ಬೆಲೆ ಏರಿಕೆ ಟೀಕೆಗೆ ಎದುರೇಟು ನೀಡಿದ ಸಿಎಂ
ಬೆಂಗಳೂರುಸೆ,20: ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆ. ಇದಕ್ಕೆ ಯಾವುದೇ ಸರ್ಕಾರವನ್ನು ನಿರ್ದಿಷ್ಠವಾಗಿ ಬೊಟ್ಟು ಮಾಡಿ ತೋರಿಸಿ ದೂಷಣೆ ಮಾಡುವುದು ಸಮಂಜಸವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿಂದು ನಿಯಮ 69ರ ಅಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಬೆಲೆ ಏರಿಕೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಸಾರಾಸಗಟಾಗಿ ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು. ಈ ಹಂತದಲ್ಲಿ ಆಡಳಿತರೂಢ ಬಿಜೆಪಿ ಪ್ರತಿಪಕ್ಷವಾದ ಕಾಂಗ್ರೆಸ್ ಸದಸ್ಯರ ನಡುವೆ ಬಿಜೆಪಿ…