Girl in a jacket

Author kendhooli_editor

ಎಸ್.ಎಸ್.ಎಲ್.ಸಿ.ಪರೀಕ್ಷೆ ನಡೆಯಬಾರದು; ವಿಶ್ವನಾಥ್

ಮೈಸೂರು, ಜು,೦4: ಎಸ್ ಎಸ್ ಎಲ್ ಸಿ‌ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಆಗ್ರಹಿಸಿದ್ದಾರೆ. ಅಕ್ಷರ ,ಆರೋಗ್ಯ ಚೆನ್ನಾಗಿದ್ದರೆ ಆಡಳಿತ ಚೆನ್ನಾಗಿರುತ್ತದೆ. ಮಗುವಿನ ಆರೋಗ್ಯ ಸುರಕ್ಷತೆ ಈಗ ಮುಖ್ಯ ನಂತರ ಶಿಕ್ಷಣ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ದೊಡ್ಡ ಅನಾಹುತವಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು, ಎಚ್ಚರಿಸಿದರು. ಪಿಯುಸಿ ಪರಿಕ್ಷೆ ಬೇಡ ಅಂತಾ ಹೇಳಲಾಗಿದೆ. ಶಿಕ್ಷಣ ಸಮಿತಿಯ ವರದಿ ಏನು‌ ಹೇಳಿದೆ ? ನೀವು ಆರೋಗ್ಯ ಇಲಾಖೆಯ ಸಲಹೆ ತೆಗೆದುಕೊಂಡಿದ್ದೀರಾ ?…

ಹಲ್ಲೆ ಪ್ರಕರಣ; ಮಾಜಿ ಸಚಿವ ಪರಮೇಶ್ವರ್ ನಾಯಕ್ ಸಹೋದರ ಬಂಧನ

ವಿಜಯನಗರ, ಜು,04;ವೃದ್ದನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ಮಾಜಿ ಸಚಿವ ಪರಮೇಶ್ವರ್ ನಸಯಕ್ ಸಹೋದರನನ್ನು ಬಂಧಿಸಲಾಗಿದೆ. ಜೂನ್ 29ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲಕ್ಷ್ಮೀಪುರ ತಾಂಡದಲ್ಲಿ ಮನೆಯ ಜಾಗದ ಕ್ಷುಲ್ಲಕ ವಿಚಾರವಾಗಿ ಶರಣ ನಾಯ್ಕ ಮೇಲೆ ಪಿ. ಟಿ. ಶಿವಾಜಿ ನಾಯ್ಕ ಹಲ್ಲೆ ಮಾಡಿದ್ದರು. ಹಲ್ಲೆಯಿಂದಾಗಿ ಗಾಯಗೊಂಡಿದ್ದ ಶರಣ ನಾಯ್ಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಾಣಗೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ…

ಕನ್ನಡ ಪಂಡಿತರ ಕನ್ನಡ ಸೇವೆ

ಕನ್ನಡ ಪಂಡಿತರ ಕನ್ನಡ ಸೇವೆ ಅಂದು ಜುಲೈನ ಒಂದು ಗುರುವಾರದ ಮಧ್ಯಾಹ್ನ. ಹೊರಗೆ ಜಿಟಿಪಿಟಿ ಸುರಿಯುತ್ತಿದ್ದ ಮುಂಗಾರಿನ ಮಳೆ ಊಟಕ್ಕಾಗಿ ಮನೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳ ಆತಂಕವನ್ನು ಸಹಜವಾಗಿಯೇ ಹೆಚ್ಚು ಮಾಡಿತ್ತು. ಊಟದ ಅವಧಿಗಿಂತ ಮೊದಲಿನ ಅಂದರೆ ಬೆಳಗಿನ ಶಾಲಾ ಅವಧಿಯ ಕೊನೆಯ ಪೀರಿಯಡ್ ಪ್ರಾರಂಭವಾಗಿತ್ತು. ನಾವು ಒಂಬತ್ತನೇ ತರಗತಿಯ “ಎ” ವಿಭಾಗದ ವಿದ್ಯಾರ್ಥಿಗಳಿಗೆ ಅಂದು ವೇಳಾಪಟ್ಟಿಯ ಪ್ರಕಾರ ಕನ್ನಡ ತರಗತಿ ಇತ್ತು. ನಮಗೆ ಆ ವರ್ಷ ಶಾಲೆ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳು ಕಳೆದಿದ್ದರೂ ಕನ್ನಡ ತರಗತಿಗಳು…

ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ

– ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                        ‌‌‌‌‌             ಸಿದ್ಧಸೂಕ್ತಿ : ಹೆಂಡ ಸಾರಾಯಿ ಸಹವಾಸ, ಹೆಂಡತಿ ಮಕ್ಕಳು ಉಪವಾಸ. ಮದ್ಯಸೇವನೆ ಎಲ್ಲೆಡೆ ಹರಡಿದ ಹೆಚ್ಚು ಅಪಾಯದ ದುಶ್ಚಟ. ಸಿರಿವಂತ ವಿದ್ಯಾವಂತರು ಹತ್ತಾರು ಸಾವಿರ ರೂ ಮೌಲ್ಯದ ಉತ್ತಮ ಮದ್ಯವನ್ನು ಹಿತಮಿತ ಸೇವಿಸುವುದುಂಟು. ಇದು ರಟ್ಟಾಗದೆಯೂ ಇರಬಹುದು! ಬಡವ ಕಡಿಮೆ ಮೌಲ್ಯದ ಕಳಪೆ ಮದ್ಯ ಸೇವಿಸಿ,…

ಹುಟ್ಟು ಗುಣ ಸುಟ್ಟರೂ ಹೋಗದು

ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಹುಟ್ಟು ಗುಣ ಸುಟ್ಟರೂ ಹೋಗದು. ವ್ಯಕ್ತಿ ವಸ್ತು ಜೀವಿಯ ಬಾಲ್ಯ ಆರಂಭದ ಗುಣ ಸ್ವಭಾವ ಸುಟ್ಟರೂ ಏನೇ ಮಾಡಿದರೂ ಬದಲಾಗದು. ಮಾಂಸ ಮುಟ್ಟುವುದಿಲ್ಲ ಎಂಬ ಷರತ್ತು ಒಪ್ಪಿ ದೇವರ ಅನುಗ್ರಹದಿಂದ ನಾಯಿ ರಾಜನಾಗಿ ಸಿಂಹಾಸನ ಏರಿತಂತೆ! ಸಭೆ ನಡೆಯುತ್ತಿರಲು ಮೂಳೆ ಕಂಡೊಡನೆ ಮಾತು ಮರೆತ ನಾಯಿ ಸಿಂಹಾಸನದಿಂದ ಜಿಗಿದು ಮೂಳೆ ಕಚ್ಚಿತಂತೆ! ಹಾಗೆಂದು ಆರಂಭಿಕ ಗುಣ ಸ್ವಭಾವ ಪರಿವರ್ತನೆ ಅಸಾಧ್ಯವೆಂದಲ್ಲ.ಹಾಗಿದ್ದಲ್ಲಿ ಶಿಕ್ಷಣ ತರಬೇತಿಯ ಅಗತ್ಯ ಏನು? ಸುಲಿಗೆ ದರೋಡೆ ಮಾಡುತ್ತಿದ್ದ…

ಸುಧೀಂದ್ರಹಾಲ್ದೊಡ್ಡೇರಿ ಇನ್ನೂ ನೆನಪು

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು ಪ್ರಯೋಗಗಳನ್ನು ಪರಿಚಯಿಸಲು ಸುಧೀಂದ್ರ ವಹಿಸುತ್ತಿದ್ದ ಆಸಕ್ತಿ, ಶ್ರದ್ಧೆ ಮತ್ತು ಅಧ್ಯಯನ ಅಸಾಧಾರಣವಾಗಿತ್ತು. ಸುಧೀಂದ್ರ ಹಾಲ್ದೊಡ್ಡೇರಿ 1961ರ ಡಿಸೆಂಬರ್ 3ರಂದು ಜನಿಸಿದರು. ಕನ್ನಡ ಪತ್ರಕರ್ತ ದಿವಂಗತ ನಾಗೇಶರಾಯರು ಇವರ ತಂದೆ. ಸುಧೀಂದ್ರ ಹಾಲ್ದೊಡ್ಡೇರಿ ತಂದೆಯವರು ಮನೆಗೆ ತರಿಸುತ್ತಿದ್ದ ದೇಶ-ವಿದೇಶಗಳ ಪತ್ರಿಕೆಗಳನ್ನು ಓದುತ್ತಾ ಬೆಳೆದರು. ಅವುಗಳಲ್ಲಿರುವ ವಿಜ್ಞಾನ…

