Girl in a jacket

Author kendhooli_editor

ನಿರ್ಮಾಪಕ ವಿಜಯಕುಮಾರ್ ನಿಧನ

ಬೆಂಗಳೂರು,ಆ,16: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಬಿ.ವಿಜಯ್ ಕುಮಾರ್(63) ಹೃದಯಘಾತದಿಂದಾಗಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ವಿಜಯ್ ಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದರು. ಸಿಂಹಾದ್ರಿಯ ಸಿಂಹ ಸೇರಿ ಹಲವು ಚಿತ್ರ ನಿರ್ಮಾಣ ಮಾಡಿದ್ದರು. ಭಾನುವಾರ ರಾತ್ರಿ 9.30ರ ಸುಮಾರಿಗೆ ವಿಜಯ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಡಾ.ವಿಷ್ಣುವರ್ಧನ್ ಗೆ ಆಪ್ತರಾಗಿದ್ದ ನಿರ್ಮಾಪಕ ವಿಜಯ್ ಕುಮಾರ್, ನಟ ವಿಷ್ಣುವರ್ಧನ್ ಲಯನ್ ಜಗಪತಿ ರಾವ್, ಜಗದೇಕ ವೀರ ಮತ್ತು ಸಿಂಹಾದ್ರಿಯ ಸಿಂಹ ಮುಂತಾದ ಚಿತ್ರಗಳ ನಿರ್ಮಾಣ…

ದೇಶಭಕ್ತಿ ಸಾರಿದ ಸಿದ್ಧಾರೂಢರು

ಬೆಂಗಳೂರು, ಆ,16″ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಿದ್ಧಾರೂಢರ ಪಾತ್ರ ಅವಿಸ್ಮರಣೀಯ” ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ರಾಮೋಹಳ್ಳಿಯ ತಮ್ಮ ಆಶ್ರಮದಲ್ಲಿ ನಡೆದ 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. 1904 ರಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರ ಸಮ್ಮುಖದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಮಹಾ ಅಧಿವೇಶನದಲ್ಲಿ ಸಿದ್ಧಾರೂಢರು ಅಧ್ಯಕ್ಷರಾಗಿದ್ದರು. “ಜನನೀ ಜನ್ಮಭೂಮಿ ಸ್ವರ್ಗಕ್ಕಿಂತ ಶ್ರೇಷ್ಠ. ದೇಶವಿದ್ದರೆ ನಾವು ನೀವು ಧರ್ಮ ಭಾಷೆ ಮತ್ತೊಂದು. ನೆಲೆಯಿಲ್ಲದ…

ದೀಪದ ಕೆಳಗೆ ಕತ್ತಲು

ಸಿದ್ಧಸೂಕ್ತಿ : ದೀಪದ ಕೆಳಗೆ ಕತ್ತಲು. ಸೀಮೆ ಎಣ್ಣೆಯ ಚಿಮಣಿ ಕಾಲದ ಮಾತಿದು. ದೀಪ ಕತ್ತಲೆ ಸರಿಸಿ ಬೆಳಗುವುದು. ಆದರೂ ದೀಪದ ಕೆಳಗೆ / ಹಿಂದೆ ಕತ್ತಲು! ಮುಂದೆ ಬೆಳಗುವ ದೀಪ, ಹಿಂದೆ ಬೆಳಗದು!ಎಲ್ಲರ ಬೆನ್ನು ನೋಡುವ ಕಣ್ಣು, ತನ್ನದೇ ಬೆನ್ನು ನೋಡದು! ವೈದ್ಯರೆಲ್ಲರೂ ತಮ್ಮೆಲ್ಲ ರೋಗ ತಿಳಿಯರು! ಪರರ ಆಡಿಕೊಳ್ಳುವವ, ತನ್ನ ನೋಡಿಕೊಳ್ಳಲಾರ! ಎಲ್ಲ ತಿಳಿದೆ ಎನ್ನುವವ, ತನ್ನನ್ನೇ ತಿಳಿದಿರಲಾರ! ಅವರಿವರ ಅನ್ಯಾಯ ಸರಿಪಡಿಸುವವ, ತನ್ನ ಅನ್ಯಾಯ ಬಚ್ಚಿಟ್ಟು ನಡೆವ! ಆಡಳಿತ ಪಕ್ಷದ ಪ್ರತಿ ಲೋಪ…

