Girl in a jacket

Author kendhooli_editor

ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್ ನಿಧನ

ಬೆಂಗಳೂರು,ಆ,26:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಮತ್ತು ಪ್ರೆಸ್ ಕ್ಲಬ್ ಮಾಜಿ ಉಪಾಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಗುಡಿಹಳ್ಳಿಹಿರಿಯ ನಾಗರಾಜ್(66)  ನಿಧನರಾಗಿದ್ದಾರೆ.  ಮೈತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗುಡಿಹಳ್ಳಿ ನಾಗರಾಜ್ ಪ್ರಜಾವಾಣಿ ಪತ್ರಿಕೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದವರು. ಕನ್ನಡ ಸಾಂಸ್ಕೃತಿಕ ಲೋಕದ ಜೊತೆ ನಿಕಟ ಒಡನಾಟ ಇರಿಸಿ ಕೊಂಡಿದ್ದ ಗುಡಿಹಳ್ಳಿ ನಾಗರಾಜ್, ವಿಶೇಷವಾಗಿ ಕನ್ನಡ ರಂಗಭೂಮಿ ಕುರಿತು ಬರೆದ ಲೇಖನಗಳು ಮತ್ತು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಒಂದು ರೀತಿಯಲ್ಲಿ…

ಕಾಂಗ್ರೆಸ್ ನನ್ನ ರೇಪ್ ಮಾಡ್ತಿದೆ ,ವಿವದಾತ್ಮಕ ಹೇಳಿಕೆ ನೀಡಿದ ಗೃಹಸಚಿವರು

ಬೆಂಗಳೂರು,ಆ,26: ಮೈಸೂರಿನಲ್ಲಿ ವಿದ್ಯಾರ್ಥಿನಿ ನಡೆದ ಸಾಮೂಹಿಕ ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ನೀಡಿದ ಹೇಳಿಕೆಗೆ ಗೃಹಸಚಿವ ಅರಗ ಜ್ಞಾನೇಂದ್ರ ಕಾಂಗ್ರೆಸ್ ನನ್ನ ರೇಪ್ ಮಾಡ್ತಿದೆ ಎಂದು ವಿವದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರತಂತೆ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಗುರುವಾರ ಟ್ವೀಟ್‌ ಮಾಡಿದ್ದು ‘ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡುತ್ತಿದ್ದಾರೆ’ ಎಂಬ ಗೃಹಸಚಿವರ ಹೇಳಿಕೆ ಅವರ ಅಸಹಾಯಕತೆ, ಅದಕ್ಷತೆ, ಅಯೋಗ್ಯತನ ಹಾಗೂ ವೈಫಲ್ಯವನ್ನು ಒಪ್ಪಿಕೊಂಡಂತಿದೆ ಎಂದು ಟೀಕಿಸಲಾಗಿದೆ. ಮಂತ್ರಿ ಸ್ಥಾನ ಪಡೆಯಲು ಲಾಭಿ ನಡೆಸುವುದಷ್ಟೇ ಅಲ್ಲ, ಪಡೆದ ಖಾತೆಯನ್ನು ಸಮರ್ಥವಾಗಿ…

ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಬೊಮ್ಮಾಯಿ

ನವದೆಹಲಿ, ಆ, 26: ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಇಂದು ಬೆಳಿಗ್ಗೆ ಮಾತನಾಡಿದ ಅವರು, ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆದಿದ್ದು, ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ…

ಜಿ.ಎಸ್.ಟಿ. ಪರಿಹಾರ  ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಗೆ ಮನವಿ

ಬೆಂಗಳೂರು, ಆ, 26: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕೇಂದ್ರ ಸರ್ಕಾರದಿಂದ ಜಿ.ಎಸ್.ಟಿ. ಪರಿಹಾರವನ್ನು ಇನ್ನೂ ಮೂರು ವರ್ಷಗಳಿಗೆ ಮುಂದುವರೆಸುವಂತೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಹೆಚ್ಚಿಸುವಂತೆ ಮನವಿ ಮಾಡಿದರು. ಕೋವಿಡ್ ಸಾಂಕ್ರಾಮಿಕ ದಿಂದಾಗಿ ರಾಜ್ಯಗಳ ತೆರಿಗೆ ಸಂಗ್ರಹ ಕಡಿಮೆಯಾಗಿದ್ದು, ಸಾಮಾನ್ಯ ಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗಬಹುದು. ಕಳೆದ ವರ್ಷ ಜಿ ಎಸ್ ಟಿ ಪರಿಹಾರ ಸಾಲ ಒದಗಿಸಲಾಗಿತ್ತು. ಈ ವರ್ಷವೂ…

