Girl in a jacket

Author kendhooli_editor

ಜಮೀನು ವಿವಾದಕ್ಕೆಒಂದೇ ಕುಟುಂಬದ ನಾಲ್ವರು ಹತ್ಯೆ

ಬಾಗಲಕೋಟೆ,ಆ,28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಜಮೀನು ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮುದರೆಡ್ಡಿ ಎಂಬುವರ ಕುಟುಂಬದ ನಾಲ್ವರನ್ನು ಮತ್ತೊಂದು ಕಡೆಯವರು ಹತ್ಯೆ ಮಾಡಿದ್ದಾರೆ. ಹನುಮಂತ (48), ಮಲ್ಲಪ್ಪ (44), ಈಶ್ವರ (40) ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ.ಪುಠಾಣಿ ಎಂಬ ಕುಟುಂಬಸ್ಥರು ಈ ನಾಲ್ವರನ್ನು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಜಮಖಂಡಿ…

ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ . . .

ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿದ ಅಣೆಕಟ್ಟೆ ಮತ್ತು ಕಾಲುವೆಗಳಿಗೆ ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಆದರೆ ವಿಜಯನಗರ ಕಾಲz ಮೊದಲ ಅಣೆಕಟ್ಟೆಯಾಗಿ ನಿರ್ಮಾಣಗೊಂಡದ್ದು ಹಂಪೆಯ ಬಳಿಯ ತುರ್ತು ಅಣೆಕಟ್ಟು. ಇದನ್ನು ಶಾಸನದಲ್ಲಿ “ಚಿಂತಾಯಕ ದೇವಂಣನು ಕಟ್ಟಿಸಿದ ಕಟ್ಟೆ ಶ್ರೀ ವಿರೂಪಾಕ್ಷ ಸದಣೂ ಬೊಮೋಜ ಮಾಡಿದ ಎಂದಿದೆ. ವಿರೂಪಾಕ್ಷ ಕ್ಷೇತ್ರದಲ್ಲಿ ಚಿಂತಾಯಕ ದೇವಂಣನು ಬೊಮ್ಮೋಜನಿಂದ ಇದನ್ನು ನಿರ್ಮಿಸಿದ ಎಂಬುದು ಶಾಸನಸ್ಥ ಸಂಗತಿ. ಬುಕ್ಕರಾಯನ ಕಾಲದಲ್ಲಿ ಇದು ನಿರ್ಮಾಣವಾಯಿತೆಂದು ಹೇಳಲಾಗುತ್ತದೆ. ವಿಜಯನಗರ ಕಾಲದ ಅಣೆಕಟ್ಟೆಗಳು ಮತ್ತು ಪರಿಸರಸ್ನೇಹಿ ತಂತ್ರಜ್ಞಾನವೂ .…

ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು..

ಆಧುನಿಕ ಮನುಷ್ಯನೆಂದಾಗ ಸಂಪ್ರದಾಯದ ಕೊಂಡಿಗಳನ್ನು ಸಡಿಲಿಸಿಕೊಂಡವರು ಎಂಬ ಅರ್ಥ ಹೊಳೆದರೆ, ಆಧುನಿಕ ಆಲೋಚನೆ ಎಂದಾಗ ಸಂಪ್ರದಾಯದ ಜುಗುಟುತನಗಳನ್ನು ಮೀರಿ ವೈಚಾರಿಕವಾಗಿ ಯೊಚಿಸುವುದು ಎಂದರ್ಥವಾಗುತ್ತದೆ. ಆಧುನೀಕರಣ ಎಂದರೆ ಹೊಸ ಹೊಸ ಆಲೋಚನೆ, ನಮ್ಮಲ್ಲೇ ಪೂರ್ವದಿಂದಲೂ ಇರುವ ಜಾನಪದ ಜ್ಞಾನವನ್ನು ತಳ್ಳಿಕೊಂಡು ಬಂದ ಜ್ಞಾನ, ವಿಜ್ಞಾನ, ತಂತ್ರಜ್ಞಾನಗಳ ಬಲವನ್ನು ಬಿಂಬಿಸುತ್ತದೆ. ಜನಪದ ಮತ್ತು ಆಧುನಿಕ ಕಾವ್ಯ ಕಲ್ಪನೆಯ ಸಾಮ್ಯತೆಗಳು.. ಆಧುನಿಕ ಈ ಪದದ ಬಳಕೆ ಅನೇಕ ರೀತಿಗಳಲ್ಲಿ ನಮ್ಮಲ್ಲಿ ಬಳಕೆಯಾಗುತ್ತಲಿದೆ. ಒಂದು ರೀತಿಯಲ್ಲಿ ಆಧುನಿಕ ಅನ್ನುವ ಪದವೇ ಕೆಲವರಿಗೆ ಆಶಾವಾದದ…

