Girl in a jacket

Author kendhooli_editor

ಭಾರತ್ ಬದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ

ಬೆಂಗಳೂರು,ಸೆ,೨೭: ಕೇಂದ್ರಸರ್ಕಾರದ ಮೂರು ಕೃಷಿ ಕಾಯ್ದೆಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ ಬಂದ್‌ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಿಗ್ಗೆಯೇ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಆದರೆ ಬೆಂಗಳೂರಿನಲ್ಲಿ ಎಂದಿನಂತೆ ಕೆ.ಆರ್ ಮಾರುಕಟ್ಟೆಯಲ್ಲಿ ಇತ್ತು ಮಾರುಕಟ್ಟೆಯ ವ್ಯವಹಾರದಲ್ಲಿಯಾವುದೇ ಏರು ಪೇರು ಆಗಲಿಲ್ಲ ಅಗತ್ಯ ವಸ್ತುಗಳ ಖರೀದಿ ಜೋರಾಗಿಯೇ ನಡೆದಿತ್ತು. ಬಿಎಂಟಿಸಿ ಚಾಲಕರು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿದ್ದರಿಂದ ಬಸ್‌ಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ…

ತೀರ್ಥದ ಪ್ರಯೋಜನ

‌‌‌                   ಸಿದ್ಧಸೂಕ್ತಿ :                        ತೀರ್ಥದ ಪ್ರಯೋಜನ ತೀರ್ಥ =ಪವಿತ್ರ, ಪುಣ್ಯಕ್ಷೇತ್ರ, ನದೀ ಕೆರೆ ಕಲ್ಯಾಣಿ, ದೇವರ ತೀರ್ಥ, ಪಾದೋದಕ ಇತ್ಯಾದಿ.ತಾಪ ದುಃಖ ಕಷ್ಟಗಳನ್ನು ದಾಟಿಸುವುದು ತೀರ್ಥ. ಸಂಸಾರ ಸಾಗರ ಮುಳುಗಿಸುವುದು. ಪುಣ್ಯ ಕ್ಷೇತ್ರಗಳ ಕೆರೆ ಕಲ್ಯಾಣಿಗಳ ಸ್ನಾನ ದೇಹ ಕೊಳೆ ತೊಳೆಯುವುದು, ಮನ ಮಾಲಿನ್ಯ ತೆಗೆದು ಭಾವ ಶುದ್ಧಗೊಳಿಪುವುದು. ಕಷ್ಟ…

ಹರ್ಷಲ್ ಹ್ಯಾಟ್ರಿಕ್ ಕಮಾಲ್, ರೋಹಿತ್ ಪಡೆಗೆ ಸೋಲು..!

Reported By: H.D.Savita ಮುಂಬೈ ಇಂಡಿಯನ್ಸ್ ವಿರುದ್ಧ 17 ರನ್ ನೀಡಿ ನಾಲ್ಕು ವಿಕೆಟ್ ಪಡೆದ ಹರ್ಷಲ್ ಪಟೇಲ್ ಆರ್ಸಿಬಿಗೆ ಗೆಲುವಿಗೆ ಕಾರಣರಾದರು. ಹರ್ಷಲ್ ಮಾರಕ ಬೌಲಿಂಗ್ ಗೆ ತತ್ತರಿಸಿದ ರೋಹಿತ್ ಶರ್ಮಾ ಪಡೆ ಕೇವಲ 111 ರನ್ ಗಳಿಗೆ ಆಲ್​ಔಟ್ ಆಯ್ತು. ಅಲ್ದೇ ಮೊದಲು ಹ್ಯಾಟ್ರಿಕ್ ಸಾಧನೆ ಮಾಡಿದರು. ನಂತರ ಅವರ ಕೊನೆಯ ಓವರ್‌ನಲ್ಲಿ ಆಡಮ್ ಮಿಲ್ನೆ ಅವರನ್ನು ಔಟ್ ಮಾಡುವ ಮೂಲಕ ನಾಲ್ಕನೇ ವಿಕೆಟ್ ಪಡೆದರು. ಹರ್ಷಲ್ ಅವರ ಅದ್ಭುತ ಆಟದಿಂದಾಗಿ, ಮುಂಬೈ ತಂಡವು…

