Girl in a jacket

Author kendhooli_editor

ಬೆಂಗಳೂರು ಚಲನಚಿತ್ರೋತ್ಸವಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು ಚಲನಚಿತ್ರೋತ್ಸವಕ್ಕೆ ತಡೆ ನೀಡಲು ನಿರಾಕರಿಸಿದ ಹೈಕೋರ್ಟ್  by-ಕೆಂಧೂಳಿ ಬೆಂಗಳೂರು,ಫೆ,೨೦- ಬರುವ ಮಾರ್ಚ್ ೧ ರಿಂದ ಆರಂಭವಾಗಲಿರುವ ೧೬ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತಡೆ ನೀಡಲು ಕೋರಿದ್ದ ಕೆಲ ನಿರ್ಮಾಪಕರು ತಡೆ ನೀಡಲು ಕೋರಿದ್ದ ಅರ್ಜಿಯನ್ನು ಪುರಸ್ಕರಿಸಿತಾದರೂ ತಡೆ ನೀಡಲು ಹೈಕೋರ್ಟ ನಿರಾಕರಿಸಿ ಕನ್ನಡ ಚಲನಚಿತ್ರ ಅಕಾಡೆಮಿಗೆ ತುರ್ತು ನೊಟೀಸ್ ಜಾರಿಗೆ ಆದೇಶಿಸಿದೆ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ನಮ್ಮ ಚಲನಚಿತ್ರಗಳನ್ನು ಪರಿಗಣಿಸಿಲ್ಲ’ ಎಂದು ‘ಸಂವಿಧಾನ ಸಿನಿ ಕಂಬೈನ್ಸ್’ ಸೇರಿದಂತೆ ಒಂಬತ್ತು ಸಿನಿಮಾ ನಿರ್ಮಾಪಕರು ತಡೆ ಕೋರಿ ಹೈಕೊರ್ಟ್‌ಗೆ ಅರ್ಜಿಸಲ್ಲಿದ್ದವು…

ಚಾಂಪಿಯನ್ ಟ್ರೋಪಿ ಏಕದಿನ ಟೂರ್ನಿಯ ಮೊದಲ ಜಯಗಳಿಸಿದ ನ್ಯೂಜಿಲೆಂಡ್

ಚಾಂಪಿಯನ್ ಟ್ರೋಪಿ ಏಕದಿನ ಟೂರ್ನಿಯ ಮೊದಲ ಜಯಗಳಿಸಿದ ನ್ಯೂಜಿಲೆಂಡ್   by-ಕೆಂಧೂಳಿ ಕರಾಚಿ,ಫೆ,೨೦-ಚಾಂಪಿಯನ್ ಟ್ರೋಪಿ ಏಕದಿನ ಟೂರ್ನಿಯ ಮೊದಲ ಮಂದ್ಯದಲ್ಲಿ ಪಾಕ್ ವಿರುದ್ಧ ನ್ಯೂಜಲೆಂಡ್ ಭರ್ಜರಿ ಜಯ ಸಾದಿಸಿದೆ. ವಿಲ್ ಯಂಗ್,ಟಾಮ್‌ಲ್ಯಾಥಮ್ ಸಿಡಿಸಿದ ಅಬ್ಬರದ ದ್ವಿಶತಕದ ನೆರವಿನ ಆಟದಿಂದ ೬೦ ರನ್‌ಗಳ ಮೂಲಕ ಜಯಗಳಿಸಿತು.ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ೫೦ ಓವರ್‌ಗಳಿಗೆ ೫ ವಿಕೆಟ್ ನಷ್ಟಕ್ಕೆ ೩೨೦ ರನ್‌ಗಳಿಸಿದರು. ೩೨೧ ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್ ವೈಫಲ್ಯದಿಂದ ೨೬೦ ರನ್‌ಗಳಿಗೆ ಆಲೌಟ್ ಆಗಿ ನ್ಯೂಜಿಲೆಂಡ್‌ಗೆ ಶರಣಾಯಿತು.…

