ಅಪ್ಪು ಅನ್ನ ಸಂತರ್ಪಣೆಗೆ ಹರಿದು ಬಂದ ಜನಸಾಗರ
ಬೆಂಗಳೂರು,ನ,೦9: ನಾಡಿನಾದ್ಯಂತ ಮತ್ತೆ ಹರಿದು ಬಂದು ಒಂದೆಡೆ ಸೇರಿದ ಅಭಿಮಾನದ ಹೊಳೆ. ಮೇರೆ ಮೀರಿದ ಜಯಘೋಷ, ಅಭಿಮಾನದ ಹರಿವಿಗೆ ಸಾವಿರಾರು ನದಿಗಳು… ಎಂಬ ಹೊಸ ಭಾವನಾತ್ಮಕ ರೂಪಕಕ್ಕೆ ಪುನೀತ್ ಪುಣ್ಯಸ್ಮರಣೆಯ ೧೨ನೇ ದಿನ ಸಾಕ್ಷಿಯಾಯಿತು ಪುಣ್ಯಸ್ಮರಣೆಯ ಅಂಗವಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಗರದ ಅರಮನೆ ಮೈದಾನದ ‘ತ್ರಿಪುರವಾಸಿನಿ’ ಅಂಗಣದಲ್ಲಿ ನಡೆಯಿತು. .ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವರಾಜ್‌ಕುಮಾರ್ ರಕ್ತದಾನ ಮಾಡಿದರು. ಅನ್ನಸಂತರ್ಪಣೆಗೆ ಚಾಲನೆ ನೀಡಿದ ಬಳಿಕ ಭಾವುಕರಾದ…