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು ನೀರನ್ನ ಮುಗಿಲಿಗೇರಿಸಿ ದೈವೀಕರಿಸಿ ಪ್ರಾರ್ಥಿಸುವ,ನೀರನ್ನ ನೆಲದಲ್ಲೇ ಕಂಡು ಸಂಭ್ರಮದಿಂದ ಹಾಡುವ ಇಬ್ಬಗೆಯ ಸಂಸ್ಕೃತಿಗಳು ನಮ್ಮೊಳಗಿವೆ.ನೀರನ್ನ ಪಂಚಭೂತಗಳಲ್ಲಿ ಒಂದೆಂದು ಅದು ಪಶು,ಪಕ್ಷಿ,ಮೊದಲಾದ ಕೋಟ್ಯಾಂತರ ಜೀವರಾಶಿಗೂ ಸಸ್ಯ ಸಂಕುಲಕ್ಕೂ ಅಗತ್ಯವೆಂಬಂತೆಯೇ ನೀರಿನಿಂದಲೇ ಇವುಗಳೆಲ್ಲದವರ ನಾಶ ಎಂಬ ಇಬ್ಬಗೆಯ ಸತ್ಯಗಳೂ ಇವೆ. ಒಂದಕ್ಕೆ ಮನೋಹರ ರೂಪ ಅಂಟಿಕೊಂಡರೆ ಮತ್ತೊಂದಕ್ಕೆ ಭೀಕರ ಸ್ವರೂಪವಿದೆ. ” ಮಳೆಯಿಂದ ಅನ್ನ,ಯಜ್ಞದಿಂದ ಮಳೆ “ಎಂದು ಭಗದ್ಗೀತೆ ಹೇಳಿದರೆ,”ಬಿಸಿಲು ಕುಣಿದು ಬೆವತಾದ ಈಗ ಬಂದಾದ ಮಳಿಯ ಹದಕ” ಎಂದು ಬೇಂದ್ರೆಯವರ ಕವಿತೆ…

ತೈಲಬೆಲೆ ಏರಿಕೆ ರಾಜ್ಯಸರ್ಕಾರಗಳ ಕೈಯಲ್ಲಿದೆ ; ನಿರ್ಮಲ ಸೀತಾರಾಮನ್

ಬೆಂಗಳೂರು,ಜು,02: ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ರಾಜ್ಯ ಸರ್ಕಾರಗಳು ಸೆಸ್,ತೆರಿಗೆ ದರಗಳನ್ನು ಕಡಿಮೆ ಮಾಡಿದರೆ ದರ ಕಡಿಮೆಯಸಗುತ್ತದೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ತೈಲ ಬೆಲೆ ಏರಿಕೆ ಸಂಬಂಧ,ರಾಜ್ಯ ಸರ್ಕಾರಗಳನ್ನ ಹೊಣೆ ಮಾಡಿದ್ದಾರೆ. ರಾಜ್ಯ ಸರ್ಕಾರಗಳ ಸೆಸ್ ಹೆಚ್ಚಳವಾಗಿದೆ. ರಾಜ್ಯಗಳು ತಮ್ಮ ತೆರಿಗೆ ಪಾಲು ಕಡಿಮೆ ಮಾಡಬಹುದು. ದರ ನಿಯಂತ್ರಣ ರಾಜ್ಯ ಸರ್ಕಾರಗಳ ಕೈಯಲ್ಲಿ ಇದೆ ಎಂದು ತಿಳಿಸಿದರು. ಕಚ್ಚಾ ತೈಲದ ಬೆಲೆ ತೀವ್ರ ಗತಿಯಲ್ಲಿ ಏರುತ್ತಿದೆ.…