ನಾಯಕನಹಟ್ಟಿ ಜಾತ್ರೆ,ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸಚಿವರ ಸೂಚನೆ

ನಾಯಕನಹಟ್ಟಿ ಜಾತ್ರೆ,ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸಚಿವರ ಸೀಚನೆ ವರದಿ:- ಆಂಜನೇಯ ನಾಯಕನಹಟ್ಟಿ… ನಾಯಕನಹಟ್ಟಿ,ಫೆ,19- ಮಧ್ಯ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಯಕನಹಟ್ಟಿ ನಾಡಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಶ್ರೀಗುರು ತಿಪ್ಪೇರುದ್ರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಗ್ರಾಮದ ಶ್ರೀ…

ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತಾ ಆಯ್ಕೆ

ದೆಹಲಿಯ ನೂತನ ಸಿಎಂ ಆಗಿ ರೇಖಾ ಗುಪ್ತಾ ಆಯ್ಕೆ by-ಕೆಂಧೂಳಿ ನವದೆಹಲಿ, ಫೆ,19-ಮೊದಲಬಾರಿ ಗೆದ್ದ ರೇಖಾ ಗುಪ್ತ ಅವರನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕಿ ಹಾಗೂ ಶಾಲಿಮಾರ್ ಬಾಗ್ (ವಾಯುವ್ಯ) ಕ್ಷೇತ್ರದ ಶಾಸಕಿ ರೇಖಾ ಗುಪ್ತಾ ಅವರನ್ನು ಭಾರತೀಯ ಜನತಾ ಪಕ್ಷವು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಮುಖ್ಯಮಂತ್ರಿಯಾಗಿ ಘೊಷಿಸಿದೆ. ಇದರೊಂದಿಗೆ ನಾಲ್ಕನೇ ಬಾರಿಗೆ ರಾಷ್ಟ್ರ ರಾಜಧಾನಿಗೆ ಮಹಿಳಾ ಮುಖ್ಯಮಂತ್ರಿ ಸಿಕ್ಕಾಂತಾಗಿದೆ. ಮಾತ್ರವಲ್ಲ ಈ ಮಹಿಳೆ ಇದೇ ಮೊದಲ ಬಾರಿಗೆ ಶಾಸಕಿಯಾಗಿ…

ಹಾರರ್   ಕಥಾಹಂದರದ ‘ ಅಪಾಯವಿದೆ ಎಚ್ಚರಿಕೆ’

ಹಾರರ್  ಕಥಾಹಂದರದ ‘ ಅಪಾಯವಿದೆ ಎಚ್ಚರಿಕೆ’ by-ಕೆಂಧೂಳಿ ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಅಭಿಮಾನಿಗಳು ಸದಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಒಂದೊಳ್ಳೆ ಕಂಟೆಂಟ್ ನೊಂದಿಗೆ ಹಾರಾರ್ ಜಾನರ್ ನ ಕಥಾಹಂದರವನ್ನೂ ಹೊಂದಿರುವ “ಅಪಾಯವಿದೆ ಎಚ್ಚರಿಕೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. “ಅಣ್ಣಯ್ಯ” ಧಾರಾವಾಹಿ ಮೂಲಕ ಜನಪ್ರಿಯರಾಗಿರುವ ವಿಕಾಶ್ ಉತ್ತಯ್ಯ ನಾಯಕರಾಗಿ ನಟಿಸಿರುವ ಈ ಚಿತ್ರವನ್ನು ಅಭಿಜಿತ್ ತೀರ್ಥಹಳ್ಳಿ ಬರೆದು ನಿರ್ದೇಶಿಸಿದ್ದಾರೆ. ಹಿರಿಯ ಚಲನಚಿತ್ರ ಪತ್ರಕರ್ತೆ ಸರಸ್ವತಿ ಜಾಗಿರದಾರ್, ಚಲನಚಿತ್ರ ಸ್ಥಿರ ಛಾಯಾಗ್ರಾಹಕರಾದ ಮನು,‌ ಮೋಕ್ಷೇಂದ್ರ ಈ ಚಿತ್ರದ ಟ್ರೇಲರ್…

