ಆಡಳಿತ ವರ್ಗದ ಕಾರ್ಯ ಕ್ಷಮತೆ, ಖಾಸಗಿ ಕೆಲಸದ ಅದಕ್ಷತೆ
ಆಡಿಳತ ವರ್ಗದ ಕಾರ್ಯಕ್ಷಮತೆ,ಖಾಸಗಿ ಕೆಲಸದ ಅದಕ್ಷತೆ ಕೋಟ ಬಸ್ ನಿಲ್ದಾಣದಲ್ಲಿ ಸನ್ಯಾಲ್ ಕಾರನ್ನು ಹತ್ತಿ ರಾವತ್ ಭಾಟ ಅಣುಶಕ್ತಿ ಸ್ಥಾವರ (RAPP)ಕ್ಕೆ ಹೊರಟ ನನ್ನೊಟ್ಟಿಗಿದ್ದ ಕೋಟ ಆಫೀಸ್ ನ ಅಶೋಕ್ ಕುಮಾರ್ ಕುಲಶ್ರೇಷ್ಠ (AKK) ಬಹಳ ಅಸಮಾಧಾನಗೊಂಡಿದ್ದರು. ಸುಮಾರು 50 ಕಿ. ಮೀ.ಗಳ ದೂರದ ಹಾದಿಯ ಉದ್ದಕ್ಕೂ ನಾನು ಮತ್ತು ಸನ್ಯಾಲ್ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳುತಿದ್ದರೇ ಹೊರತು ತಾವಾಗಿಯೇ ಒಂದೇ ಒಂದು ಮಾತನ್ನೂ ಆಡಲಿಲ್ಲ. ನಾನು ಮಾಡಿದ ತಪ್ಪಿನ ಅರಿವು ನನಗಾಗಲೆ ಆಗತೊಡಗಿತ್ತು. AKK ಪ್ರತಿರೋಧದ…