ಸೂರ್ಯ ಎಲಿಗೆನ್ಸ್ ಬಹು ಮಹಡಿ ಕಟ್ಟಡ ಲೋಕಾರ್ಪಣೆ

ಬೆಂಗಳೂರು ಸೆ. 26: ಪ್ರಧಾನಮಂತ್ರಿಗಳ ಅವಾಸ್ ಯೋಜನೆಯಡಿ ಎಲ್ಲರಿಗೂ ಸೂರು ಕಲ್ಪಿಸುವಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲು ಸ್ಥಾನದಲ್ಲಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ವಿ . ಸೋಮಣ್ಣ ಹೇಳಿದರು. ಕರ್ನಾಟಕ ಗೃಹ ಮಂಡಳಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಚಂದಪುರ ಸೂರ್ಯನಗರದಲ್ಲಿ 1ನೇ ಹಂತದ ನೂತನವಾಗಿ ನಿರ್ಮಿಸಿಲಾಗಿರುವ ಸೂರ್ಯ ಎಲಿಗೆನ್ಸ್ ಬಹುಮಹಡಿ ವಸತಿ ಸಮುಚ್ಚಯವನ್ನು ಲೋಕಾರ್ಪಣೆ ಮಾಡಿ ಹತ್ತು ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು‌.…

ಸಿದ್ದರಾಮಯ್ಯ ರ ‘ಅಕ್ಕಿ ರಾಜಕೀಯ’ಕ್ಕೆ ತಿರುಗೇಟು ಕೊಟ್ಟ ಕುಮಾರಸ್ವಾಮಿ

ಬೆಂಗಳೂರು,ಸೆ,26: ಬಡವರಿಗೆ ನೀಡಲಾಗುತ್ತಿದ್ದ ಅಕ್ಕಿಯ ಪ್ರಮಾಣವನ್ನು 7 ಕೆಜಿಯಿಂದ 5 ಕೆಜಿಗೆ ಕಡಿತ ಮಾಡಿದ್ದ ಬಗ್ಗೆ ತಮ್ಮ ವಿರುದ್ಧ ಸುಳ್ಳಿನ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ಡಿಕೆ ಅವರು; “ಸಿದ್ದರಾಮಯ್ಯ ಅವರು ಸತ್ಯವನ್ನು ಮರೆಮಾಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ಅವರು ಸಿದ್ದರಾಮಯ್ಯ ಅವರಿಗೆ ನೀಡಿರುವ…

ಬಿಜೆಪಿ ಸುಳ್ಳಿನ ಕಾರ್ಖಾನೆ;ಸಿದ್ದರಾಮಯ್ಯ ಲೇವಡಿ

ಬೆಂಗಳೂರು,ಸೆ,26: ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಸುಳ್ಳಿನ ಕಂತೆಗಳನ್ನು ಅಲ್ಲಿ ತಯಾರು ಮಾಡಿ ಮಾರ್ಕೆಂಟಿಂಗ್ ಮಾಡುವವರು ಆ ಪಕ್ಷದ ನಾಯಕರು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ದಿವಂಗತ ಅರ್. ಗುಂಡೂರಾವ್ ಅವರ ಜನ್ಮದಿನದ ಅಂಗವಾಗಿ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಆಟದ ಮೈದಾನದಲ್ಲಿ ಇಂದು ಆಯೋಜಿಸಿದ್ದ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿದ್ದರಾಮಯ್ಯ ಅವರು ಮಾತನಾಡಿದರು. ಬಡವರ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬ ಕಾರಣಕ್ಕೆ…

ಡಿಸೆಂಬರ್ ವೇಳೆಗೆ ಬೆಳಗಾವಿಗೆ ಸರ್ಕಾರಿ ಕಚೇರಿಗಳ ಸ್ಥಳಾಂತರ;ಬಸವರಾಜ ಬೊಮ್ಮಾಯಿ

ಬೆಳಗಾವಿ, ಸೆ, 26: ಅಕ್ಟೋಬರ್ 3 ರಿಂದ ಸಕ್ಕರೆ ನಿರ್ದೇಶನಾಲಯ ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಲಿದೆ. ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲಾಗುವುದು. ಆ ವೇಳೆಗೆ ಸಾಧ್ಯವಿರುವಷ್ಟು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.2019- 20 ನೇ ಸಾಲಿನಲಿ ಬೆಳಗಾವಿಯಲ್ಲಿ ಅತ್ಯಧಿಕ ಮಳೆಯಾಗಿ ಮನೆಗಳು ಹಾಗೂ ಬೆಳೆಗಳು ಹಾನಿಗೊಳಗಾಗಿವೆ. ಆ ಸಂದರ್ಭದಲ್ಲಿ ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಹಲವು ಸೌಲಭ್ಯಗಳನ್ನು ಪ್ರಕಟಿಸಿದ್ದರು. ಒಟ್ಟು 44205…