ಬಯಲುಸೀಮೆಯ ಪ್ರೇಮಕಥೆ ‘ಅಮರ ಪ್ರೇಮಿ ಅರುಣ್’

ಬಯಲುಸೀಮೆಯ ಪ್ರೇಮಕಥೆ ‘ಅಮರ ಪ್ರೇಮಿ ಅರುಣ್’ by-ಕೆಂಧೂಳಿ ಕನ್ನಡದಲ್ಲೀಗ ಹೊಸತಂಡದಿಂದ ಹೊಸಪ್ರಯತ್ನಗಳು ಸಾಕಷ್ಟು ನಡೆಯುತ್ತಿದೆ. ಅಂತಹ ಹೊಸ ಹಾಗೂ ವಿಭಿನ್ನ ಪ್ರಯತ್ನಗಳಲ್ಲಿ “ಅಮರ‌ ಪ್ರೇಮಿ ಅರುಣ್” ಸಹ ಒಂದು. ಸಮಾನ ಮನಸ್ಕರೆಲ್ಲಾ ಸೇರಿ ಕಟ್ಟಿರುವ ಒಲವು ಸಿನಿಮಾ ಎಂಬ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ‌ ಮಾಡಿದೆ. ಗಿರೀಶ್ ಕಾಸರವಳ್ಳಿ,‌ ಯೋಗರಾಜ್ ಭಟ್ ಸೇರಿದಂತೆ ಕನ್ನಡದ ಅನೇಕ ಹಿರಿಯ ದಿಗ್ದರ್ಶಕರ ಬಳಿ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚಿಗೆ…

ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗ ಮತ್ತು ದುರ್ಬಲಗೊಳಿಸುವುದನ್ನು ತಪ್ಪಿಸಲು- ಪ್ರಭಾಕರ್ ಸಲಹೆ

 ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗ ಮತ್ತು ದುರ್ಬಲಗೊಳಿಸುವುದನ್ನು ತಪ್ಪಿಸಲು- ಪ್ರಭಾಕರ್ ಸಲಹೆ by-ಕೆಂಧೂಳಿ ಬೆಂಗಳೂರು ಫೆ 19- ಮಾಹಿತಿ ಹಕ್ಕು ಕಾಯ್ದೆಯ ದುರುಪಯೋಗವನ್ನು ಮತ್ತು ದುರ್ಬಲಗೊಳಿಸುವ ಪ್ರಯತ್ನವನ್ನು ತಪ್ಪಿಸಿ, ಸರ್ಕಾರದ ಸಾಮಾಜಿಕ ನ್ಯಾಯದ ಗುರಿಯನ್ನು ಈಡೇರಿಸಿ ಎಂದು ನೂತನವಾಗಿ ನೇಮಕಗೊಂಡ ಮಾಹಿತಿ ಹಕ್ಕು ಆಯುಕ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ನುಡಿದರು. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಮಾಹಿತಿ ಆಯುಕ್ತರಾಗಿ ನೇಮಕಗೊಂಡ ಪತ್ರಕರ್ತರು ಮತ್ತು ಚಲನಚಿತ್ರ ಅಕಾಡೆಮಿ ಸದಸ್ಯರಾದ ಪತ್ರಕರ್ತರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು.…

