Girl in a jacket

Author kendhooli_editor

ರಾಜ್ಯದಲ್ಲಿ ಮಹಿಳಾ‌ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ;ಸಿದ್ದರಾಮಯ್ಯ ಕಳವಳ

ಬೆಂಗಳೂರು,ಸೆ,06:ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದರೂ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ಸಮಾಲೋಚನೆ ಸೇರಿದಂತೆ ವಿವಿಧ ರೀತಿಯ ನೆರವು ನೀಡುವ ಸಾಂತ್ವನ ಕೇಂದ್ರಗಳನ್ನು ಆರ್ಥಿಕ ಕೊರತೆಯ ನೆಪವೊಡ್ಡಿ ಸ್ಥಗಿತಗೊಳಿಸಲು ಹೊರಟಿರುವುದು ರಾಜ್ಯ ಸರ್ಕಾರದ ಮಹಿಳಾ ವಿರೋಧಿ ಕ್ರಮವಾಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಸಾಂತ್ವನ ಕೇಂದ್ರಗಳನ್ನು ಸ್ಥಗಿತಗೊಳಿಸಲು ಕೈಗೊಂಡಿರುವ ತೀರ್ಮಾನ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ನೊಂದ…

ಕುರಿಗಾಹಿಗಳ ಜತೆ ಊಟಸವಿದ ಪುನಿತ್ ರಾಜ್ ಕುಮಾರ್

ನಟ ಪುನಿತ್ ರಾಜ್ ಕುಮಾರ್ ಕುರಿಗಾಹಿಗಳ ಜೊತೆ ಕಾಲಕಳೆದು ಅವರೊಂದಿಗೆ ಬೋಜನ ಸ್ವೀಕರಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾನುವಾರ ಕೊಪ್ಪಳದ ಗಂಗಾವತಿ ಸನಿಹದಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ದೇವರ ದರ್ಶನಕ್ಕೆ ತೆರಳಿದ್ದರು. ಕೊರೋನಾ ನಿಯಮಗಳ ಕಾರಣಕ್ಕೆ ಪುನೀತ್ ರಾಜಕುಮಾರ್ ಗೆ ಪ್ರವೇಶಾವಕಾಶ ಸಿಗಲಿಲ್ಲ. ಇದರಿಂದ ಬೇಸರಗೊಳ್ಳದೇ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಟ ನಡೆಸಿದ ಪುನೀತ್ ರಾಜಕುಮಾರ್, ಗಂಗಾವತಿ ಸಮೀಪದ ಹಳ್ಳಿಗಳಿಗೆ ಭೇಟಿ ನೀಡಿದರು. ಕುರಿಗಾಹಿಗಳ ಬಳಿ ತೆರಳಿದ ಪುನೀತ್ ಅವರ…

೫ದಿನಗಳ ಕಾಲ ಗಣೇಶೋತ್ಸವಕ್ಕೆ ಷರತ್ತುಬದ್ದ ಅನುಮತಿ

ಬೆಂಗಳೂರು: ಹಲವು ಒತ್ತಡಗಳ ನಡುವೆಯೇ ರಾಜ್ಯದಲ್ಲಿ ೫ ದಿನಗಳ ಕಾಲ ಗಣೇಶೋತ್ಸವ ಆಚರಣೆಗೆ ಕರ್ನಾಟಕ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ರಾಜ್ಯದಾದ್ಯಂತ ಐದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ವಿಧಿಸುವ ಷರತ್ತುಗಳನ್ನು ಪಾಲಿಸಿಕೊಂಡು ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.…

