ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ
ಕನಸು ನನಸಾಗಿಸಿ ಪ್ರಶಸ್ತಿ ಕೈಗಿತ್ತ ಸಂಶೋಧನೆ ಯುಜಿಸಿಯು ೨೦೧೦ರ ನಂತರ ಪಿಎಚ್.ಡಿ.ಗೆ ‘ಕೋರ್ಸ್ವರ್ಕ್ ಎಂಬ ಅಧ್ಯಯನ ಕ್ರಮವನ್ನು ಅಳವಡಿಸಿತು. ಆದರೆ ಕನ್ನಡ ವಿಶ್ವವಿದ್ಯಾಲಯವು ಈ ಬಗೆಯ ಕೋರ್ಸ್ವರ್ಕ್ ಹಾಗೂ ಈಗಿನ ಗುಣಾಂಕ ಪದ್ಧತಿಯನ್ನು ಆರಂಭದಿಂದಲೇ ಅಳವಡಿಸಿಕೊಂಡಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಸಂಶೋಧನೆಗೆಂದೇ ಮೀಸಲಾದ ಈ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಪ್ರವೇಶ ಪಡೆದ ನಂತರ ಒಂದು ವಾರದ ಸಂಶೋಧನ ಕಮ್ಮಟ, ಅದರಲ್ಲಿ ವಿಷಯತಜ್ಞರ ಮೂಲಕ ಸಂಶೋಧನಾ ತರಬೇತಿ; ಆರು ತಿಂಗಳವರೆಗೆ ಸಂಶೋಧನೆಯ ವಿಧಿ-ವಿಧಾನ, ಅಧ್ಯಯನ ವಿಷಯ, ಅಂತರಶಿಸ್ತು ಮತ್ತು ಬಹುಶಿಸ್ತೀಯ ಅಧ್ಯಯನಗಳ…