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿ- ವಿಜಯೇಂದ್ರ ಟೀಕೆ

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಅಧೋಗತಿ- ವಿಜಯೇಂದ್ರ ಟೀಕೆ by-ಕೆಂಧೂಳಿ ಬೆಂಗಳೂರು,ಫೆ,19-: ಎಲ್ಲ ರಂಗದಲ್ಲೂ ದರ ಹೆಚ್ಚಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಣಿ ಶುಲ್ಕವು ಶೇ 600ರಷ್ಟು ಹೆಚ್ಚಳವಾಗಿದೆ. ಆಸ್ತಿ ಗೈಡೆನ್ಸ್ ಮೌಲ್ಯವೂ ಶೇ 30ರಷ್ಟು ಏರಿಕೆ ಕಂಡಿದೆ. ವಾಹನಗಳ ನೋಂದಣಿ ದರವು ಶೇ 10ರಷ್ಟು…

ಪಕ್ಷ ಆಕ್ಟೀವ್ ಗೊಳಿಸಲು ಜೆಡಿಎಸ್ ಸಮಾವೇಶಕ್ಕೆ ಸಿದ್ದತೆ

ಪಕ್ಷ ಆಕ್ಟೀವ್ ಗೊಳಿಸಲು ಜೆಡಿಎಸ್ ಸಮಾವೇಶಕ್ಕೆ ಸಿದ್ದತೆ by-ಕೆಂಧೂಳಿ ಬೆಂಗಳೂರು,ಫೆ,೧೯- ಇಷ್ಟು ದಿನ ಮಂಕಾಗಿದ್ದ ಜೆಡಿಎಸ್ ಪಕ್ಷ ಈಗ ಕಾರ್ಯಕರ್ತರನ್ನು ಚುರುಕುಗೊಳಿಸಲು ಸಮಾವೇಶ ಹಮ್ಮಿಕೊಳ್ಳಲು ಸಿದ್ದೆತೆ ನಡೆಸುತ್ತಿದೆ. ಹಾಸನ ಅಥವಾ ತುಮಕೂರಿನಲ್ಲಿ ಸಮಾವೇಶ ಮಾಡುವ ಮೂಲಕ ನಮ್ಮ ಪಕ್ಷವೂ ಆಕ್ಟೀವ್ ಆಗಿದೆ ಎನ್ನುವ ಸಂದೇಶ ರವಾನಿಸಲಿದೆ. ಕಾಂಗ್ರೆಸ್ ಪಕ್ಷ ಹಾಸನದಲ್ಲಿ ಸಮಾವೇಶ ಮಾಡಿದ ನಂತರ ಜೆಡಿಎಸ್ ಅಲ್ಲಿ ಅಸ್ತಿತ್ವವೇ ಕಳೆದುಕೊಳ್ಳುತ್ತಿದೆ ಎನ್ನುವ ಮಾತುಗಳು ಇದ್ದವು ಈ ನಡುವೆ ನಿಖಿಲ್ ಕುಮಾರಸ್ವಾಮಿ ಅವರನ್ನು ಜಡಿಎಸ್ ರಾಜ್ಯಾಧ್ಯಕ್ಷ ಮಾಡಲು ವರಷ್ಠಿರ…

ಪಾಕಿಸ್ತಾನದಲ್ಲಿ ಇಂದಿನಿಂದ ಮಿನಿ ವಿಶ್ವಕಪ್ ಆರಂಭ

ಪಾಕಿಸ್ತಾನದಲ್ಲಿ ಇಂದಿನಿಂದ ಮಿನಿ ವಿಶ್ವಕಪ್ ಆರಂಭ by-ಕೆಂಧೂಳಿ ಇಂದಿನಿಂದ ಪಾಕಿಸ್ತಾನದ ಲ್ಲಿ ಮಿನಿ ವಿಶ್ವಕಪ್ ಆರಂಭವಾಗಲಿದೆ,ಇದು ಒಂಬತ್ತನೇ ಚಾಂಪಿಯನ್ ಟ್ರೋಪಿಯಾಗಿದೆ. ಕರಾಚಿಯಲ್ಲಿ ಉದ್ಟಾಟನಾಪಂದ್ಯ ನಡೆಯಲಿದೆ. ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಮತ್ತು ಪಾಕಿಸ್ತನ ತಂಡಗಳ ನಡುವೆ ಹೋಟಾಟ ನಡೆಯಲಿದೆ.ಬಿ ಗುಂಪಿನ ಪಂದ್ಯದಲ್ಲಿ ಗೆಲುವು ಯಾರ ಪಾಲಾಗುತ್ತದೆ ಎನ್ನುವುದು ಕುತೂಹಲ ಕೆರೆಳಿಸಿದೆ . ಅಂಕಿ ಅಂಶಗಳ ಲೆಕ್ಕಾಚಾರವನ್ನು ನೋಡಿದಾಗ ಈ ಆಟದಲ್ಲಿ ಪಾಕಿಸ್ತಾನ ಕೈ ಮೇಲಾಗುತ್ತದೆ. ಉಭಯ ದೇಶಗಳ ನಡುವೆ ಒಟ್ಟು ೧೧೮ ಪಂದ್ಯಗಳು ನಡೆದಿದ್ದು, ಪಾಕ್ ೬೧ ಹಾಗೂ…