ಸೆ.೮ಕ್ಕೆ ಕೊಟ್ಟಿಗೆಹಾರದಲ್ಲಿ ತೇಜಸ್ವಿ ಸಾಹಿತ್ಯ ವಿಚಾರ ಮಂಥನ

ಚಿಕ್ಕಮಗಳೂರು. ಸೆ, ೫: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಹಾಗೂ ಚಿಕ್ಕಮಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್ ೮ ರಂದು ತೇಜಸ್ವಿ ಸಾಹಿತ್ಯ ವಿಚಾರ ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೧;೩೦ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ”ವರ್ತಮಾನದಲ್ಲಿ ತೇಜಸ್ವಿ ವಿಚಾರಧಾರೆ” ವಿಷಯದ ಕುರಿತು ಚಿಕ್ಕಮಗಳೂರಿನ ನಿವೃತ್ತ ಉಪನ್ಯಾಸಕರಾದ ಬಿ ತಿಪ್ಪೆರುದ್ರಪ್ಪ ಅವರು ಉಪನ್ಯಾಸ ನೀಡಲಿದ್ದಾರೆ. ಹಾಸನದ ಅಬಚೂರಿನ ಮಿತ್ರವೃಂದ ಪ್ರಕಾಶನದ ತೇಜಸ್ವಿಯವರ ನೆನಪಿನ ಕಥಾಸ್ಪರ್ಧೆ…

ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು?

   ಸಿದ್ಧಸೂಕ್ತಿ :        ತತ್ತ್ವವೊಂದರ ಹಿಡಿತಕ್ಕೊಗ್ಗದಿಹ ಬಾಳೇನು? ಪ್ರತಿ ಜೀವಿ ವಸ್ತುವಿಗೆ ನಿರ್ದಿಷ್ಟ ತತ್ತ್ವಾದರ್ಶವಿದೆ, ಇರಬೇಕು! ಸೂರ್ಯ ಬೆಂಕಿ ಸುಡುತಿರಬೇಕು. ಚಂದ್ರ ನೀರು ತಂಪಿರಬೇಕು. ಹುಳಿ ಉಪ್ಪು ಕಹಿ ಖಾರ ಸಿಹಿ ವಗರು ತಮ್ಮ ತಮ್ಮಯ ರುಚಿಯನ್ನು ಕೊಡುತಿರಲುಬೇಕು! ಅದರವರ ಗುಣಧರ್ಮ ಕರ್ತವ್ಯ ಅದು ಅವರು ಪಾಲಿಸಲೇಬೇಕು. ಇಲ್ಲದಿರೆ ಬೆಲೆ ಬಾಳು ಅದಕವರಿಗಿಲ್ಲ! ಮದುವೆಯಾದರೆ ಗಂಡು ಗಂಡನಂತಿರಬೇಕು,ಹೆಣ್ಣು ಹೆಂಡತಿಯಂತಿರಬೇಕು. ಸತಿ ಪತಿ ಒಂದಾಗಿ ಬಾಳದಿರೆ ಆ ದಾಂಪತ್ಯವೇಕೆ? ತಂದೆ ತಾಯಿ ಅತ್ತೆ…

ಇಂದಿನಿಂದ6ರಿಂದ8ನೇತರಗತಿ ಶಾಲೆಗಳು ಆರಂಭ

ಬೆಂಗಳೂರು,ಸೆ,06:  ಇಂದಿನಿಂದ 6ರಿಂದ8ನೇತರಗತಿ ವರೆಗೆ ಶಾಲೆಗಳು ಆರಂಭವಾಗಲಿವೆ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮ ವಹಿಸಿಕೊಂಡು, ಎಸ್‌ಒಪಿ  ಪಾಲಿಸಿ ತರಗತಿಗಳನ್ನು ಆರಂಭಿಸುವಂತೆ ಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಪ್ರತಿಕ್ರಿಯಿಸಿ, ‘ಶಾಲೆ ಆರಂಭಿಸುವ ಬಗ್ಗೆ ಪೋಷಕರ ಸಭೆ ನಡೆಸಿದ್ದೇವೆ. ಆದರೆ, ಹೆಚ್ಚಿನ ಪೋಷಕರು ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಮುಂದುವರಿಸುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ’ ಎಂದರು. ಶಾಲೆಗಳಲ್ಲಿ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಕಾರಣ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್…

