Girl in a jacket

Author kendhooli_editor

21 ರಂದು ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಸಿಎಂ

ಆಲಮಟ್ಟಿ; ಆ.೨೧ರಂದು ತುಂಬಿದ ಕೃಷ್ಣೆಯ ಜಲನಿ ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಲಮಟ್ಟಿಜಲಾಶಯಕ್ಕೆ ಗಂಗಾಪೂಜೆ, ಬಾಗಿನ ಅರ್ಪಿಸಿದ ನಂತರ ಪ್ರವಾಹಮತ್ತು ಕೋವಿಡ್ ಕುರಿತು ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನಿಲಕುಮಾರ ಹೇಳಿದರು. ಶುಕ್ರವಾರ ಆಲಮಟ್ಟಿ ಜಲಾಶಯದ ಹಿಂಭಾಗದ ಬಾಗೀನ ಅರ್ಪಿಸುವಸ್ಥಳ ಹಾಗೂ ಹೆಲಿಪ್ಯಾಡಗೆ ಭೇಟಿ ನೀಡಿ ಅವರು ಮಾತನಾಡಿದರು. ಹೆಲಿಕಾಪ್ಟರ್ ಮೂಲಕ ಆಗಮಿಸುವ ಮುಖ್ಯಮಂತ್ರಿಯವರು ಹೆಲಿಪ್ಯಾಡ್‌ನಿಂದ ನೇರವಾಗಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು, ಅವರೊಂದಿಗೆ ಸಚಿವರುಗಳು ಇರಲಿದ್ದು, ನಂತರ ಜಲಾಶಯಕ್ಕೆತೆರಳಿ ಬಾಗಿನ ಅರ್ಪಿಸುವರು. ಅವಳಿ ಜಿಲ್ಲೆಯ…

ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ?

ಬಿಎಸ್ ವೈ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡುವಿನ ಸದ್ಯದ ರಾಜಕೀಯ ಪರಿಸ್ಥಿತಿ ಯ ಕುರಿತು ಹಿರಿಯ ಪತ್ರಕರ್ತರಾದ ಸಿ.ರುದ್ರಪ್ಪ ಅವರ ಅವಲೋಕನ ಮಾಡಿದ್ದಾರೆ. ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಅನ್ಯಮನಸ್ಕರಾಗುತ್ತಿದ್ದಾರೆಯೇ ಯಡಿಯೂರಪ್ಪ? ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರ ರಾಜಕೀಯ ಭವಿಷ್ಯದ ಬಗ್ಗೆ ಅಪಾರವಾದ ನಿರೀಕ್ಷೆ ಹೊಂದಿರುವ ಬಿ ಎಸ್ ಯಡಿಯೂರಪ್ಪನವರು ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಆತಂಕಗೊಂಡಿದ್ದಾರೆ ಎನ್ನಲಾಗಿದೆ. “ಯಡಿಯೂರಪ್ಪನವರು ಉಮ್ಮಳಿಸಿ ಬರುತ್ತಿದ್ದ ದುಃಖದ ನಡುವೆಯೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದರು.ನಂತರ ಪ್ರಧಾನಿ ನರೇಂದ್ರ ಮೋದಿ,ಅಮಿತ್…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ…

ದಂತ ಕಥೆಗೆ ಯಾರ ಗುಣಗಾನದ ಅಗತ್ಯವಿಲ್ಲ… ಅವಳು ಹುಡುಗಿ. ಅವಳು ಕೈಲಾಗದವಳು ! ಮದುವೆಯಾಗಿ ಮನೆಯೊಳಗೇ ಇರಬೇಕಾದವಳು !! ಎಂಬ ಸಾಂಪ್ರದಾಯಿಕ ಹೇಳಿಕೆಗಳನ್ನ ತನ್ನ ಜೀವನ ಸಂಘರ್ಷಗಳಿಂದಲೇ ಮಣಿಸಿ ಹರ್ಷ ಕಂಡವಳು ಮೇರಿ ಕೋಮ್. ಎಲ್ಲರಂತೆ ಸಾಮಾನ್ಯ ಕನಸುಗಳನ್ನ ಕಾಣದೆ ತನ್ನ ಹರೆಯದ ವಾಂಛೆಗಳನ್ನ ಬಾಕ್ಸಿಂಗ್ ರಿಂಗ್ ನೊಳಗೇ ಕೂಡಿ ಹಾಕಿದವಳು. ಬ್ಯಾಕ್ಸಿಂಗ್…ಬಾಕ್ಸಿಂಗ್..ಬಾಕ್ಸಿಂಗ್!!! ಎಂದು ನಿದ್ದೆ ಎಚ್ಚರಗಳಲ್ಲೂ ಧ್ಯಾನಿಸಿದವಳು ಮೇರಿ ಕೋಮ್. ” ಏನೇ ನೀನು ಬರು ಬರುತ್ತಾ ಹುಡುಗನಂತೆ ಆಡುತ್ತಿದ್ದೀಯ?, ನಿನ್ನ ಮುಖಕ್ಕೆ ಏಟು ಬಿದ್ದರೆ…

ಬಣ್ಣಿಸುವರಾರದನು? ಮಂಕುತಿಮ್ಮ

ಸಿದ್ಧಸೂಕ್ತಿ :       ಬಣ್ಣಿಸುವರಾರದನು? ಮಂಕುತಿಮ್ಮ. ಜಗದ ಉಗಮ ನೆಲೆ ಗತಿ ನಿಗೂಢ. ಬಗೆ ಬಗೆಯ  ರಚನೆಯನಾರು ಬಲ್ಲರು? ಕುಂಬಾರ ಗಡಿಗೆ ಮಾಡಿದ ತೆರದಿ ತಾಯಿ ಮಗುವ ರಚಿಪಳೇ? ಸಾವೇನು ಏಕೆ ರಹಸ್ಯ ಬಲ್ಲವರಾರು? ಉಂಡು ಮಿಕ್ಕಿದ ಎಂಜಲದ ಅಗುಳು ಯಾವ ಕಾಲುವೆಯಲಿ ಹರಿದು ಎಲ್ಲಿ ಸೇರುವುದೋ? ಯಾವುದಕ್ಕೆ ಆಹಾರವಾಗುವುದೋ? ಎಲ್ಲಿ ಮಣ್ಣಾಗುವುದೋ? ಅದರ ಸತ್ತ್ವ ಹೀರಿ ಯಾವುದು ಬೆಳೆಯುವುದೋ? ಆ ಬೆಳೆ ಯಾರಿಗೆ ಆಹಾರವಾಗುವುದೋ? ಅದರಿಂದ ಅವರಿಂದ ಯಾರ್ಯಾರಿಗೆ ಏನೇನಾಗುವುದೋ? ತಿಳಿದವರಾರು? ಹೇಳುವವರಾರು?…

ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು

ತುರುವನೂರು ಮಂಜುನಾಥ ಛಿದ್ರ ಕತಾಸಂಕಲನದ ನಾವೀನ್ಯತೆ ಯ ಸೊಬಗು ಒಬ್ಬ ಕತೆಗಾರನ ಭಾವನೆಗಳು ನಿರಾಳವಾಗಿ ಬರವಣೆಗಿಳಿದರೆ ಆ ಭಾವಗಳು ಬದುಕಿನ ಅನುಭಾವದ ಸಂಕೇತ ,ಸೂಚ್ಯ ಬದುಕಿನ ಅನಾವರಣಗೊಳ್ಳುತ್ಯವೆ.ಹಾಗೆ ಬರಹಗಾರ ತನ್ನ ಭಾವನೆಗಳನ್ನು ವಿಶ್ಲೇಷಿಸುತ್ತಾ ಜೀವನದಲ್ಲಿ ನಡೆದ ಅನುಭವಿಸಿದ ಹಾಗೂ ನೋಡಿದ ಘಟನೆಗಳನ್ನು ಅನುಸಂಧಾನಗೊಳಿಸಿದಾಗ ಬಹುಶಃ ಅಂತ ಕತೆಗಳು ಯಶಸ್ಸಿನ ಶಿಖರವೇರುತ್ತೇವೆ. ಹೌದು ಒಬ್ಬ ಬರಹಗಾರನಿಗೆ ಆ ಕಾಲಘಟ್ಟದ ಯುಗಧರ್ಮ ಪ್ರಾಮುಖ್ಯತೆ ಪಡೆದುಕೊಳ್ಳುತ್ತೆದೆಯಾದರೂ,ಕೆಲ ಬರಹಗಾರರು ಯುಗಧರ್ಮವನ್ನು ಮೀರಿ ತನ್ನದೇ ಆದ ಚಿಂತನೆ ಸೊಬಗನ್ನು ಹೊಸ ಲಯದಲ್ಲಿ ಲೀನವಾಗಿಸುತ್ತಾರೆ.…

ಬಣ್ಣದ ಬುಗರಿ

ಬಣ್ಣದ ಬುಗರಿ ಹೊರಾಂಗಣದ ಆಟಗಳಲ್ಲಿ ಗೋಲಿ, ಬಗರಿ, ಲಗೋರಿ ಇವು ಸಣ್ಣ ಸಣ್ಣ ಮಕ್ಕಳು ಇಷ್ಟ ಪಡುವ ಅತ್ಯಂತ ಸರಳ ಆಟಗಳು. ನಾವೂ ಸಹ ಬಾಲ್ಯದಲ್ಲಿ ಇವನ್ನು ಆಟವಾಡಿಯೇ ಬೆಳೆದೆವು. ಇವು ಗಂಡು ಮಕ್ಕಳ ಆಟಗಳೆಂದು ಗೊತ್ತಿದ್ದರೂ ಕೆಲವೊಮ್ಮೆ ಆಟ ಆಡುತ್ತಿದ್ದೆವು. ಹೆಣ್ಣುಮಕ್ಕಳ ಆಟಗಳಾದ ಕುಂಟುಬಿಲ್ಲೆ, ಮತ್ತು ಬೆಟ್ಟ ಹತ್ತುವ ಆಟಗಳು ಪರಿಕರಗಳೇನೂ ಇಲ್ಲದೆ ಆಡುವ ಆಟಗಳಾಗಿದ್ದವು. ನಮ್ಮ ಮನೆಯು ಶಾಲೆಯ ಪಕ್ಕದಲ್ಲೇ ಇದ್ದ ಕಾರಣ ಸದಾ ಮಕ್ಕಳ ಕಲರವ ಇರುತ್ತಿತ್ತು. ಅದರೊಂದಿಗೆ ಆಟ ಪಾಠಗಳೂ ಇರುತ್ತಿದ್ದವು.…

ದೇವಸ್ಥಾನಗಳ ಸ್ವಚ್ಛತೆ, ಮೂಲ ಸೌಕರ್ಯಕ್ಕೆ ಆದ್ಯತೆ: ಜೊಲ್ಲೆ

ಬೆಂಗಳೂರು,ಆ,19: ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ವಕ್ಫ್ ಮತ್ತು ಹಜ್ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಸಚಿವರು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ್ದೇನೆ. ರಾಜ್ಯದಲ್ಲಿ ವಕ್ಫ್ 105885 ಎಕರೆ ಜಮೀನು ಗುರುತಿಸಲಾಗಿದೆ. ರಾಜ್ಯದಲ್ಲಿ 32192 ವಕ್ಫ್ ಆಸ್ತಿ ನೊಂದಣಿಯಾಗಿದೆ. 8480 ಎಕರೆ ಒತ್ತುವರಿಯಾಗಿರುವ…

ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಶ್ರೀಮಂತವಾಗಿ ಬೆಳೆಯುತ್ತದೆ: ಬೊಮ್ಮಾಯಿ

ಬೆಂಗಳೂರು, ಆ, 18: ಮಾತೃಭಾಷೆಯ ಮಹತ್ವವನ್ನು ಅರಿತ ಸಮುದಾಯ ಬಹಳ ಶ್ರೀಮಂತವಾಗಿ ಬೆಳೆಯುತ್ತದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯ ಪಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಆಯೋಜಿಸಿದ್ದ 2019- 20 ನೇ ಸಾಲಿನ ವಿವಿಧ ರಾಜ್ಯ ಪ್ರಶಸ್ತಿ ಹಾಗೂ ಬಸವ ರಾಷ್ಟ್ರೀಯ ಪ್ರಶಸ್ತಿ ಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನವೀಯ ಮತ್ತು ಮಾತೃ ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕು ಎಂದ ಮುಖ್ಯಮಂತ್ರಿಗಳು…

