ಬಗೆ ಬಗೆಯ ಆನಂದ!
ಬಗೆ ಬಗೆಯ ಆನಂದ! ತೈತ್ತಿರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಬಗೆ ಬಗೆಯ ಆನಂದಗಳನ್ನು, ಅವುಗಳ ಅಂತಸ್ಸತ್ತ್ವವನ್ನು ಸೊಗಸಾಗಿ ವಿವರಿಸಲಾಗಿದೆ. ಗುರು ವೈಶಂಪಾಯನನು ಶಿಷ್ಯ ಯಾಜ್ಞವಲ್ಕ್ಯನಿಗೆ ಏಳನೆಯ ಅನುವಾಕದಲ್ಲಿ ಹೀಗೆ ವಿವರಿಸಿದ್ದಾನೆ: ರಸೋ ವೈ ಸಃ. ರಸಗ್ಂ ಹ್ಯೇವಾಯಂ ಲಭ್ಧ್ವಾನಂದೀ ಭವತಿ. ಅವ್ಯಕ್ತಸ್ವರೂಪದ ಪರಮಾತ್ಮನು ವ್ಯಕ್ತಸ್ವರೂಪನಾಗಿ ತನ್ನಿಂದ ತಾನೇ ಆವಿರ್ಭಾವಗೊಂಡನು. ಇಂಥ ಈ ಪರಮಾತ್ಮನೇ ಸಕಲಸ್ವರೂಪದ ‘ರಸ’ ವಾಗಿದ್ದಾನೆ. ಇಂಥ ಪರಮಾತ್ಮನನ್ನು ತಿಳಿಯುವುದರಿಂದ ಮಾತ್ರವೇ ಆನಂದವನ್ನು ಹೊಂದುತ್ತಾನೆ. ಎಂಟನೆಯ ಅನುವಾಕದಲ್ಲಿ “ಸೈಷಾ ಆನಂದಸ್ಯ ಮೀಮಾಂಸಾ ಭವತಿ = ಇದು…