ಸಿದ್ದು ವಿರುದ್ಧ ಎಚ್ ಡಿಕೆ ವಾಗ್ದಾಳಿ
ಬೆಂಗಳೂರು (ನೆಲಮಂಗಲ): ಮಾಜಿ ಪ್ರಧಾನಿ ದೇವೇಗೌಡರು ಅವಕಾಶವಾದಿ ರಾಜಕಾರಣಿ ಹಾಗೂ ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎಂದು ಹೇಳಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಹಾಗೆ ಹೇಳಿಕೊಳ್ಳುವ ಬದಲು ಒಂದು ಸ್ಲೇಟಿನಲ್ಲಿ ” ಜೆಡಿಎಸ್ ಪಕ್ಷ ಬಿಜೆಪಿ ಟೀಮ್ ” ಅಂತ ಬರೆದುಕೊಂಡು ಕಟ್ಟು ಹಾಕಿಸಿ ಕುತ್ತಿಗೆಗೆ ಹಾಕಿಕೊಂಡು ತಿರುಗಾಡಲಿ. ಹಾಗೆಯೇ ಪ್ರಚಾರ ಮಾಡಿಕೊಂಡು ದಿನವೂ ಓಡಾಡಲಿ ಎಂದು ಟೀಕಿಸಿದರು. ನೆಲಮಂಗಲದಲ್ಲಿ ಇಂದು ವಿಧಾನ…