ಮೈಸೂರು ಚಾಮುಂಡಿಬೆಟ್ಟದ ತಪ್ಪಲಲ್ಲಿ ಯುವತಿ ಮೇಲೆ ಸಾಮೂಹಿಕ‌ ಅತ್ಯಾಚಾರ

ಮೈಸೂರು,ಆ,25: ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಸಂಜೆ ಘಟನೆ ಸಂಭವಿಸಿದೆ. ಹಾಡಹಗಲೇ ಯುವಕನಿಗೆ ಗುಂಡು ಹಾರಿಸಿ ಜ್ಯುವೆಲ್ಲರಿ ಶಾಪ್ ದರೋಡೆ, ಯುವತಿಗೆ ಚಾಕುವಿನಿಂದ ಇರಿತ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಚಾಮುಂಡಿ ಬೆಟ್ಟಕ್ಕೆ ಯುವತಿಯು ತನ್ನ ಪ್ರಿಯಕರನ ಜೊತೆ ತೆರಳಿದ್ದಳು. ಅವರಿಬ್ಬರು ಬೈಕ್​ನಲ್ಲಿ ವಾಪಸ್ ಬರುವಾಗ ಲಲಿತಾದ್ರಿಪುರ ರಸ್ತೆಯ…

ಕಾಶ್ಮೀರದಲ್ಲಿ’ ಓ ಮೈ ಲವ್ ‘ಚಿತ್ರದ ಟೈಟಲ್ ಸಾಂಗ್

ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ. ರಾಮಾಂಜಿನಿ ಅವರು ಕಥೆ ಬರೆದು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಚಿತ್ರ ಓ ಮೈ ಲವ್ ಚಿತ್ರದ ಟೈಟಲ್ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಅಕ್ಟೋಬರ್ ತಿಂಗಳಲ್ಲಿ ಉತ್ತರ ಭಾರತದ ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗುವುದು ಎಂದು ನಿರ್ದೇಶಕ ‌ಸ್ಮೈಲ್ ಶ್ರೀನು ತಿಳಿಸಿದ್ದಾರೆ. ಅಲ್ಲದೆ ಇದೇ ೩೦ರಿಂದ ಹನುಮಗಿರಿ ಬೆಟ್ಟ, ರಾಮನಗರ, ಚನ್ನಪಟ್ಟಣ, ನಾಗರಬಾವಿ, ಹೆಚ್.ಎಂ.ಟಿ.ಗ್ರೌಂಡ್, ಯೂನಿವರ್ಸಿಟಿ ರಸ್ತೆಯಲ್ಲಿ ಫೈಟ್, ಚೇಸಿಂಗ್ ಸೀನ್ ಗಳ ಚಿತ್ರೀಕರಣ ನಡೆಯಲಿದೆ.‌. ಈಗಾಗಲೇ ಬಹುತೇಕ ಶೂಟಿಂಗ್…

