ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ
ಕರ್ನಾಟಕದ ಏಕೈಕ ಪ್ರಾಚೀನ ದೇವಾಲಯ ಕುಕನೂರು ನವಲಿಂಗೇಶ್ವರ ಕುಕನೂರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಪ್ರಾಚೀನ ಗ್ರಾಮಗಳಲ್ಲೊಂದು. ಈ ಗ್ರಾಮವು ರಾಷ್ಟ್ರಕೂಟ ಅರಸರ ಕಾಲದಿಂದಲೂ ಧಾರ್ಮಿಕ, ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕವಾಗಿ ಪ್ರಸಿದ್ಧಿಯನ್ನು ಪಡೆದ ಸ್ಥಳ. ದಾಖಲೆಗಳನ್ವಯ ಇದೊಂದು ಪ್ರಾಚೀನ ಪಟ್ಟಣವೇ ಆಗಿದ್ದಿತು. ಕ್ರಿ.ಶ. ೧೧-೧೨ನೆಯ ಶತಮಾನದ ಹೊತ್ತಿಗೇ ನಲವತ್ತೆಂಟು ಕೇರಿಗಳನ್ನು ಒಳಗೊಂಡ ಪಟ್ಟಣವಾಗಿದ್ದಿತು. ಅಲ್ಲದೆ ಕುಕನೂರು ಒಂದು ಸಾವಿರ ಮಹಾಜನರನ್ನು ಒಳಗೊಂಡಿದ್ದ ಮಹಾಗ್ರಹಾರವೂ, ಪ್ರಾಚೀನ ಕಾಲದ ವಿದ್ಯಾಕೇಂದ್ರವೂ ಆಗಿದ್ದುದು ಶಾಸನಗಳಿಂದ ತಿಳಿಯುವುದು. ಇಲ್ಲಿರುವ ದೇವಾಲಯಗಳೋ…