ಪ್ರತಿ ನಗರಪಾಲಿಕೆಯಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆ:ಸಿಎಂ ಬೊಮ್ಮಾಯಿ

ಬೆಳಗಾವಿ, ಸೆ, 26: ಬೆಳಗಾವಿಯ ಇ- ಗ್ರಂಥಾಲಯ ಕಾರ್ಯವೈಖರಿಯನ್ನು ಗಮನಿಸಿ, ಅದು ಯಶಸ್ವಿಯಾದಲ್ಲಿ, ಇದೇ ಮಾದರಿಯಲ್ಲಿ ಪ್ರತಿಯೊಂದು ಮಹಾನಗರ ಪಾಲಿಕೆಯಲ್ಲಿ ಇ- ಗ್ರಂಥಾಲಯ ತೆರೆಯಲು ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯಲ್ಲಿ ದೇಶಭಕ್ತ ರವೀಂದ್ರ ಕೌಶಿಕ್ ಅವರ ಹೆಸರಿನಲ್ಲಿ ಇ- ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಇಂದು ಮಾತನಾಡುತ್ತಿದ್ದರು. ಡಿಜಿಟಲ್ ಗ್ರಂಥಾಲಯ ಓದುಗರಿಗೆ, ಬರಹಗಾರರಿಗೆ, ಜ್ಞಾನಪಡೆಯಲು ಬಯಸುವವರಿಗೆ ಜ್ಞಾನದ ರಹದಾರಿಯನ್ನು ತೆರೆದಿದೆ. ಇದರಿಂದ ಡಿಜಿಟಲ್ ಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗುತ್ತದೆ ಎಂದರು. ಜ್ಞಾನ…

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ

ಗಣೇಶ ಹಬ್ಬ ಮತ್ತು ಸಾಂಸ್ಕೃತಿಕ ಉತ್ಸವದ ವೈಶಿಷ್ಟ್ಯ ಐದು ದಿನಗಳ ಕಾಲ ವಿಜೃಂಭಿಸಿದ ಪ್ರಥಮ ಸಾರ್ವಜನಿಕ ಗಣೇಶೋತ್ಸವದ ಯಶಸ್ವಿ ಮುಕ್ತಾಯದ ನಂತರ ಗುರುತ್ರ್ಯಯರೂ ಸೇರಿ ಗಣೇಶೋತ್ಸವ ಮಂಡಳಿಯ ಸಕಲ ಪದಾಧಿಕಾರಿಗಳಲ್ಲಿ ಹೊಸ ಚೈತನ್ಯವೊಂದು ಗರಿಗೆದರಿತ್ತು. ಅಂದುಕೊಂಡಕ್ಕಿಂತಲೂ ಹೆಚ್ಚಿನಮಟ್ಟದಲ್ಲಿ ಸಿಕ್ಕ ಯಶಸ್ಸು ಮುಂಬರುವ ವರ್ಷಗಳಲ್ಲಿ ನಡೆಯುವ ಉತ್ಸವಗಳ ಸಾಂಸ್ಕೃತಿಕ ಸಾಧ್ಯತೆಗಳನ್ನು ಬಹಳ ದೊಡ್ಡ ರೀತಿಯಲ್ಲಿ ವಿಸ್ತರಿಸಿತ್ತು. ಬರುವ ವರ್ಷದ ಉತ್ಸವದ ತಯಾರಿಯನ್ನು ಸರಿಸುಮಾರು ಎರಡು ತಿಂಗಳುಗಳ ಮೊದಲೇ ಶುರುಮಾಡಿಕೊಂಡಿದ್ದ ಸಮಿತಿ ಆ ವರ್ಷದ ಉತ್ಸವದ ಯಶಸ್ಸಿಗಾಗಿ ಬಹಳಷ್ಟು ಶ್ರಮಪಟ್ಟಿತ್ತು.…

ಬಾಯಿ ಬಿಟ್ಟರೆ ಬಣ್ಣಗೇಡಿ

ಸಿದ್ಧಸೂಕ್ತಿ :                  ಬಾಯಿ ಬಿಟ್ಟರೆ ಬಣ್ಣಗೇಡಿ. ಮಾತನಾಡಿದರೆ ಮರ್ಯಾದೆ ಹೋಯಿತು. ಮಾತು ಮಾಣಿಕ್ಯ-ಜ್ಯೋತಿರ್ಲಿಂಗ-ಬೆಳಕು.ಮಾನವನಿಗೆ ದೇವ ನೀಡಿದ ವರದಾನ. ಮಾತಿಲ್ಲದಿರೆ ಜಗ ಕತ್ತಲೆ. ಮಾತು ಸಂಬಂಧ ಬೆಳೆಸುವುದು, ಹಣ ಗಳಿಸುವುದು. “ನಾನಿರುವೆ” ಎಂಬೊಂದಭಯ ಮಾತು ಜೀವ ಉಳಿಸುವುದು! ಮಾತು ಅರಿತಾಡಬೇಕು. ಮಾತಿನ ಮರ್ಮವರಿಯದೇ ಎಲುಬಿಲ್ಲದ ನಾಲಿಗೆ ವಿರಾಮ-ಸಂಬಂಧವಿರದ ಬಿಟ್ಟಿ ಮಾತನು ಸುರಿಸುವುದು. ಕೆಲವರದು ಬಾಯಿ ತೆರೆದರೆ ಏಕವಚನ, ಅಶ್ಲೀಲ ಮಾತು, ಚುಚ್ಚಿ ಸಾಯಿಸುವ ಬಿರುನುಡಿ! ಅಂಥವರೆದುರು…

ಅಫ್ಘಾನಿಸ್ತಾನದ ಭಯೋತ್ಪಾದನೆ ವಿರುದ್ಧ ಮೋದಿ ವಾಗ್ಧಾಳಿ

ನ್ಯೂಯಾರ್ಕ್,ಸೆ,26,ಅಫ್ಘಾನಿಸ್ತಾನದ ಭೂಮಿಯನ್ನು ಭಯೋತ್ಪಾದನೆಗೆ ಬಳಸುವುದನ್ನು ಖಂಡಿಸಿರುವ ಮೋದಿ ಬೇರೆ ದೇಶಗಳು ತಮ್ಮ ರಾಜಕೀಯ ಷಡ್ಯಂತ್ರಗಳಿಗೆ ಅಫ್ಘಾನಿಸ್ತಾನವನ್ನು ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಈ ಮೂಲಕ ಪಾಕಿಸ್ತಾನ ಹಾಗೂ ಚೀನಾದ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಅಫ್ಘಾನ್ ನೆಲ ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವಸಂಸ್ಥೆಯ ಸಭೆಯ 76 ನೇ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದು ಉಗ್ರವಾದವನ್ನು ಬೆಂಬಲಿಸುತ್ತಿರುವ ಪಾಕಿಸ್ತಾನಕ್ಕೆ ತಿವಿದಿದ್ದಾರೆ. ಕೋವಿಡ್-19 ಗೆ ಬಲಿಯಾದವರಿಗೆ ಗೌರವ ಸಲ್ಲಿಸಿ ಭಾಷಣ ಪ್ರಾರಂಭಿಸಿದ ಮೋದಿ, ಕೋವಿಡ್-19, ಭಯೋತ್ಪಾದನೆ, ಭಾರತದ ಪ್ರಜಾಪ್ರಭುತ್ವ, ಆರ್ಥಿಕತೆ, ಅಫ್ಘಾನಿಸ್ತಾನ…

