ರಾಜಸ್ಥಾನದಲ್ಲಿ ಸಿಡಿಲು ಬಡೆದು 11 ಮಂದಿ ಸಾವು
ಜೈಪುರ,ಜು:ನಿನ್ನೆ ರಾತ್ರಿ ಸಿಡಿಲು ಬಡೆದು 11ಮಂದಿ ಸಾವನ್ನಪ್ಪಿದ್ದು ಕೆಲವರು ಗಾಯಗೊಂಡ ಘಟನೆ ಸಮೀಪದ 12ನೇ ಶತಮಾನದ ಅಮೆರ್ ಪ್ಯಾಲೆಸ್‌ನಲ್ಲಿ ಜರುಗಿದೆ. ಅಮೆರ್ ಪ್ಯಾಲೆಸ್‌ನ ವಾಚ್ ಟವರ್ ಮೇಲೆ ಜನರು ಮಳೆಯಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಸಿಡಿಲು ಬಡಿದ ಪರಿಣಾಮ ಈ ದುರಂತ ಸಂಭವಿಸಿದೆ. ಕೆಲವರು ಸಿಡಿಲಿನ ಭಯಕ್ಕೆ ವಾಚ್ ಟವರ್ ಮೇಲಿಂದ ಧುಮುಕಿ ಗಾಯಗೊಂಡಿದ್ದಾರೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ. ಸಿಡಿಲು ಬಡಿದಾಗ ವಾಚ್ ಟವರ್ ಮೇಲೆ 27 ಜನರು ಇದ್ದರು ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ…