Girl in a jacket

Author kendhooli_editor

ಹಿಪ್ಪರಗಿ ಬ್ಯಾರೇಜ್ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆಗೆ ಸಚಿವ ಸಂಪುಟದ ಅನುಮೋದನೆ

ಬೆಂಗಳೂರು,ಅ,05: ಹಿಪ್ಪರಗಿ ಬ್ಯಾರೇಜ್ನ ಎಡಭಾಗದ ತಿರುವಿನಲ್ಲಿ ಕಾಂಕ್ರೀಟ್ ತಡೆಗೋಡೆ  ನಿರ್ಮಾಣ ಮಾಡುವ ಕಾಮಗಾರಿಯ 28.02ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು ತಿಳಿಸಿದ್ದಾರೆ. ಕರ್ನಾಟಕ ನೀರಾವರಿ ನಿಗಮದ ಈ ಪ್ರಸ್ತಾವನೆಗೆ ಸಚಿವ ಸಂಪುಟ ಇಂದು ನಡೆದ ಸಭೆಯಲ್ಲಿ ಅನುಮೋದನೆ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಳೆಗಾಲದಲ್ಲಿ ಹಿಪ್ಪರಗಿ ಬ್ಯಾರೇಜಿನಿಂದ ನೀರನ್ನು ಹೊರಬಿಟ್ಟಾಗ, ಬ್ಯಾರೇಜಿನ ಗೇಟ್ ಮೂಲಕ ರಭಸವಾಗಿ ಹರಿಯುವ ನೀರಿನಿಂದ…

ರುದ್ರಾಕ್ಷಿ

                          ಸಿದ್ಧಸೂಕ್ತಿ :                              ರುದ್ರಾಕ್ಷಿ ರುದ್ರ=ಶಿವ. ರುದ್ರಾಕ್ಷಿ ಶಿವನ ಕಣ್ಣು. ರುದ್ರಾಕ್ಷಿ ಗಿಡದ ಬೀಜ. ಬಹುಕಾಲ ಕೆಡದ ಬಾಳಿಕೆಯ ಪವಿತ್ರ ಮಂಗಳಕರ ಸಾಧನ.ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಶಿವನ ಕಣ್ಣೀರು ಭೂಮಿಗೆ ಬಿದ್ದು ವೃಕ್ಷ – ಬೀಜವಾಯಿತೆಂಬ ನಂಬಿಕೆ. ಸಂತ ಸಾಧಕ…

ಪ್ರಿಯಾಂಕ್ ಗಾಂಧಿ ಬಂಧನ ಖಂಡಿಸಿ ಕಾಂಗ್ರೆಸ್ ಪಂಜಿನ ಮೆರವಣಿಗೆ

ಬೆಂಗಳೂರು,ಅ,04: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಎಂಟು ಮಂದಿ ಮೃತಪಟ್ಟ ಲಖಿಂಪುರ–ಖೇರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿ ಸಾಂತ್ವಾನ ಹೇಳಲು ಅವಕಾಶ ನೀಡದೇ ಬಂಧಿಸಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ನಿಂದ ನಗರದಲ್ಲಿಂದು ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್…

‘ಶಿವನ ಪಾದ’ ದ ಜರ್ನಿಯ ಸುತ್ತಾ…

ಸೀ ಶೋರ್ ಸ್ಟುಡಿಯೋಸ್ ಮೂಲಕ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ *ಶಿವನ ಪಾದ* ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿರುವ ಕ್ರೈಮ್ ಕಥಾನಕ ಇರುವ ಚಿತ್ರ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಅಲ್ಲದೆ ತಮಿಳಿನ ಕಾದಲ್ ಪೈತ್ಯಂ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅರ್ಧದಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶೇ.೫೦ರಷ್ಟು ಶೂಟಿಂಗ್ ಮಾತ್ರ ಬಾಕಿಯಿದೆ. ಉಳಿದ ಮಾತಿನಭಾಗ ಹಾಗೂ ೨…