ಕನಕಶ್ರೀ ಗಳಿಗೆ ಪಿತೃ ವಿಯೋಗ

ಚಿತ್ರದುರ್ಗ, ಆ,15:ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಮಹಾ ಸ್ವಾಮೀಜಿ ಅವರ ಪೂರ್ವಾಶ್ರಮದ ಪಿತೃಗಳಾದ ಪೂಜ್ಯ ಕಲಮರಹಳ್ಳಿ ಮಹಾದೇವಪ್ಪ ನವರು ಶಿವೈಕ್ಯರಾದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಮಹಾದೇವಪ್ಪ ಅವರು ಹೃದಯಾಘಾತದಿಂದ ಭಾನುವಾರ ಶಿವೈಕ್ಯರಾಗಿದ್ದು ಪತ್ನಿ ಜಯಮ್ಮ, ಮಕ್ಕಳಾದ ಶ್ರೀಧರ್, ಪ್ರದೀಪಕುಮಾರ್, ರೂಪ ಅವರನ್ನು ಹಾಗೂ ತಂಗಿ, ತಮ್ಮ, ಅಣ್ಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಕಲಮರಹಳ್ಳಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶ್ರೀ…

ಸ್ವಾತಂತ್ರ್ಯೋತ್ಸವದಲ್ಲಿ ನಾಡಿನ ಜನತೆಗೆ ಬಂಬರ್ ಕೊಡುಗೆ ಘೋಷಿಸಿದ ಸಿಎಂ

ಬೆಂಗಳೂರು, ಆ. ೧೫: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಿರೀಕ್ಷೆಗೂ ಮೀರಿ ಹೊಸ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದಾರೆ. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಭಾನುವಾರ ದೇಶದ ೭೫ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದರು. ನಂತರ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೊದಲ ಬಾರಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಿದರು. ಈ ವೇಳೆ ಹನ್ನೊಂದು ಹೊಸ ಯೋಜನೆಗಳನ್ನು ಸಿಎಂ…

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ

ಬುಡೇನ್ ಸಾಬ್ ಮತ್ತು ಆತನ ವ್ಯಕ್ತಿತ್ವ ರೂಪ ಇಂಥದ್ದೇ ಶ್ರಾವಣ ಮಾಸದ ಚುರುಕು ಬಿಸಿಲ ದಿನ ಒಂದರ ಉತ್ತರಾರ್ಧ ಅದು. ಮೂರ್ನಾಲ್ಕು ದಿನಗಳಿಂದ ‘ಧೋ’ ಎಂದು ಸುರಿದ ಮಳೆ ತನ್ನ ರೌದ್ರನರ್ತನಕ್ಕೆ ತಾತ್ಕಾಲಿಕ ವಿರಾಮ ನೀಡಿದಂತಿತ್ತು. ಅವತ್ತು ಬುಧವಾರದ ದಿನ ಇರಬೇಕು ಅನ್ನಿಸುತ್ತದೆ. ವೈ. ವೃಷಭೇಂದ್ರಯ್ಶ (YV) ಮೇಷ್ಟ್ರು ಎಂಟನೇ ತರಗತಿಯವರಾದ ನಮಗೆ ಸಾಯಂಕಾಲದ ಕೊನೆಯ ಪಿರಿಯಡ್ ನಲ್ಲಿ ಜೀವಶಾಸ್ತ್ರದ ಪಾಠ ಮಾಡುತ್ತಿದ್ದರು. ಅವರು ಅಂದು ಪಾಠಮಾಡುತ್ತಿದ್ದ ವಿಷಯ ಕೂಡಾ ನನಗೆ ಚೆನ್ನಾಗಿ ನೆನಪಿದೆ. ದ್ಯುತಿಸಂಶ್ಲೇಷಣಾ ಕ್ರಿಯೆ…