ಬುದ್ಧಿಮಾತಿದು ನಿನಗೆ

ಸಿದ್ಧಸೂಕ್ತಿ : ಬುದ್ಧಿಮಾತಿದು ನಿನಗೆ. ಬುದ್ಧಿ =ಸರಿಯಾದ ತಿಳುವಳಿಕೆ, ಗೊಂದಲ ರಹಿತ ನಿಶ್ಚಯಾತ್ಮಕ ದೃಢ ಜ್ಞಾನ,ಅಪಾಯಕ್ಕೊಡ್ಡದ ಸುರಕ್ಷಿತದ ಅರಿವು! ಇದು ಬದುಕಿನ ದಿಕ್ಸೂಚಿ! ಆಕಾಶದಲ್ಲಿ ಹಾರುವ ವಿಮಾನಕ್ಕೆ ಸಾಗುವ ಮಾರ್ಗ ತೋರುವುದು ದಿಕ್ಸೂಚಿ! ವಾಹನ ಸಾಗಬೇಕಾದ ದಾರಿ ತೋರುವುದು ಗೂಗಲ್ ನಕ್ಷೆ! ಬಲ್ಲವರು ತೋರುವರು ತಲುಪಬೇಕಾದ ಸ್ಥಳದ ಮಾರ್ಗವನ್ನು! ಬುದ್ಧಿ ಶೂನ್ಯ ಬದುಕು ಕತ್ತಲೆ, ಅಪಾಯ ಪ್ರಪಾತ! ಬುದ್ಧಿಗೆ ಬುದ್ಧಿಮಾತಿಗೆ ತಲೆ ಬಾಗಬೇಕು, ಆ ಮಾರ್ಗದಿ ನಡೆಯಬೇಕು. ಇಲ್ಲಿದೆ ಡಿವಿಜಿ ಯವರ ಬುದ್ಧಿಮಾತು: ಅಧಿಕಾರ ವ್ಯವಹಾರ…

ಕೊನೆಗೂ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಆನಂದ್ ಸಿಂಗ್

ಬೆಂಗಳೂರು,ಆ.೨೪: ಖಾತೆ ವಿಚಾರಕ್ಕೆ ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್ ಸದ್ಯಕ್ಕೆ ಶಮನವಾಗಿದ್ದು, ಇಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಸಚಿವ ಆನಂದ್ ಸಿಂಗ್ ಅವರು ತಮ್ಮ ರಾಜೀನಾಮೆ ನಿರ್ಧಾರ ತಿಳಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಸಿಂಗ್ ಜೊತೆಗೆ ರಾಜೂಗೌಡ ಕೂಡ ಬಂದಿದ್ದರು. ಸಿಎಂ ಬೊಮ್ಮಾಯಿ ಆನಂದ್ ಸಿಂಗ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಡುಕಿನ ನಿರ್ಧಾರ ಕೈಗೊಳ್ಳಬೇಡಿ, ಇರುವ ಖಾತೆಯಲ್ಲೇ ಮುಂದುವರೆಯಿರಿ. ನಾಳೆ…

ಸಂಜನಾ -ರಾಗಿಣಿ ಡ್ರಗ್ಸ್ ಸೇವನೆ ದೃಢ

ನಟಿಯರಾದ ಸಂಜನಾ, ರಾಗಿಣಿ ಡ್ರಗ್ಸ್ ಸೇವಿಸಿರುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ವಿರೇನ್ ಖನ್ನಾ, ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್ ತೋನ್ಸೆ ಡ್ರಗ್ಸ್ ಸೇವಿಸಿರುವುದು ಎಫ್‌ಎಸ್‌ಎ ಪರೀಕ್ಷೆಯಲ್ಲಿ ದೃಡಪಟ್ಟಿದೆ. ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು ೨೦೨೦ರ ಅಕ್ಟೋಬರ್‌ನಲ್ಲಿ ಹೈದರಾಬಾದ್‌ನ ಈSಐಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಈಗ ಸಿಸಿಬಿ ಪೊಲೀಸರ ಕೈಸೇರಿದೆ. ಸದರಿ ರಿಪೋರ್ಟ್‌ನಲ್ಲಿ ಇಬ್ಬರೂ ನಟಿಯರು ಡ್ರಗ್ಸ್ ಸೇವಿಸಿದ್ದರು ಎನ್ನುವುದು ದೃಢಪಟ್ಟಿದ್ದು, ಜತೆಗೆ ವಿರೇನ್ ಖನ್ನಾ ಕೂಡ…