ಮಹಾರಾಷ್ಟ್ರ-ಸಿಎಂ -ಡಿಸಿಎಂ ನಡುವೆ ಬಿಕ್ಕಟ್ಟು ಮತ್ತಷ್ಟು ಉಲ್ಬಣ

ಮಹಾರಾಷ್ಟ್ರ-ಸಿಎಂ -ಡಿಸಿಎಂ ನಡುವೆ ಬಿಕ್ಕಟ್ಟು ಮತ್ತಷ್ಟು ಉಲ್ಬಣ ವರದಿ-ಎಂ.ಡಿ.ದಿನೇಶ್ ರಾವ್ ಮುಂಬೈ,ಫೆ,೧೯- ಮಹಾರಾಷ್ಟ್ರ ಸರ್ಕಾರದಲ್ಲಿ ದಿನೆ ದಿನೆ ಬಿಕ್ಕಟ್ಟು ಹೆಚ್ಚಾಗುತಿದೆ ಮುಖ್ಯಮಂತ್ರಿ ಮತ್ತು ಉಮ ಮುಖ್ಯಮಂತ್ರಿ ನಡುವೆ ಉಲ್ಬಣಗೊಂಡಿದೆ. ಹೀಗಾಗಿಯೇ ಶಿವಸೇನೆಯ ಇಪ್ಪತ್ತು ಶಾಸಕರ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ. ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅಡಿಯ ಗೃಹ ಖಾತೆಯ ಏಕನಾಥ್ ಶಿಂಥೆ ನೇತೃತ್ವದ ಶಿವಸೇನೆಯ ಸುಮಾರು ೨೦ ಶಾಸಕರ ಒಸದಗಿಸಲಾಗಿದ್ದ ವೈ ಶ್ರೇಣಿಯ ಭದ್ರತೆಯನ್ನು ಹಿಂಪಡಡಿಯುವ ಮೂಲಕ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ ಎನ್ನಲಾಗಿದೆ, ಬಿಜೆಪಿ ಹಾಗೂ ಅಜಿತ್ ಪವಾರ್…

ಜಾತಿ ಗಣತಿ ವರದಿ ಅನುಷ್ಠಾನ ಜಾರಿಗೊಳಿಸಲು ಸರ್ಕಾರ ಸಿದ್ದ- ಸಿಎಂ

ಜಾತಿ ಗಣತಿ ವರದಿ ಅನುಷ್ಠಾನ ಜಾರಿಗೊಳಿಸಲು ಸರ್ಕಾರ ಸಿದ್ದ- ಸಿಎಂ by-ಕೆಂಧೂಳಿ ಬೆಂಗಳೂರು, ಫೆ,18-ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ . ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯ ಬಂದ ಸಂದರ್ಭದಲ್ಲಿ…

