ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು
ಸಿದ್ಧಸೂಕ್ತಿ : ರೆಕ್ಕೆ ಪೋದಂತಲೆದು ಸಿಕ್ಕಿದುದನುಣ್ಣುವುದು. ನಾವು ಆಳವಾಗಿ ಯೋಚಿಸುತ್ತೇವೆ, ಯೋಜಿಸುತ್ತೇವೆ! ಸಾಧಕ ಬಾಧಕಗಳ ಅಳೆದು ತೂಗಿ ನಿರ್ಣಯಿಸುತ್ತೇವೆ. ಗೌರವಿಸುವ ಬದಲು ಅನುಮಾನಿಸುತ್ತೇವೆ. ಕಳ್ಳ ಸುಳ್ಳ ನಕಲಿ ಇರಬಹುದೇ? ಎಂದು ಪರೀಕ್ಷಿಸುತ್ತೇವೆ! ಆದರೂ ಬಹುತೇಕ ನಕಲಿ ಪಾಸ್! ಅದು ಮೆರೆಯುವುದು, ಹಲ್ಲು ಕಿರಿಯುವುದು. ಅಸಲಿ ಸೋತು ಸೊರಗುವುದು, ಮೂಲೆ ಸೇರುವುದು! ನೋಡಿಕೊಂಡವರ ಕಾರ್ಯವೆಸಗಲು, ನಿಯಮ ಬಾಹಿರ ಕಾಣದು! ಕಂಡರೂ ಅಡ್ಡಿಯಾಗದು! ದೂರ ಸರಿಯುವುದು! ನೋಡಿಕೊಳ್ಳದವರ ಕಾರ್ಯವೆಸಗಲು, ಇರುವ ಪೂರಕ ನಿಯಮವೂ ಅಡ್ಡಿಯಂತೆ ಕಾಮಣಿ! ಸಾಗುವ ಬಾಳುವ…