ಬಿಎಸ್‌ವೈ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಬೊಮ್ಮಾಯಿ

ಬೆಂಗಳೂರು, ಸೆ.೫:ಬರುವ ಏಳರಂದು ಮುಖ್ಯಮಂತ್ರಿ ಬಸವಾರಾಜ್ ಬೊಮ್ಮಾಯಿ ದಹೆಲಿಗೆ ತೆರಳಿ ಮುಖಂಡರನ್ನು ಭೇಟಿ ಮಾಡುವ ಹಿನ್ನೆಲೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಮಹತ್ವದ ಮಾತುಕತೆ ನಡೆಸಿದರು. ಈ ಬಾರಿ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಕೆಲವು ಪ್ರಮುಖ ನಾಯಕರನ್ನು ಭೇಟಿಯಾಗಲಿರುವ ಬೊಮ್ಮಾಯಿ ಅವರು ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ, ನಿಗಮ-ಮಂಡಳಿಗಳಿಗೆ ನೇಮಕಾತಿ,ಕೆಲವು ಸಚಿವರ ಖಾತೆ ಬದಲಾವಣೆಯಂತಹ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.…

ಗುರು ದೇವೋ ಮಹೇಶ್ವರಃ

ಗುರು ದೇವೋ ಮಹೇಶ್ವರಃ ಗುರು ಸೃಷ್ಟಿ , ಸ್ಥಿತಿ, ಲಯಕಾರನು. ಶಿಕ್ಷಕ ಅಥವ ಗುರು ಭೌತಿಕವಾಗಿ ಏನೂ ತಯಾರಿಸಲಾರದಿರಬಹುದು. ಆದರೆ ಹೀಗಿತ್ತು. ಹೀಗಿದೆ, ಹೀಗಿರಬೇಕು ಎಂದು ಕಲಿಸುತ್ತಾ ವಿದ್ಯಾರ್ಥಿಗಳನ್ನು ಗುರುಯತ್ತ ಕೊಂಡೊಯ್ಯುವ ಮಾರ್ಗವನ್ನು, ಧ್ಯೇಯವನ್ನು ವಿದ್ಯಾರ್ಥಿಗಳ ಮನದಲ್ಲಿ ಆಸಕ್ತಿಯನ್ನು ಮೂಡುವಂತೆ ಮಾಡುತ್ತಾನೆ. ಮಕ್ಕಳ , ವಿದ್ಯಾರ್ಥಿಗಳ ಮನದಲ್ಲಿನ ತಪ್ಪು ಕಲ್ಪನೆಗಳನ್ನು, ಕೆಟ್ಟ ಆಲೋಚನೆಗಳನ್ನು ದೂರ ಮಾಡಿ ಒಳಿತಿನೆಡೆಗೆ ಸಾಗಿಸುತ್ತಾನೆ. ಏನೂ ಕಾಣದ , ಅರಿಯದ ಅಂಧಕಾರದ ಮನಸ್ಸಿನಲ್ಲಿ ಬೆಳಕನ್ನು ಚೆಲ್ಲಿ ಒಂದು ಅಭೂತಪೂರ್ವವಾದ ಸಂಚಲನವನ್ನು ಉಂಟುಮಾಡುತ್ತಾನೆ. ಗುರುವಿಗೆ…