ಇಂದು ಸಂಜೆ ಟೋಕೊಯೋದಲ್ಲಿ ಪ್ಯಾರಾ ಅಥ್ಲೇಟ್ ಗೆ ಚಾಲನೆ

Reported By : H.D Savita ಟೋಕಿಯೋ,ಆ24: ಒಲಂಪಿಕ್ಸ್ ಆತಿಥ್ಯ ವಹಿಸಿಕೊಂಡ ದೇಶವೇ ಪ್ಯಾರಾಲಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಬೇಕು. ಹೀಗಾಗಿ ಒಲಂಪಿಕ್ಸ್ ನಲ್ಲಿ ಯಶಸ್ಸು ಕಂಡಿರುವ ಜಪಾನ್ ಟೋಕಿಯೋ ದಲ್ಲಿ ಇಂದು ಸಂಜೆ 16ನೇಚಾಲನೆ ನೀಲಿದೆ.. ಜಪಾನ್ ನ್ಯಾಷನಲ್‌ಸ್ಟೇಡಿಯಂ ನಲ್ಲಿ ನಿಗದಿಯಾಗಿರುವ ಪ್ಯಾರಾ ಅಥ್ಲೇಟ್ ಗಳ ಜಾಗತಿಕ ಕ್ರೀಡಾಕೂಟವು ಶುಭಾರಂಭಗೊಳ್ಳಲಿದೆ. ದೈಹಿಕ ವೈಕಲ್ಯಗಳನ್ನು ಮೆಟ್ಟಿ ನಿಂತು ಕ್ರೀಡಾ ಸಾಧನೆ ಮಾಡುತ್ತಿರುವವರಿಗಾಗಿ ಆಯೋಜನೆ‌ಮಾಡಲಾಗಿದ್ದು, ಬದುಕಿನಾಟದಲ್ಲಿ ಗೆದ್ದವರ ಕ್ರೀಡಾಕೂಟ ಎಂದೇ ಬಣ್ಣಿಸಲಾಗಿದೆ. ಕೊರೊನಾ ಭೀತಿಯಿಂದ ತಲ್ಲಣ್ಣಿಸಿರುವ ಜನಸಮುದಾಯಕ್ಕೆ ‘ಭಾವನಾತ್ಮಕವಾಗಿ ಜತೆಯಾಗೋಣ’ ಎಂಬ…

ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ

ಸಿದ್ಧಸೂಕ್ತಿ :              ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ. ದುಡ್ಡು ಎಲ್ಲಕ್ಕೂ ಮಿಗಿಲು ದೊಡ್ಡಪ್ಪ! ಇದು ನಮ್ಮ ತಿಳುವಳಿಕೆ. ಅದಕ್ಕೇ ನಡೆದಿದೆ ಒಬ್ಬರನ್ನೊಬ್ಬರು ಸುಲಿದು ತಿನ್ನುವ ದುಷ್ಕೃತ್ಯ! ಕೇಳಬಾರದ್ದು, ನೋಡಬಾರದ್ದು, ಹೇಳಬಾರದ್ದು ನಡೆಯುತಿದೆ ಮಿತಿಲಜ್ಜೆಗೆಟ್ಟು! ಕೊರೋನಾ ದುಷ್ಕಾಲ ನಿದರ್ಶನ! ಉಸಿರಿಗೆ ಬೇಕು ಆಮ್ಲಜನಕ, ಹಣ ಆಗದು! ಹಣ ಹೊಟ್ಟೆಗೆ ತಿನ್ನಲಾಗದು! ಇದು ತಿಳಿದಿರಲಿ. ಇದೇ ಜ್ಞಾನ ವಿದ್ಯೆ! ಇದು ಹಣದ ಅಪ್ಪ! ವಿದ್ಯೆಗಾಗಿ ಹಣ ಹೋಗುತ್ತೆ. ಹಣವೇ ದೊಡ್ಡದಿರೆ…