ಇಳೆಗಾಗದಿರು ಭಾರ

ಸಿದ್ಧಸೂಕ್ತಿ :                        ಇಳೆಗಾಗದಿರು ಭಾರ. ಭೂಮಿಗೆ ಭಾರವಾಗಿರಬೇಡ! ಬದುಕು ಅಸ್ಥಿರ ಅಲ್ಪವಾದರೂ ಅದು ಅನಂತ ಸಂಬಂಧಗಳ ಹೆಣಿಕೆ! ಇರಲು ತಿರುಗಲು ಭೂಮಿ ನೆಲೆ! ಅದು ಆಹಾರ ನೀಡಿದೆ, ಗಿಡಮರಗಳ ಮೂಲಕ ಶುದ್ಧ ಆಮ್ಲಜನಕ ಪೂರೈಸಿದೆ. ನೀರು ಗಾಳಿ ಬೆಳಕು ಅಗ್ನಿಗಳು ನೆರವಿತ್ತಿವೆ! ಕುಟುಂಬ ಬಂಧು ಮಿತ್ರ ಸರ್ಕಾರ ಸಮಾಜ ಸಹಕರಿಸಿವೆ! ಪ್ರಕೃತಿ ಪ್ರಾಣಿ ಪಕ್ಷಿ ಕ್ರಿಮಿ ಕೀಟ ಉಪಕರಿಸಿವೆ. ಇಷ್ಟೊಂದು…

ಅಫ್ಗನ್‌ನಿಂದ ಭಾರತಕ್ಕೆ ಬಂದಿಳಿದ ೧೫೦ ಮಂದಿ

ನವದೆಹಲಿ,ಆ,೧೯: ಅಫ್ಗಾನಿಸ್ತಾನದಲ್ಲಿ ಸಂಘರ್ಷಭರಿತ ಪರಿಸ್ಥಿತಿಯು ಮುಂದುವರಿದಿದೆ. ಅದರ ನಡುವೆಯೇ ಭಾರತದ ರಾಯಭಾರಿ ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ಮಂಗಳವಾರ ತೆರವು ಮಾಡಲಾಗಿದೆ. ದೇಶವು ತಾಲಿಬಾನ್ ಸಂಘಟನೆಯ ವಶವಾದ ಬಳಿಕ ಅಫ್ಗಾನಿಸ್ತಾನ ರಾಜಧಾನಿಯಲ್ಲಿ ಭೀತಿ ಮತ್ತು ಅನಿಶ್ಚಿತ ಸ್ಥಿತಿ ಇದೆ. ಅದರ ನಡುವೆಯೇ ಕಾರ್ಯಾಚರಣೆ ನಡೆಸಲಾಗಿದೆ ಭಾರತೀಯ ವಾಯುಪಡೆಯ ಗ್ಲೋಬ್‌ಮಾಸ್ಟರ್ ಸಿ-೧೭ ವಿಮಾನವು ಸುಮಾರು ೧೫೦ ಜನರೊಂದಿಗೆ ಗುಜರಾತ್‌ನ ಜಾಮ್‌ನಗರಕ್ಕೆ ಮಂಗಳವಾರ ಬೆಳಿಗ್ಗೆ ಬಂದಿಳಿಯಿತು. ಇಂಧನ ಮರಪೂರಣದ ಬಳಿಕ, ಸಂಜೆ ಐದು ಗಂಟೆ ಸುಮಾರಿಗೆ ವಿಮಾನವು ದೆಹಲಿ…

ಮಿನಿ ವಿಶ್ವಕಪ್ ಸಮರಕ್ಕೆ ಮುಹೂರ್ತ ಫಿಕ್ಸ್..!

Reported By: H.D. Savita ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟ ಮಾಡಿದೆ. ಈ ವರ್ಷ ಟಿ-20 ವಿಶ್ವ ಕಪ್ ಟೂರ್ನಿಯ ಪಂದ್ಯಗಳು ಯುಎಇ ಹಾಗೂ ಓಮನ್‌ನಲ್ಲಿ ನಡೆಯಲಿದೆ. ಇದರ ಪ್ರಕಾರ ಟೂರ್ನಿಗೆ ಅಕ್ಟೋಬರ್ 17 ರಂದು ಚಾಲನೆ ಸಿಗಲಿದೆ. ನವೆಂಬರ್ 14 ರಂದು ಫೈನಲ್ ಪಂದ್ಯ ನಡೆಯಲಿದೆ.   ಅಕ್ಟೋಬರ್ 17 ಮೊದಲ ರೌಂಡ್ ಪಂದ್ಯ ಒಮನ್ ಮತ್ತು ಪಿಎನ್​ಜಿ ನಡುವೆ ನಡೆಯಲಿದೆ. ಸಾಕಷ್ಟು ರೋಚಕತೆ…

