Girl in a jacket

Author kendhooli_editor

6 ತಿಂಗಳ ಸಾಧನೆ ಕುರಿತ ಪುಸ್ತಕ ಬಿಡುಗಡೆ

ಬೆಂಗಳೂರು,ಜ,28:  ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇಂದು 6 ತಿಂಗಳ ಸಂಭ್ರಮವಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ 6 ತಿಂಗಳ ಸಾಧನೆ ಪುಸ್ತಕ ಬಿಡುಗಡೆಗೊಳಿಸಿದರು. ವಿಧಾನ ಸೌಧದಲ್ಲಿ ಬಸವಕಲ್ಯಾಣಸಮಾರಂಭಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ  ಸರ್ಕಾರ 6 ತಿಂಗಳ ಸಾಧನೆ ಪುಸ್ತಕ  ಭವ್ಯಭವಿಷ್ಯದ  ಭರವಸೆಯ ಹೆಜ್ಜೆಗಳು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಸಚಿವರಾದ ಗೋವಿಂದ ಕಾರಜೋಳ, ವಿ. ಸೋಮಣ್ಣ ಭೈರತಿ ಬಸವರಾಜ್, ಉಮೇಶ್  ಕತ್ತಿ, ಡಾ.ಕೆ. ಸುಧಾಕರ್ ಗೋಪಾಲಯ್ಯ,ಕೆಎಸ್ ಈಶ್ವರಪ್ಪ ಎಂಟಿಬಿ ನಾಗರಾಜ್ ಎಸ್.…

ಅಕಾಶವಾಣಿಯನ್ನು ಕೇಂದ್ರ ಮುಚ್ಚುವ ಕೆಲಸ ಮಾಡುತ್ತಿದೆ; ಕೇಂದ್ರದ ವಿರುದ್ಧ ಎಚ್ ಡಿ ಕೆ ಆಕ್ರೋಶ

ಬೆಂಗಳೂರು, ಜ,28:ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಬೆಂಗಾಡು ಮಾಡುವ ಸಕಲ ಪ್ರಯತ್ನವನ್ನೂ ಕೇಂದ್ರ ಸರಕಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಕನ್ನಡದ ಕಾರ್ಯಕ್ರಮಗಳನ್ನು ಮೊಟಕುಗೊಳಿಸುತ್ತಿರುವ ಕೇಂದ್ರ ಸರ್ಕಾರ ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ…

ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ;ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಜ, 28:ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಾದರೂ ಎಲ್ಲರ ಹಾರೈಕೆಗಳು ಇನ್ನಷ್ಟು ಸ್ಪೂರ್ತಿಯಿಂದ ಮತ್ತು ಗಟ್ಟಿಯಾಗಿ ಅಭಿವೃದ್ಧಿಯತ್ತ ಕರ್ನಾಟಕವನ್ನು ಕೊಂಡೊಯ್ಯಲು ಸಂಕಲ್ಪ ಮಾಡಿರುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ,ಕರ್ನಾಟಕದ ಸಾಮಾನ್ಯ ಜನರಿಂದ ಹಿಡಿದು ಪಕ್ಷದ ಹಿರಿಯರು ಪದಾಧಿಕಾರಿಗಳು, ರಾಷ್ಟ್ರಪತಿಗಳು, ಪ್ರಧಾನಿ ನರೇಂದ್ರ ಮೋದಿಯವರು ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಕ್ಷೇತ್ರದ ಜನ ಶುಭಾಶಯಗಳನ್ನು ಕೋರಿದ್ದಾರೆ. ಅಮಿತ್ ಷಾ ಅವರು ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ. ಅವರೆಲ್ಲರಿಗೂ ಹೃದಯ ಪೂರ್ವಕ…