1-8ನೇ ತರಗತಿ ಆರಂಭಕ್ಕೆ ಶೀಘ್ರ ತೀರ್ಮಾನ

ಬೆಂಗಳೂರು ,ಆ,23: ರಾಜ್ಯದಲ್ಲಿ ಇಂದಿನಿಂದ 9,10 ಮತ್ತು ಪಿಯುಸಿ ಭೌತಿಕ ತರಗತಿಗಳು ಆರಂಭವಾಗಿದ್ದು, 1-8 ನೇ ತರಗತಿ ಆರಂಭಿಸುವ ಬಗ್ಗೆಯೂ ತಜ್ಞರ ಸಲಹೆ ಕೇಳಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದಿನಿಂದ 9-12 ನೇ ತರಗತಿಗಳು ಆರಂಭದ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಕೊವಿಡ್ ಕಡಿಮೆಯಾದರೆ ಗಡಿ ಜಿಲ್ಲೆಗಳಲ್ಲೂ ಶಾಲೆ ಆರಂಭಿಸಲಾಗುವುದು. 1-8 ನೇ ತರಗತಿ ಆರಂಭಿಸುವ ಬಗ್ಗೆಯೂ ತಜ್ಞರ ಸಲೆಹ ಕೇಳಿದ್ದೇವೆ. ಅವರ…

ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಿದ ನಾರಾಯಣ ಗುರು

ಜಿ.ಕೆ.ಹೆಬ್ಬಾರ್, ಶಿಖಾರಿಪುರ ಇಂದು ಸಮಾಜಿಕ ಹರಿಕಾರ ಸಮಾಜದಲ್ಲಿನ ಜಾತಿ ಜಾತಿಗಳ ನಡುವಿನ ಕಂದಕವನ್ನು ಹೋಗಲಾಡಿಸಿ ಸಾಮಾಜಿಕ ತಾರತಮ್ಯ ಹೋಗಲಾಡಿಸಿದವರು ನಾರಾಯಣ ಗುರು ಅವರ ಜನ್ಮದಿನ ಇಂದು ಆ ಪ್ರಯುಕ್ತ ಜಿ.ಕೆ.ಹೆಬ್ಬಾರ್ ಅವರು ಬರೆದ ಲೇಖನ ಸಾಮಾಜಿಕ ತಾರತಮ್ಯ ಹೋಗಲಾಡಿಸಿದ ನಾರಾಯಣ ಗುರು ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ,…

ಇಂದಿನಿಂದ ಶಾಲಾ- ಕಾಲೇಜು ಆರಂಭ

ಬೆಂಗಳೂರು,ಆ23: ರಾಜ್ಯದಲ್ಲಿ ಕೋವಿಡ್ ದೃಢ ಪ್ರಮಾಣ ಶೇ 2ಕ್ಕಿಂತ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 9 ರಿಂದ 12 ರವರೆಗಿನ ಭೌತಿಕ ತರಗತಿಗಳು ಇಂದಿನಿಂದ ಆರಂಭವಾಗಲಿವೆ. ಶಾಲಾ–ಕಾಲೇಜುಗಳಲ್ಲಿ ಭೌತಿಕ ತರಗತಿಗಳ ಆರಂಭಕ್ಕೆ ಜಿಲ್ಲಾ ಆಡಳಿತಗಳು ಸಕಲ ತಯಾರಿ ನಡೆಸಿವೆ. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ‘ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕೋವಿಡ್‌ ದೃಢ ಪ್ರಮಾಣ ಶೇ 2ಕ್ಕಿಂತಲೂ ಹೆಚ್ಚು ಇದೆ. ಈ…

ದುಡಿಮೆಯೇ ದುಡ್ಡಿನ ತಾಯಿ

ಸಿದ್ಧಸೂಕ್ತಿ :           ‌‌‌‌‌    ದುಡಿಮೆಯೇ ದುಡ್ಡಿನ ತಾಯಿ. ದುಡ್ಡು, ವಸ್ತು ಸೇವೆ ಪಡೆಯಲು ಬಳಸುವ ವಿನಿಮಯ ಸಾಧನ. ವಸ್ತು ಸೇವೆ ಎಲ್ಲರಿಗೂ ಬೇಕಾದ್ದರಿಂದ ದುಡ್ಡು ಎಲ್ಲರಿಗೂ ಬೇಕು. ರೂಪಾಯಿ ಡಾಲರ್ ಇತ್ಯಾದಿ ನಾಣ್ಯ ನೋಟನು ಬಳಸುತಿವೆ ವಿಭಿನ್ನ ದೇಶಗಳು.ಸರ್ಕಾರ ದುಡ್ಡನು ಯಥೇಷ್ಟ ಮುದ್ರಿಸಿ ಬೇಕೆಂದವರಿಗೆ ಸಾಕಷ್ಟು ಹಂಚಿದರೆ ಹೇಗೆ? ನಿಜ. ದುಡಿಮೆಯೇ ಬೇಕಿಲ್ಲ! ಓದು ಬೇಡ, ತಗ್ಗಿ ಬಗ್ಗಿ ನಡೆವ ಸಂಸ್ಕಾರ ಬೇಡ! ಯಾರಿಗೆ ಯಾರೂ ಕಮ್ಮಿ…