ಮೀಸಲಾತಿ ನೀತಿಗೆ ಕಾಯಕಲ್ಪದ ಅಗತ್ಯ

ಮೀಸಲಾತಿಯನ್ನು ಇದುವರೆಗೆ ಅನುಭವಿಸಿರುವವರು ಇತರರಿಗೆ ದಾರಿ ಮಾಡಿಕೊಡುವ ಔದಾರ್ಯದ ನಡವಳಿಕೆಗೆ ಇಂದಲ್ಲ ನಾಳೆ ಚಾಲನೆ ದೊರೆಯಬೇಕಿದೆ. ಈಗಿರುವ ಮೀಸಲಾತಿ ಪ್ರಮಾಣದಲ್ಲಿ ಎಲ್ಲರಿಗೂ ನ್ಯಾಯ ದೊರಕಿಸುವುದು ಅಸಾಧ್ಯ. ಮೀಸಲಾತಿ ನೀತಿ ಜಾರಿಗೆ ಬಂದ ನಂತರದಲ್ಲಿ ಅದರ ಲಾಭ ಪಡೆದಿರುವ ಉದ್ಯೋಗಸ್ಥರು, ರಾಜಕಾರಣಿಗಳು, ಅಧಿಕಾರಿ ನೌಕರ ಸಮುದಾಯ ಇತ್ಯಾದಿ ಮೂರುಮೂರು ಪೀಳಿಗೆ ಜನ ತ್ಯಾಗಕ್ಕೆ ಮುಂದಾಗಬೇಕಿದೆ. ಮೀಸಲಾತಿಯಿಂದ ಅನುಕೂಲದ ಹಂತ ಏರಿದವರನ್ನು ಪಟ್ಟಿಯಿಂದ ತೆಗೆದುಹಾಕಿ ಅವಕಾಶ ವಂಚಿತರಿಗೆ ಜಾಗ ಕಲ್ಪಿಸಬೇಕೆಂಬ ಒತ್ತಾಯದ ಜನಾಂದೋಳನ ಹಿಂದೊಮ್ಮೆ ನಡೆದಿತ್ತು. ಅಂಥದೇ ಆಂದೋಲನಕ್ಕೆ ಜನ…

ಮೈಸೂರು ಐವರು ಅತ್ಯಾಚಾರ ಆರೋಪಿಗಳ ಬಂಧನ

ಬೆಂಗಳೂರು, ಆ,೨೮: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿನಡೆದಿದ್ದ, ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಘಟನೆ ನಡೆದ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಘಟಮಾ ಸ್ಥಳದಲ್ಲಿ ತಮಿಳುನಾಡು ಬಸ್‌ಟಿಕೆಟ್ ದೊರೆತ ಹಿನ್ನೆಯಲ್ಲಿ ಅದೇ ಜಾಡು ಹಿಡಿದು ತನಿಖಾ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದರೆ, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು.…

