ಪುರಿ ಜಗನ್ನಾಥ ಯಾತ್ರೆ ವೇಳೆ ಬಿಸಿಲಿನ ತಾಪ ಮತ್ತು ಜನದಟ್ಟಣೆಗೆ ನೂರಾರು ಮಂದಿಅಸ್ವಸ್ಥ
ಒಡಿಶಾ,ಜೂ,೨೮-ದೇಶದ ಪ್ರತಿಷ್ಠಿತ ಪುರಿ ರಥಯಾತ್ರೆಯಲ್ಲಿ ಬಿಸಿಲಿನ ತಾಪ ಜನದಟ್ಟಣೆಯಿಂದಗಿ ನೂರಾರು ಮಂದಿ ಅಸ್ವಸ್ಥರಾಗಿದ್ದು ಅನೇಕರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳುತಿಳಿಸಿವೆ ಪುರಿ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಡಾ. ಕಿಶೋರ್ ಸತಪತಿ ಅವರ ಪ್ರಕಾರ, ಜನದಟ್ಟಣೆಯಿಂದಾಗಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳು, ವಾಂತಿ ಮತ್ತು ಮೂರ್ಛೆ ಹೋಗಿರುವುದು ವರದಿಯಾಗಿದೆ. ಹೆಚ್ಚಿನವರನ್ನು ಹೊರರೋಗಿ ಚಿಕಿತ್ಸಾಲಯಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಬಿಡುಗಡೆ ಮಾಡಲಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದ್ದಾರೆ. ಒಡಿಶಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ…