Girl in a jacket

Author kendhooli_editor

ಸಿಎಸ್ ಕೆಗೆ ಚಾಂಪಿಯನ್ ಪಟ್ಟ: 4ನೇ‌ ಬಾರಿ ಟ್ರೋಫಿಗೆ ಮುತ್ತಿಟ್ಟ ಕೂಲ್ ಬಾಯ್ಸ್..

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಸನ್​ 14ರಲ್ಲಿ ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 27 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸಿಎಸ್​ಕೆ 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್​  ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ಡುಪ್ಲೆಸಿಸ್ (86) ಅವರ ಆಕರ್ಷಕ ಅರ್ಧಶತಕದ…

ಕೋವಿಡ್ ನಿಂದ ರಕ್ಷಣೆಗೆ: ದೇವಾಲಯಗಳಲ್ಲಿ ವಿಶೇಷ ಪೂಜೆಗಳಿಗೆ ಚಾಲನೆ

ಬೆಂಗಳೂರು,ಅ,15: ದುಷ್ಟ ಶಕ್ತಿಗಳ ಸಂಹಾರದ ಪ್ರತೀಕವಾಗಿ ಆಚರಿಸುವ ವಿಜಯದಶಮಿಯ ಸುಸಂಧರ್ಭದಲ್ಲಿ , ಕೋವಿಡ್ ಸೋಂಕಿನಿಂದ ನಮ್ಮ ನಾಡಿನ ಜನತೆಗೆ ಯಾವುದೇ ತೊಂದರೆಯಾಗದಂತೆ ಪ್ರಾರ್ಥಿಸಲು ರಾಜ್ಯದ ದೇವಾಲಯಗಳಲ್ಲಿ ವಿಜಯದಶಮಿಯ ಶುಭದಿನಂದು ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ರಾಜ್ಯದ ಪ್ರಮುಖ ಶ್ರದ್ಧಾಕೇಂದ್ರವಾದ ಬೆಳಗಾವಿ ಜಿಲ್ಲೆಯ ಶ್ರೀಕ್ಷೇತ್ರ ಸವದತ್ತಿ ಶ್ರೀ ಯಲ್ಲಮ್ಮದೇವಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ರಾಜ್ಯದ ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವರಾದ ಶ್ರೀಮತಿ ಶಶಿಕಲಾ ಅ. ಜೊಲ್ಲೆಯವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ನಾಡಿನಾದ್ಯಂತ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳಿಗೆ…

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ?

ಗಗನಕ್ಕೆರುತ್ತಿರುವ ಬಿಟ್ ಕಾಯಿನ್ ಗೆ ಭಾರತದಲ್ಲೇಕೆ ಭಾರೀ ಬೇಡಿಕೆ? Writing-ಪರಶಿವ ಧನಗೂರು ಈಗ ಜಗತ್ತಿನ ಎಲ್ಲೆಡೆ ಕ್ರಿಪ್ಟೋಕರೆನ್ಸಿ ಯದೇ ಟ್ರೆಂಡ್! ವಿಶ್ವ ದ ಅತ್ಯಂತ ದುಬಾರಿ ಡಿಜಿಟಲ್ ಮನಿ ಬಿಟ್ ಕಾಯಿನ್ ಮತ್ತು ಇಥೇರಿಯಂ ಮೇಲೆ ದಿನದಿಂದ ದಿನಕ್ಕೆ ಜನರ ಹೂಡಿಕೆ ತಾರಕ್ಕಕ್ಕೇರುತ್ತಿದೆ! ಕಳೆದ ಏಳು ದಿನಗಳಲ್ಲಿ ಶೇಕಡಾ 32% ಬೆಲೆ ಹೆಚ್ಚಳ ಕಂಡಿರುವ ಬಿಟ್ ಕಾಯಿನ್ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡಿಂಗ್ ನಲ್ಲಿದೆ. ಚುನಾಯಿತ ಸರ್ಕಾರಗಳಿಗೇ ಚುರುಕು ಮುಟ್ಟಿಸಿ ಸವಾಲು ಒಡ್ಡುತ್ತಿರುವ ಈ ಖಾಸಗಿ ಕಾಸು…

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .     

ಪ್ರಾಚೀನ ಶಿಲ್ಪಾವಶೇಷಗಳೂ, ನಂಬಿಕೆ-ಆಚರಣೆಗಳೂ. . .      ಪ್ರಾಚೀನ ಮಾನವನ ಜೀವನ ವಿಧಾನಗಳನ್ನು ತಿಳಿಸುವ ಮಹತ್ವದ ಕುರುಹುಗಳೆಂದರೆ ಅವಶೇಷಗಳು. ಅವುಗಳಲ್ಲಿ ಶಿಲಾಯುಧ, ಮಡಕೆ-ಕುಡಿಕೆ, ಶಿಲಾ ಸಮಾಧಿಗಳು; ಇತಿಹಾಸ ಕಾಲದ ಶಿಲಾಶಾಸನ, ಮೂರ್ತಿಶಿಲ್ಪ, ಉಬ್ಬುಶಿಲ್ಪ, ವೀರಗಲ್ಲು, ಮಾಸ್ತಿಗಲ್ಲು, ದೇವಾಲಯ, ಕೋಟೆ-ಕೊತ್ತಲ ಇತ್ಯಾದಿ ಸೇರಿವೆ. ಇವೆಲ್ಲವೂ ಪ್ರಾಚೀನರ ಚರಿತ್ರೆಯನ್ನು ಅರಿಯುವ ಮಹತ್ವದ ದಾಖಲೆಗಳೇ ಆಗಿವೆ. ಈ ಬಗೆಯ ಪ್ರಾಚೀನ ಅವಶೇಷಗಳ ಮೇಲೆ ಜನರು ಇಂದಿಗೂ ಇಟ್ಟುಕೊಂಡು ಆಚರಿಸುತ್ತಿರುವ ನಂಬಿಕೆ-ಆಚರಣೆಗಳು ವಿಶಿಷ್ಟವಾಗಿವೆ. ಈ ಬಗೆಯ ನಂಬಿಕೆಗಳಲ್ಲಿ ಅವಶೇಷಗಳ ರಕ್ಷಣೆಯ…

ಎಫ್.ಆರ್.ಎಲ್. ಉಪವಿಭಾಗ-೨ನ್ನು ಸ್ಥಳಾಂತರಗೊಳಿಸುವ ಆದೇಶ ರದ್ದತಿಗೆ ಒತ್ತಾಯ

ಆಲಮಟ್ಟಿ,ಅ,:13: ಇಲ್ಲಿನ ಕೃಷ್ಣಾಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಫ್.ಆರ್.ಎಲ್. ಉಪವಿಭಾಗ-೨ನ್ನು ಬೀಳಗಿಗೆ ಸ್ಥಳಾಂತರಗೊಳಿಸುವ ಆದೇಶವನ್ನು ರದ್ದುಗೊಳಿಸಿ ಇಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕ ಮತ್ತು ಕರ್ನಾಟಕ ರಕ್ಷಣಾವೇದಿಕೆ ಘಟಕದವತಿಯಿಂದ ಬುಧವಾರ ಪ್ರತ್ಯೇಕವಾಗಿ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು. ಬುಧವಾರ ಇಲ್ಲಿನ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ತಿರುಪತಿ ಬಂಡಿ ಅವರು ಕೃ.ಮೇ.ಯೋಜನೆ ವ್ಯಾಪ್ತಿಯ ಆಲಮಟ್ಟಿ…

ಬ್ರಾಹ್ಮಣ

ಸಿದ್ಧಸೂಕ್ತಿ :                         ಬ್ರಾಹ್ಮಣ. ಹಿಂದು ಧರ್ಮದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ನಾಲ್ಕು ವರ್ಣಗಳಲ್ಲಿ ಒಂದು. ಭೂಸುರ=ಭೂಲೋಕದ ದೇವರು. ಬ್ರಹ್ಮ ಪರಮಾತ್ಮನನ್ನು ತಿಳಿದವ. ಎಲ್ಲರಲ್ಲಿ ತನ್ನನ್ನು, ತನ್ನಲ್ಲಿ ಎಲ್ಲರನ್ನು ಕಂಡು ನಡೆವ ಸಮದರ್ಶೀ. ವೇದ ಧರ್ಮಶಾಸ್ತ್ರ ಪುರಾಣಾದಿ ಸದ್ಗ್ರಂಥಗಳ ಅಧ್ಯಯನ ಮಾಡುವವ, ಪ್ರವಚನ ನೀಡುವವ. ಯಜ್ಞ ಜಪ ತಪ ಪೂಜಾದಿ ಸತ್ಕರ್ಮನಿರತನು, ಧರ್ಮ ಅಧ್ಯಾತ್ಮ ಮಾರ್ಗದಲ್ಲಿ ನಡೆದು ನಡೆಸುವವನು…

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ:ಸಿಎಂ

ಬೆಂಗಳೂರು, ಅ,12: ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ವಿದ್ಯುತ್ ಉತ್ಪಾದನೆ, ಬೇಡಿಕೆ ಮತ್ತು ಕಲ್ಲಿದ್ದಲು ಪರಿಸ್ಥಿತಿ ಕುರಿತಂತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವರನ್ನು ದೆಹಲಿಯಲ್ಲಿ ಭೇಟಿಯಾದ ನಂತರ 2 ರೇಕುಗಳು ಹೆಚ್ಚುವರಿಯಾಗಿ ಬರುತ್ತಿವೆ.10 ರೇಕುಗಳು ಪ್ರತಿನಿತ್ಯ ಪೂರೈಕೆಯಾಗುತ್ತಿದ್ದು, 98863 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದರು. ಸಿಂಗರೇಣಿ ಗಣಿಗಳಿಂದ ನಮಗೆ ಎರಡು ರೇಕುಗಳು ದೊರಕಲಿದ್ದು,…

ಕೇಂದ್ರ ಸರ್ಕಾರದ ವೈಫಲ್ಯವೇ ಕಲ್ಲಿದ್ದಲು ಕೊರೆತೆಗೆ ಕಾರಣ: ಡಿ.ಕೆ.ಶಿ

ಬೆಂಗಳೂರು,ಅ,೧೨:ನನಗೆ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದೊಂದು ದಿನದ ಕಲ್ಲಿದ್ದಲು ಮಾತ್ರ ಇದೆ. ಇದು ರಾಜ್ಯ- ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಲ್ಲಿದ್ದಲು ಕೊರತೆ, ವಿದ್ಯುತ್ ಕಡಿತ ವಿಚಾರವಾಗಿ ನಾನು ಕೂಡ ವಿಶ್ಲೇಷಣೆ ಮಾಡುತ್ತಿದ್ದೇನೆ. ನಮ್ಮ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು…

ಐತಿಹಾಸಿಕ ವಿಭಿನ್ನ ಚಿತ್ರ ‘ಅಲ್ಲಮ ಪ್ರಭು’

12ನೇ ಶತಮಾನದ ಇತಿಹಾಸವುಳ್ಳ ಶ್ರೀ ಅಲ್ಲಮಪ್ರಭು ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯಗೊಂಡಿತು. ಡಾ.ಸಂಜಯ್ ಮತ್ತು ಅಂಕಿತಾ ಶಿವ-ಪಾರ್ವತಿಯಾಗಿ‌ ಅಭಿನಯಿಸಿದ ವಿಭಿನ್ನವಾದ ಹಾಡನ್ನು ಚಿತ್ರೀಕರಣದ ಕೊನೆಯ ಭಾಗವಾಗಿ ಬೆಂಗಳೂರಿನಲ್ಲಿ ಚಿತ್ರಿಸಲಾಯಿತು. ಚಿತ್ರವು ಕನ್ನಡ ಮಾತ್ರವಲ್ಲದೆ‌ ತೆಲುಗು, ಹಿಂದಿ, ಮರಾಠಿ, ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವುದಾಗಿ ನಿರ್ಮಾಪಕರಲ್ಲೊಬ್ಬರಾದ‌ ಮಾಧವಾನಂದ‌.ವೈ ತಿಳಿಸಿದ್ದಾರೆ. ಇವರಿಗೆ ಮಹಾವೀರಪ್ರಭು‌ ನಿರ್ಮಾಣದಲ್ಲಿ ಜೊತೆಗೂಡಿದ್ದಾರೆ. ಈ ಚಿತ್ರವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡುತ್ತಿದ್ದು, ಆರ್.ಗಿರಿ ಛಾಯಾಗ್ರಾಹಕರಾಗಿದ್ದಾರೆ. ಕುಮಾರ್ ಈಶ್ವರ್‌ ಸಂಗೀತ, ಬಿ.ಎಸ್.ಕೆಂಪರಾಜ್ ಸಂಕಲನ, ರಮೇಶ್ ಬಾಬು ವರ್ಣಾಲಂಕಾರ, ಬೆಳ್ಳಿ ಚುಕ್ಕಿ…

ಮುಜರಾಯಿ ಇಲಾಖೆಯ ಅರ್ಚಕರು ,ನೌಕರರಿಗೆ 6ನೇ ವೇತನ ಆಯೋಗ ಜಾರಿಗೆ ಕ್ರಮ:ಶಶಿಕಲಾ ಜೊಲ್ಲೆ

ಬೆಂಗಳೂರು,ಅ,12:ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ಸಚಿವರು ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದ್ದಾರೆ. ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ಮುಜರಾಯಿ ಹಜ್ ಮತ್ತು ವಕ್ಪ್ ‌ ಸಚಿವರಾದ ಶಶಿಕಲಾ ಜೊಲ್ಲೆಯವರು ತಿಳಿಸಿದ್ದಾರೆ. ಮಂಗಳವಾರ ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆಯಲ್ಲಿ ಜಾರಿಗೆ ತಂದ ಹೊಸ ಯೋಜನೆಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ…

ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಮಂಗಳೂರು, ಅ, ೧೨: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ, ಚಿಂತನ್, ಭೂಮಿ ಎಂಬ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು, ಬೆಂಗಳೂರಿನಿಂದ ಸ್ಲಿಪರ್ ಬಸ್‌ನಲ್ಲಿ ಮಂಗಳೂರು ತಲುಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡ ಆಟೋ ರಿಕ್ಷಾ ಚಾಲಕರು, ಮಕ್ಕಳನ್ನು ಕರೆತಂದು ಪಾಂಡೇಶ್ವರ ಪೊಲೀಸ್ ಠಾಣೆಗೆ ಬಿಟ್ಟಿದ್ದಾರೆ. “ಮೊದಲು ರೈಲು ಮೂಲಕ ಬೆಳಗಾವಿಗೆ ಹೋಗಿದ್ದೆವು. ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಮೆಜೆಸ್ಟಿಕ್‌ನಿಂದ ಮಂಗಳೂರಿಗೆ…

ದೇಶದಲ್ಲಿಯೇ ಪ್ರಥಮ ಬಾರಿಗೆ ಉದ್ಯೋಗ ನೀತಿ ಜಾರಿ: ಸಿಎಂ ಬೊಮ್ಮಾಯಿ

ಬೆಂಗಳೂರು, ಅ, 11 : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರೂಪಿಸಲಾಗುವುದು. ಈ ನೀತಿಯ ಅಡಿ ಉದ್ಯೋಗ ಸೃಜನೆ ಆಧಾರದ ಮೇಲೆ ಹೆಚ್ಚು ಪ್ರೋತ್ಸಾಹ ಸವಲತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಂಗಳೂರು ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಿರುವ ” ಉದ್ಯಮಿಯಾಗು – ಉದ್ಯೋಗ ನೀಡು” ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಉದ್ಯೋಗ ನೀತಿಯ ರಚನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಈ…

ಸ್ವಚ್ಚ,ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಶ್ರೀರಾಮುಲು ಕರೆ

ಚಿತ್ರದುರ್ಗ. ಅ. 11: ಮೊಳಕಾಲ್ಮೂರಿನಲ್ಲಿಂದು ಕಸಸಂಗ್ರಹಣಾ ವಾಹನಗಳಿಗೆ ಸ್ವಯಂ ವಾಹನ ಚಲಾಯಿಸುವ ಮೂಲಕ ಚಾಲನೆ ನೀಡಿದ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ  ಬಿ. ಶ್ರೀರಾಮುಲು, ಸಾರ್ವಜನಿಕರು ಸ್ಚಚ್ಚತೆಯನ್ನು ಮೈಗೂಡಿಸಿಕೊಂಡು ಸ್ವಚ್ಚ, ಸುಂದರ ಹಾಗೂ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿ, ಜಾಗೃತಿ ಮೂಡಿಸಿದರು. ಮೊಳಕಾಲ್ಮೂರಿನಲ್ಲಿಂದು ಪಟ್ಟಣ ಪಂಚಾಯಿತಿ ಯು ಆಯೋಜಿಸಿದ್ದ ಕಸಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಚಚ್ಚ ಭಾರತ ಸ್ವಾಥ್ಯ ಭಾರತವಾಗಿದೆ. ಮಹಾತ್ಮ ಗಾಂಧಿಜಿಯವರ ಆಶಯವೂ ಇದಾಗಿತ್ತು.…

ನಶ್ವರ ಬದುಕಿಗೆ ಅತಿ ಚಿಂತೆ ಬೇಡ

ನಶ್ವರ ಬದುಕಿಗೆ ಅತಿ ಚಿಂತೆ ಬೇಡ. ಗುರುವಿಗೆ ಶರಣಾಗಿ ಆತ್ಮತತ್ತ್ವವನ್ನು ತಿಳಿಯುವುದು ಬಾಲ್ಯದಲ್ಲಿಯೇ ಸೂಕ್ತ ಎಂಬ ಸಿದ್ಧನ ಮಾತನ್ನು ಮಿತ್ರರಾದ ಸೋಮ ಭೀಮರು ಒಪ್ಪಿದರು.ಸಿದ್ಧನೊಂದಿಗೆ ಅವರೂ ಗುರು ಶೋಧನೆಗೆ ಹೆಜ್ಜೆ ಹಾಕಿದರು. ಮೂವರೂ ಚಳಕಾಪುರದಿಂದ ನಡೆಯುತ್ತಾ ಅಂದಾಜು ಒಂದು ಹರದಾರಿ (೫ ಕಿ. ಮೀ) ದೂರದ ಗ್ರಾಮ(ಸದಾಶಿವ ಪೇಟೆ) ವನ್ನು ತಲುಪಿದರು.ಸೋಮ ಭೀವರು ಹಸಿದು ಬಳಲಿದ್ದರು.ಊಟಕ್ಕಾಗಿ ಅಂಗಲಾಚಿದರು.ಆಗ ಸಿದ್ಧನು ಅವರಿಗೆ ಹೀಗೆ ಹೇಳಿದನು: ದೇಹದ ಚಿಂತೆಯನ್ನು ಮಾಡಬೇಡಿರಿ. ಹೃದಯದಲ್ಲಿ ಅಖಂಡವಾಗಿ ಪರಮಾತ್ಮನ ಧ್ಯಾನವನ್ನು ಮಾಡಿರಿ. ಆ ಸುಖಾಮೃತದ…

ದುಃಖ

ಸಿದ್ಧಸೂಕ್ತಿ :                               ದುಃಖ. ದುಃಖ ಯಾರಿಗೂ ಬೇಡ. ಆದರೆ ತಪ್ಪದು. ಸುಖಕ್ಕೆ ಕಳೆ ಕಟ್ಟುವುದೇ ದುಃಖ! ಅಜ್ಞಾನ ಅನಾಚಾರ ಅಶುಚಿ ಸುಳ್ಳು ಕಳ್ಳತನ ಲಂಚ ವಂಚನೆ ದುರಾಶೆ ದ್ರೋಹ ದೌರ್ಜನ್ಯ ದೌರ್ಬಲ್ಯ ಆಲಸ್ಯ ಮಾಲಿನ್ಯ ತಪ್ಪು ತಿಳುವಳಿಕೆ ಸ್ವಾರ್ಥ ಕ್ರೋಧ ಮದ ಮತ್ಸರಗಳು ದುಃಖದ ಮೂಲ. ತಿಳಿಯದೇ ಸಹಿ ಮಾಡಿ, ಹಣ ದ್ವಿಗುಣ ತ್ರಿಗುಣದ ದುರಾಶೆಗೊಳಗಾಗಿ…

ಸಿಂದಗಿ ಉಪ ಚುನಾವಣೆ: ಸಿದ್ದರಾಮಯ್ಯ ಹೇಳಿಕೆಗೆ ಹೆಚ್‌ಡಿಕೆ ತಿರುಗೇಟು

ಬೆಂಗಳೂರು,ಅ,10: ಬುದ್ಧಿವಂತ ಮತದಾರರು ಜೆಡಿಎಸ್‌ ಪಕ್ಷಕ್ಕೆ ಮತ ಹಾಕಲ್ಲ, ಆ ಪಕ್ಷ ಸಿಂದಗಿಯಲ್ಲಿ ಮೂರನೇ ಸ್ಥಾನಕ್ಕೆ ಹೋಗುತ್ತದೆ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ಅವರು ದಿವಂಗತ ಎಂಸಿ ಮನಗೂಳಿ ಅವರ ಅನುಕಂಪದ ಅಲೆಯಲ್ಲಿ ಅವರು ತೇಲುತ್ತಿದ್ದಾರೆಂದು ಹೇಳಿದ್ದಾರೆ. “ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಪಕ್ಷವನ್ನು ಟೀಕೆ ಮಾಡದಿದ್ದರೆ ನಿದ್ದೆ ಬರಲ್ಲ ಅಂತ ಕಾಣತ್ತೆ. ಸಿಂದಗಿ ಕ್ಷೇತ್ರದಲ್ಲಿ ಅವರ ಪಕ್ಷ…

ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ :ಸಿಎಂ ಬೊಮ್ಮಾಯಿ*

ಬೆಂಗಳೂರು, ಅ, 10 : ರಾಜ್ಯವನ್ನು ಆರೋಗ್ಯ ಕರ್ನಾಟಕವನ್ನಾಗಿಸಲು ಸಂಕಲ್ಪ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಅಂಡ್ ಆರ್ಗನ್ ಟ್ರಾನ್ಸ್ ಪ್ಲಾಂಟ್ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಎಲ್ ಮಂಡವೀಯ ಅವರೊಂದಿಗೆ ಭಾಗವಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಬೆಂಗಳೂರು ನಗರ ಸೇರಿದಂತೆ ಇಡೀ ಕರ್ನಾಟಕದ ಮೂಲೆ…

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿಯ ದಿಟ್ಟ ಹೋರಾಟದ ನೆನಪು!

ಸ್ವಾತಂತ್ರ್ಯ ಚಳವಳಿ ಮತ್ತು ಹನುಮಕ್ಕಜ್ಜಿ ಯ ದಿಟ್ಟ ಹೋರಾಟದ ನೆನಪು! “ತಮ್ಮಾ, ನಿನ್ನ ಎಮ್ಮೆ ಹೊಲಕ್ಕೆ ನುಗ್ಗಿದೆ, ಜಲ್ದಿ ಹೋಗಿ ಹೊರಕ್ಕೆ ಓಡಿಸು, ಮಲ್ಲಣ್ಣ ನೋಡಿದರೆ ಅವಾಂತರವಾದೀತು” ಎನ್ನುವ ಹನುಮಕ್ಕಜ್ಜಿಯ ಕೂಗು ಆಕೆಯೇ ಮಾತುಗಳಲ್ಲಿ ಸೃಷ್ಟಿಸಿದ್ದ ಮೈಸೂರು ದಸರಾದ ಮಾಯದ ಮತ್ತು ಮಾದಕಲೋಕದ ಗುಂಗಿನಿಂದ ನನ್ನನ್ನು ಹೊರತಂದಿತ್ತು. ನೆಲದ ಮೇಲಿದ್ದ ಬಾರುಕೋಲನ್ನು ಎತ್ತಿಕೊಂಡವನು ಓಡಿ ಹೋಗಿ ಬಳ್ಳಾರಿ ರುದ್ರಣ್ಣನವರ ಹೊಲ ಹೊಕ್ಕು ಬೆಳೆದು ನಿಂತಿದ್ದ ಎಳೆಯ ಜೋಳದ ಪೈರುಗಳಿಗೆ ಬಾಯಿ ಹಾಕಿದ್ದ ನನ್ನ ಎಮ್ಮೆಯ ಮೈಮೇಲೆ ಜೋರಾಗಿ…

ಸುಖ

ಸಿದ್ಧಸೂಕ್ತಿ : ಸುಖ. ಸುಖ ಎಲ್ಲರಿಗೂ ಬೇಕು. ಅದಕ್ಕಾಗಿ ನಡೆದಿದೆ ನಿರಂತರ ಪ್ರಯಾಸ. ಯಾರಿಗೆ ಎಲ್ಲಿ ಎಷ್ಟು ಸುಖ ಸಿಕ್ಕಿದೆ? ಅವರವರೇ ಬಲ್ಲರು! ಪಂಚೇಂದ್ರಿಯಸುಖ, ಮನದಾಳದ ಸುಖ, ಸುಖಗಳನಂತ! ಕೆಲರಿಗೆ ಭಕ್ತಿ ಭಜನೆ ಸಂಗೀತ ಹಾಡು ಕಲೆ ಸಾಹಿತ್ಯ ತ್ಯಾಗ ಸೇವೆಯಲ್ಲಿ ಸುಖ! ಬಹುತೇಕರಿಗೆ ಭುಕ್ತಿ ಭೋಗದಲ್ಲಿ ಸುಖ! ಚಟದಾಸರಿಗೆ ತಿಂದು ಕುಡಿದು ಸೇದಿ ತೇಗಿದರೆ ಸುಖ, ಭಿನ್ನರಿಗೆ ಅದಿಲ್ಲದಿರೆ ಸುಖ! ಲೌಕಿಕಗೆ ಜನಮನ್ನಣೆ ಸಂಭ್ರಮ ಸಂಪತ್ತಿನ ಸುಖ, ತ್ಯಾಗಿ ವಿರಕ್ತ ಸಂನ್ಯಾಸಿಗೆ ಲೋಕ…

ಪರಿಶಿಷ್ಟ ಜಾತಿ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಬದ್ಧ; ಶ್ರೀರಾಮುಲು

ಯಾದಗಿರಿ.ಅ.9: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ , ಆರ್ಥಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ  ಬಿ. ಶ್ರೀರಾಮುಲು ಅವರು ತಿಳಿಸಿದರು. ಯಾದಗಿರಿಯಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಮತ್ತು ಚೆಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ದವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ…

1 44 45 46 47 48 102
Girl in a jacket