ಸಚಿವರ ಕೈತಪ್ಪಿದ ಜಹಗೀರು
ಜಿಲ್ಲೆಯವರಲ್ಲದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮದ ಹಿಂದ ಬಹಳ ದೊಡ್ಡ ಧೈರ್ಯ ಕೆಲಸ ಮಾಡಿದೆ. ಇದು ಸಚಿವರಲ್ಲಿ ಏಕರೂಪದ ಅಸಮಾಧಾನಕ್ಕೆ ಕಾರಣವೂ ಆಗಿದೆ. ಮೂವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಇಕ್ಕಟ್ಟಿಗೆ ಕಾರಣವಾಗಬಹುದು. ಸ್ವಾತಂತ್ರ್ಯ ದಿನ, ರಾಜ್ಯೋತ್ಸವದ ದಿನ ರಾಷ್ಟ್ರಧ್ವಜ, ಕನ್ನಡ ಬಾವುಟವನ್ನು ಜಿಲ್ಲಾ ಸಚಿವರು ಜಿಲ್ಲಾ ಕೇಂದ್ರದಲ್ಲಿ ಹಾರಿಸುವ ಪರಿಪಾಠವಿದೆ. ಈ ಮೂವರು ಸಚಿವರು ಆ ಕೆಲಸವನ್ನು ಎರಡೆರಡು ಕಡೆ ಮಾಡುವುದಾದರೂ ಹೇಗೆ…? ಇತರರ ಅಸಮಾಧಾನದಲ್ಲೂ ಸಂತೋಷಕೂಟಕ್ಕೆ ಶ್ರೀರಾಮುಲು…



