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು

ಸಿನೇಮಾ ಟೆಂಟ್ ಮತ್ತು ಹಾಡಿನ ಹುಚ್ಚು ನಮ್ಮೂರು ಒಂದು ಮುನ್ನೂರು ಮನೆಗಳಿದ್ದ ಊರಾಗಿತ್ತು. ಅಲ್ಲಿ ಸರ್ಕಾರಿ ಆಯುರ್ವೇದಿಕ್ ಆಸ್ಪತ್ರೆ ಇತ್ತು, ಪ್ರಾಣಿಗಳ ಆಸ್ಪತ್ರೆ ಇತ್ತು, ಸರ್ಕಾರಿ ಶಾಲೆ ಹತ್ತನೇ ತರಗತಿವರೆಗೆ ಇತ್ತು. ಮತ್ತು ಮಂದಿರ ಮಸೀದಿ ಇದ್ದವು. ಈ ಊರೊಂದು ಅದ್ಭುತವಾಗಿತ್ತು. ಯಾವುದೇ ಜಗಳವಿಲ್ಲ , ಗಲಾಟೆಯಿರಲಿಲ್ಲ. ಇವೆಲ್ಲದರೊಂದಿಗೆ ಒಂದು ಟೆಂಟ್ ಸಹ ಇತ್ತು. ನಾ ಮೊದಲೇ ಒಮ್ಮೆ ನಿಮಗೆ ಹೇಳಿದ್ದೆ. ಟೆಂಟ್ ಗೇಟ್ ಕೀಪರ್ ಖಾದರ್ ತಾತ ಅಂತ. ಆ ಟೆಂಟ್ ಕೆಲವು ವರ್ಷಗಳ ನಂತರ…

ಏನು ಹಗೆ! ಏನು ಧಗೆ!

ಸಿದ್ಧಸೂಕ್ತಿ :                    ಏನು ಹಗೆ! ಏನು ಧಗೆ! ಮಾನವ ಸರ್ವಶ್ರೇಷ್ಠ. ವಿಚಾರಪರತೆ ಹೊಣೆಗಾರಿಕೆ ಅತ್ಯದ್ಭುತ! ಆದರೇನು? ಕೆಲರ ವರ್ತನೆ ಅಮಾನುಷ! ಹೃದಯ ವಿದ್ರಾವಕ! ಹಸುಳೆ ವೃದ್ಧರ ಮೇಲೆ ಅತ್ಯಾಚಾರ! ಹಾಡಹಗಲು ನಡುರಸ್ತೆಯಲ್ಲಿ ಜನರೆದುರು ಜನರ ಕಗ್ಗೊಲೆ! ಚೆಂದದ ಬಾಳಿನಲಿ ಸುಳ್ಳು ವಿಷಬೀಜ ಬಿತ್ತಿ ದಾಂಪತ್ಯ ಕೌಟುಂಬಿಕ ಸ್ನೇಹ ಸಂಬಂಧಗಳ ಛಿದ್ರಗೊಳಿಪ ಪಿತೂರಿ! ಕಾಷಾಯ ವೇಷದಿ ದೇವರ ಪ್ರಸಾದದಿ ವಿಷವಿಕ್ಕಿ ಕೊಲ್ಲುವಿಕೆ! ನಂಬಿ ಬಳಿ…

ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ-ಶ್ರಮ ಯೋಜನೆಗೆ ಚಾಲನೆ

ಬೆಂಗಳೂರು, ಆ,27:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯದಲ್ಲಿ ರಾಷ್ಟ್ರೀಯ ಅಸಂಘಟಿತ ಕಾರ್ಮಿಕರ ನೋಂದಣಿ ಇ-ಶ್ರಮ ಯೋಜನೆಗೆ ಚಾಲನೆ ನೀಡಿದರು. ಸ್ವಾತಂತ್ರ್ಯ ಬಂದ ನಂತರ ಅಸಂಘಟಿತ ಕಾರ್ಮಿಕರ ನೋಂದಣಿ ಮೊದಲ ಬಾರಿ ನಡೆಯುತ್ತಿದೆ. ಅವರನ್ನು ಗುರುತಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಜೀವನದ ಭದ್ರತೆ, ಆರೋಗ್ಯ, ಶಿಕ್ಷಣ ಮೊದಲಾದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಅವರಿಗೆ ಜೀವನ ಭದ್ರತೆಯೊಂದಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತಾಗಬೇಕು ಎಂದು ಮುಖ್ಯಮಂತ್ರಿಗಳು ಆಶಿಸಿದರು. ಕೂಲಿ ಕಾರ್ಮಿಕ ಇರಲಿ, ರೈತ ಕಾರ್ಮಿಕ ಇರಲಿ,…