ಫೈಟರ್ ನಿರ್ಮಾಪಕರ ಚಿತ್ರಕ್ಕೆ ಚಿಕ್ಕಣ್ಣ ಹೀರೋ

ಫೈಟರ್ ನಿರ್ಮಾಪಕರ ಚಿತ್ರಕ್ಕೆ ಚಿಕ್ಕಣ್ಣ ಹೀರೋ by-ಕೆಂಧೂಳಿ ಕಳೆದ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪೈಕಿ ‘ಉಪಾಧ್ಯಕ್ಷ’ ಕೂಡ ಒಂದು. ಚಿಕ್ಕಣ್ಣ ನಾಯಕನಟರಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಅದಾದ ಬಳಿಕ ಸಖತ್ ಚ್ಯೂಸಿಯಾಗಿರುವ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡಿದ್ದಾರೆ. ಸದ್ಯ ಲಕ್ಷ್ಮಿ ಪುತ್ರ ಸಿನಿಮಾದಲ್ಲಿ ತೊಡಗಿಸಿಕೊಂಡಿರುವ ಚಿಕ್ಕಣ್ಣ, ಅದಾದ ಬಳಿಕ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರುವ ಅವರು, ವಿಭಿನ್ನ ಕಥಾಹಂದರದ ಚಿತ್ರದಲ್ಲಿ…

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಚೆಲ್ಲಾಟ ಆಡುವ ರಾಜ್ಯ ಸರಕಾರ: ವಿಜಯೇಂದ್ರ ಟೀಕೆ

ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಚೆಲ್ಲಾಟಆಡುವ ರಾಜ್ಯ ಸರಕಾರ: ವಿಜಯೇಂದ್ರ ಟೀಕೆ by-ಕೆಂಧೂಳಿ ಬೆಂಗಳೂರು,ಫೆ,18- ಮಕ್ಕಳ ಭವಿಷ್ಯ ರೂಪಿಸಬೇಕಾದ ರಾಜ್ಯ ಸರಕಾರವು ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರ ಜೊತೆ ಚೆಲ್ಲಾಟ ಆಡುತ್ತಿದೆ; ಇದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಖಂಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದವರು ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್…

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿಲುಡಿ.ಕೆ.ಶಿವಕುಮಾರ್ ಮನವಿ

ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬಾಕಿ ಇರುವ ಅನುಮತಿ, ಅನುದಾನ ನೀಡಿಲುಡಿ.ಕೆ.ಶಿವಕುಮಾರ್ ಮನವಿ by-ಕೆಂಧೂಳಿ ಉದಯಪುರ (ರಾಜಸ್ಥಾನ), ಫೆ. 18-“ಕೇಂದ್ರ ಸರಕಾರವು ಕರ್ನಾಟಕ ರಾಜ್ಯಕ್ಕೆ ಬಾಕಿ ಇರುವ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನಗಳನ್ನು ನೀಡಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದರು. ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ “2047ರಲ್ಲಿ ಭಾರತ ಜಲ ಸಮೃದ್ಧಿ ರಾಷ್ಟ್ರ” ಎಂಬ 2ನೇ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು. “ಕರ್ನಾಟಕ ರಾಜ್ಯದ ಯೋಜನೆಗಳಿಗೆ ಕೇಂದ್ರ…

ಶೋಷಿತ ದಲಿತರ ಸಮಸ್ಯೆ ನಿವಾರಣೆಗೆ ಬದ್ದ- ಸಿಎಂ

ಶೋಷಿತ ದಲಿತರ ಸಮಸ್ಯೆ ನಿವಾರಣೆಗೆ ಬದ್ದ- ಸಿಎಂ by-ಕೆಂಧೂಳಿ ಬೆಂಗಳೂರು, ಫೆ,18-ಶೋಷಿತ ಮತ್ತು ದಲಿತರ ಸಮಸ್ಯೆಗಳನ್ನು ನಾನು ನಿರಂತರವಾಗಿ ನಿವಾರಿಸಿಕೊಂಡು ಬರುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ದಲಿತ ಮುಖಂಡರುಗಳೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನ ಅಭಿವೃದ್ಧಿ ಹಣದಲ್ಲಿ ಶೇ 24 ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಾವು. ಈ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ…

