ಊಟ ಊಟಗಳನ್ನ ಸುತ್ತಿ…
ಊಟ ಊಟಗಳನ್ನ ಸುತ್ತಿ… ಹಸಿವೆಂಬ ಹೆಬ್ಬಾವು ಬಸಿರ ಹಿಡಿದರೆ ವಿಷವೇರಿತ್ತಯ್ಯ ಆಪಾದ ಮಸ್ತಕಕೆ ಹಸಿವಿಗನ್ನವನಿಕ್ಕಿ ವಿಷವನಿಳಿಸಬಲ್ಲಡೆ ವಸುಧೆಯೊಳಗೆ ಆತನೇ ಗಾರುಡಿಗ ಕಾಣಾ ರಾಮನಾಥ. ಚುಮು ಚುಮು ಬೆಳಕರಿದು ನೆಲಕೆ ಮುಗಿಲ ಕಣ್ಣೀರು ಇಬ್ಬನಿಯಾಗಿ ಬೀಳುವಾಗಲೇ ತಿರುಕವ್ವ, ಬಸವ್ವ,ಚೌಡವ್ವರೆಂಬ ಧರೆಯ ಹಳ್ಳಿ ಮನೆಗಳ ಹೊಲೆ ಹೊತ್ತಿ ರೊಟ್ಟಿಯ ಸಪ್ಪುಳವು ಮೊಳಗುತಿತ್ತು. ಮನೆ ಮುಂದೆ ಇಂಡಿ ದುಂಡಿಯ ನಾದ ಬಳೆಗಳೊಂದಿಗೆ ತೂಗುತಿತ್ತು.ಅಂಗಳದ ಕೋಳಿ ಪುಟ್ಟಿಯಲ್ಲಿ ಹುಂಜಗಳು ಬೆಳಕಾತ್ರಲೇ… ಎಂದು ಕೂಗುತ್ತಲೇ ಈಚಲ ಚಾಪೆಗಳಲ್ಲಿ ಅಡ್ಡಾದ ಮಕ್ಕಳು ಅವ್ವನ ಕೂಗಿಗೆ…