ತಮ್ಮ ಹಕ್ಕುಗಳುಗೆ ಜಾತಿ ಸಮಾವೇಶ ನಡೆಸುವುದು ತಪ್ಪಲ್ಲ;ಸಿದ್ದು

ಬೆಂಗಳೂರು,ಸೆ,25 : ತಮ್ಮ ಹಕ್ಕುಗಳಿಗಾಗಿ ಹಿಂದುಳಿದ ವರ್ಗದವರು ಜಾತಿ ಸಮಾವೇಶಗಳನ್ನು ನಡೆಸುವುದು ಅಪರಾಧವಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಡಿವಾಳರ ಸಂಘ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಕರೋನದಿಂದ ಮೃತರಾದವರ ಕುಟುಂಬದವರಿಗೆ ಪರಿಹಾರ ಹಾಗೂ ದಿನಸಿ ಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದಿದೆ. ನಾನು ಸಿಎಂ ಆಗಿದ್ದಾಗ ಈ ಸಮುದಾಯಕ್ಕೆ ಪ್ರತ್ಯೇಕ ಅನುದಾನ ನೀಡಿದ್ದೆ. ಹಿಂದುಳಿದವರು ಜಾತಿ ಹೆಸರಿನಲ್ಲಿ ಸಮ್ಮೇಳನ ಮಾಡಿದರೆ…

ಬತ್ತಬಾರದು ಭಾವಗಳ ಒರತೆ

ವಿ.ಮಂಜುಳ ಪಟೇಲ್ ಅವರು ಕವನ ಲೇಖನಗಳನ್ನು ಬರೆದಿದ್ದಾರೆ,ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಶೀಘ್ರ ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಗೊಳ್ಳಲಿದೆ.ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅವರು ಟಿಕ್ ಟಾಕ್ ನಲ್ಲಿ ಹೆಚ್ಚು ಕಾಣಸಿಕೊಳ್ಲಕುತ್ತಿದ್ದಾರೆ…ಇವರು ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಿದ್ದಾರೆ. ವಿ. ಮಂಜುಳಾ ಪಟೇಲ್ ಬತ್ತಬಾರದು ಭಾವಗಳ ಒರತೆ ವಾಸ್ತವದ ಹಂಗನ್ನು ಮೀರಿ ಆ ನಿನ್ನ ನೆನಪುಗಳಲ್ಲಿ ಮೆದ್ದಾಗಲೆಲ್ಲ ಇಳಿದು ಬಿಡುವುದು ಮನಸ್ಸು ನಿನ್ನ ಪ್ರೀತಿಯ ಭಿಕ್ಷಾಟನೆಗೆ ಮಮಕಾರದಿ ಕರೆದು ಬಿಡು ನಿನ್ನ ಒಲವಿಗೆ ಒಮ್ಮೆಯಾದರೂ ಒಲವ ರಾಗ ಹೊಸತೇನಲ್ಲ…

ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು

ಪ್ರಕಾಶ ಕಡಿಮೆ ಅವರು ಮೂಲ ಉತ್ತರ ಕನ್ನಡದ ಗೋಕರ್ಣ ಸಮೀಪದ ಕಡಮೆಯವರು, ಅವರು ಗಾಣದೆತ್ತು ಮತ್ತು ತೆಂಗಿನ ಮರ,ಆ ಹುಡುಗಿ,ಅಮ್ಮನಿಗೊಂದು ಕವಿತೆ ಎಂಬ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ .ಡಾ.ಡಿ.ಎಸ್.ಕರ್ಕಿ ಪ್ರಶಸ್ತಿಯೂ ಅವರಿಗೆ ಸಂದಿದೆ, ಅವರು ಸದ್ಯ ಕಳೆದ ಇಪ್ಪತೈದು ವರುಷಗಳಿಂದ ಹುಬ್ಬಳಿಯಲ್ಲಿ ವಾಸವಾಗಿದ್ದಾರೆ. ಶ್ರೀಯುತರು ವಿಶಾಲ ಆರಾಧ್ಯ ಅವರ ‘ಸೊರಹೊನ್ನೆ ಕವನ ಸಂಕಲನ ಕುರಿತು ವಿಮರ್ಶೆ ಬರೆದಿದ್ದಾರೆ ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು ಮೂಲತಃ ಬೆಂಗಳೂರು ಜಿಲ್ಲೆಯ ರಾಜಾಪುರದವರಾದ ವಿಶಾಲಾ ಆರಾಧ್ಯರವರು ಶಿಕ್ಷಕಿಯಾಗಿ…

