26 ಲಕ್ಷ ನಕಲಿ ಕಾರ್ಡ್ಗಳು ರದ್ದು: ಸಂತೋಷ ಲಾಡ್
26 ಲಕ್ಷ ನಕಲಿ ಕಾರ್ಡ್ಗಳು ರದ್ದು: ಸಂತೋಷ ಲಾಡ್ by-ಕೆಂಧೂಳಿ ಬೆಂಗಳೂರು,ಮಾ.05- ರಾಜ್ಯದಲ್ಲಿದ್ದ 56 ಲಕ್ಷ ಕಟ್ಟಡ ಕಾರ್ಮಿಕರ ಕಾರ್ಡ್ಗಳಲ್ಲಿ ತಪಾಸಣೆ ನಡೆಸಿ 26 ಲಕ್ಷ ನಕಲಿ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಸದನಕ್ಕೆ ತಿಳಿಸಿದರು. ಸದಸ್ಯ ಮಹೇಷ ಟೆಂಗಿನಕಾಯಿ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಇನ್ಮುಂದೆಯೂ ಸಹ ನಕಲಿ ಕಾರ್ಡ್ಗಳನ್ನು ತಪಾಸಣೆ ನಡೆಸಿ ರದ್ದುಪಡಿಸಲಾಗುವುದು ಎಂದು ಅವರು ಹೇಳಿದರು. 2022ರಿಂದ ಈವರೆಗೆ ಮದುವೆ ಧನ ಸಹಾಯಕ್ಕಾಗಿ 1,57,174 ಅರ್ಜಿಗಳು…




