ವಚನ ಸಾಹಿತ್ಯ ಬೆಳಕಿಗೆ ತಂದವರು ಹಳಕಟ್ಟಿ;ಎಂ.ಬಿ.ಪಾಟೀಲ್

ವಿಜಯಪುರ ,ಜು,02: ಹರಿದು ಹಂಚಿ ಹೋಗಿದ್ದ ವಚನ ಸಾಹಿತ್ಯವನ್ನು ಹುಡುಕಿ ಪ್ರಕಟಿಸಿ, ಪ್ರಚಾರ ಮಾಡಿ, ಬೆಳಕಿಗೆ ತಂದವರು ವಚನಪಿತಾಮಹರೆಂದೇ ಖ್ಯಾತರಾದವರು ಡಾ.ಫ.ಗು.ಹಳಕಟ್ಟಿವರು ಎಂದು ಬಿ.ಎಲ್.ಡಿ.ಇ ಅಧ್ಯಕ್ಷ, ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಹೇಳಿದರು. ಡಾ.ಫ.ಗು.ಹಳಕಟ್ಟಿಯವರ ಜನ್ಮದಿನದ ನಿಮಿತ್ತ ಬಿ.ಎಲ್.ಡಿ.ಇ ಸಂಸ್ಥೆ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ಮಾತನಾಡಿದ ಅವರು, ಬಸವಣ್ಣ ಹಾಗೂ ಬಸವಾದಿ ಶರಣರು ಬರೆದಂತದಹ ವಚನ ಕಟ್ಟುಗಳು ಕಲ್ಯಾಣ ಕ್ರಾಂತಿಯ ನಂತರ ಮಠ-ಮಂದಿರಗಳಲ್ಲಿ, ಗುಡಿ-ಗುಂಡಾರಗಳಲ್ಲಿ, ಅಂಗಡಿ-ಮನೆಗಳಲ್ಲಿ, ಅಲ್ಲಲ್ಲಿ ಜಗುಲಿಗಳಲ್ಲಿ ಇದ್ದವು. ವಕೀಲಿ ವೃತ್ತಿಯ ನಿಮಿತ್ತ…

ಬೆಂಗಳೂರಿನ ಭಕ್ಷಿಗಾರ್ಡನ್ನಿನ ರಕ್ತಚರಿತ್ರೆ..!

writing-ಪರಶಿವ ಧನಗೂರು ಭಕ್ಷಿಗಾರ್ಡನ್..! ಬೆಂಗಳೂರಿನ ಭಯಾನಕ ರಕ್ತಚರಿತ್ರೆಯ ಪುಟಗಳಿರುವ ವಿಚಿತ್ರವಾದ ವಿಭಿನ್ನ ಏರಿಯಾ! ಈ ಗಾರ್ಡನ್ ಗ್ಯಾಂಗ್ ವಾರ್ ನ ಮಾಫಿಯಾದ ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬರದ ಎಷ್ಟೋ ನಿಗೂಢ ಗುಪ್ತ ಕ್ರೂರ ಕತೆಗಳಿವೆ. ಪದೇ ಪದೇ ತನ್ನ ಅಪರಾಧ ಕೈತ್ಯಗಳಿಗಾಗಿ ಬೆಂಗಳೂರಿಗರನ್ನೂ ಬೆಚ್ಚಿ ಬೀಳಿಸುತ್ತ , ಹೆದರಿಸುತ್ತ ನರಳುತ್ತಾ ಹೊರಳುತ್ತಿದ್ದ ಬೆಂಗಳೂರಿನ ಹೈದಯ ಭಾಗದಲ್ಲಿರುವ ಭಕ್ಷಿಗಾರ್ಡನ್ ಈಗ ಮಾಜಿ ಮಹಿಳಾ ಕಾರ್ಪೋರೇಟರ್ ಬೀಕರ ಕೊಲೆಗೆ ಸಾಕ್ಷಿಯಾಗಿ, ರಾಜ್ಯದ ಜನಪ್ರತಿನಿಧಿಗಳನ್ನೇ ಬೆದರಿಸಿ, ನಿದ್ದೆಗೆಡಿಸಿದೆ. ಆಳುವ ಸರ್ಕಾರವೇ ತಣ್ಣಗೆ…

ಸಿದ್ದು-ಡಿಕೆಶಿ ಹಾವು ಏಣಿ ಆಟ

ಮುಂದಿನ ಮುಖ್ಯಮಂತ್ರಿ ಯಾರೆಂಬ ಬಹಿರಂಗ ಹೇಳಿಕಾ ಸಮರ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ತಣ್ಣಗಾಗಿದೆ. ಆದರೆ ಒಳಗೊಳಗೆ ಪರಸ್ಪರ ಇರಿಯುವ ಹುನ್ನಾರ ಸಾಗಿದೆ. ಪಕ್ಷವನ್ನು ಗೆಲ್ಲಿಸುವ ಸಾಮೂಹಿಕ ಯೋಚನೆಯಾಗಲೀ ಯೋಜನೆಯಾಗಲೀ ಕಾರ್ಯತಂತ್ರವಾಗಲೀ ಕಾಣಿಸುತ್ತಿಲ್ಲ. ಹೈಕಮಾಂಡ್ ಕೂಡಾ ಈ ವಿಚಾರದಲ್ಲಿ ಸ್ಪಷ್ಟ ನಿಲುವು ನಿರ್ಧಾರ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಿದ್ದು-ಡಿಕೆಶಿ ಹಾವು ಏಣಿ ಆಟ ಹೈಕಮಾಂಡ್ ಸೂಚನೆಗೆ ಜಗ್ಗದಬಗ್ಗದ ರೀತಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಕರ್ನಾಟಕದಲ್ಲಿ ಮುಂದುವರಿದಿದೆ. ಕೆಲವರು ಬಹಿರಂಗದಲ್ಲಿ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಿದ್ದರೆ ಹಲವರು ಅಂತರಂಗದಲ್ಲಿ…

ದುಷ್ಟರ ಸಂಹಾರ ಎಂಬುದು ಬಿಎಸ್‌ವೈ ಪತನವಾ?