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ

ನೀಲಕಂಠಪ್ಪನ ವ್ಯಕ್ತಿತ್ವ ಮತ್ತು ಆತನ ಕಾಯಕ ನಿಷ್ಠೆ ಹಿಂದಿನ ಸಂಚಿಕೆಯ ಮುಂದುವರೆದ ಭಾಗ ಶಿವಣ್ಣ ಅವರ ಅದ್ಭುತ ಗಮಕಕಲೆಯನ್ನು ಕೇಳಿಯೇ ಅನುಭವಿಸಬೇಕು. ಅಷ್ಟೇನೂ ಹೆಚ್ಚು ಓದಿರದಿದ್ದ ಶಿವಣ್ಣ ಅವರ ಸ್ಪಷ್ಟ ಉಚ್ಚಾರದ ಪಾರಾಯಣ ಅವರ ಗಮಕಕಲೆಯ ಹೆಗ್ಗುರುತು ಎನ್ನಬಹುದು. ಇನ್ನು ಕುಂಬಾರ ಏಕಾಂತಪ್ಪನವರ ಅರ್ಥಗಾರಿಕೆಯಂತೂ ಪುರಾಣಕಥೆ ಆಲಿಸುವವರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಷ್ಟು ಶಕ್ತಿಶಾಲಿಯಾಗಿತ್ತು. ಇಡೀ ದಿನ ಹೊಲಗದ್ದೆಗಳಲ್ಲಿ ದುಡಿದು ಸಂಜೆಯ ವೇಳೆಯಲ್ಲಿ ಇಂತಹ ಧಾರ್ಮಿಕ ಪ್ರವಚನಗಳಿಗೆ ಕಿವಿಯಾಗುತ್ತಿದ್ದ ನನ್ನೂರವರು ಆ ಹೊತ್ತಿನಲ್ಲಿ ಅನಾಯಾಸವಾಗಿ ಸಂಪಾದಿಸುತ್ತಿದ್ದ ಕೋಟಿಪುಣ್ಯ ಇಂದೂ…

ದೇಶ ಸುತ್ತಿ ನೋಡು, ಕೋಶ ಓದಿ ನೋಡು

ಸಿದ್ಧಸೂಕ್ತಿ :       ದೇಶ ಸುತ್ತಿ ನೋಡು, ಕೋಶ ಓದಿ ನೋಡು. ನೋಡು=ತಿಳಿ. ಕೋಶ=ಶಬ್ದಕೋಶ, ಗ್ರಂಥ. ಮನುಷ್ಯ ಬುದ್ಧಿಜೀವಿ. ತಿಳಿಯಲೇಬೇಕು. ಇಲ್ಲದಿರೆ ಪಶು. ಹುಟ್ಟಿದಾಗ ಮಾನವ ಸಚೇತನ ಮಾಂಸಪಿಂಡ. ಅದ್ಭುತ ಜ್ಞಾನಗ್ರಹಿಕೆಗೆ, ಕಾರ್ಯಸಾಧನೆಗೆ ಅಗತ್ಯ ಅಂಗಾಂಗ ರಚನೆಯ ಬಳಿಕವೇ ಭುವಿಗವತರಣ. ಜ್ಞಾನ ಗಳಿಸಿದಂತೆ, ಮಾನವ ದೇವಮಾನವ! ಪ್ರತಿ ವ್ಯಕ್ತಿ ವಸ್ತು ಜೀವಿ ಪರಿಸರ ಪ್ರತಿಕ್ಷಣ ಪಾಠ ಕಲಿಸುವುದು! ಗಾಳಿಗೆ ಕಿಡಕಿ ಬಾಗಿಲ ತೆರೆಯಬೇಕು. ಮನ ಇಂದ್ರಿಯಗಳ ತೆರೆದು ಸದಾ ಪಾಠ ಕಲಿಯಬೇಕು! ಬಲ್ಲ…