ಸ್ವಾತಂತ್ರ್ಯಹೋರಾಟಗಾರರನ್ನು ಸ್ಮರಿಸಿದ ಪ್ರಧಾನಿ ಮೋದಿ

ನವದೆಹಲಿ,ಆ,15: ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ದಿನವಿದು. ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ದೇಶವು ಸ್ಮರಿಸುತ್ತಿದೆ, ಏಕೆಂದರೆ ದೇಶವು ಇವರೆಲ್ಲರಿಗೂ ಋಣಿಯಾಗಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯ ಕೋರಿದರು. 75ನೇ ಸ್ವಾತಂತ್ರ್ಯ ದಿನದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ  ಮೋದಿ, ಭಾರತದ ಮೊದಲ ಪ್ರಧಾನಿ ನೆಹರೂ, ದೇಶವನ್ನು ಏಕೀಕೃತ ರಾಷ್ಟ್ರವನ್ನಾಗಿ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲ್,…

ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ

‌‌‌‌‌‌       ಸಿದ್ಧಸೂಕ್ತಿ : ನೆಲೆಯಲ್ಲಿ ನಿದ್ದೆಗೆಲೋ ಮಂಕುತಿಮ್ಮ. ನೆಮ್ಮದಿ ಬೇಕು. ನಿದ್ದೆ ನೀಡುವುದು ನೆಮ್ಮದಿ! ನಿದ್ದೆ ಹತ್ತುವುದು ಎಲ್ಲ ಬಿಟ್ಟಾಗ! ಬಿಡದಿದ್ದವರಿಗೆ ಸುಖ ನಿದ್ದೆ ಎಂಬುದು ಕನಸಿನ ಮಾತು! ಪ್ರಕ್ಷುಬ್ಧ ಮನಸ್ಸಿನ ವಿರುದ್ಧ ವಿಭಿನ್ನ ನೂರಾರು ಆಲೋಚನೆ, ಬೇಕು ಬೇಡ ದ್ವಂದ್ವ ಕೊರಗುಗಳು ಕಿವಿಯೊಳಗೆ ಸೇರಿದ ಹುಳುವಿನಂತೆ! ಕಿವಿಗೆ ಅಪ್ಪಳಿಸುವ ನಾನಾ ಹಕ್ಕಿಗಳ ಕಿಲ ಕಿಲ ಗೊರ ಗೊರ ಕಿರಚುವ ಕೂಗಿನಂತೆ! ಒಂದು ಆಲೋಚನೆ ಗಿಳಿಯಂತೆ ಸುಂದರ! ಮತ್ತೊಂದು ಅಣಕಿಸುವ ಅಸಹ್ಯಕರ ಗೂಗೆಯಂತೆ!…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . . ನಮ್ಮ ಹಳ್ಳಿಗಳಲ್ಲಿ ಒಂದು ನಾಣ್ಣುಡಿ ಸಾಮಾನ್ಯವಾಗಿದೆ. ಅದೆಂದರೆ “ಧರ್ಮದ ಊರಿನ ಮುಂದೆ ಮಳೆ ಬಂದರೆ, ಕರ್ಮದ ಊರಿನ ಮುಂದೆ ಹಳ್ಳ ಹರಿಯಿತು ಎಂಬುದು. ಕಳೆದ ಇಪ್ಪತ್ತೆಂಟು ವರ್ಷಗಳ ನನ್ನ ಅನುಭವದಲ್ಲಿ ೨೦೦೯ನ್ನು ಹೊರತುಪಡಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಸುರಿದದ್ದು ತೀರ ಅಪರೂಪವೇ. ಆದರೆ ಇಲ್ಲಿನ ತುಂಗಭದ್ರೆ ಮಾತ್ರ ಪ್ರತಿವರ್ಷವೂ ಮೈದುಂಬಿ ಹರಿದು ತನ್ನ ಕಬಂದಬಾಹುಗಳಿಂದ ಪ್ರವಾಹವನ್ನು ನಿರಂತರವಾಗಿ ಸೃಷ್ಟಿಸುತ್ತಾ ಬಂದಿದ್ದಾಳೆ. ಬಿಸಿಲ ಬೇಗೆ ಮತ್ತು…

ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭ

ಬೆಂಗಳೂರು, ಆ, 14:ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ 9, 10 , ಪಿಯುಸಿ ತರಗತಿ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳಲ್ಲಿ ಹಾಗೂ ಗಡಿ ಭಾಗದ ತಾಲ್ಲೂಕಿನಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಲೆಗಳಲ್ಲಿ ಶೇ. 2ಕ್ಕಿಂತ ಹೆಚ್ಚು ಪ್ರಕರಣ ವರದಿಯಾದರೆ,…

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ :ಸಿಎಂ

ಬೆಂಗಳೂರು, ಆ,14 : ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಇಡೀ ವರ್ಷ ಆಚರಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಕರೆ ನೀಡಿದರು. ನಗರದ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು, ಸ್ವಾತಂತ್ರ್ಯ ನನ್ನ ಆ ಜನ್ಮ ಸಿದ್ಧ ಹಕ್ಕು ಎಂಬ ಗೋಪಾಲ ಕೃಷ್ಣ ಗೋಖಲೆಯವರ ವೀರೋಚಿತ…

ಬೊಮ್ಮಾ ಯಿ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ : ಸಿದ್ದರಾಮಯ್ಯ

ಬೆಂಗಳೂರು ,ಆ,14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ತಮ್ಮ ನಿವಾಸದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರದಲ್ಲಿ ಗೊಂದಲ ಮುಂದುವರಿದಿದೆ. ಈ ಸರ್ಕಾರ ಅವಧಿ ಪೂರ್ಣಗೊಳಿಸುವುದು ಅನುಮಾನ. ಯಾವುದೇ ಸಂದರ್ಭದಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಸವನಗೌಡ ಪಾಟೀಲ್ ಯತ್ನಾಳ, ಅರವಿಂದ ಬೆಲ್ಲದ್, ರಾಮದಾಸ…

ಮೋದಿ ಆರ್ಥಿಕ ಮತ್ತು ವಿದೇಶಾಂಗ ನೀತಿ ವಿರುದ್ಧ ಸುಬ್ರಮಣ್ಯಂ‌ ಸ್ವಾಮಿ ವಿರೋಧ

ನವದೆಹಲಿ,ಆ,14: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ‘ಮೋದಿ ಭಾರತದ ರಾಜ ಅಲ್ಲ’ ಎಂದು ಹೇಳಿದ್ದಾರೆ. ತಮ್ಮ ಆಯ್ಕೆಯ ಸಚಿವ ಸ್ಥಾನ ನೀಡದಿರುವುದು ನಿಮ್ಮ ಅಸಮಾಧಾನಕ್ಕೆ ಕಾರಣ ಎಂದು ವಾದಿಸಿದ ಟ್ವಿಟರ್ ಬಳಕೆದಾರರೊಬ್ಬರಿಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ನಾನು ಬೇರೆ ಕಾರಣಕ್ಕಾಗಿ “ಮೋದಿ ವಿರೋಧಿ” ಎಂದು ಹೇಳಿದ್ದಾರೆ. “ನಾನು ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ…