ಪತ್ರಕರ್ತ, ಸಂಘಟನಾಕಾರ ಗುಡಿಹಳ್ಳಿ ಸ್ಮರಣೆ

ಬೆಂಗಳೂರು,ಆ,27: ಬಹುಮುಖ ಪ್ರತಿಭೆಯ ಗುಡಿಹಳ್ಳಿ ನಾಗರಾಜ ಅವರು ಪತ್ರಕರ್ತರಾಗಿ, ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕರಾಗಿ, ರಂಗಕರ್ಮಿಯಾಗಿ, ಪತ್ರಕರ್ತರ ಸಂಘಟನೆಗೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಹೇಳಿದರು. ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತಾಡಿದರು. ಗುಡಿಹಳ್ಳಿ ಅವರು ಪತ್ರಕರ್ತರಾಗಿ ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿ ಅನೇಕ ಕಲಾವಿದರನ್ನು ಬೆಳಕಿಗೆ ತಂದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ತಮ್ಮ…

ರಸ್ತೆ ಸಂಪರ್ಕದಲ್ಲಿ ಕರ್ನಾಟಕ ಮಾದರಿ: ಬಿಹಾರ ಸಚಿವರ ಪ್ರಶಂಸೆ

ಬೆಂಗಳೂರು, ಆ,27:ಕರ್ನಾಟಕವು ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಗೆ ಇಲ್ಲಿಯ ಸುಸಜ್ಜಿತ ಹೆದ್ದಾರಿಗಳು ಮತ್ತು ಹೆಚ್ಚಿನ ಮೂಲಸೌಲಭ್ಯಗಳು ಕಾರಣ ಎಂದು ಬಿಹಾರದ ರಸ್ತೆ ನಿರ್ಮಾಣ ಇಲಾಖೆಯ ಸಚಿವರಾದ  ನಿತಿನ್ ನಬಿನ್ ಅವರು ಪ್ರಶಂಸಿಸಿದರು. ವಿಕಾಸಸೌಧದಲ್ಲಿ ಇಂದು ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಕೈಗೊಳ್ಳುತ್ತಿರುವ ಹೆದ್ದಾರಿ ಮತ್ತು ರಸ್ತೆ ನಿರ್ಮಾಣಗಳ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡ ಬಳಿಕ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ನಾಟಕದಲ್ಲಿ ಮೂಲೆಮೂಲೆಗಳಿಗೂ ಅಳವಡಿಸಿರುವ ರಸ್ತೆ ಸಂಪರ್ಕವು ಇಡೀ ದೇಶದಲ್ಲೇ ಮಾದರಿಯಾಗಿದೆ. ಕರ್ನಾಟಕದ…

ರಾಜ್ಯದಲ್ಲಿ ಅತ್ಯಾಧುನಿಕ ಜ್ಯುವೆಲ್ಲರಿ ಪಾರ್ಕ್ ನಿರ್ಮಾಣಕ್ಕೆ ಬೆಂಬಲ; ಬೊಮ್ಮಾಯಿ

ಬೆಂಗಳೂರು, ಆ, 27: ಉದ್ಯೋಗ ಸೃಜಿಸುವ ಆಭರಣ ಉದ್ದಿಮೆ ಕೌಶಲ್ಯವಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಆಧುನಿಕ‌ ತಂತ್ರಜ್ಞಾನದಿಂದ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜುವೆಲರಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದರು.‌ ಇಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಸೌತ್ ಜ್ಯುವೆಲ್ಲರಿ ಷೋ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಸಂದರ್ಭವಿದೆ.…

ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ

‌‌‌‌     ‌‌                  ಸಿ.ರುದ್ರಪ್ಪ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ಹಲವು ಮಜಲುಗಳನ್ನು ಪಡೆಯುತ್ತಿದೆ,ಇದೇ ವೇಳೆ ಅವರು ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದು ಪಕ್ಷದಲ್ಲಿ ಅಸಮಾಧಾನ ಉಂಟಾಗಿದೆ ಈ ಕುರಿತು ಆಂತರಿಕ ಒಳಸುಳಿಯನ್ನು ಹಿರಿಯ ಪತ್ರಕರ್ತರಾದ   ಸಿ.ರುದ್ರಪ್ಪ ವಿಶ್ಲೇಷಣೆ ಇಲ್ಲಿದೆ.. ಯಡಿಯೂರಪ್ಪ ಪ್ರವಾಸ:ಬಿಜೆಪಿಯಲ್ಲಿ ಅಪಸ್ವರ ‘ರಾಜ್ಯಪಾಲರಾಗಲಿ’ಎಂಬ ಒತ್ತಡ ಸಾಧ್ಯತೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜ್ಯ ಪ್ರವಾಸಕ್ಕೆ…

“ಕುಸ್ತಿ” ಗೆ “ಯೋಗಿ” ಬಲ..!

Reported By : H.D. Savita ಹೊಸದಿಲ್ಲಿ: ಭಾರತದಲ್ಲಿ ಕುಸ್ತಿ ಕ್ರೀಡೆಯನ್ನು ಮತ್ತಷ್ಟು ಪ್ರೋತ್ಸಾಹಿಸಲು ಉತ್ತರಪ್ರದೇಶ ಸರ್ಕಾರ 2032ರ ಒಲಂಪಿಕ್ಸ್ ವರೆಗೆ ಭಾರತೀಯ ಕುಸ್ತಿಯನ್ನು ದತ್ತು ಪಡೆಯಲು ನಿರ್ಧರಿಸಿದೆ. ಈ‌ ನಿಟ್ಟಿನಲ್ಲಿ ಭಾರತೀಯ ಕುಸ್ತಿ ಒಕ್ಕೂಟ ಉತ್ತರಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸಮ್ಮತಿಸಿದ್ದಾರೆ. ಕುಸ್ತಿ ಪಟುಗಳಿಗೆ ಮೂಲಭೂತ ಸೌಕರ್ಯ ಸೇರಿದಂತೆ ಸಂಪೂರ್ಣ ಬೆಂಬಲ ನೀಡುವುದಾಗಿ ಯುಪಿ ಸರ್ಕಾರವು ಸುಮಾರು 170ಕೋಟಿ ರೂ.‌ಬಂಡವಾಳ ಹೂಡಿಕೆ ಮಾಡುವ‌ ನೀರಿಕ್ಷೆ ಇದೆ ಎಂದು…

ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ

              ಸಿದ್ಧಸೂಕ್ತಿ :           ಸಡಿಲುವವು ಬಾಳ್ ಮಾಗೆ ಮಂಕುತಿಮ್ಮ. ಬಾಳು ಮಾಗಿದಂತೆ ಸಂಬಂಧ ಶಿಥಿಲ. ಹೊಸತರಲ್ಲಿ ಅದು ಎಳೆ ಸೂಕ್ಷ್ಮ. ಬಲಿತಂತೆ ಗಟ್ಟಿ. ಮಾಗಿದಂತೆ ಸಡಿಲು! ಹೂ ಮಿಡಿ ಕಾಯಿ ಹಣ್ಣು ಮುಟ್ಟಿ ಕಿತ್ತಿ ನೋಡಿ! ಪಕ್ವ ಹಣ್ಣು ತಂತಾನೇ ಭೂಮಿಗೊರಗುವುದು! ಇಷ್ಟಪಟ್ಟ ಪುಸ್ತಕ ಓದುತ್ತ ಮಲಗಿದಾತನ ಕೈ ಮಲಗುವುದು! ಪುಸ್ತಕ ಕಳಚುವುದು! ಕಾಲ ಪಕ್ವವಾಗುತ್ತಲೇ ಸ್ತ್ರೀ ಪುರುಷ ಕುಟುಂಬ…