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು

ಭೂದಾನಚಿತ್ರದಲ್ಲಿರಾಜಕುಮಾರ್‌ತಂದೆ, ಉದಯಕುಮಾರ್ ಮತ್ತುಕಲ್ಯಾಣಕುಮಾರ್ ಮಕ್ಕಳು ರಾಜಕುಮಾರ್, ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಮೂರೂ ಮಂದಿ ನಾಯಕ ನಟರು ಪೂರ್ಣ ಪ್ರಮಾಣದಲ್ಲಿಒಂದೇಚಿತ್ರದಲ್ಲಿಅಭಿನಯಿಸಿದ ಭೂದಾನ ಕಪ್ಪುಬಿಳುಪು ಸಾಮಾಜಿಕಕಥಾ ಹಂದರದಚಿತ್ರಅನಂತಲಕ್ಷ್ಮೀ ಪಿಕ್ಚರ್ ಲಾಂಛನದಲ್ಲಿ೧೯೬೨ರಲ್ಲಿತೆರೆಕಂಡಿತು. ಪಿ.ಎನ್.ಗೋಪಾಲಕೃಷ್ಣ ಹಾಗೂ ಜಿ.ವಿ.ಅಯ್ಯರ್‌ಜಂಟಿಯಾಗಿ ನಿರ್ಮಾಣ ಮಾಡಿದ ಈ ಚಿತ್ರವನ್ನು ಮೊದಲ ಬಾರಿಗೆ ಜಿ.ವಿ.ಅಯ್ಯರ್ ನಿರ್ದೇಶಿಸಿದರಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸಿದರು. ಎಸ್.ಕೆ.ಭಗವಾನ್ ಹಾಗೂ ರಾಮಚಂದ್ರ ಸಹಾಯಕ ನಿರ್ದೇಶಕರಾಗಿಕಾರ್ಯನಿರ್ವಹಿಸಿದರು. ಉಳಿದಂತೆ ಅಶ್ವತ್, ನರಸಿಂಹರಾಜು, ಬಾಲಕೃಷ್ಣ, ಹೆಚ್.ರಾಮಚಂದ್ರಶಾಸ್ತ್ರಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಮುಂತಾದವರುಅಭಿನಯಿಸಿದರು.ಜಿ.ಕೆ.ವೆಂಕಟೇಶ್ ಸಂಗೀತ ನೀಡಿದಚಿತ್ರದಲ್ಲಿ ಪುರಂದರದಾಸರಭಾಗ್ಯಾದ…

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ

 ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಈ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಿಂದಲೂ ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಪ್ರಸಿದ್ಧಿಯನ್ನು ಪಡೆದ ಸ್ಥಳ. ದಾಖಲೆಗಳನ್ವಯ ಇದೊಂದು ಪ್ರಾಚೀನ ಪಟ್ಟಣವೇ ಆಗಿದ್ದಿತು. ಕ್ರಿ.ಶ. ೧೧-೧೨ನೆಯ ಶತಮಾನದ ಹೊತ್ತಿಗೇ ನಲವತ್ತೆಂಟು ಕೇರಿಗಳನ್ನು ಒಳಗೊಂಡ ಪಟ್ಟಣವಾಗಿದ್ದಿತು. ಅಲ್ಲದೆ ಕುಕನೂರು ಒಂದು ಸಾವಿರ ಮಹಾಜನರನ್ನು ಒಳಗೊಂಡಿದ್ದ ಮಹಾಗ್ರಹಾರವೂ, ಪ್ರಾಚೀನ ಕಾಲದ ವಿದ್ಯಾಕೇಂದ್ರವೂ ಆಗಿದ್ದುದು ಶಾಸನಗಳಿಂದ ತಿಳಿಯುವುದು. ಇಲ್ಲಿರುವ ದೇವಾಲಯಗಳೋ…