ಶಾಸಕರಲ್ಲಿ ಸಭ್ಯತೆ ಕಡಿಮಯಾಗುತ್ತಿದೆ-ಓ ಬಿರ್ಲಾ ಆತಂಕ

ಬೆಂಗಳೂರು,sಸೆ,೨೫: ಪ್ರಜಾಪ್ರಭುತ್ವ ಬಲ ಪಡಿಸಲು ಜನಪ್ರತಿನಿಧಿಗಳ ಪಾತ್ರ ಬಹಳ ಮುಖ್ಯವಾಗಿದೆ ಆದರೆ ಇತ್ತೀಚೆಗೆ ಅವರಲ್ಲಿ ಶಿಸ್ತು ಸಭ್ಯತೆ ಕಡಿಮೆಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಲೋಕಸಭಾಧ್ಯಕ್ಷ ಓ ಬಿರ್ಲಾ ಅಭಿಪ್ರಾಯ ಪಟ್ಟರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕೋವಿಡ್ ಕಾರಣ ಅಧಿವೇಶನ ನಡೆಸುವುದು ಕಷ್ಟಕರವಾಗಿತ್ತು. ಆದರೂ, ನಾವು ಸಂಸತ್ ಕಲಾಪವನ್ನು ಸಮರ್ಪಕವಾಗಿ ನಡೆಸಿದ್ದೇವೆ. ಸದನದಲ್ಲಿ ಚರ್ಚೆ, ಜೋರು ಧ್ವನಿ ಎಲ್ಲವೂ ಇರಬೇಕು. ಅದು ಇದ್ದಾಗಲೇ ಉತ್ತಮ ನಿರ್ಣಯ ಸಾಧ್ಯ. ಆದರೆ, ಸದಸ್ಯರು ಶಿಸ್ತು ಮೀರಬಾರದು…

1.2 ಶತಕೋಟಿ ಲಸಿಕೆ ನೀಡಲು ಕ್ವಾಡ್ ರಾಷ್ಟ್ರಗಳು ಘೋಷಣೆ

ವಾಷಿಂಗ್ಟನ್ ,ಸೆ,25: ಜಾಗತಿಕ ಮಟ್ಟದಲ್ಲಿ ಸಮಸ್ಯೆಯಾಗಿ ಮುಂದುವರಿದಿದ್ದು ಈ ಸೋಂಕಿನಿಂದ ಸಾಕಷ್ಟು ಕಷ್ಟ-ನಷ್ಟ, ನೋವು ಸಂಭವಿಸಿದೆ. ಹವಾಮಾನ ಬಿಕ್ಕಟ್ಟು ಮುಂದುವರಿದಿದೆ. ಸ್ಥಳೀಯ ಭದ್ರತೆ ಮತ್ತಷ್ಟು ಸಂಕೀರ್ಣವಾಗುತ್ತಿದೆ. ಈ ಸಮಯ ಎಲ್ಲಾ ದೇಶಗಳಿಗೆ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಪರೀಕ್ಷೆಯ ಸಮಯವಾಗಿದೆ, ಆದರೆ ನಮ್ಮ ಸಹಕಾರವು ನಿರಂತರವಾಗಿದೆ ಎಂದು ಕ್ವಾಡ್ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ನಿನ್ನೆ ವಾಷಿಂಗ್ಟನ್ ನಲ್ಲಿ ಭಾರತ, ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳ ಕ್ವಾಡ್ ಶೃಂಗಸಭೆ ನಡೆದಿದ್ದು ಸಭೆಯ ಬಳಿಕ ನಾಲ್ಕೂ ದೇಶಗಳು…

ಸೋಮವಾರ ಬಂದ್ ಗೆ ಯಾವೆಲ್ಲಾ ಸಂಘಟನೆಗಳು ಬೆಂಬಲಿಸಿವೆ?