ಇದೇ 16ರಿಂದ ಜೆಡಿಎಸ್ ಜನತಾ ಸಂಗಮ

ಬೆಂಗಳೂರು,ಅ,04: ಜೆಡಿಎಸ್ ಪಕ್ಷದ ಜನತಾ ಪರ್ವ 1.O ಕಾರ್ಯಾಗಾರದ ಎರಡನೇ ಹಂತವಾಗಿ ಜನತಾ ಸಂಗಮ ಇದೇ 16ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಬಿಡದಿ ತೋಟದಲ್ಲಿ ನಡೆಯುತ್ತಿರುವ ಕಾರ್ಯಗಾರದ ನಡುವೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇದು ಪ್ರತಿ ತಾಲೂಕಿನಲ್ಲಿ ಎಲ್ಲರ ಜೊತೆಗೂಡಿ ನಡೆಯುವ  ಕಾರ್ಯಕ್ರಮ. ಕಾರ್ಯಕರ್ತರನ್ನು ನೇರವಾಗಿ ಭೇಟಿಯಾಗುವ ಹಾಗೂ ತಳಹದಿಯಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶ ಇದಕ್ಕಿದೆ ಎಂದರು. ಜನತಾ ಸಂಗಮದ ಮೂಲಕ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ತೀರ್ಮಾನ ಮಾಡಲಾಗಿದೆ. ಜತೆಗೆ, ಕಾರ್ಯಾಗಾರಕ್ಕೆ ಹಾಜರಾಗಿರುವ ಪ್ರತಿಯೊಬ್ಬರ ಮಾಹಿತಿಯನ್ನೂ…

ಪ್ರತಿಭಟನಾ ನಿರತ ರೈತರಮೇಲೆ ಕಾರುಹರಿಸಿ ಹತ್ಯೆ; ಯೋಗಿ ಆದಿತ್ಯನಾಥ ರಾಜೀನಾಮೆಗೆ ಆಗ್ರಹ

ಬೆಂಗಳೂರು,ಅ,04:ದೇಶದಲ್ಲಿ ನೀಚ ರಾವಣ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಅನ್ನದಾತರು ಹಾಗೂ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆನಿರತ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿರುವ ಘಟನೆಗೆ ನೈತಿಕ ಹೊಣೆಹೊತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೃತ ರೈತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ.…

ಬಿಬಿಎಂಪಿ ನಿರ್ಲಕ್ಷ್ಯವೇ ಮಳೆ ಅವಾಂತರಕ್ಕೆ ಕಾರಣ

ಬೆಂಗಳೂರು,ಅ.04:ಬಿಬಿಎಂಪಿ ಅಧಿಕಾರಿಗಳಿಗೆ ಇನ್ನೂ ಬುದ್ದಿ ಬಂದಂತಿಲ್ಲ.ಪ್ರತಿ ಬಾರಿ ಮಳೆ ಬಂದಾಗಲೂ ಹಲವಾರು ಅವಾಂತರಗಳು ಸೃಷ್ಟಿಯಾದಾಗುತ್ತಲೆ ಇವೆ ಆದರೆ ಮುಂದಿನ ಬಾರಿ ಹಾಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂಬ ಮಾತು ಈಗ ಬೆಂಗಳೂರನ್ನೆ ಹಾಳು ಮಾಡಿದೆ. ರಾತ್ರಿ ಬಂದ ಮಳೆಗೆ ಹಲವಾರು ಪ್ರದೇಶದಲ್ಲಿ ಮಳೆ ನೀರು ನುಗ್ಗಿ ಅವಾಂತರವಾಗಿದೆ ಈಗಲೂ ಅದೇ ಮಾತು…ಇಂತ ನಾಲಾಯಕ್ ಅಧಿಕಾರಿಗಳಿಂದ ಎಷ್ಟು ಸಂಸಾರಗಳು ಬಲಿಯಾಗಬೇಕು? ನಿನ್ನೆ ರಾತ್ರಿಯಿಡೀ ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸುಮಾರು 2 ಗಂಟೆಗಳ ಭೀಕರ…

