ಹಿಪ್ಪರಗಿ ಬ್ಯಾರೇಜ್ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆಗೆ ಸಚಿವ ಸಂಪುಟದ ಅನುಮೋದನೆ
ಬೆಂಗಳೂರು,ಅ,05: ಹಿಪ್ಪರಗಿ ಬ್ಯಾರೇಜ್ನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡುವ ಕಾಮಗಾರಿಯ 28.02ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ತಿಳಿಸಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಈ ಪ್ರಸ್ತಾವನೆಗೆ ಸಚಿವ ಸಂಪುಟ ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಹಿಪ್ಪರಗಿ ಬ್ಯಾರೇಜಿನಿಂದ ನೀರನ್ನು ಹೊರಬಿಟ್ಟಾಗ, ಬ್ಯಾರೇಜಿನ ಗೇಟ್ ಮೂಲಕ ರಭಸವಾಗಿ ಹರಿಯುವ ನೀರಿನಿಂದ…