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ

ವಿಜಯನಗರ ಮುಸ್ಲಿಮರು ಮತ್ತು ಗೋರಿಕೆಳಗಣ ಗ್ರಾಮ ಹಂಪೆಯ ಬಜಾರುಗಳ ಅಧ್ಯಯನ ಸಂದರ್ಭದಲ್ಲಿ ವಿಜಯನಗರ ರಾಜಧಾನಿ ಪಟ್ಟಣವನ್ನು ಕುರಿತು ವಿದೇಶಿ ಪ್ರವಾಸಿಗರ ವರದಿ ಮತ್ತು ಶಾಸನಗಳನ್ನು ಪರಿಶೀಲಿಸಿ ದಾಖಲಿಸಿಕೊಳ್ಳುವ ಸಂದರ್ಭ ಅನಿವಾರ್ಯವಾಗಿ ಪುರಪಟ್ಟಣದ ಅನೇಕ ವಿಷಯಗಳು, ಅವುಗಳ ಸ್ಥಳನಾಮಗಳು ಕಣ್ಮುಂದೆ ಬಂದು ಹೋಗುತ್ತಿದ್ದವು. ಅವುಗಳಲ್ಲಿ ಗೋರಿಕೆಳಗಣ ಗ್ರಾಮ ಎಂಬ ಸ್ಥಳನಾಮವು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಇದರ ಜಾಡನ್ನು ಹಿಡಿದು ಹೊರಟಾಗ ವಿಜಯನಗರ ಸಾಮ್ರಾಜ್ಯದಲ್ಲಿ ಮುಸ್ಲಿಮರು ಸೇನಾಯೋಧರಾಗಿ, ಅಶ್ವಾಳು-ಬಿಲ್ಲಾಳುಗಳಾಗಿ, ದಂಡನಾಯಕರಾಗಿ, ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ ಸಂಗತಿ ಅತ್ಯಾಕರ್ಷಕವಾಗಿ ಗೋಚರಿಸಿತ್ತು.…

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು!

ಸಂನ್ಯಾಸಿಯ ಸಹವಾಸ ಸಂನ್ಯಾಸಿಯನ್ನೇ ಮಾಡದು! ಎಳೆಯ ವಯಸ್ಸಿನಲ್ಲಿಯೇ “ಮನೆಯನ್ನು ತೊರೆದು ಗುರುಶೋಧನೆಗೆ ಹೊರಟಿರುವೆ” ಎಂಬ ಸಿದ್ಧನ ಮಾತನ್ನು ಕೇಳಿ ಮಿತ್ರರಾದ ಸೋಮ-ಭೀಮರು ವಿರೋಧಿಸಿದರು “ನಮ್ಮನ್ನು ಹೆತ್ತ ತಂದೆ ತಾಯಿಗಳೇ ನಮಗೆ ದೇವರು! ಅವರನ್ನು ಬಿಟ್ಟು ತೆರಳುವುದು ಸರಿಯಲ್ಲ. ಇದು ಮುಪ್ಪಾವಸ್ಥೆಯಲ್ಲಿ ಮಾಡಬೇಕಾದ ಕೆಲಸ”-ಎಂದರು. ಆಗ ಸಿದ್ಧನು ತನ್ನ ವಿಚಾರವನ್ನು ಹೀಗೆ ಮಂಡಿಸಿದ: ನೀವು ಹೇಳುವುದು ಸರಿಯಾಗಿದೆ. ಇದನ್ನು ಹತ್ತಾರು ಸಾವಿರ ವರ್ಷಗಳ ಹಿಂದೆಯೇ ವೇದವೇ ಸಾರಿದೆ, “ಮಾತೃದೇವೋ ಭವ,ಪಿತೃದೇವೋ ಭವ” ತಾಯಿ ದೇವರೆಂದು ತಿಳಿದು ನಡೆದುಕೋ, ತಂದೆ…

ಚಿತ್ತವಿನ್ನಲುಗದೆಂಬಾ ಜಂಬ ಬೇಡ!