ಅಸಾಧ್ಯವನ್ನು ಸಾಧಿಸಿತೋರಿಸಿದಚನ್ನಯ್ಯ-ರೂಪಕಲಾ

ಶಿಕಾರಿಪುರ,ಆ,೧೮:ಮಂದಹಾಸ ದ ನಗುವ ಬೀರುವ ಸಂಸ್ಕಾರ ಅರಿತ ವ್ಯಕ್ತಿ ಮೀರಿದ ವ್ಯಕ್ತಿತ್ವದ ಪರಿಚಯದ ಶಿಕ್ಷಣದಿಂದ ಶಿಕ್ಷಕ ವೃತ್ತಿ ಅರಿತ ಚನ್ನಯ್ಯ ಸಾವು ಅನಿರೀಕ್ಷಿತ ನಾವು ಈ ಜ್ಞಾನ ದೇಗುಲದ ದೇವರನ್ನೇ ಕಳೆದು ಕೊಂಡಂತಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ರೂಪಕಲಾ ಹೆಗ್ಗಡೆ ಅಭಿಪ್ರಾಯಪಟ್ಟರು. ನಗರದ ಶ್ರಿ ಚನ್ನಮಲ್ಲಿಕಾರ್ಜುನ ಶಾಲೆಯಲ್ಲಿ ನೆಡೆದ ದಿ.ಚನ್ನಯ್ಯ ನವರ ಪುಣ್ಯ ಸ್ಮರಣೆ ನುಡಿ ನಮನ ವಿದ್ಯಾ ನಾವಿಕಾನಿಗೊಂದು ನಮನ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು . ಸ್ಥಿತಿವಂತರು .ಶಿಪಾರಸ್ಸು ಜನರು…

ಪೆಟ್ರೋಲ್ ಮೇಲಿನ ತೆರಿಗೆ ಕಡಿತ ಇಲ್ಲ-ಸಿಎಂ

ಬೆಂಗಳೂರು,ಆ,೧೮: ‘ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕಡಿತ ಪ್ರಸ್ತಾಪ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು. ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ ೩ ತೆರಿಗೆ ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಡಿತ ಮಾಡುವ ಚಿಂತನೆ ಇಲ್ಲ ಎಂದರು. ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಕೋವಿಡ್ ತಪಾಸಣೆಯ ನೆಗೆಟಿವ್ ವರದಿ ಕೊಡುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಕಡೆ ಕೋವಿಡ್ ಪರೀಕ್ಷೆಯಲ್ಲಿ ದಂಧೆ…

೨೦ರವರೆಗೂ ಅಧಿಕ ಮಳೆ ಸೂಚನೆ

ನವದೆಹಲಿ, ಆ, 17: ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯಲ್ಲಿನ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ ದೇಶದ ಕೆಲವು ಭಾಗಗಳಲ್ಲಿ ಮುಂದಿನ ಮೂರು ದಿನ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮುಖ್ಯವಾಗಿ ತೆಲಂಗಾಣದಲ್ಲಿ ಅಧಿಕ ಮಳೆ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ತೆಲಂಗಾಣದಲ್ಲಿ ಮುಂದಿನ ಮೂರು ದಿನಗಳ ಕಾಲ, ಅಂದರೆ ಆಗಸ್ಟ್ ೨೦ರವರೆಗೂ ಅಧಿಕ ಮಳೆಯಾಗುವುದು ಎಂದು ತಿಳಿಸಿದೆ. ತೆಲಂಗಾಣ ಮಧ್ಯ, ಉತ್ತರ ಹಾಗೂ ಈಶಾನ್ಯ ಭಾಗಗಳಲ್ಲಿ ಸಾಧಾರಣದಿಂದ ಅಧಿಕ ಮಟ್ಟದ ಮಳೆಯಾಗುವುದಾಗಿ ಮುನ್ಸೂಚನೆ ನೀಡಿದೆ. ಒಡಿಶಾದ ಕರಾವಳಿ ಹಾಗೂ ಆಂಧ್ರಪ್ರದೇಶದ…