ಶಿವಾಸ್ತೇ ಪಂಥಾನಃ ಸಂತು

ಸಿದ್ಧಸೂಕ್ತಿ :                   ಶಿವಾಸ್ತೇ ಪಂಥಾನಃ ಸಂತು ಶಕುಂತಲೆಗೆ ಸಾಕು ತಂದೆ ಕಣ್ವ ಮ ರ್ಷಿಗಳು ಹೇಳಿದ ಮಾತಿದು. ನಿನ್ನ ದಾರಿಗಳು ಶುಭವಾಗಿರಲಿ. ಕೆಟ್ಟ ದಾರಿ ತುಳಿಯಬೇಡ. ನೀ ತುಳಿದ ಸರಿ ದಾರಿಗೆ ಅಡ್ಡಿ ಬಾರದಿರಲಿ. ಒಬ್ಬರು ಇನ್ನೊಬ್ಬರಿಗೆ ಬಯಸುವ ಆದರ್ಶ ಪರಿ ಇದು. ಮನೆಗೆ ಬಂದ ಹೆಣ್ಣು ಮಕ್ಕಳಿಗೆ ಮನೆಯ ಹೆಣ್ಣು ಮಕ್ಕಳು ತಾಳಿಗೆ ಅರಿಷಿಣ, ಕುಂಕುಮವಿಟ್ಟು ತಾಂಬೂಲ ನೀಡಿ ಮುತ್ತೈದೆ ಭಾಗ್ಯ ಚಿರಕಾಲ…

ಕಂಪನಿಯೊಳಗಿನ ಮನಸುಗಳ ಒಳತುಡಿತಗಳು

ಕಂನಿಯೊಳಗಿನ ಮನಸುಗಳ ಒಳತುಡಿತಗಳು ಬೆಳಿಗ್ಗೆ ಒಂಬತ್ತರ ಸುಮಾರಿಗೆ ಮುಂಬೈನಿಂದ ಬಂದ ನನ್ನ ಬಾಸ್ ಅಮರನಾಥ್ ಅವರ ಫೋನ್ , ಲೈನ್ ನ ಸಮಸ್ಯೆಯಿಂದಾಗಿ ಅಷ್ಟು ಸ್ಪುಟವಾಗಿ ಕೇಳುತ್ತಿರಲಿಲ್ಲ. ಸಂಭಾಷಣೆಯಿಂದ ನನಗೆ ಅರ್ಥವಾಗಿದ್ದು ಎಂದರೆ ಆ ದಿನ ರಾತ್ರಿ ಬಾಂಬೆ-ಜೋಧಪುರ ಎಕ್ಸ್ಪ್ರೆಸ್ ರೈಲಿನಲ್ಲಿ ಅಹಮದಾಬಾದ್ ಗೆ ಡಿ. ಒ. ಟಿ. ((DOT) ಭದ್ರಾ ಎಕ್ಸ್ಚೇಂಜ್ ರಿಪೇರಿ ಕಾರ್ಯಕ್ಕಾಗಿ ಒಬ್ಬ ಸೀನಿಯರ್ ಎಂಜಿನಿಯರ್ ಬರಲಿದ್ದಾರೆ ಮತ್ತು ನಾನು ರೈಲ್ವೆ ಸ್ಟೇಷನ್ ಗೆ ಹೋಗಿ ಅವರನ್ನು ಭೇಟಿಯಾಗಿ ನಾಳಿನ ಅವರ ರಿಪೇರಿಗೆ…

31ನೇ ಜಿಲ್ಲೆಯಾಗಿ ವಿಜಯನಗರ ಅಸ್ತಿತ್ವಕ್ಕೆ

ವಿಜಯನಗರ,(ಹೊಸಪೇಟೆ),: ರಾಜ್ಯದ 31 ಜಿಲ್ಲೆಯಾಗಿ ‘ವಿಜಯನಗರ’ ಇಂದು ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆಯನ್ನು ಉದ್ಘಾಟಿಸಿದರು. ವಿಜಯಸ್ತಂಭ ಅನಾವರಣಗೊಳಿಸಿದ ಸಿಎಂ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯನಗರ ಜಿಲ್ಲೆಯಲ್ಲಿ ಸಂಸ್ಕೃತಿ, ಪುರಾತನತೆಯನ್ನು ಬಿಂಬಿಸುವ ಇತಿಹಾಸವಿದೆ. ಹಂಪಿಗೆ ಯಾತ್ರಿಗಳು ಇನ್ನೂ ಹೆಚ್ಚಿನ ಮಟ್ಟದಲ್ಲಿ ಬರಬೇಕು‌. 643 ಕೋಟಿಯಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ. ವಿಶಾಲವಾದ ಜಿಲ್ಲಾಡಳಿತ…