ಸಿದ್ಧಸೂಕ್ತಿ :       ಚಿತ್ತವಿನ್ನಲುಗದೆಂಬಾ ಜಂಬ ಬೇಡ!  ಚಿತ್ತ=ಮನಸ್ಸು, ಬುದ್ಧಿ. ಮನ ಮಂಗ ಬಲು ಚಂಚಲ. ಒಂದೆಡೆ ನಿಲ್ಲದು! ಸತ್ಯ ಅಸತ್ಯ, ಒಳಿತು ಕೆಡುಕುಗಳ ಸರಿ ತಿಳುವಳಿಕೆ, ತ್ಯಾಗ, ಒಳ ಹೊರ ಇಂದ್ರಿಯ ನಿಗ್ರಹ, ಪೂಜೆ ಧ್ಯಾನ ಜಪ ತಪ ತಪ ನಿಯಮ ಸತತ ಸಾಧನೆಗಳಿಂದ ಮನ ಗೆಲ್ಲಬಹುದು. ಅದು ಒಂದೆಡೆ ನಿಲ್ಲಬಹುದು. ಆದರದು ಎಂದಿಗೂ ಹಾಗೇ ಉಳಿವುದೆಂದು ಒಪ್ಪಲಾಗದು! ಮನಕೆ ರೂಪವಿಲ್ಲ. ಅದು ಸುತ್ತಲು ರಸ್ತೆ ವಾಹನ ಹಣ ಬೇಕಿಲ್ಲ! ತಡೆಗೋಡೆ…

ಪ್ಯಾರಾಲಿಂಪಿಕ್ಸ್ : ಭಾರತಕ್ಕೆ ೧೩ನೇ ಪದಕ, ಕಂಚಿಗೆ ಗುರಿಯಿಟ್ಟ ಹರ್ವಿಂದರ್..!

Reported By : H.D.Savita ಟೋಕಿಯೋ:ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರ್ಚರಿಯಲ್ಲಿ ಹರ್ವಿಂದರ್ ಸಿಂಗ್ 13 ನೇ ಪದಕ ಗೆದ್ದರು. ಆರ್ಚರಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಬಿಲ್ಲುಗಾರ ಎಂಬ ಕೀರ್ತಿಗೆ ಹರ್ವಿಂದರ್ ಭಾಜನರಾದ್ರು. ಶೂಟ್ ಆಫ್​ ಕಂಚಿನ ಪದಕದ ಪಂದ್ಯದಲ್ಲಿ ಅವರು 6-5ರಿಂದ ಕೊರಿಯಾದ ಆಟಗಾರನನ್ನು ಸೋಲಿಸಿದರು. 2018 ರ ಜಕಾರ್ತ ಏಷ್ಯನ್ ಗೇಮ್ಸ್ ಪ್ಯಾರಾ ಆರ್ಚರಿಯಲ್ಲಿ ಅಥ್ಲೀಟ್ ಹರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದ ಮೊದಲ ಭಾರತೀಯೆನಿಸಿದ್ದಾರೆ.

ರಸ್ತೆ ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿಸಲು ಪರಿಣತರ ಸಮಿತಿ ರಚನೆ: ಸಿ ಎಂ

ಬೆಂಗಳೂರು, ಸೆ, 03:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಲಾಭದಾಯಕವಾಗಿಸಲು ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪರಿಶೀಲಿಸಲು ಪರಿಣತರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು. ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 60 ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಇಂದು ನಿಗಮವು ಸಂಕಷ್ಟದಲ್ಲಿದೆ. ಆದರೆ ಸಮಸ್ಯೆಯನ್ನು ಬೆಳೆಯಲು ಬಿಡದೆ ನಾವು ಪರಿಹಾರ ಕಂಡುಕೊಳ್ಳಬೇಕಾಗಿದೆ. ಆದಾಯೋತ್ಪನ್ನ ಮಾದರಿಯಿದ್ದರೂ, ನಿಗಮ ನಷ್ಟದಲ್ಲಿರಲು ಕಾರಣಗಳನ್ನು ವಿಶ್ಲೇಷಿಸುವುದರೊಂದಿಗೆ,…

ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ, ನಾಯಕತ್ವ ವಹಿಸಿಕೊಳ್ಳುವುದಿಲ್ಲ: ಎಂ.ಬಿ ಪಾಟೀಲ್

ಬೆಂಗಳೂರು,ಸೆ,03: ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ ,ವೀರಶೈವ ಲಿಂಗಾಯತರು ಒಂದೇ ಎಲ್ಲರೂ ಸೇರಿ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳುವ ಮೂಲಕ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ. ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಏಕೆ ಇದರಲ್ಲಿ ತಪ್ಪು ತಿಳುವಳಿಕೆ ಬಂದಿತೋ ಗೊತ್ತಿಲ್ಲ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲ ಎಂದಿದ್ದಾರೆ. ಕಳೆದರಡು ದಿನಗಳ ಹಿಂದ ಪಂಚಮಸಾಲಿ ಸಮುದಾಯದವರು ಹಿಂದುಳಿದ…

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.!

ಒಂದೇ ಒಂದು ಜೀವದಾನ ಮತ್ತೊಂದು ನಿಬ್ಬೆರಗಿನ ಸಾಧನೆಗೆ ಹಾದಿಯಾಯ್ತು.! ನಿನಗೇನು ಹುಚ್ಚಾ!? ಆಸೆಗೂ ಒಂದು ಮಿತಿ ಇರಬೇಕು ಏ…ಹುಡುಗಿ ಈ ಸ್ಥಿತಿಯಲ್ಲಿ ಅದು ಸಾಧ್ಯವಾ!? ಕನಸಿಗೆ ಒಂದು ಮಿತಿ ಇದೆ. ಅತಿಯ ಪರಮಾವಧಿ ಇದು. ಸುಮ್ನೆ ಇರು.ಅಂದವರೆದಷ್ಟೋ!? ಮಾತು ಕೇಳಿ ನಕ್ಕವರೆಷ್ಟೋ!? ಪಾಪ ಏನೋ ಆಗಿದೆ ಎಂದು ಮರುಗಿದವರೆಷ್ಟೋ!? ಆದರೆ ತನ್ನದೇ ಛಲ ಮತ್ತು ಎಡೆ ಬಿಡದ ಪರಿಶ್ರಮದಿಂದ 2011 ರ ಬೆಳಿಗ್ಗೆ 10-55 ಕ್ಕೆ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್ ಏರಿದ ವಿಶ್ವದ ಮೊಟ್ಟ ಮೊದಲ…

ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ!

Writing:ಪರಶಿವ ಧನಗೂರು ಕಾಶ್ಮೀರ ಕಣಿವೆಯಲ್ಲಿ ಗರಿಗೆದರಿದೆ ಉಗ್ರ ಚಟುವಟಿಕೆ! ಭಾರತದ ಮಿತ್ರ ರಾಷ್ಟ್ರವಾದ ಆಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಇತ್ತ ನಮ್ಮ ಭಾರತದ ಕಾಶ್ಮೀರದ ಕಣಿವೆಯಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸ್ಫೋಟ, ಉಗ್ರರ ದಾಳಿ ನಡೆಯುತ್ತಲೇ ಇದೆ! ಇದ್ದಕ್ಕಿದ್ದಂತೆ ಈ ಭಯೋತ್ಪಾದಕರು ಇಷ್ಟೊಂದು ಚಿಗಿತುಕೊಂಡಿದ್ದು ಹೇಗೆ? ಆಗಾಗ ಶತ್ರುಗಳ ಹುಟ್ಟಡಗಿಸಲು ಉರಿದಾಳಿ ನಡೆಸಿ ಉಗ್ರಗಾಮಿಗಳ ಸದ್ದಡಗಿಸುತಿದ್ದ ನಮ್ಮ ಭಾರತೀಯ ಮಿಲಿಟರಿ ಪಡೆಗಳ ಹದ್ದಿನ ಕಣ್ಣಿದ್ದರೂ ಕಾಶ್ಮೀರ ಕಣಿವೆಯಲ್ಲಿ ನಿತ್ಯ ಗುಂಡಿನಚಕಮಕಿ, ನುಸುಳುಕೋರರ ಬಂಧನದ ಸುದ್ಧಿಗೇನೂ ಕೊರತೆಯಿಲ್ಲ. ಕಳೆದೊಂದು ವರ್ಷದಲ್ಲಿ…

ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ

ಸಿದ್ಧಸೂಕ್ತಿ : ವ್ಯಾಮೋಹವಿಲ್ಲದ ಪ್ರೇಮ ನಿರ್ಭರವಿರಲಿ ಹೆತ್ತವಳಿಗೆ ಹೆಗ್ಗಣ ಮುದ್ದು! ಕಪ್ಪಿದ್ದರೂ ಚಿನ್ನ! ಎನ್ನುವಳು! ಪರರ ಮಗು ಚಿನ್ನ ಮೀರಿದರೂ ಅಷ್ಟಕ್ಕಷ್ಟೇ! ತಾನು ತನ್ನವರು ತನ್ನದೆಂಬ ವ್ಯಾಮೋಹ ಪ್ರೀತಿ ಇರಬೇಕು ಇರಲಿ.ವ್ಯಾಮೋಹ ಮೀರಿ, ವಿಶಾಲತೆಯ ತಾಳಿ, ಎಲ್ಲೆಡೆ ಎಲ್ಲರನ್ನು ಪ್ರೇಮದಿ ಕಾಣುವುದು ಹೆಗ್ಗಳಿಕೆ! ತನ್ನ ಮಕ್ಕಳನ್ನು ಸಾಕುವುದು ಸರಿ. ಬೇರೆ – ಅನಾಥ ಮಕ್ಕಳನ್ನು ಸಲಹುವುದು ದೊಡ್ಡದು! ಅಲ್ಲಿ ಸ್ವಾರ್ಥ ಮಲಗುವುದು. ಪರಾರ್ಥ ಎದ್ದು ನಿಲ್ಲುವುದು! ಶಬರಿ ರಾಮನಿಗಾಗಿ ಹಣ್ಣು ಕಚ್ಚಿ ರುಚಿ ನೋಡಿದಳು! ಮಹಾರಾಷ್ಟ್ರದ ಡಾ.…

ಡಬಲ್ ಮರ್ಡರ್ ವ್ಯಕ್ತಿಗಳ ಚಹರೆ ಪತ್ತೆ;ಗಾಂಜಾ ಏಟಿಗೆ ಬಲಿಯಾದ್ರಾ ಇಬ್ಬರು?

ಬೆಂಗಳೂರು,ಸೆ,02: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಗೋಲ್ಡ್ ಕಾಯಿನ್ ಕ್ಲಬ್ ಎದುರಿನ ನಿರ್ಜನ ನೀಲಗಿರಿ ತೋಪಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ವ್ಯಕ್ತಿಗಳ ಮಾಹಿತಿ ಲಭ್ಯವಾಗಿದ್ದು ರವಿಕುಮಾರ್ ಮತ್ತುಕೊಲ್ಕತ್ತಾ ಮೂಲದ ಚಂದನ್ ಗುಪ್ತಾ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಸಮೀಪದ ಏರಿಯಾದ ನಿವಾಸಿ ರವಿಕುಮಾರ್. ಚಂದನ್ ಹುಸ್ಕೂರು ಸಮೀಪದ ಘಟ್ಟಹಳ್ಳಿಯಲ್ಲಿ ವಾಸವಿದ್ದನೆನ್ನಲಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್  ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಈ ನಿಗೂಢ ಕೋಲೆಗಳ ಹಿಂದಿನ ಸತ್ಯ…

1 53 54 55 56 57 101
Girl in a jacket