ಪಾದರಕ್ಷಾಯಣ
ಪಾದರಕ್ಷಾಯಣ ಆಂದು ನಾನು ಮತ್ತು ಸಹ ಶಿಕ್ಷಕಿ ಇಬ್ಬರೂ ಕೂಡಿ ಚಪ್ಪಲಿ ಅಂಗಡಿಗೆ ಹೋದೆವು. ಚಪ್ಪಲಿ ಅವಶ್ಯಕತೆ ನನಗೆ ಸಧ್ಯಕ್ಕೆ ಇರಲಿಲ್ಳ. ಗೆಳತಿಗೆ ಸುಂದರವಾದ ಮತ್ತು ಕೈಗೆಟುಕುವ ಬೆಲೆಗೆ ಚಂದದ ವಿನ್ಯಾಸದ ಚಪ್ಪಲಿ ಸಿಕ್ಕಿತು. ನನಗೂ ಅಂತದ್ದೇ ತೆಗೆದುಕೊಳ್ಳುವ ಮನಸ್ಸಾಯಿತು. ಅಂಗಡಿಯವರನ್ನು ಕೇಳಿದೆ. ಅವರು ಪಾಪ ಹುಡುಕಿ ಹುಡುಕಿ ಸುಸ್ತಾದರು. ನನ್ನ ಅಳತೆಯ ಚಪ್ಪಲಿ ಸಿಗಲಿಲ್ಲ. ನನಗೆ ನಿರಾಶೆಯಾಯಿತು. ಅದನ್ನು ಕಂಡು “ಮೇಡಂ ಏನೂ ಚಿಂತೆ ಮಾಡಬೇಡಿ ಬುಧವಾರದ ನಂತರ ಕರೆ ಮಾಡಿ ತಂದಿಟ್ಟಿರುತ್ತೇನೆ ಬಂದು ತಗೊಂಡು…