ರಾಜ್ಯದ ಮುನ್ನಡೆಯ ಬಗ್ಗೆ ಸರ್ಕಾರದ ಚಿಂತನೆ: ಬೊಮ್ಮಾಯಿ

ಬೆಂಗಳೂರು, ಆ, 14:”75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸೌಭಾಗ್ಯ ಒದಗಿಬಂದಿದೆ. ಕನ್ನಡ ನಾಡು, ನುಡಿ, ಸಾಹಿತ್ಯ, ಆಡಳಿತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲೇ ಮಾದರಿಯಾಗಿದೆ. 75 ವರ್ಷ ನಡೆದು ಬಂದ ದಾರಿ, ಇನ್ನೂ ನಡೆಯಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕಿದೆ. ನಮ್ಮ ಸರ್ಕಾರ ಕೂಡ ಅದೇ ದಿಕ್ಕಿನಲ್ಲಿ ಚಿಂತನೆ ಮಾಡುತ್ತಿದೆ”- ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು “ಕೋವಿಡ್ ಮಾರ್ಗಸೂಚಿ ಪ್ರಕಾರ, ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನ…

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ

ಸಿದ್ಧಸೂಕ್ತಿ : ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ. ಬಂಧ ಸಂಬಂಧ. ಬಂಧ ಉಳ್ಳವನು/ಳು ಬಂಧು. ತಾಯಿಯಂಥ ಸಂಬಂಧಿ ಯಾರೂ ಇಲ್ಲ. ಅವಳು ಉಪ್ಪಿನಂತೆ. ಉಪ್ಪು ಎಲ್ಲಕ್ಕೂ ಸೈ. ಸೌತೆ, ಕಲ್ಲಂಗಡಿ ಉಪ್ಪು ಬೆರೆಸಿ ತಿಂದು ನೋಡಿ. ಸಿಹಿ ಅಡಿಗೆಗೂ ಒಂದಿಷ್ಟು ಉಪ್ಪು ಬೇಕು! ಉಪ್ಪಿಲ್ಲದ ಅಡಿಗೆ ಉಂಡು ನೋಡಿ! ತಿಳಿಯುವುದು ಉಪ್ಪಿನ ಮಹಿಮೆ! ಸಿಹಿ ಕಹಿ ಖಾರ ಹುಳಿ ವಗರು ರುಚಿಗಿಂತ ಉಪ್ಪೇ ಹಿರಿ ರುಚಿ! ಅಣ್ಣ ಅತ್ತಿಗೆ ಅಳಿಯ ಅತ್ತೆ ಮಾವಾದಿಗರು ಇರಬಹುದು ನೂರಾರು…

ಮಹಿಳಾ ಹಾಕಿ ಕೋಚ್ ಅಂಕಿತಾಗೆ ಸಿಎಂ ಬೊಮ್ಮಾಯಿ ಸನ್ಮಾನ

ಬೆಂಗಳೂರು,ಆ,13:ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕೋಚ್ ಅಂಕಿತಾ ಅವರನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಸನ್ಮಾನಿಸಿ ಗೌರವಿಸಿದರು. ಟೋಕಿಯೋ ಒಲಂಪಿಕ್ ಟೂರ್ನಿಯಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ‌ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಆ ಮಹಿಳಾ ತಂಡ ಗೆದ್ದಿದೆ. ಆ ತಂಡದ ತರಬೇತಿದಾರರಾದ ನಿಮಗೆ ತುಂಬು ಹೃದಯದ ಶುಭಾಶಯ ಕೋರುತ್ತೇನೆ. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಿಎಂ‌…