ದುಷ್ಟರ ಸಂಹಾರ ಆಗಬೇಕು ಅದರಿಂದ ದೇಶ, ರಾಜ್ಯ ಮತ್ತು ಪಕ್ಷಕ್ಕೆ ಒಳ್ಳಯದಾಗುತ್ತದೆ’ ಇದು ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಈ ಹೇಳಿಕೆಗೆ ಹಲವಾರು ಅರ್ಥಗಳು ಇವೆ,ಇನ್ನು ಅವರೇ ಹೇಳುವ ರೀತಿ ಜೈಲಿಗೆ ಹೋಗಿಬಂದ ಯಡಿಯೂರಪ್ಪ ಮತ್ತೇ ಜೈಲಿಗೆ ಹೋಗಬಾರದು ಎಂಬುದು ನಮ್ಮ ಕಾಳಜಿ ಎನ್ನುವ ಮುಂದುವರೆದ ಹೇಳಿಕೆಗಳಿಗೆ ನಾನಾಅರ್ಥಗಳು ಮೂಡುತ್ತವೆ. ಇದು ಹೇಳುವ ಒಂದು ದಿನ ಮುಂಚೆ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಯೋಗೇಶ್ವರ್ ಅವರು ಭೇಟಿ ಮಾಡಿದ್ದು ಕೂಡ ಕುತೂಹಲ ಮೂಡಿಸಿದೆ,…

ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ!

೨೦೧೨ ಛತ್ತೀಸಗಢದ ಬಿಜಪುರ ಜಿಲ್ಲೆ ಸರ್ಕೇಗುಡದಲ್ಲಿ ನಡೆದ ಹುಸಿಬಾಂಬ್ ಎನೌಂಟರ್ ನಡೆದು ಒಂಬತ್ತು ವರ್ಷಗಳಾಗಿವೆ ಈ ಕುರಿತು ವರದಿ ನೀಡಿದ ಆಯೋಗ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ೧೭ ಮಂದಿಯ ಪೈಕಿ ಯಾರೂ ಮೌವೋವಾದಿಗಳಾಗಿರಲಿಲ್ಲ ಎಂದು ಹೇಳಿದೆ ಆದರೂ ಈ ಬಗ್ಗೆ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಇದೇ ಈ ದೇಶದ ದುರಂತ ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ! ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ ೨೦೧೨ರಲ್ಲಿ ನಡೆದ ಹುಸಿ ಎನ್ಕೌಂಟರೊಂದು…

ಹಿರಿಯರಿಲ್ಲದ ಮನೆ ಮನೆಯಲ್ಲ

‌‌   ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ ‌‌‌‌‌‌                     ಸಿದ್ಧಸೂಕ್ತಿ : ‌ಹಿರಿಯರಿಲ್ಲದ ಮನೆ ಮನೆಯಲ್ಲ. ಮನೆ = ಸಮಾಜದ ಪ್ರಾಥಮಿಕ ಘಟಕ. ತಂದೆ ತಾಯಿ, ಗಂಡ ಹೆಂಡತಿ, ಮಕ್ಕಳು ಮೊಮ್ಮಕ್ಕಳು, ಅಜ್ಜ ಅಜ್ಜಿ, ಸಹೋದರ ಸಹೋದರಿ ಮುಂತಾದವರ ನೆಲೆ. ಅವಿಭಕ್ತ ಕುಟುಂಬದಲ್ಲಿ ಕಾಣಸಿಗುವ ಸುಮಧುರ ಸಂಬಂಧಗಳನ್ನು, ಸುಂದರ ಬಾಳನ್ನು ಭಾವಿಸಿ! ಹಿರಿಯರು ಕಿರಿಯರನ್ನು ಹುಟ್ಟುಹಾಕುವರು, ತುತ್ತು ನೀಡುವರು, ನಡೆ ನುಡಿಗಲಿಸಿ, ಕಾಲ ಕಾಲಕ್ಕೆ ಪಡೆವ ಬಾಳಿನ…