ಸಚಿವರ ಕೈತಪ್ಪಿದ ಜಹಗೀರು

ಜಿಲ್ಲೆಯವರಲ್ಲದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮದ ಹಿಂದ ಬಹಳ ದೊಡ್ಡ ಧೈರ್ಯ ಕೆಲಸ ಮಾಡಿದೆ. ಇದು ಸಚಿವರಲ್ಲಿ ಏಕರೂಪದ ಅಸಮಾಧಾನಕ್ಕೆ ಕಾರಣವೂ ಆಗಿದೆ. ಮೂವರಿಗೆ ಎರಡೆರಡು ಜಿಲ್ಲಾ ಉಸ್ತುವಾರಿ ಕೊಟ್ಟಿರುವುದು ಇಕ್ಕಟ್ಟಿಗೆ ಕಾರಣವಾಗಬಹುದು. ಸ್ವಾತಂತ್ರ್ಯ ದಿನ, ರಾಜ್ಯೋತ್ಸವದ ದಿನ ರಾಷ್ಟ್ರಧ್ವಜ, ಕನ್ನಡ ಬಾವುಟವನ್ನು ಜಿಲ್ಲಾ ಸಚಿವರು ಜಿಲ್ಲಾ ಕೇಂದ್ರದಲ್ಲಿ ಹಾರಿಸುವ ಪರಿಪಾಠವಿದೆ. ಈ ಮೂವರು ಸಚಿವರು ಆ ಕೆಲಸವನ್ನು ಎರಡೆರಡು ಕಡೆ ಮಾಡುವುದಾದರೂ ಹೇಗೆ…? ಇತರರ ಅಸಮಾಧಾನದಲ್ಲೂ ಸಂತೋಷಕೂಟಕ್ಕೆ ಶ್ರೀರಾಮುಲು…

ಬೆಂಗಳೂರು ಹೊರವಲಯದಲ್ಲಿ ಶುರುವಾಯಿತು ಭೂಮಾಫಿಯಾ-ಮರ್ಡರ್ !!

ಬೆಂಗಳೂರು ಹೊರವಲಯದಲ್ಲಿ ಶುರುವಾಯಿತು ಭೂಮಾಫಿಯಾ-ಮರ್ಡರ್ !! Writing;ಪರಶಿವ ದನಗೂರು ಆನೇಕಲ್ ನಾಗರೀಕರನ್ನು ಬೆಚ್ಚಿ ಬೀಳಿಸಿದ್ದ ರಾಜಶೇಖರ್ ರೆಡ್ಡಿ ಎಂಬ ಆಂಧ್ರಪ್ರದೇಶದ ಚಿತ್ತೂರು ಮೂಲದ ರಿಯಲ್ ಎಸ್ಟೇಟ್ ಬ್ರೋಕರ್ ಮರ್ಡರ್ ಮಿಸ್ಟರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಯುವಕರನ್ನು ಬಂಧಿಸಿರುವ ಆನೇಕಲ್ ಪೊಲೀಸರು ಭೂಮಾಫಿಯಾ ಕೈವಾಡವನ್ನು ಬಯಲಿಗೆಳೆದಿದ್ದಾರೆ! ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯ ಮೀಸೆ ಜಯರಾಂ ಮತ್ತು ಆತನ ಮಗ ಶಶಿಕುಮಾರ್ ಒಂದೂ ಕಾಲೂ ಕೋಟಿಗೆ ಸುಫಾರಿ ನೀಡಿ ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ! ಬೆಂಗಳೂರಿನ ಬಿ.ಟಿ.ಎಂ ಲೇಔಟಿನ ಸುಧಾಕರ್…

ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ..

ಆತ್ಮ ಗೌರವ ಎಂಬ ಅನಿವಾರ್ಯತೆಗಾಗಿ.. ಅಂಬೇಡ್ಕರ್ ಭಾರತೀಯ ಚರಿತ್ರೆಯ ಯುಗ ನಿರ್ಮಾಪಕ. ಅಪೂರ್ವ ಸಾಧಕ.ಅವರ ಕಾಡುವ ಕದಡುವ ಚಿಂತನೆಗಳು ಹೇಗೆ ನಮ್ಮೊಳಗೆ ಸುತ್ತುತ್ತವೆ?ಎಂಬುದನ್ನ ನಮಗೆ ನಾವೇ ವಿವರಿಸಿಕೊಳ್ಳುವ ಅಗತ್ಯವಿದೆ.ಈ ವಿವರವನ್ನ 1)ಬಯಲರೂಪ 2) ಪಠ್ಯ ರೂಪ 3) ಮನೋರೂಪ ಎಂದು ಬಿಡಿ ಬಿಡಿಯಾಗಿ ವಿವರಿಸಿಕೊಳ್ಳಬಹುದು. 1)ಬಯಲುರೂಪ: ಅಂಬೇಡ್ಕರರ ಬದುಕು ಮತ್ತು ಚಿಂತನೆಗಳು ಈ ಹೊತ್ತಿಗೆ ಎಚ್ಚರಿಕೆಯಂತೆಯೂ ಭವಿಷ್ಯಕ್ಕೆ ಮಾರ್ಗ ಸೂಚಿಯಂತೆಯೂ ಕಾಣಬಲ್ಲವು.ಅಂಬೇಡ್ಕರ ಎಂಬ ಬಯಲು ಪಠ್ಯದ ಶಿಲ್ಪ ಒಂದು ಕೈಯಲ್ಲಿ ಪುಸ್ತಕ ಹಿಡಿದು ಮತ್ತೊಂದು ಕೈಯ ತೋರು…