ಧರ್ಮಮೀರಿದ ಮಾನವೀಯತೆ

ದರ್ಮಮೀರಿದ ಮಾನವೀಯತೆ ಅದು ೨೦೦೪ರ ಏಪ್ರಿಲ್ ತಿಂಗಳ ೨೩ನೇ ತಾರೀಖಿನ ರಾತ್ರಿ ಒಂಬತ್ತರ ಸಮಯ. ಮೊದಲನೇ ಬಾರಿಗೆ ಮಸ್ಕತ್ ನ ಸೀಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನನಗೆ ಹೊರಗಿನ ವಾತಾವರಣದ ಹಬೆಯಂತಹ ಬಿಸಿಗಾಳಿ ಸ್ವಾಗತ ಕೋರಿತ್ತು. ಅಪರಿಚಿತ ನೆಲದಲ್ಲಿ ಕಾಲಿಟ್ಟ ಹೊತ್ತು ಸಹಜವಾಗಿಯೇ ನನ್ನಲ್ಲಿ ಅರಿಯದ ಒಂದು ಆತಂಕ ಮನೆಮಾಡಿತ್ತು. ನನ್ನ ಉದ್ಯೋಗ, ವಾಸಮಾಡಲಿರುವ ಮನೆ ಇಂತಹ ಹಲವು ಹತ್ತು ವಿಷಯಗಳು ಪೂರ್ವನಿರ್ಧಾರವಾಗಿದ್ದಾರೂ ನಮ್ಮದಲ್ಲದ ನೆಲದಲ್ಲಿ ಬದುಕನ್ನು ಮತ್ತೆ ಕಟ್ಟಬೇಕಾದ ಅನಿವಾರ್ಯತೆಯೊಂದು ನನ್ನೆದುರು ಧುತ್ತೆಂದು ನಿಂತಿತ್ತು.…

ನೀನೊಂದು ಗಾಳಿ ಪಟ ಮಂಕುತಿಮ್ಮ

ಸಿದ್ಧಸೂಕ್ತಿ :       ನೀನೊಂದು ಗಾಳಿ ಪಟ ಮಂಕುತಿಮ್ಮ. ಗಿಡ ಮರ ಕ್ರಿಮಿ ಕೀಟ ಹುಳು ಹುಪ್ಪಡಿ ಪಶು ಪಕ್ಷಿಗಳಿಗೆ ಆಯ ವ್ಯಯ, ನಕ್ಷೆ ಕ್ರಿಯಾಯೋಜನೆ, ಭೂತ ಭವಿಷ್ಯತ್ತುಗಳ ಭಾರೀ ಲೆಕ್ಕಾಚಾರ ಯಾವುದೂ ಇಲ್ಲ!ಅಂದಂದಿನ ತಾತ್ಕಾಲಿಕ ಜೀವನದ ಯೋಜನೆ ಅವುಗಳದ್ದು. ಮನೆ ಗೂಡು ಸಂಗಾತಿ ಬಟ್ಟೆ ಬರೆ ಹಣ ವಾಹನ ಯಾವುದಕ್ಕೂ ಅಂಟಿರದೇ ನಿಶ್ಚಿಂತೆಯಿಂದ ಬದುಕ ಸಾಗಿಸಿವೆ. ನಮಗಿದೆ ರಸ್ತೆ, ಗೂಗಲ್ ಮ್ಯಾಪ್! ಹಕ್ಕಿ ಗಗನಕ್ಕೆ ಹಾರಲು ಎಲ್ಲಿದೆ ನಕ್ಷೆ? ನಮಗಿದೆ ಸಂಚಾರ ನಿಯಮ!…

