಜೇತರಾದಂತ ಚಲನ ಚಿತ್ರನಟರಾದ ಸಂಚಾರಿ ವಿಜಯ್, ಕೆ.ಸಿ.ಎನ್.ಚಂದ್ರು ಅವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ…

ವೃತ್ತ,ಮೇಲ್ಸೇತುವೆಗೆ ಡಾ. ಸಿದ್ದಲಿಂಗಯ್ಯ ನಾಮಕರಣ ಮಾಡಲು ಸಿಎಂಗೆ ರಾಮುಲು ಮನವಿ

ಬೆಂಗಳೂರು. ಜೂ.೧೪: ಸಾಮಾಜಿಕ ಸಮಾನತೆಗಾಗಿ ಕಾವ್ಯ, ಸಾಹಿತ್ಯಗಳನ್ನು ರಚಿಸಿ ಪ್ರೇರಣೆ ನೀಡಿ, ಜನಮಾನಸದಲ್ಲಿರುವ ಖ್ಯಾತ ಲೇಖಕ, ಕವಿ ಡಾ. ಸಿದ್ದಲಿಂಗಯ್ಯ ಅವರ ಸ್ಮರಣಾರ್ಥ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಷ್ಠಿತ ವೃತ್ತ ಅಥವಾ ಮೆಲ್ಸೇತೆಗೆ ಡಾ. ಸಿದ್ದಲಿಂಗಯ್ಯ ಅವರ ನಾಮಕರಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಡಾ.ಸಿದ್ದಲಿಂಗಯ್ಯ ಅವರ ನಿಧನದಿಂದ ಸಾಹಿತ್ಯಕ್ಷೇತ್ರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಭರಿಸಲಾರದ ನಷ್ಟ ಉಂಟಾಗಿದೆ.…

ಸಂಚಾರಿ ವಿಜಯ್ ಇನ್ನಿಲ್ಲ

ಬೈಕ್ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ನಿಧನ ಹೊಂದಿದ್ದಾರೆ. ಶನಿವಾರ ರಾತ್ರಿ ತನ್ನ ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳಿದ್ದ ವೇಳೆ ಅಫಘಾತ ಸಂಭವಿಸಿತ್ತು ಈ ವೇಳೆ ಅವರ ತೆಲೆಗೆ ಪೆಟ್ಟು ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯೆಗೊಂಡಿತ್ತು, ತೀವ್ರ ಗಾಯಗೊಂಡಿದ್ದ ಅವರನ್ನು ಬನ್ನೇರು ಘಟ್ಟ ರಸ್ತೆಯಲ್ಲಿರುವ ಅಪಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹಲವಾರು ಕನ್ನಡ ಚಿತ್ರ ಮತ್ತು ಕಿರುಚಿತ್ರ ಹಾಗೂ ನಾಟಕ ಗೀಳು ಹತ್ತಿಸಿಕೊಂಡಿದ್ದ ಅವರಿಗೆ ಎರಡು ಬಾರಿ…

1 75 76 77 78 79 98
Girl in a jacket