ವಿಜಯನಗರ ಕಾಲದ ಶೌಚಾಲಯಗಳು
ವಿಜಯನಗರ ಕಾಲದ ಶೌಚಾಲಯಗಳು ಆಧುನಿಕ ಯುಗದಲ್ಲಿ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ವಿಶೇಷ ಆದ್ಯತೆಯನ್ನು ನೀಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ಬಯಲು ಬಹಿರ್ದೆಸೆಯನ್ನು ನಿರ್ಮೂಲ ಮಾಡಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸ್ವಚ್ಚ ಭಾರತ ನಿರ್ಮಾಣಕ್ಕೆ ಸುಸ್ಥಿರ ಆರೋಗ್ಯ ಮುಖ್ಯ, ಇದಕ್ಕೆ ಸ್ವಚ್ಚ ಪರಿಸರ ಅತ್ಯಗತ್ಯವೆಂಬುದನ್ನು ನಿತ್ಯವೂ ಬಿತ್ತರಿಸುತ್ತಿದೆ. ಈ ಪರಿಪಾಠ ಇಂದು ನಿನ್ನೆಯದಲ್ಲ. ಶೌಚಾಲಯದ್ದೂ ಒಂದು ಇತಿಹಾಸವೇ. ಭಾರತದ ಮಟ್ಟಿಗೆ ನಗರೀಕರಣವೆಂಬುದು ಸಿಂಧೂ ನಾಗರೀಕತೆಯಷ್ಟೇ ಪ್ರಾಚೀನ. ಅಂದಿನ ಜನರು ನೈರ್ಮಲ್ಯಕ್ಕೆ ನೀಡಿದ ಮಹತ್ವ ಅನನ್ಯವಾದದ್ದು. ಅಂತೆಯೇ…




















