ಕ್ರಿಯಾ ಕೇವಲಮುತ್ತರಮ್
ಸಿದ್ಧಸೂಕ್ತಿ: ಕ್ರಿಯಾ ಕೇವಲಮುತ್ತರಮ್. ಕ್ರಿಯೆಯೇ ಉತ್ತರವಾಗಬೇಕು.ಹೇಗಿದ್ದರೂ ಟೀಕೆ ನಿಂದೆ ತಪ್ಪಿದ್ದಲ್ಲ. ಆ ಕುರಿತ ಚಿಂತೆ, ಪ್ರತಿಮಾತುಗಳು ಸ್ವಲ್ಪಮಟ್ಟಿನ ಫಲ ನೀಡಬಹುದು. ಆದರೆ ಸಾಧನೆಯೇ ಅದಕ್ಕೆ ಸರಿಯಾದ ಪ್ರತ್ಯುತ್ತರ. ಅಸಾಧ್ಯವಾದುದನ್ನು ಸಾಧಿಸಿದಾಗ ಟೀಕೆಕಾರರೂ ಹೊಗಳುವವರಾಗುತ್ತಾರೆ. ಮಾತಿಗಿಂತ ಕೃತಿ ಮುಖ್ಯ. ಮಾತು ಕಡಿಮೆ ದುಡಿಮೆ ಹೆಚ್ಚಿರಲಿ. ಮಾತಾಡುವವರಾಗುವುದಕ್ಕಿಂತಲೂ ಹೆಚ್ಚಾಗಿ ಮಾಡುವವರಾಗೋಣ.ಮಾತಿನ ಮಲ್ಲರಾಗದಿರೋಣ. ಉತ್ತರಕುಮಾರನ ಪೌರುಷ ತೋರದಿರೋಣ!! *ನವಾಙ್ ಮಾತ್ರೇಣ ಪೌರುಷ್ಯಂ ಕ್ರಿಯಾ ಕೇವಲಮುತ್ತರಮ್|* *ಬಲಾಬಲೇ…














