ಸಿಎಂ ಬೊಮ್ಮಾಯಿ ಮಾಡಿದ ಭಾಷಣದ ಮೋಡಿ
ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು ಬೆಂಗಳೂರು,ಸೆ,20:ಬೆಲೆ ಏರಿಕೆ ನಿಲುವಳಿ ಸೂಚನೆ ಚರ್ಚೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಸುಧೀರ್ಘ ಉತ್ತರ ನೀಡಿದರು.ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಂಸದೀಯ ಪಟುವಾಗಿ ವಿಜೃಂಭಿಸಿದರು.ಏಟಿಗೆ ಎದಿರೇಟು ;ಪಟ್ಟಿಗೆ ಪ್ರತಿ ಪಟ್ಟು;ಲಯಬದ್ಧ ಮಾತುಗಾರಿಕೆ;ನಾಟಕೀಯ ಸ್ಪರ್ಶ-ಒಟ್ಟಿನಲ್ಲಿ ತಾವೊಬ್ಬ ಪ್ರಚಂಡ ಭಾಷಣಕಾರರೆಂದು ಸಾಬೀತು ಪಡಿಸಿದರು.ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿ ಮಾಡಿದ ಮೊದಲ ಭಾಷಣವನ್ನು ನೆನಪಿಸುವಂತಿತ್ತು.ಅವರು ಅಡಿಗ-ಕುವೆಂಪು;ಕಾಫ್ಕ-ಕಾಮು;ರಷ್ಯಾ ಕ್ರಾಂತಿ-ಫ್ರೆಂಚ್ ಕ್ರಾಂತಿ ಹೀಗೆ ಪಟೇಲರು ತಮ್ಮ ಭಾಷಣದಲ್ಲಿ ಇಡೀ ಪ್ರಪಂಚದ ಪರ್ಯಟನೆ ಮಾಡಿ ಬಿಟ್ಟಿದ್ದರು.ಆಗ ವಿರೋಧ ಪಕ್ಷದ…