ತೆರುವನಸ್ಥಿಯ ಧರೆಗೆ ಮಂಕುತಿಮ್ಮ

ಸಿದ್ಧಸೂಕ್ತಿ :           ತೆರುವನಸ್ಥಿಯ ಧರೆಗೆ ಮಂಕುತಿಮ್ಮ. ಬದುಕು ಸ್ಥಿರವಲ್ಲ. ಬುಗುರಿಯಂತೆ ಅಸ್ಥಿರ! ಗಿರ್ರನೆ ತಿರುಗುವ ಬುಗುರಿ ಸ್ಥಿರದಂತೆ ತೋರುವುದು. ಕ್ರಮೇಣ ಗತಿ ಕಡಿಮೆಯಾಗುವುದು. ಶಕ್ತಿ ಕುಂದುವುದು.ಭೂಶಕ್ತಿಗೆ ಸೋತು ಉರುಳಿ ಮಲಗುವುದು! ಅಂತೆಯೇ ಎಲ್ಲರ ಬದುಕು. ಜನಪತಿ ಭೂಪತಿ ಧನಪತಿ ದನಪತಿ ಜಗಪತಿ ಗೃಹಪತಿ ಮಠಪತಿ ಖಗಪತಿ ಸುರಪತಿ ಬಲಪತಿ ದಳಪತಿ ಗಜಪತಿ ವನಪತಿ ಕುಲಪತಿ ವಿದ್ಯಾಪತಿ ಪತಿ ಪತ್ನಿ ಯಾರಾದರೇನು? ಇದ್ದಂತೆ ಇರಲಾರರು! ಏರಿದವನು ಇಳಿಯಲೇಬೇಕು, ಉಬ್ಬಿದವನು ಸೊರಗಲೇಬೇಕು!…

ಕ್ರಿಕೆಟ್ ಕಾಶಿ ಲಾರ್ಡ್ಸ್ ಭಾರತಕ್ಕೆ ರೋಚಕ ಗೆಲುವು..!

Reported By : H.D Savita ಲಾರ್ಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತವು1 51ರನ್ ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದೆ. ಅಂತಿಮ ದಿನದಾಟದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಗೆಲುವನ್ನು ಮತ್ತಷ್ಟು ಸ್ಮರಣಿಯವಾಗಿಸಿ ಕೊಂಡಿತು. ಈ ಮೂಲಕ 5ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತವು 1-0 ದಿಂದ ಮುನ್ನಡೆ ಪಡೆದಿದೆ. ಮೊದಲ ಟೆಸ್ಟ್ ಪಂದ್ಯವು ಡ್ರಾದಲ್ಲಿ ಅಂತ್ಯವಾಗಿತ್ತು.

ಪರಮಹಂಸದಂತೆ ಎತ್ತರಕ್ಕೆ ಏರಿ;ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ

ಬೆಂಗಳೂರು, ಆ, 16:ಡಾ: ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಮೂಲಕ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಸರಸ್ವತಿಯ ಪಾವಿತ್ರ್ಯತೆಯನ್ನು ಹೊಂದಿ ಪರಮಹಂಸದಂತೆ ಬಹಳ ಎತ್ತರಕ್ಕೆ ಏರಬಹುದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ರೂಪಿಸಲಾಗಿರುವ ಡಾ. ರಾಜ್ ಕುಮಾರ್ ಶೈಕ್ಷಣಿಕ ಆ್ಯಪ್ ನ್ನು ಇಂದು ಅವರು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 21 ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ:ರಾಜ್ ಕುಮಾರ್ ಅವರ ಆಪ್ ದೊಡ್ಡ ಕೊಡುಗೆ…

