ಅಖೀಂಪುರ್ ಘಟನೆ;ಅಶೀಶ್ ಮಿಶ್ರ ರೈತರನ್ನು ಕೆಣಕಿ ಗುಂಡು ಹಾರಿಸಿದ್ದಾರೆ,ಎಫ್ ಐಆರ್ ನಲ್ಲಿ ಉಲ್ಲೇಖ
ಲಖೀಂಪುರ್ ಖೇರ್,ಅ,06: ಲಖೀಂಪುರ್ ಖೇರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಕಾರಿನಲ್ಲಿ ಕುಳಿತಿದ್ದ ಕೇಂದ್ರ ಸಚಿವರ ಪುತ್ರ ಅಶಿಶ್ ಮಿಶ್ರಾ ಅಲಿಯಾಸ್ ಮೋನು ಪ್ರತಿಭಟನಾನಿರತ ರೈತರನ್ನು ಕೆಣಕಿರುವುದಲ್ಲದೇ, ಅವರ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಲಾಗಿದೆ. ಬಹ್ರೈಚ್ ಜಿಲ್ಲೆಯವರಾದ ಜಗಜಿತ್ ಸಿಂಗ್ ಅವರ ದೂರಿನ ಮೇಲೆ ದಾಖಲಾದ ಮೊದಲ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಈ ಎಪಿಸೋಡ್ ಪೂರ್ವ ಯೋಜಿತವಾಗಿದ್ದು, ಮಂತ್ರಿ ಹಾಗೂ ಆತನ ಪುತ್ರನಿಂದ ಪಿತೂರಿ ನಡೆದಿದೆ ಎಂದು ಹೇಳಲಾಗಿದೆ.…