ವ್ಯಾಕ್ಸಿನ್ ಬಗ್ಗೆ ಜಾಗೃತಿ ಮೂಡಿಸಿದ ತಹಶಿಲ್ದಾರ್ ರಘುಮೂರ್ತಿ

ಚಳ್ಳಕೆರೆ, ಜ,28:ವ್ಯಾಕ್ಸಿನ್ ಹಾಕಿಸಿದೆ ಹಠ ಮಾಡುತ್ತಿದ್ದವರಿಗ ತಹಶೀಲ್ದಾರ್ ಎನ್ .ರಘುಮೂರ್ತಿ ಹೂ ಮಾಲೆ ಹಾಕಿ ವ್ಯಾಕ್ಸಿನ್ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಹಾಕಿಸುವ ಮೂಲಕ ಎಲ್ಲರ ಗಮನ ಸೆಳದಿದ್ದಾರೆ. ಹೌದು ತಾಲ್ಲೂಕು ನ್ನು ಸಂಪೂರ್ಣ ಕೋವಿಡ್ ವ್ಯಾಕ್ಸಿನ್ ಮುಕ್ತ ಮಾಡುವ ಉದ್ದೇಶದಿಂದ ಪ್ರತಿದಿನ ಬೆಳಂಬೆಳಗ್ಗೆ ಗ್ರಾಮೀಣ ಭಾಗಗಳಲ್ಲಿ ವ್ಯಾಕ್ಸಿನ್ ಜಾಗೃತಿ ಜತೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳದ ವ್ಯಕ್ತಿಗಳಿಗೆ ಬಲವಂತೆ ಮಾಡದೆ ವ್ಯಾಕ್ಸಿನ್ ಬಗ್ಗೆ ತಿಳಿ ಹೇಳಿ ವ್ಯಾಕ್ಸಿನ್ ಹಾಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಬೆಳಗ್ಗೆ ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗಜ್ಜಿಗನಾಹಳ್ಳಿ ಗ್ರಾಮದಲ್ಲಿ…

ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ

ವೀರಭದ್ರಪ್ಪ ವೃತ್ತಿ , ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಘಟನೆಗಳು ಕಾಕತಾಳೀಯ “ಗುರುಮಲ್ಲಪ್ಪ ಸರ್, ನಮ್ಮನೆಗೆ ಡಾಕ್ಟರ್ ಬಂದಿದ್ದಾರೆ, ನಮ್ಮಣ್ಣ ಪ್ರಕಾಶನನ್ನು ಜಲ್ದಿ ಕಳಿಸಬೇಕಂತೆ” ಎಂದು ನನ್ನ ಏಳನೇ ಇಯತ್ತೆಯ, ನಾಯಕರ ಓಣಿಯಲ್ಲಿದ್ದ ಸಣ್ಣಸಿದ್ದಪ್ಪನವರ ಮಹಾಂತಪ್ಪ ಮೇಷ್ಟ್ರ ಮನೆಯಲ್ಲಿ ಜರುಗುತ್ತಿದ್ದ, ಪಾಠದಮನೆಯ ಮುಂಬಾಗಿಲಿನ ಬಲತೋಳಿಗೆ ಒರಗಿ ನಿಂತು, ಮೇಷ್ಟ್ರು ಪಾಠಮಾಡುತ್ತಿದ್ದ ಎಡಭಾಗದ ಕಟ್ಟೆಯ ಕಡೆ, ತನ್ನ ಗೋಣನ್ನು ಸ್ವಲ್ಪವೇ ಮುಂದೆ ಚಾಚಿ, ಇಣಕಿ ನೋಡುತ್ತಾ ನನ್ನ ತಮ್ಮ ಭೋಗೇಶ ಕೂಗಲು, ಗೋಡೆಗೆ ನೇತು ಹಾಕಿದ್ದ ಕಪ್ಪುಹಲಗೆಯ ಪಕ್ಕದಲ್ಲಿ ನಿಂತು…