ಭಾರತಿ ವಿಷ್ಣುವರ್ಧನ್ ಕುರಿತ ಬಾಳೆ ಬಂಗಾರ ಸಾಕ್ಷ್ಯಚಿತ್ರ ಶೀಘ್ರ ಬಿಡುಗಡೆ

ಬೆಂಗಳೂರು, ಆ, 16:  ಭಾರತಿ ವಿಷ್ಣುವರ್ಧನ್ ಕುರಿತ ಸಾಕ್ಷ್ಯ ಚಿತ್ರ ಬಾಳೆ ಬಂಗಾರ ಕನ್ನಡ ಚಿತ್ರರಂಗದಲ್ಲಿ  ಗಮನ ಸೆಳೆಯುತ್ತಿದೆ. ‘ಬಾಳೆ ಬಂಗಾರ’ ಬಿಡುಗಡೆಗೆ ಸಿದ್ಧವಾಗಿದ್ದು, ಇದೀಗ ಟ್ರೈಲರ್ ಲಾಂಚ್ ಆಗಿದೆ.ಅನಿರುದ್ಧ್ ಪರಿಕಲ್ಪನೆ, ಸಂಶೋಧನೆ, ನಿರೂಪಣೆ, ನಿರ್ದೇಶನ ಮಾಡಿ, ಕೀರ್ತಿ ಇನ್ನೋವೇಶ್ ಬ್ಯಾನರ್ ನಲ್ಲಿ ‘ಬಾಳೆ ಬಂಗಾರ’ ನಿರ್ಮಿಸಿದ್ದಾರೆ. ನಿನ್ನೆ ಭಾರತಿ ವಿಷ್ಣುವರ್ಧನ್ ಜನ್ಮದಿನ ನಿಮಿತ್ತ ಟ್ರೈಲರ್ ಬಿಡುಗಡೆಯಾಗಿದೆ. ಹಿರಿಯ ನಟ ಶಿವರಾಂ, ನಿರ್ದೇಶಕ ಭಗವಾನ್, ಶಿವರಾಜ್ ಕುಮಾರ್, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸೇರಿದಂತೆ ಭಾರತಿ…

23ರಿಂದ 8 ರಿಂದ 11ನೇ ಶಾಲೆಗಳ ಆರಂಭಕ್ಕೆ ಸರ್ಕಾರ ನಿರ್ಧಾರ

ಬೆಂಗಳೂರು,ಆ,16: ಇದೇ ತಿಂಗಳ 23ರಿಂದ ಶಾಲಾ-ಕಾಲೇಜುಗಳನ್ನು ಆರಂಭ ಮಾಡಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ.ನಾಗೇಶ್‌ ಅವರು; 8ರಿಂದ 11ನೇ ತರಗತಿಗಳ ಭೌತಿಕ ಪಾಠಗಳನ್ನು ಆರಂಭ ಮಾಡಲು ನಿರ್ಧರಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಕಳಿಸುವಂತೆ ಪೋಷಕರನ್ನು ಕೋರಿದರು. ರಾಜ್ಯದಲ್ಲಿ ಒಂದನೇ ತರಗತಿಯಿಂದಲೇ ಶಾಲೆ ಆರಂಭಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಅಗಸ್ಟ್ 30 ರಂದು ತಜ್ಞರ ಸಲಹಾ ಸಮಿತಿ ಜತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು…

ಬೃಹತ್ ಬಜೆಟ್ ನ ಕೃಷ್ಣರಾಜ ಚಿತ್ರ

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ. ಅದರಲ್ಲೂ ಕೆಜಿಎಫ್, ವಿಕ್ರಾಂತ್ ರೋಣ, ಕಬ್ಜದಂಥ ಸಿನಿಮಾಗಳಿಂದ ಕನ್ನಡ ಸಿನಿಮಾರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತಾಗಿದೆ. ಈಗ ಮತ್ತೊಂದು ಅಂಥದ್ದೇ ದೊಡ್ಡ ಸಿನಿಮಾವೊಂದು ಸೆಟ್ಟೇರಲು ಅಣಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಸೇರಿ ಏಳು ಭಾಷೆಗಳಲ್ಲಿ ಈ ಚಿತ್ರ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಇಂಥ ಬಿಗ್ ಪ್ರಾಜೆಕ್ಟ್ ಗೆ ಕೈಹಾಕಿರುವವರು ದೊಡ್ಡಬಳ್ಳಾಪುರ ಮೂಲದ ಉದ್ಯಮಿ ಹಾಗೂ ಶ್ರೀಭಗವತಿ ದೇವಿಯ ಆರಾಧಕ ಗಾನಶರವಣ…

1 57 58 59 60 61 101
Girl in a jacket