ಬೆಂಗಳೂರು,ಸೆ,25: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ಖಂಡಿಸಿ ಮತ್ತೆ ರೈತರು ಮತ್ತೇ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. 27 ನೇ ಸೋಮವಾರ ಭಾರತ್ ಬಂದ್ ಗೆ ಕರೆಕರೆನೀಡಿದ್ದು ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತೆಯಾಗಲಿದೆ.ಈ ಬಂದ್ ಗೆಕನ್ನಡ  ಸಂಘಟನೆ,ದಲಿತ ಸಂಘಟನೆ,ಎಪಿಎಂಸಿ ಬೆಂಬಲ ವ್ಯಕ್ತಪಡಿಸಿವೆ. ಬೆಂಗಳೂರಿನ ಪ್ರಮುಖ ಹೆದ್ದಾರಿ ಸೇರಿದಂತೆ ರಾಜ್ಯದ್ಯಾಂತ ಹೆದ್ದಾರಿ ತಡೆ. ಬೆಂಗಳೂರಿನಲ್ಲಿ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಬೃಹತ್ ರ‍್ಯಾಲಿ. ಒಟ್ಟು 700ಕ್ಕೂ ಹೆಚ್ಚು ಕ್ಯಾಂಟರ್ ವಾಹನದಲ್ಲಿ ನಗರದಲ್ಲಿ…

ಖಾದಿ ಉತ್ಪನ್ನ ಖರೀದಿಸಿ;ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಎಂ ಟಿ ಬಿ ನಾಗರಾಜು ಮನವಿ

ಬೆಂಗಳೂರು,ಸೆ,25: ಖಾದಿ ಸಂಘ-ಸಂಸ್ಥೆಗಳನ್ನು ಪುನಶ್ಚೇತನಗೊಳಿಸಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಕನಸನ್ನು ಸಾಕಾರ ಗೊಳಿಸಲು ಅಕ್ಟೋಬರ್ ‌ 2 ರಂದು ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಖಾದಿ ಸಂಘ-ಸಂಸ್ಥೆಗಳಿಗೆ ಉತ್ತೇಜನ ನೀಡುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್.ನಾಗರಾಜು ಎಂಟಿಬಿ ಮನವಿ ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ…

ಗೌರವವೇ ಮುನುಷ್ಯನ ಮುಖಟ ಪ್ರಾಯ

ಸಿದ್ಧಸೂಕ್ತಿ                                ಗೌರವ ಗುರೋಃ ಭಾವಃ ಗೌರವಂ=ಗುರು ಹಿರಿಯ ಬಂಧು ಮಿತ್ರ ಹಿತೈಷಿ ವಸ್ತು ಶ್ರೇಷ್ಠ ಎಂದು ತೋರುವ ಸದ್ಭಾವ. ಇದು ಭಾವನಾತ್ಮಕ. ಹಣ ವಸ್ತುಗಳಿಂದ ಅಳೆಯಲಾಗದು. ಗಳಿಸುವುದು ನೀಡುವುದು ಕಷ್ಟ. ಕಳೆಯುವುದು ಕಳೆದುಕೊಳ್ಳುವುದು ಸುಲಭ! ಹೆಸರು ಸಣ್ಣಕ್ಷರ/ ದಪ್ಪಕ್ಷರದಲ್ಲಿರಬಹುದು, ಮೇಲಿರಬಹುದು ಕೆಳಗಿರಬಹುದು. ಹಾರ ಶಾಲು ದೊಡ್ಡ /ದುಬಾರಿಯದ್ದಿರಬಹುದು, ಸಣ್ಣ /ಅಗ್ಗದ್ದಿರಬಹುದು,ಇಲ್ಲದೆಯೂ ಇರಬಹುದು. ಅದು ಮುಖ್ಯವೆನಿಸದು!…

ಅಕ್ಟೋಬರ್ 1 ರಿಂದ ಚಿತ್ರಮಂದಿರ ಶೇ. 100 ಭರ್ತಿಗೆ ಅವಕಾಶ:ಸಿಎಂ ಬೊಮ್ಮಾಯಿ

ಬೆಂಗಳೂರು, ಸೆ, 24:ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಚಿತ್ರಮಂದಿರಗಳಲ್ಲಿ ಶೇ. 100 ಸೀಟು ಭರ್ತಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ರಾಜ್ಯದಲ್ಲಿ ಕೋವಿಡ್ ಸ್ಥಿತಿಗತಿ ಕುರಿತಂತೆ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರಿಗೆ ಈ ವಿಷಯ ತಿಳಿಸಿದರು.. ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಪಾಸಿಟಿವಿಟಿ ದರ 0.66 % ಇದೆ. ಅಕ್ಟೋಬರ್ 1 ರಿಂದ ಕೋವಿಡ್ ಪಾಸಿಟಿವಿಟಿ…

1 48 49 50 51 52 102
Girl in a jacket