ಕೃಷ್ಣಾ ಮೇಲ್ದಂಡೆ ವಿವಾದ ಸುಪ್ರೀಂಗೆ ಅರ್ಜಿಗೆ ನಿರ್ಧಾರ: ಬೊಮ್ಮಾಯಿ

ನವದೆಹಲಿ,ಆ,27: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾವೇರಿ ನದಿ ಕಣಿವೆಯಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ. ತಮಿಳುನಾಡು ಸರ್ಕಾರವು ನದಿ ಜೋಡಣೆಗೆ ಮುಂದಾಗಿದೆ. ಆದರೆ, ಅದು ಕಾನೂನುಬಾಹಿರ. ಈ ಬಗ್ಗೆ ವಕೀಲರ ತಂಡದ ಜತೆಗೆ ಚರ್ಚಿಸಲಾಗಿದೆ. ಹಾಗೆಯೇ, ರಾಜ್ಯದ ಜಲವಿವಾದ ಪ್ರಕರಣಗಳ ಸಂಬಂಧ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.…

ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು?

ಮನುವಾದ ಸುಣ್ಣವಾದರೆ ತಾಲೀಬಾನ್ ಬೆಣ್ಣೆ ಹೇಗಾದೀತು? ನಿರಂತರ ಬಾಹ್ಯ ಮತ್ತು ಆಂತರಿಕ ದಾಳಿಗಳಿಗೆ ಗುರಿಯಾಗುತ್ತಲೇ ಬಂದಿರುವ ಪುಟ್ಟ ದೇಶ ಅಫ್ಘಾನಿಸ್ತಾನ. ಯಾರೂ ಗೆಲ್ಲಲಾಗದ ನೆಲವೆಂಬ ಪ್ರತೀತಿ. ‘ಸಾಮ್ರಾಜ್ಯಗಳ ಸಮಾಧಿ’ ಎಂದೇ ಇತಿಹಾಸ ಪ್ರಸಿದ್ಧ ದಾಳಿಕೋರರು, ಧರ್ಮಾಂಧರು, ಭಯೋತ್ಪಾದಕರು, ಅತೀವ ಬಡತನ, ಭ್ರಷ್ಟಾಚಾರದ ತಿರುಗಣಿಗೆ ಸಿಲುಕಿ ನಲುಗಿರುವ ನತದೃಷ್ಟ ನಾಡು. ಮೂರೂಕಾಲು ಕೋಟಿಯ ಪೈಕಿ  ಶೇ.99.7ರಷ್ಟು ಜನ ಇಸ್ಲಾಮ್ ಅನುಯಾಯಿಗಳು. ಇಸ್ಲಾಮ್ ಕಾಲಿಟ್ಟ ಹೊತ್ತಿನಲ್ಲಿ ಈ ದೇಶದ ಬಹುಸಂಖ್ಯಾತರು ಬೌದ್ಧರು ಮತ್ತು ಜರತುಷ್ಟ್ರರು. ಎರಡನೆಯ ವಿಶ್ವಯುದ್ಧದ ನಂತರ ಸೂಪರ್…

`ಆಟ’ ಆಡಲು ಜೆಡಿಎಸ್ ಮತ್ತೊಂದು ಹೊಸ ತಂತ್ರ ದಾಳ

-ತುರುವನೂರು ಮಂಜುನಾಥ “೭೫ ವರ್ಷದಿಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಿ. ನಗೆ ೨೦ ವರ್ಷ ಅಧಿಕಾರ ಬೇಡ, ೫ ವರ್ಷ ಕೊಡಿ ಸಾಕು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ” ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲ್ಲೂಕಿನ ಸೊರಣಗಿ ಗ್ರಾಮದಲ್ಲಿ ರಾಜ್ಯದ ಜನರಿಗೆ…

ನಶೆಯ ಜೊತೆ ನಡೆಯುತ್ತದೆ ಮೈಮಾಟದ ದಂಧೆ!