ಈಸಬೇಕು ,ಇದ್ದು ಜಯಿಸಬೇಕು

ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ ಸಿದ್ಧಸೂಕ್ತಿ : ಈಸಬೇಕು, ಇದ್ದು ಜಯಿಸಬೇಕು. ಹಳ್ಳ ನದಿ ಕೆರೆ ನೀರ ದಾಟಲು ಈಸಬೇಕು. ಈಜು ಬಾರದವರು ನೀರಲಿ ಬಿದ್ದರೆ ಕಷ್ಟ.ಮುಳುಗಿದರೆ ಮುಗಿದಂತೆ! ಈಸಿ ದಾಟಿದರೆ ಮುಂದೆ ಸುಂದರದ ಬದುಕು! ಪ್ರಪಂಚ ಸಾಗರ! ದಾಟಲು ಈಸಬೇಕು, ನಿರಂತರ ಹೋರಾಡಬೇಕು! ಆಗಲೇ ಗೆಲುವು! ಗೆದ್ದವರಿಗಿದೆ ನೀರಾಚೆಯ ಸುಖ ಸಾಗರ! ಸವಿಯಲು ಇರಬೇಕು, ಇದ್ದು ಜಯಿಸಬೇಕು! ಇಲ್ಲದವರಿಗೆ ಏನಿಲ್ಲ. ಬದುಕುವಾಶೆಯುಂಟು! ಎದುರಾಗುವ ರೋಗ ಬಡತನ ಸಾಲ ಹಗೆ ಧಗೆ ಕಾಲೆಳೆತ ವಿಷಸಂಕೋಲೆಗೆ ಸುಸ್ತಾಗಿ ಕೊನೆಯಾಗುವರು ಕೆಲರು!…

ಜ್ಞಾನ – ವಿಜ್ಞಾನ

ಪರಿಚಯ: ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ. ಎ. ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದ್ದರೂ ಅವರ ಮೊದಲ ಪುಸ್ತಕ ಬಿಡಿಗಡೆಯಾಗಿದ್ದು ೨೦೧೭ ರಲ್ಲಿ. ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ…

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು!

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು! ನೇರಳೆ ತೋಟದಿಂದ ಸಿದ್ಧಬಾಲಕನು ಹುಡುಗರೊಂದಿಗೆ ಮನೆಯಕಡೆಗೆ ಹೊರಟನು. ದಾರಿಯಲ್ಲಿ ಒಂದು ಹಾವು ಬಿದ್ದಿತ್ತು. ಅದನ್ನು ಕಂಡೊಡನೆಯೇ ಹುಡುಗರೆಲ್ಲಾ ಭಯಪಟ್ಟು ಕಂಗಾಲಾಗಿ ಅತ್ತಿತ್ತ ದೂರಕ್ಕೆ ಓಡಿಹೋದರು. ಸಿದ್ಧನು ಹೆದರಲಿಲ್ಲ.ಹತ್ತಿರಕ್ಕೆ ಹೋಗಿ ಪರಿಶೀಲಿಸಿದನು. ಒಂದು ಸಣ್ಣ ಕಲ್ಲನ್ನು ಎಸೆದನು. ಅದು ಅಲುಗಾಡಲಿಲ್ಲ.ಹಾವು ಸತ್ತಿರುವುದನ್ನು ಮನಗಂಡನು.ಬಳಿಕ ಮಿತ್ರರನ್ನೆಲ್ಲಾ ಕೂಗಿ ಕರೆದನು. “ಏಕೆ ಹೆದರುತ್ತೀರೋ? ಬನ್ನಿ! ಇದು ಸತ್ತ ಹಾವು” ಎಂದನು. ಹುಡುಗರು ನಂಬಲಿಲ್ಲ. ಮುಂದಕ್ಕೆ ಹೆಜ್ಜೆ ಇಡಲು ಹಿಂಜರಿದರು. ಆಗ ಸಿದ್ಧನು, ಆ ಸತ್ತ ಹಾವನ್ನು…

ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆ ಜಾರಿಗೆ ಸುಪ್ರೀಂ ಗಡವು

ನವದೆಹಲಿ,ಜೂ,೨೯: ಮುಂದಿನ ಜುಲೈ ೩೧ ರೊಳಗೆ ’ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್’ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಕೋರ್ಟ್, ಮಂಗಳವಾರ ಗಡುವು ನೀಡಿದೆ. ಸಾಂಕ್ರಾಮಿಕ ರೋಗ ಮುಂದುವರಿಯುವವರೆಗೆ ಪಡಿತರವನ್ನು ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದು, ಇದರ ಜೊತೆಗೆ ವಲಸೆ ಕಾರ್ಮಿಕರನ್ನು ನೋಂದಾಯಿಸಲು ಪೋರ್ಟಲ್ ಸ್ಥಾಪಿಸುವಂತೆಯೂ ಕೇಂದ್ರಕ್ಕೆ ಸೂಚನೆ ಕೊಟ್ಟಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ.ಆರ್.ಶಾ ಅವರನ್ನೊಳಗೊಂಡ ವಿಭಾಗೀಯ ಪೀಠ ಕೋವಿಡ್-೧೯ ರಿಂದ ಬಾಧಿತರಾದ ವಲಸೆ ಕಾರ್ಮಿಕರ…

ರಾಜಕೀಯವಿಡಂಬನೆಚಿತ್ರವೊಂದರಸುತ್ತ..!

ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾರ್ಟೂನ್ ಮಹತ್ವ ಕುರಿತು ಮತ್ತು ಅದರ ಹಿಂದಿನ ಮತ್ತು ಇಂದಿನ ಬಳಕೆ ಪತ್ರಿಕೋದ್ಯಮದಲ್ಲಿ ಅದಕ್ಕಿರುವ ಮಾನ್ಯತೆ ಕುರಿತು ಹಿರಿಯ ಪತ್ರಕರ್ತರು ಅಂತ ಕಾರ್ಟೂನ್‌ಗಳಿಗೆ ಸಾಕ್ಷಿಯಾದ ಸಿ.ರುದ್ರಪ್ಪ ಅವರು ಅದರ ಕುರಿತು ನೀಡಿರುವ ಮಾಹಿತಿ ಇಲ್ಲಿದೆ ರಾಜಕೀಯವಿಡಂಬನೆಚಿತ್ರವೊಂದರಸುತ್ತ..! ಸಿ.ರುದ್ರಪ್ಪ ಇದುಪ್ರಸಿದ್ಧಕಲಾವಿದಶ್ರೀಯುತಪಿಮಹಮ್ಮದ್‌ಅವರುಸುಮಾರು೮ ವರ್ಷಗಳಹಿಂದೆರಚಿಸಿದರಾಜಕೀಯವಿಡಂಬನೆಯಚಿತ್ರ.ಆರ್ಕೆಲಕ್ಷ್ಮಣ್,ಕೆಶಂಕರಪಿಳ್ಳೈ,ಅಬುಅಬ್ರಹಾಂಮೊದಲಾದವರಸಾಲಿಗೆಸೇರುವಮಹಮ್ಮದ್‌ಅದ್ಭುತವಾದಕಾರ್ಟೂನಿಸ್ಟ್.”ಸರ್‌ಈಚಿತ್ರನನಗೆಬೇಕಿತ್ತು”ಎಂದುಮನವಿಮಾಡಿಕೊಂಡಾಗಅದನ್ನುತಕ್ಷಣಕಳುಹಿಸಿಕೊಟ್ಟರು.ನಾನುಅವರೊಂದಿಗೆಸ್ವಲ್ಪಹೊತ್ತುಲೋಕಾಭಿರಾಮವಾಗಿಮಾತನಾಡುತ್ತಾ”ಪ್ರಜಾವಾಣಿಯಲ್ಲಿನಿಮ್ಮಕಾರ್ಟೂನ್‌ಗಳು ಯಾವಾಗಲೂ ಪೊಬ್ಲಿಷ್ ಆಗುತ್ತಿದ್ದವು.ಆಯಾಕಾಲಘಟ್ಟದ ರಾಜಕೀಯ ಕಾಮೆಂಟರಿಯನ್ನುನಿಮ್ಮಕಾರ್ಟೂನ್ಗಳೇಹೇಳಿಬಿಡುತ್ತಿದ್ದವು.