ವಿಭೂತಿ

ಸಿದ್ಧಸೂಕ್ತಿ :                                ವಿಭೂತಿ ವಿಭೂತಿ ಸುಟ್ಟ ಭಸ್ಮ. ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಬಹುತೇಕ ಎಲ್ಲ ಹಿಂದುಗಳು ಧರಿಸುವ ಪವಿತ್ರ ದ್ರವ್ಯ. ತ್ಯಾಗೀಶ್ವರ ಶಿವ ಸಂಹಾರ ನಾಶ ಭಸ್ಮಕರ್ತಾ! ಸ್ಮಶಾನವಾಸಿ ಸರ್ವಾಂಗ ಭಸ್ಮಲೇಪಿತ! ತಪೋನಿಷ್ಠ ಶಿವನ ಮನಸ್ಸನ್ನು ಚಂಚಲಗೊಳಿಸಿದ ಮನ್ಮಥನನ್ನು ಶಿವ ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ! ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ರಾಕ್ಷಸರು…

ಒಂದೇ ಕುಟುಂಬದ ಮೂವರು‌ ಆತ್ಮಹತ್ಯೆ.

ಬೆಂಗಳೂರು,ಅ,02:  ಇತ್ತೀಚೆಗಷ್ಟೇ ಒಂದೇ ಕುಟುಂಬದ ಐವರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ಅದೇ ರೀತಿಯ ಘಟನೆ ಮರುಕಳಿಸಿದ್ದು,ಒಂದೇ ಕುಟುಂಬದ ಮೂವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಘಟನೆ ಬೆಂಗಳೂರು ಉತ್ತರ ತಾಲೂಕಿನ ಪ್ರಕೃತಿ ಬಡಾವಣೆಯ ಮನೆಯೊಂದರಲ್ಲಿ ನಡೆದಿದೆ. ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು  ಬಳಕಿಗೆ ಬಂದಿದೆ. ಆತ್ಮಹತ್ಯೆಗೆ ಶರಣಾದವರನ್ನು ವಸಂತಾ(40), ಯಶ್ವಂತ್(15), ನಿಶ್ಚಿತಾ(6) ಎಂದು ಗುರುತಿಸಲಾಗಿದೆ. ರೂಂ ಒಂದರಲ್ಲಿ ತಾಯಿ ಮಗಳು ಒಂದೇ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೊಂದು ಕಡೆ ಮಗ…

ಸಿಬಿಐ ತನಿಖಾ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರು ಶಾಸ್ತ್ರಿ

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು  ದೇಶದ ಶಾಂತಿ ಸುವ್ಯವಸ್ಥೆ ಹಾಗೂ ಶಕ್ತಿ ಶಾಲಿ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ತಗೆದು ಕೊಂಡ ಹಲವಾರು ಯೋಜನೆಗಳ ಕುರಿತು ಸಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಸಿಬಿಐ ಸಂಸ್ಥೆ ಹುಟ್ಟಿಗೆ ಕಾರಣರಾದ ಲಾಲ್ ಬಹಾದ್ದೂರ್ ಶಾಸ್ತ್ರಿ ಬರಹ; ದಿನೇಶ್ ಕಲ್ಲಳ್ಳಿ ಬಡತನದಲ್ಲಿಯೇ ಹುಟ್ಟಿ ಬಡತನದಲ್ಲಿಯೇ ಬೆಳೆದು ಬಡತನದಲ್ಲಿಯೇ ಮರಣ ಹೊಂದಿದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ .. ಪ್ರಧಾನಿಯಾಗಿ ಶಾಸ್ತ್ರೀಜಿ ಇಟ್ಟ ದಿಟ್ಟ…

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ!