writing-ಪರಶಿವ ಧನಗೂರು ಇಡೀ ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದ್ದ ಹೈಟೆಕ್ ಸಿಂಥೆಟಿಕ್ ಡ್ರಗ್ಸ್ ರಾಕೆಟ್ ಮತ್ತೆ ಸದ್ದು ಮಾಡುತ್ತಿದೆ. ಡ್ರಗ್ಸ್ ಪೂರೈಕೆ ದಂಧೆಯಲ್ಲಿ ತೊಡಗಿದ್ದ ಕಾರಣಕ್ಕೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಪಾಲಾಗಿದ್ದ ಖ್ಯಾತ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯ ಡ್ರಗ್ಸ್ ಪತ್ತೆಗೆ ಹೈದರಾಬಾದ್ ಲ್ಯಾಬಿಗೆ ಕಳುಹಿಸಿದ್ದ ಕೂದಲಿನ ಎಫ್ ಎಸ್ ಎಲ್ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಇಬ್ಬರು ನಟಿಯರು ಮತ್ತೊಮ್ಮೆ ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ…

ವಿದ್ಯಾರ್ಥಿಮೇಲೆ ಅತ್ಯಾಚಾರವೆಸಗಿದ ಆರೋಪಿಗಳ ವಿರುದ್ದ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಲಿದೆ: ಶಶಿಕಲಾ ಜೊಲ್ಲೆ

ಮೈಸೂರು,ಆ,26: ಮೈಸೂರಿನ ವಿದ್ಯಾರ್ಥಿನಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಮಾಡಿರುವುದು ಖಂಡನೀಯವಾಗಿದ್ದು,ಸರ್ಕಾರ ಶೀಘ್ರ ಕ್ರಮ ಕೈಗೊಂಡು ಕಠಿಣಕ್ರಮ ಕೈಗೊಳ್ಳಲಿದೆ  ಎಂದು ಮುಜರಾಯಿ ಸಚಿವೆ ಶಶಿಕಲ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು. ವಿದ್ಯಾರ್ಥಿನಿ ಮೇಲೆ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ  ನಂತರ ಸುದ್ದಿಗಾರರೊಂದಿಗೆ ಮಾತನಾಡಿ,ಸಂತ್ರಸ್ಥ ಯುವತಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ರೀತಿಯ ದುಷ್ಕೃತ್ಯ ನಡೆದಿರುವುದು ನೋವಿನ ಸಂಗತಿ. ನಾನು ಒಬ್ಬ ಮಹಿಳೆಯಾಗಿ ಸರ್ಕಾರದಲ್ಲಿ ಮಹಿಳಾ ಸಚಿವೆಯಾಗಿ ಒಂದು ಹೆಣ್ಣಿನ ನೋವು ಒಬ್ಬಳು ಹೆಣ್ಣಾಗಿ ನನಗೆ…

ಗೃಹ ಸಚಿವರ ಮೇಲೆ ರೇಪ್ ಮಾಡಿರುವವರನ್ನು ಬಂಧಿಸಲಿ: ಡಿ.ಕೆ ಶಿ

ಬೆಂಗಳೂರು,ಆ,27:ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, 48 ಗಂಟೆಗಳಾದರೂ ಯಾರ ವಿರುದ್ಧವೂ ಎಫ್ಐಆರ್ ದಾಖಲಾಗದಿರುವುದು ನಾಚಿಕೆಗೇಡಿನ ವಿಚಾರ. ಆದಷ್ಟು ಬೇಗ ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ. ಇನ್ನು, ಗೃಹ ಮಂತ್ರಿಗಳು ತಮ್ಮ ಮೇಲೆ ಕಾಂಗ್ರೆಸ್ ನಾಯಕರು ರೇಪ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅದು ಯಾರೇ ಆಗಿರಲಿ ಅವರ ಮೇಲೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಿ’ ಎಂದು ಶಿವಕುಮಾರ್ ಅವರು ಛೇಡಿಸಿದ್ದಾರೆ.…

1 55 56 57 58 59 101
Girl in a jacket