ವೀಕೆಂಡ್ ಕರ್ಪ್ಯೂ ರದ್ದು; ಘೋಷಣೆ

ಬೆಂಗಳೂರು,ಜ,21: ಕೊರೋನಾ ಹೆಚ್ಚಳವಾದ ಹಿನ್ನೆಲೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದ ವೀಕೆಂಡ್ ಕರ್ಫ್ಯೂವನ್ನ ರದ್ಧುಗೊಳಿಸಿರುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಘೋಷಣೆ ಮಾಡಿದ್ದಾರೆ. ಕೊರೋನಾ ನಿರ್ವಹಣೆ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು, ಸಚಿವರು ತಜ್ಞರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದ್ದು ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ಅಶೋಕ್, ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ಈವಾರದಿಂದಲೇ ವೀಕೆಂಡ್ ಕರ್ಫ್ಯೂ…

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ

ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ ಯುಜಿಸಿಯು ೨೦೧೦ರ ನಂತರ ಪಿಎಚ್.ಡಿ.ಗೆ ‘ಕೋರ್ಸ್‌ವರ್ಕ್ ಎಂಬ ಅಧ್ಯಯನ ಕ್ರಮವನ್ನು ಅಳವಡಿಸಿತು. ಆದರೆ ಕನ್ನಡ ವಿಶ್ವವಿದ್ಯಾಲಯವು ಈ ಬಗೆಯ ಕೋರ್ಸ್‌ವರ್ಕ್ ಹಾಗೂ ಈಗಿನ ಗುಣಾಂಕ ಪದ್ಧತಿಯನ್ನು ಆರಂಭದಿಂದಲೇ ಅಳವಡಿಸಿಕೊಂಡಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಸಂಶೋಧನೆಗೆಂದೇ ಮೀಸಲಾದ ಈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪಡೆದ ನಂತರ ಒಂದು ವಾರದ ಸಂಶೋಧನ ಕಮ್ಮಟ, ಅದರಲ್ಲಿ ವಿಷಯತಜ್ಞರ ಮೂಲಕ ಸಂಶೋಧನಾ ತರಬೇತಿ; ಆರು ತಿಂಗಳವರೆಗೆ ಸಂಶೋಧನೆಯ ವಿಧಿ-ವಿಧಾನ, ಅಧ್ಯಯನ ವಿಷಯ, ಅಂತರಶಿಸ್ತು ಮತ್ತು ಬಹುಶಿಸ್ತೀಯ ಅಧ್ಯಯನಗಳ…

ಮಾನವಂತ ಪತ್ರಕರ್ತ ಕಮಾಲ್ ಖಾನ್

ಮಾನವಂತ ಪತ್ರಕರ್ತ ಕಮಾಲ್ ಖಾನ್ ಪತ್ರಿಕಾವೃತ್ತಿಯು ಲಜ್ಜೆಗೆಟ್ಟು ಮಾನ ಕಳೆದುಕೊಂಡಿರುವ ಇಂದಿನ ದಿನಮಾನಗಳ ರೊಜ್ಜಿನ ನಡುವೆ ಕಮಲದಂತೆ ಹೊಳೆದ ಹೃದಯವಂತ ಕಮಾಲ್ ಖಾನ್. ಪತ್ರಿಕಾವೃತ್ತಿ ಜನಪರ ನೆಲೆಯದಾಗಿತ್ತೇ ವಿನಾ ಅಧಿಕಾರಕೇಂದ್ರಿತ ಆಗಿರಲಿಲ್ಲ. ಅವರ ಒಟ್ಟಂದದ ವರದಿಗಾರಿಕೆಯು ಭಾರತದ ಬಹುಮುಖೀ ಸಂಸ್ಖೃತಿ ಮತ್ತು ಗಂಗಾ-ಜಮುನಾ ಸಾಮಾಜಿಕ ಸದ್ಭಾವನೆಯ ಸಮರಸ ಪ್ರತೀಕ. ಗಂಗೆ ಯಮುನೆ ಹರಿಯುವ ಉತ್ತರ ಭಾರತದ ಕೆಲವು ಸೀಮೆಗಳಲ್ಲಿ ‘ಗಂಗಾ- ಜಮುನೀ ತೆಹಜೀಬ್’ ಎಂಬ ಅವಧೀ ನುಡಿಗಟ್ಟಿನ ಕಾವ್ಯಾತ್ಮಕ ರೂಪಕವೊಂದಿದೆ. ಹಿಂದೀಗಿಂತ ಪುರಾತನ ಹಿಂದೀ ನುಡಿಗಟ್ಟು…

ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ಎವಿಜಿಸಿ ನೀತಿ: ಅಶ್ವತ್ಥನಾರಾಯಣ

ಬೆಂಗಳೂರು,ಜ,20: ಡಿಜಿಟಲ್ ಮನೋರಂಜನಾ ಕ್ಷೇತ್ರವು ಅಗಾಧವಾಗಿ ಬೆಳೆಯುತ್ತಿದ್ದು, ಒಂದು ವರ್ಷದಲ್ಲಿ ನೂತನ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ನೀತಿ’ (ಎವಿಜಿಸಿ ಪಾಲಿಸಿ)ಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಲ್ಲಿನ ಮಹದೇವಪುರದಲ್ಲಿ ದೇಶದ ಪ್ರಪ್ರಥಮ ಮತ್ತು ಏಷ್ಯಾದ ಅತಿದೊಡ್ಡ `ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಉತ್ಕೃಷ್ಟತಾ ಕೇಂದ್ರ’ಕ್ಕೆ (ಎವಿಜಿಸಿ ಸೆಂಟರ್ ಆಫ್ ಎಕ್ಸಲೆನ್ಸ್) ಗುರುವಾರದಂದು ಚಾಲನೆ ನೀಡಿ ಮಾತನಾಡಿದ ಅವರು,…

ಜ.26ರಂದು “ಬಡವ ರಾಸ್ಕಲ್” ಚಿತ್ರ ವೂಟ್‌ ಸೆಲೆಕ್ಟ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್

ಚಿತ್ರ ಮಂದಿರಗಳಲ್ಲಿ ಭರ್ಜರಿ ಯಶಸ್ಸು ಕಂಡ ಡಾಲಿ ದನಂಜಯ್ ಅಭಿನಯದ “ಬಡವ ರಾಸ್ಕಲ್” ಸಿನಿಮಾ ಜನವರಿ ೨೬ರಂದು “ವೂಟ್ ಸೆಲೆಕ್ಟ್” ಓಟಿಟಿ ಫ್ಲಾಟ್‌ಫಾರ್ಮ್ನಲ್ಲಿ ಬಿಡುಗಡೆಯಾಗುತ್ತಿದೆ. ಶಂಕರ್ ಗುರು ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವು ರೊಮ್ಯಾಂಟಿಕ್ ಡ್ರಾಮದಲ್ಲಿ ಧನಂಜಯ್, ಅಮೃತ ಅಯ್ಯಂಗಾರ್, ರಂಗಾಯಣ ರಘು ಹಾಗೂ ತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸ್ವರ್ಶ ರೇಖಾ, ನಾಗಭೂಷಣ್, ಪೂರ್ಣ ಚಂದ್ರ ಮತ್ತು ಮಾಸ್ತಿ ಮಂಜು ಕೂಡ ಬಣ್ಣಹಚ್ಚಿದ್ದಾರೆ. ಶ್ರೀಮಂತ ರಾಜಕಾರಣಿಯ ಮಗಳು ಸಂಗೀತಾ (ಅಮೃತ) ಮತ್ತುಮಧ್ಯಮ ವರ್ಗ ಕುಟುಂಬದ…

ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ..