ಆದರೆವಿಜಯಕರ್ನಾಟಕದಲ್ಲಿನಿಮ್ಮಕಾರ್ಟೂನ್ಗಳುಒಂದುಮೂಲೆಯಲ್ಲಿಚಿಕ್ಕದಾಗಿಬರುತ್ತಿದ್ದವು.ಆದ್ದರಿಂದಹೆಚ್ಚು ಅನ್ ಆಕ್ಟೀವ್ ಆಗಿರಲಿಲ್ಲ”ಎಂದೆ.ಆದರೆಮಹಮ್ಮದ್ ಅವರು”ವಿಜಯಕರ್ನಾಟಕಒಂದುಕಾರ್ಪೊರೇಟ್ಸಂಸ್ಥೆಗೆಸೇರಿದಪತ್ರಿಕೆ.ಅವರಿಗೆಅವರದ್ದೇಆದಕೆಲವುನಿಲುವುಗಳುಇರುತ್ತವೆ”ಎಂದುವಿವರಿಸಿದರು.ಅವರದ್ದುಸ್ಥಿತಪ್ರಜ್ಞೆ,ಸರಳಮತ್ತುಸಹಜನಡವಳಿಕೆ ಹಾಗೂ ಮಾಗಿದವ್ಯಕ್ತಿತ್ವ. ಈ ಕಾರ್ಟೂನ್‌ಅನ್ನುಮಹಮ್ಮದ್  ವರು ಯಡಿಯೂರಪ್ಪ ಬಿಜೆಪಿವರಿಷ್ಠರ ವಿರುದ್ಧ ಬಂಡಾಯವೆದ್ದು kjp ರಚಿಸಿದಾಗಪ್ರಕಟಿಸಿದ್ದರು.ತಮಗೆದ್ರೋಹಮಾಡಿರುವ ಬಿಜೆಪಿ ವಿರುದ್ಧಸೇಡುತೀರಿಸಿಕೊಳ್ಳಲುಯಡಿಯೂರಪ್ಪಹೊಸಪಕ್ಷಕಟ್ಟಲುಮುಂದಾಗಿದ್ದರು.ತಮ್ಮೊಂದಿಗೆಹೊಸಪಕ್ಷಕ್ಕೆಸುಮಾರುಹತ್ತುಸಚಿವರುಮತ್ತುಐವತ್ತಕ್ಕೂಹೆಚ್ಚುಬಿಜೆಪಿಶಾಸಕರುಬರುತ್ತಾರೆಎಂಬಅತೀವವಿಶ್ವಾಸವನ್ನುಯಡಿಯೂರಪ್ಪಹೊಂದಿದ್ದರು.ಆದರೂಮನಸ್ಸಿನಒಂದು ಮೂಲೆಯಲ್ಲಿತಮ್ಮಬೆನ್ನಿಗೆಕೆಲವರುಚೂರಿಹಾಕಬಹುದೆಂಬಸಂಶಯಅವರಿಗೆಇದ್ದೇಇತ್ತು.ಆದರೆತಮಗೆಅಖಂಡನಿಷ್ಠೆಪ್ರದರ್ಶಿಸುತ್ತಿದ್ದಬಸವರಾಜಬೊಮ್ಮಾಯಿ,ಮುರುಗೇಶನಿರಾಣಿ,ವಿ.ಸೋಮಣ್ಣ,ಉಮೇಶ್ಕತ್ತಿಮುಂತಾದವರಬಗ್ಗೆಅವರಿಗೆಕಿಂಚಿತ್ತೂಸಂಶಯವಿರಲಿಲ್ಲ.ಸಮೃದ್ಧಖಾತೆಗಳನ್ನುನಿರ್ವಹಿಸಿದ್ದಈಸಚಿವರುಚುನಾವಣಾಖರ್ಚಿಗೆಸಂಪನ್ಮೂಲಒದಗಿಸಬಹುದೆಂಬವಿಶ್ವಾಸವೂಅವರಿಗೆಇತ್ತು.ಕನಿಷ್ಠ೨೫…

ಇಬ್ಬರ ನ್ಯಾಯ, ಮೊರನೆಯವನಿಗೆ ಆಯ!

         ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ                                         ಸಿದ್ಧಸೂಕ್ತಿ : ಇಬ್ಬರ ನ್ಯಾಯ, ಮೊರನೆಯವನಿಗೆ ಆಯ! ನ್ಯಾಯ=ಜಗಳ.ಆಯ=ಲಾಭ.ಇಬ್ಬರ, ಎರಡು ಪಂಗಡಗಳ ಜಗಳ ಮತ್ತೊಬ್ಬರಿಗೆ ಲಾಭ. ಜಗಳವಾಡಿದವರ ಬಾಯಿಗೆ ಮಣ್ಣು! ಗಂಡ ಹೆಂಡತಿ ಜಗಳ ಮಕ್ಕಳಿಗೆ ಲಾಭ. ಇಬ್ಬರಿಂದಲೂ ಓಲೈಕೆ, ಇಬ್ಬರ ಮೇಲೂ ಹಿಡಿತ! ಅವರಿವರ ಜಗಳ ವಕೀಲರಿಗಾಯ್ತು ಸಂಬಳ!…

1 69 70 71 72 73 99
Girl in a jacket