ಬೆಂಗಳೂರಿನಲ್ಲಿ ಮತ್ತೆ ತಲೆಯೆತ್ತಿದ ರೈಸ್ ಪುಲ್ಲಿಂಗ್ ದಂಧೆ! Writing-ಪರಶಿವ ಧನಗೂರು ಕೊರೋನೋತ್ತರ ಕಾಲದಲ್ಲಿ ಖರ್ಚಿಗೂ ಕಾಸಿಲಿಲ್ಲದೇ ಅಂಡೆಲೆಯುತ್ತಿರುವ ವಂಚಕರ-ಮೋಸಗಾರರ ಮಾಫಿಯಾ ಮತ್ತೇ ರೀಆಕ್ಟೀವ್! ನಗರದಲ್ಲಿ ಸದ್ದಿಲ್ಲದೇ ತಲೆ ಎತ್ತಿದೆ ನೋಟು ಎಕ್ಸ್ಚೇಂಜ್ ಮಾಫಿಯಾ! ಜಾಲ ವಿಸ್ತರಿಸಲು ಪೀಲ್ಡಿಗೆ ಇಳಿದ ರೈಸ್ ಫುಲ್ಲಿಂಗ್ ವಂಚಕರು! ಒಂದೆಡೆ ಬಡಜನರು, ಮಧ್ಯಮ ವರ್ಗದ ಜನರು ಸೈಬರ್ ವಂಚನೆಗೊಳಗಾಗಿ ಕಾಸು ಕಳೆದುಕೊಂಡು ಕಕ್ಕಾಬಿಕ್ಕಿಯಾಗಿ ಶಾಕ್ ನಿಂದ ಹೊರಬರುವ ಮೊದಲೇ ಹಣಕ್ಕಾಗಿ ಈಗ ಎಲ್ಲಾ ಕಡೆ ಮೋಸಗಾರರ ವಿವಿಧ ರೀತಿಯ ಗುಂಪುಗಳು ಕಾರ್ಯಾಚರಣೆ…

ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಡಾ.ಕಾಂತರಾಜ್ ಆಯೋಗದ ವರದಿ ಸದ್ಯಕ್ಕೆ ನೆನೆಗುದಿಗೆ ಬಿದ್ದಿದೆ. ಅದನ್ನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸುವ ಕೆಲಸವನ್ನು ಆಯೋಗದ ಅಧ್ಯಕ್ಷರು ಆಗ ಮಾಡಲಿಲ್ಲ. ವರದಿಯಲ್ಲಿರುವ ಶಿಫಾರಸುಗಳ ವಿರುದ್ಧ ಹೈಕೋರ್ಟ್‌ನಲ್ಲಿ ಖಟ್ಲೆ ದಾಖಲಾಗಿರುವುದರಿಂದ ಅದು ಇತ್ಯರ್ಥವಾಗುವರೆಗೆ ಕಾಯಬೇಕಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜಾತಿ ಸಮೀಕ್ಷಾ ವರದಿ: ರಾಜಕೀಯ ಜಟಾಪಟಿ ಜಾತಿ ಸಮೀಕ್ಷೆ ಆಗಬೇಕೆಂಬ ಆಗ್ರಹಕ್ಕೆ ಬಹುದೊಡ್ಡ ಬೆಂಬಲ ದೇಶವ್ಯಾಪಿ ವ್ಯಕ್ತವಾಗುತ್ತಿದೆ. ಕರ್ನಾಟಕ…

ಜೈನ ಜಿನಾಲಯಗಳು ದೇವಾಲಯಗಳಾದದ್ದು. . .