ಲೋಕದತ್ತ ಮಿತಿಗಳನ್ನೂ ದಾಟಿ ಮುನ್ನಡೆದು ನಿತ್ಯಬೆರಗನ್ನು ಹುಟ್ಟಿಹಾಕಿದ ಪರಿ.. ಅದೊಂದು ಭಾನುವಾರದ ದಿನ. ಭದ್ರಪ್ಪಶೆಟ್ಟಿ ಅಂಗಡಿಯಿಂದ ಖರೀದಿಸಿದ ಹತ್ತು ಸೇರುಗಳ ಮಂಡಕ್ಕಿ ಮೂಟೆಯನ್ನು ಹೆಗಲ ಮೇಲೆ ಹೇರಿಕೊಂಡು ಮನೆಯತ್ತ ಓಟಕಿತ್ತವನಿಗೆ ಒಂದು ಆತಂಕ ಬೆನ್ನುಬಿಡದೆ ಕಾಡುತ್ತಿತ್ತು. ಶೆಟ್ಟಿಯ ಅಂಗಡಿಯ ಗೋಡೆಯ ಮೇಲೆ ನೇತುಹಾಕಿದ್ದ ಗಡಿಯಾರ ಬೆಳಿಗ್ಗೆಯ ಒಂಬತ್ತನ್ನು ಮೀರಿದ ಸಮಯವನ್ನು ತೋರಿಸಿದ್ದು ನನ್ನ ಎದೆಬಡಿತವನ್ನು ಮತ್ತಷ್ಟು ಹೆಚ್ಚುಮಾಡಿತ್ತು. ಅವ್ವ ಮಾಡಲಿರುವ ಒಗ್ಗರಣೆಗೆ ಬೇಕಾದ ಮಂಡಕ್ಕಿ ತರಲು ಸುಮಾರು ಎಂಟೂವರೆಯ ವೇಳೆಗೇ ಆತುರಾತುರವಾಗಿ ಮನೆಯನ್ನು ತೊರೆದು ಮಂದಿನ…

ಸಂಶೋಧನೆಗೆ ಹೀಗೊಂದು ಅವಕಾಶ

ಸಂಶೋಧನೆಗೆ ಹೀಗೊಂದು ಅವಕಾಶ ರಾಷ್ಟ್ರೀಯ ಸೇವಾ ಯೋಜನೆ ಅಥವಾ ಎನ್.ಎಸ್.ಎಸ್. ಎಂಬುದು ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವಿಕೆಯ ಅರಿವನ್ನು ಮೂಡಿಸುವ ಮಹತ್ವಾಕಾಂಕ್ಷೆಯ ಯೋಜನೆ. ಇದು ಕೊಠಡಿಗಳ ಮಧ್ಯೆ ಕಲಿಯುವ ವಿದ್ಯೆಯ ಜೊತೆಗೆ ಪರಿಸರ, ಆರೋಗ್ಯ, ಸೇವೆ ಮತ್ತು ಶ್ರಮಸಂಸ್ಕೃತಿಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವ ಪ್ರಯೋಗಶಾಲೆ. ಇಂತಹ ಶಿಬಿರವೊಂದರಲ್ಲಿ ಭಾಗವಹಿಸುವ ಅವಕಾಶವೂ ಪದವಿ ವಿದ್ಯಾಭ್ಯಾಸದ ಅವಧಿಯಲ್ಲಿ ನನ್ನದಾಗಿತ್ತು. ಅಲ್ಲಿ ಈ ಮೇಲಿನ ಚಟುವಟಿಕೆಗಳಲ್ಲಿ ತೊಡಗಿದ ಅನುಭವ ಅಪರಿಮಿತವಾದದ್ದು. ಅಂತೆಯೇ ಚಿತ್ರದುರ್ಗ ಬಾಲಕರ ಪದವಿಪೂರ್ವ ವಿದ್ಯಾಲಯವು ಎನ್.ಎಸ್.ಎಸ್.…

ಮಾರಣ ಹೋಮದ ಪೂರ್ವ ತಯಾರಿ!

ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು, ದಲಿತ ದಮನಿತರು ಭಯದ ನೆರಳಿನಲ್ಲಿ ಬದುಕುವ ದ್ವೇಷ ರಾಜಕಾರಣದ ವಾತಾವರಣವನ್ನು ಕಳೆದ ಕೆಲವು ವರ್ಷಗಳಲ್ಲಿ ಕಟ್ಟಿ ಬೆಳೆಸಲಾಗಿದೆ. ಹೊಸ ದ್ವೇಷಗಳ ವಿಷದ ಕಳೆಗೆ ಯಥೇಚ್ಛ ನೀರು ಗೊಬ್ಬರ ನಿರ್ಭೀತಿ ನಿರ್ಲಜ್ಜೆಯನ್ನು ಎರೆಯತೊಡಗಿದೆ ಈ ವಾತಾವರಣ. ಮುಸಲ್ಮಾನರ ನರಮೇಧಕ್ಕೆ ಬಹಿರಂಗ ಕರೆ ನೀಡುವವರನ್ನು ಮುಟ್ಟಲೂ ಆಗದೆ ಅಸಹಾಯಕವಾಗಿ ಕೈ ಕಟ್ಟಿ ಕುಳಿತಿದೆ ಕಾನೂನು. ಮಾರಣ ಹೋಮದ ಪೂರ್ವ ತಯಾರಿ! ಸ್ತ್ರೀದ್ವೇಷ ಮತ್ತು ಧರ್ಮಾಂಧತೆ ಈ ನೆಲಕ್ಕೆ ಹೊಸ ಆವಿಷ್ಕಾರಗಳೇನೂ ಅಲ್ಲ. ಆದರೆ ’ಬೇಟೀ ಬಚಾವೊ, ಬೇಟಿ…

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ

ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ನಾಗಾರ್ಜುನ ಮಹಾಭಾರತದ ಪ್ರಸಂಗವೊಂದನ್ನು ಆಧರಿಸಿದ, ರಾಜಕುಮಾರ್‌ಅರ್ಜುನನಾಗಿ ಅಭಿನಯಿಸಿದ ಕಪ್ಪುಬಿಳುಪು ಪೌರಾಣಿಕಚಿತ್ರನಾಗಾರ್ಜುನ ನಂದಿ ಪಿಕ್ಚsರ್ಸ್ ಲಾಂಛನದಲ್ಲಿ ೧೯೬೧ರಲ್ಲಿ ತೆರೆಗೆ ಬಂದಿತು. ಕೆ.ಎನ್.ಮಲ್ಲಿಕಾರ್ಜುನ ನಿರ್ಮಾಣದ ಈ ಚಿತ್ರವನ್ನುಕನ್ನಡದ ಮೊದಲ ಮಾತನಾಡುವಚಿತ್ರಸತಿ ಸುಲೋಚನ ನಿರ್ದೇಶನ ಮಾಡಿದ ವೈ.ವಿ.ರಾವ್ ನಿರ್ದೇಶಿಸಿದರು. ಆರ್.ಶ್ರೀನಿವಾಸ್ ಹಾಗೂ ಕುಂದಾನಿ ಸತ್ಯನ್ ಸಹಾಯಕ ನಿರ್ದೇಶಕರಾಗಿದ್ದರು. ರಾಜಕುಮಾರ್, ವರಲಕ್ಷ್ಮಿ, ವಿ.ನಾಗಯ್ಯ, ಸಂಧ್ಯಾ, ಕಾಂತಾರಾವ್, ಕೆ.ಎಸ್.ಅಶ್ವತ್, ಹರಿಣಿ, ನರಸಿಂಹರಾಜು, ರಾಜನಾಲ, ರಾಘವೇಂದ್ರರಾವ್, ರಮಾದೇವಿ ಮುಂತಾದವರುಅಭಿನಯಿಸಿದ ಈ ಚಿತ್ರದಲ್ಲಿ ಮದರಾಸು ಸಹೋದರಿಯರು ನೃತ್ಯ ಪ್ರದರ್ಶನ ನೀಡಿದ್ದರು. ರಾಜಕುಮಾರ್‌ಅರ್ಜುನನಾಗಿ, ವರಲಕ್ಷ್ಮಿಉಲೂಚಿಯಾಗಿ, ಕಾಂತಾರಾವ್…

1 55 56 57 58 59 126
Girl in a jacket