ಸವಾಲುಗಳ ಮಣಿಸಿ ಗೆದ್ದು ನಕ್ಕ ರೇಖಾ

  ಸವಾಲುಗಳ ಮಣಿಸಿ ಗೆದ್ದು ನಕ್ಕ ರೇಖಾ    ” ನಾನು ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಅದು ನನಗೆ ಅನ್ಯ ಪದ”ಎನ್ನುವ ಅಭಿನೇತ್ರಿ ರೇಖಾ ಹುಟ್ಟಿದ್ದು ಚನೈನಲ್ಲಿ. ತಂದೆ ತಮಿಳ,ತಾಯಿ ತೆಲುಗು,ರೇಖಾ ಎಂಬ ನಟಿ ಕನ್ನಡದ ಮೂಲಕ ನಾಯಕಿಯಾಗಿ ಪ್ರವೇಶಿಸಿ ನೆಲೆಗೊಂಡದ್ದು ಹಿಂದಿ ಚಿತ್ರರಂಗದಲ್ಲಿ. ಏಕರೂಪೀ ಪಾತ್ರಗಳಿಗೆ ಅಂಟಿಕೊಳ್ಳದೇ ಸದಾ ಹೊಸ ಪ್ರಯೋಗಗಳ ಮೂಲಕ ತನ್ನ ಚರಿಷ್ಮಾವನ್ನ ಚಲನಶೀಲಗೊಳಿಸಿಕೊಂಡಾಕೆ.ಹಾಗೆ ನೋಡಿದರೆ ರೇಖಾ ಸಿನಿಮಾಕ್ಕೆ ಬಂದಿದ್ದೇ ಆಕಸ್ಮಿಕ.ಮನೆಯ ಆರ್ಥಿಕ ತೊಂದರೆ ನಿವಾರಿಸಲಿಕ್ಕಾಗಿ ಅಮ್ಮ ಈಕೆಗೆ ಬಣ್ಣ ಹಚ್ಚಿಸಿದಳು.ಮುಂದೆ ಬಾಲಿವುಡ್…

ಈ ಬಾರಿ ಮಾಣಿಕ್ ಷಾ ಪೆರೇಡ್ ಗೆ ಸಾರ್ವಜನಿಕರ ಪ್ರವೇಶವಿಲ್ಲ

ಬೆಂಗಳೂರು,ಆ.13- ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಜಿಲ್ಲಾಧಿಕಾರಿ ಮಂಜುನಾಥ್, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮುಂತಾದವರು ಭದ್ರತೆಯ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ…

ಸಿನಿಮಾ ಮಂದಿಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ?

Writing- ಪರಶಿವ ಧನಗೂರು ಕನ್ನಡ ಸಿನಿಮಾ ಮಂದಿಗೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸರ್ಕಾರ ಮದ್ಯೆ ಪ್ರವೇಶಿಸಿ ಚಿತ್ರೀಕರಣದ ವೇಳೆಯಲ್ಲಿ ಕಲಾವಿದರ ರಕ್ಷಣೆಗೆ ಸರಿಯಾದ ನೀತಿ ನಿಯಮ ಜಾರಿಮಾಡಿ ಎಚ್ಚರಿಸದಿದ್ದರೇ ಇನ್ನೆಷ್ಟು ಜೀವಗಳನ್ನು ಬಲಿಪಡೆಯುತ್ತಾರೋ ಈ ಬಣ್ಣದಜನ ಎನ್ನುತ್ತಿದ್ದಾರೆ ಕರ್ನಾಟಕದ ಜನ. ಕೆದಕುತ್ತಾ ಹೋದರೆ ಕನ್ನಡ ಸಿನಿಮಾ ರಂಗದಲ್ಲಿ ಶೂಟಿಂಗ್ ದುರಂತಗಳ ಕತೆ ಸಾಲು ಸಾಲೇ ಇವೆ! ಮೊದಲಿಗೆ 25 ವರ್ಷಗಳ ಹಿಂದೆ ಸದ್ದು ಮಾಡಿದ್ದು ಲಾಕಪ್ ಡೆತ್ ಸಿನಿಮಾದ ಬೈಕ್ ಜಂಪ್ ದುರಂತ. ಅಂದಿನ…

1 58 59 60 61 62 101
Girl in a jacket