ವೇತನ ನೀಡುವಂತೆ ಆಗ್ರಹಿಸಿ ದಿನಗೂಲಿ ನೌಕರರ ಪ್ರತಿಭಟನೆ
ಆಲಮಟ್ಟಿ,ಸೆ,17: ವಿವಿಧ ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಕರ್ತವ್ಯನಿರ್ವಹಿಸುತ್ತಿರುವವರಿಗೆ ಕಳೆದ ೫ತಿಂಗಳಿನಿಂದ ಸಂಬಳ ನೀಡದೇ ಇರುವದರಿಂದ ಕೂಡಲೇ ವೇತನ ನೀಡುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಸಂಯುಕ್ತ ಕೆಬಿಜೆನ್ನೆಲ್ ಆಲಮಟ್ಟಿ ಡಿ ಗ್ರುಪ್ ನೌಕರರ ಸಂಘದವತಿಯಿಂದ ಮುಖ್ಯ ಅಭಿಯಂತರರ ಕಚೇರಿಯ ಮುಂದೆ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ, ಮಾರುಕಟ್ಟೆಯಲ್ಲಿ ನಿತ್ಯ ಬಳಸುವ ಸಾಮಗ್ರಿಗಳ ದರ ಏರಿಕೆಯಾಗುತ್ತಿದೆ ಆದ್ದರಿಂದ ದಿನಗೂಲಿ ಕಾರ್ಮಿಕರಿಗೆ ಪ್ರತಿ ತಿಂಗಳೂ ವೇತನ ನೀಡಬೇಕು ಎಂದು ಆಗ್ರಹಿಸಿದರು. ಧರಣಿ ಸ್ಥಳಕ್ಕೆ ಆಗಮಿಸಿದ ಕೆಬಿಜೆನ್ನೆಲ್ ಅರಣ್ಯ…