ಜೈನ ಜಿನಾಲಯಗಳು ದೇವಾಲಯಗಳಾದದ್ದು. . . ಜೈನಧರ್ಮವು ಭಾರತದ ಪ್ರಾಚೀನ ಧರ್ಮಗಳಲ್ಲೊಂದು. ಇದು ಕರ್ನಾಟಕಕ್ಕೆ ಸಂಪ್ರತಿ ಚಂದ್ರಗುಪ್ತ ಹಾಗೂ ಭದ್ರಬಾಹುವಿನಿಂದ ಬಂತೆಂಬುದು ವಿದ್ವಾಂಸರ ಅಭಿಮತ. ಅಂದಿನಿಂದ ಜೈನ ಧರ್ಮವು ವಿಕಸನಗೊಳ್ಳುತ್ತಾ ರಾಷ್ಟ್ರಕೂಟ, ಗಂಗ, ಕಲ್ಯಾಣ ಚಾಲುಕ್ಯ ಮತ್ತು ಹೊಯ್ಸಳ ಮನೆತನಗಳು ಹಾಗೂ ಆಳರಸರ ಅವಧಿಯಲ್ಲಿ ಕರ್ನಾಟಕದಾದ್ಯಂತ ಉಜ್ವಲವಾಗಿ ಬೆಳೆದುದನ್ನು ಕಾಣುತ್ತೇವೆ. ಈ ನಡುವೆ ಸಾಕಷ್ಟು ಏರಿಳಿತಗಳನ್ನೂ ಈ ಧರ್ಮವು ಕಂಡಿದೆ. ಆದರೆ ಕುಮ್ಮಟದ ಅರಸರು, ವಿಜಯನಗರ ಹಾಗೂ ನಂತರದ ಅವಧಿಯಲ್ಲಿ ಈ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯದೆ…

ಊಟ ಊಟಗಳನ್ನ ಸುತ್ತಿ…

ಊಟ ಊಟಗಳನ್ನ ಸುತ್ತಿ… ಹಸಿವೆಂಬ ಹೆಬ್ಬಾವು ಬಸಿರ ಹಿಡಿದರೆ ವಿಷವೇರಿತ್ತಯ್ಯ ಆಪಾದ ಮಸ್ತಕಕೆ ಹಸಿವಿಗನ್ನವನಿಕ್ಕಿ ವಿಷವನಿಳಿಸಬಲ್ಲಡೆ ವಸುಧೆಯೊಳಗೆ ಆತನೇ ಗಾರುಡಿಗ ಕಾಣಾ ರಾಮನಾಥ. ಚುಮು ಚುಮು ಬೆಳಕರಿದು ನೆಲಕೆ ಮುಗಿಲ ಕಣ್ಣೀರು ಇಬ್ಬನಿಯಾಗಿ ಬೀಳುವಾಗಲೇ ತಿರುಕವ್ವ, ಬಸವ್ವ,ಚೌಡವ್ವರೆಂಬ ಧರೆಯ ಹಳ್ಳಿ ಮನೆಗಳ ಹೊಲೆ ಹೊತ್ತಿ ರೊಟ್ಟಿಯ ಸಪ್ಪುಳವು ಮೊಳಗುತಿತ್ತು. ಮನೆ ಮುಂದೆ ಇಂಡಿ ದುಂಡಿಯ ನಾದ ಬಳೆಗಳೊಂದಿಗೆ ತೂಗುತಿತ್ತು.ಅಂಗಳದ ಕೋಳಿ ಪುಟ್ಟಿಯಲ್ಲಿ ಹುಂಜಗಳು ಬೆಳಕಾತ್ರಲೇ… ಎಂದು ಕೂಗುತ್ತಲೇ ಈಚಲ ಚಾಪೆಗಳಲ್ಲಿ ಅಡ್ಡಾದ ಮಕ್ಕಳು ಅವ್ವನ ಕೂಗಿಗೆ…