ಆಲಮಟ್ಟಿ ಡ್ಯಾಂಗೆ ಸಿಎಂ ಬೊಮ್ಮಾಯಿ ಅವರಿಂದ ಬಾಗಿನ

ಆಲಮಟ್ಟಿ,ಆ,21:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉತ್ತರ ಕರ್ನಾಟಕದ ಜೀವ ನದಿ ಎನಿಸಿರುವ ಕೃಷ್ಣಾ ನದಿಗೆ ಸಾಂಪ್ರದಾಯಿಕವಾಗಿ ಬಾಗಿನ ಅರ್ಪಿಸಿದರು. ಆಲಮಟ್ಟಿಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಭೇಟಿ ನೀಡಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಸಂಸದ ಪಿ.ಸಿ. ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ, ಶಾಸಕರಾದ ದೊಡ್ಡನಗೌಡ ಪಾಟೀಲ್, ಬಸನಗೌಡ ಪಾಟೀಲ ಯತ್ನಾಳ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಾಹಪೂರ, ಶಿವಾನಂದ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . .  ಮುಂದುವರಿದ ಭಾಗ. . . ವಿಜಯನಗರ ಅರಸರು ಕೃಷಿ ನೀರಾವರಿಗೆ ಆದ್ಯತೆ ನೀಡಿದ್ದುದು ತಿಳಿದ ಸಂಗತಿ. ಅದು ಮಳೆಯ ನೀರನ್ನು ಕೆರೆ, ಕಾಲುವೆಗಳ ಮೂಲಕ ತಡೆದು ಕೃಷಿ ಬೆಳೆ ಮತ್ತು ಗ್ರಾಮ-ನಗರಗಳ ಬಳಕೆಗೆ ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿಕೊಂಡಿದ್ದರು. ಅದರಲ್ಲೂ ರಾಜಧಾನಿಯ ಪಕ್ಕದಲ್ಲೇ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು, ಅದರ ನೀರನ್ನು ವಿನಿಯೋಗಿಸಿಕೊಂಡ ಕ್ರಮ ಅನನ್ಯವಾದದ್ದು. ಅವರ ಪ್ರಯತ್ನದಿಂದ ಅನೇಕ ಅಣೆಕಟ್ಟೆಗಳು ಐದುನೂರು ವರ್ಷಗಳ ಹಿಂದೆಯೇ ನಿರ್ಮಾಣವಾಗಿವೆ. ಅಲ್ಲದೆ…

ಬದುಕು ಜಟಕಾ ಬಂಡಿ

ಸಿದ್ಧಸೂಕ್ತಿ :                  ಬದುಕು ಜಟಕಾ ಬಂಡಿ. ಬದುಕು ಸಂಕೀರ್ಣ. ಗೆರೆ ಕೊರೆದಂತೆ ಇರದು. ಕಡ್ಡಿ ಮುರಿದಂತಾಗದು. ಅದು ಜಟಕಾ ಬಂಡಿ=ಕುದುರೆ ಗಾಡಿ! ನಾವು ನೀವೆಲ್ಲ ಈ ಗಾಡಿ ಎಳೆವ ಕುದುರೆ! ಯಾರಿಗೂ ಕಾಣದ, ಅರಿಯದ ವಿಧಿ =ಹಣೆಯ ಬರಹ ಗಾಡಿಯ ಸಾಹೇಬ ಸಾರಥಿ! ಸಾರಥಿ ಹೇಳಿದಂತೆ ಕುದುರೆ ಕೇಳಬೇಕು, ನೂಕಿದತ್ತ ಸಾಗಬೇಕು, ಓಡಿಸಿದತ್ತ ಓಡಬೇಕು! ಮದುವೆಗೋ ಮಸಣಕೋ! ಇಲ್ಲದಿದ್ದರೆ ಕುದುರೆ ಬದಲು! ಇಷ್ಟವೋ ಅನಿಷ್ಟವೋ,…

1 56 57 58 59 60 101
Girl in a jacket