ಭಾರತೀಯ ಸಶಸ್ತ್ರ ಪಡೆಗಳು: ಮುಸ್ಲಿಂ ಯುವಕರಿಗೆ ಅವಕಾಶಗಳು

-ಮಾನಸ,ಬೆಂಗಳೂರು ಭಾರತೀಯ ಸಶಸ್ತ್ರ ಪಡೆಗಳು: ಮುಸ್ಲಿಂ ಯುವಕರಿಗೆ ಅವಕಾಶಗಳು ಇಸ್ಲಾಂನಲ್ಲಿ ತಾಯ್ನಾಡಿಗೆ ನಿಷ್ಠೆಯು ನಂಬಿಕೆಯ ಒಂದು ಭಾಗವಾಗಿರುವ ಇಸ್ಲಾಂ ಅನ್ನು ಧರ್ಮವಾಗಿ ಅನುಸರಿಸುವುದಕ್ಕೂ ಮತ್ತು ಆ ದೇಶಕ್ಕೆ ನಿಷ್ಠೆಯನ್ನು ಹೊಂದಿರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಖುರಾನ್ ಹೇಳುತ್ತದೆ, “ಓ ನಂಬುವವರೇ, ದೇವರಿಗೆ ವಿಧೇಯರಾಗಿರಿ ಮತ್ತು ಪ್ರವಾದಿಗೆ ವಿಧೇಯರಾಗಿರಿ ಮತ್ತು ನಿಮ್ಮಿಂದ ಅಧಿಕಾರದಲ್ಲಿರುವವರಿಗೆ ವಿಧೇಯರಾಗಿರಿ (೪:೬೦). ಅವರ ಸ್ವಂತ ದೇಶ ಮತ್ತು ಅವರ ಜನರನ್ನು ಪ್ರೀತಿಸು ಒಳ್ಳೆಯ ಮುಸ್ಲೀಮರ ಲಕ್ಷಣವಾಗಿದೆ. ಪ್ರೊಫೆಟ್ ಹಜರತ್ ಮುಹಮದ್ ಹೇಳಿದರು: ’ನಿಮ್ಮ ದೇಶವನ್ನು ಪ್ರೀತಿಸುವುದು…

ಜಂಗಮ

ಜಂಗಮ ಲಿಂಗಾಯತರ ಅಷ್ಟಾವರಣಗಳಲ್ಲಿ ಒಂದು. ಜನನ ಮರಣ ರಹಿತ ತತ್ತ್ವ, ಬ್ರಹ್ಮ ಪರಮಾತ್ಮಾ ದೇವರು ಇತ್ಯಾದಿ. ಹುಟ್ಟುವುದು, ಸಾಯುವುದು. ನಾಮ ರೂಪಾತ್ಮಕ ವ್ಯಕ್ತಿ – ವಸ್ತುಗಳೆಲ್ಲೆಡೆ ಸೂಕ್ಷ್ಮರೂಪದಿಂದ ವ್ಯಾಪಿಸಿದ ತತ್ತ್ವ ಜಂಗಮ. ನಿರ್ದಿಷ್ಟ ನಾಮ ರೂಪ ಅದಕ್ಕಿಲ್ಲ.ಎಲ್ಲ ನಾಮ ರೂಪವೂ ಅದರದ್ದೇ. ಹೀಗೆ ಅದು ಜನನ ಮರಣ ರಹಿತ. ನೀರು ಗುಳ್ಳೆಯಾಗುವುದು, ಒಡೆಯುವುದು. ಉಬ್ಬಿದ ರೂಪ, ಗುಳ್ಳೆ ನಾಮ, ಒಡೆದ ಬಳಿಕ ಇಲ್ಲ. ಮೊದಲೂ ನೀರು, ಒಡೆದ ಮೇಲೂ ನೀರು! ಬಂಗಾರದಿಂದ ಬಗೆ ಬಗೆ ಆಭರಣ.…

ನಂದಿನಿ‌ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಮಾಡಿ;ಸಿಎಂ ಸಲಹೆ

ಬೆಂಗಳೂರು,ಸೆ,29:ಹಾಲು ಮತ್ತು ಸಕ್ಕರೆಯ ಉಪ ಉತ್ಪನ್ನಗಳು ಬಹಳಷ್ಟಿವೆ. ಕೆಎಂಎಫ್‌ನ ಉತ್ಪನ್ನಗಳು ಕೂಡ ಉತ್ತಮವಾಗಿವೆ. ಹೀಗಾಗಿ ತನ್ನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಣೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸುವಂತೆ ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ಕರ್ನಾಟಕ ಹಾಲು ಮಹಾಮಂಡಲದ ನೂತನ ಯೋಜನೆಗಳಿಗೆ ಚಾಲನೆ ನೀಡಿ ನಂದಿನಿ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಹಾಲಿನ‌ ಉಪ ಉತ್ಪನ್ನಗಳ ಮಾರುಕಟ್ಟೆಯನ್ನು ಪರಿಣಾಮಕಾರಿಯಾಗಿ ವಿಸ್ತರಣೆ ಮಾಡಬೇಕು. ಈ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ದೊರೆತರೆ ಹೆಚ್ಚು ಹಾಲು ಉತ್ಪಾದನೆ ಆಗುತ್ತದೆ. ಮುಂದಿನ…

1 46 47 48 49 50 102
Girl in a jacket