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ

ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕ by- ಕೆಂಧೂಳಿ ನವದೆಹಲಿ, ಫೆ,18-ಹಿರಿಯ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ನಿವೃತ್ತಿ ಹೊಂದುತ್ತಿರುವ ರಾಜೀವ್ ಕುಮಾರ್ ಅವರ ಸ್ಥಾನದಲ್ಲಿ ಹಿರಿಯ ಅಧಿಕಾರಿ ಜ್ಞಾನೇಶ್ ಕುಮಾರ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. 1988 ರ ಬ್ಯಾಚ್ ಕೇರಳ ಕೇಡರ್ ಐಎಎಸ್ ಅಧಿಕಾರಿ ಕಳೆದ ವರ್ಷ ಮಾರ್ಚ್ ನಿಂದ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚುನಾವಣಾ ಆಯುಕ್ತರ ನೇಮಕಾತಿ ಕುರಿತ ಹೊಸ ಕಾನೂನಿನಡಿಯಲ್ಲಿ ನೇಮಕಗೊಂಡ…

ಮಾರ್ಚ್ 3ರಿಂದ ಅಧಿವೇಶನ: ಮಾರ್ಚ್ 7 ರಂದು ಆಯವ್ಯಯ ಮಂಡನೆ

ಮಾರ್ಚ್ 3ರಿಂದ ಅಧಿವೇಶನ: ಮಾರ್ಚ್ 7 ರಂದು ಆಯವ್ಯಯ ಮಂಡನೆ by-ಕೆಂಧೂಳಿ ಬೆಂಗಳೂರು, ಫೆ,17- ವಿಧಾನಮಂಡಲದ ಅಧಿವೇಶನ ಮಾರ್ಚ್ 3, 2025 ರಿಂದ ಪ್ರಾರಂಭವಾಗಲಿದ್ದು, ನೂತನ ವರ್ಷದ ಮೊದಲನೇ ಅಧಿವೇಶನವಾದ್ದರಿಂದ ರಾಜ್ಯಪಾಲರು ಮೂರನೇ ತಾರೀಖಿನಂದು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮಂಗಳವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆದು, ಮಾರ್ಚ್ 7 ರಂದು, 2025-2026 ನೇ ಸಾಲಿನ ಆಯವ್ಯಯವನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.ಆಯವ್ಯಯದ ಮೇಲೆ…

ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿ.ಕೆ. ಶಿವಕುಮಾರ್

 ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿ.ಕೆ. ಶಿವಕುಮಾರ್* by-ಕೆಂಧೂಳಿ ಬೆಂಗಳೂರು, ಫೆ.16-“ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರ ಯೋಜನೆ ಅಡಿಯಲ್ಲಿ ನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಲು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದೆ. 30 ವರ್ಷಗಳ ಬಾಳಿಕೆ ಬರುವ ಶಾಶ್ವತ ರಸ್ತೆ ನಿರ್ಮಿಸುವ ಈ ಯೋಜನೆಗೆ ₹ 1700 ಕೋಟಿ ಹಣ ವೆಚ್ಚ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿಗಳ ಪರಿಶೀಲನೆ ನಡೆಸಿ ಶಿವಕುಮಾರ್…

ಅದ್ಧೂರಿಯಾಗಿ ಜರುಗಿದೆ ನಟ ಡಾಲಿ ವಿವಾಹ

ಅದ್ಧೂರಿಯಾಗಿ ಜರುಗಿದೆ ನಟ ಡಾಲಿ ವಿವಾಹ  by-ಕೆಂಧೂಳಿ ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ್ ಮತ್ತು ವೈದ್ಯೆ ಚಿತ್ರದುರ್ಗದ ಧನ್ಯತಾ ಅವರ ಜೊತೆ ಭಾನುವಾರ ಶುಭ ಮಹೋರ್ತದಲ್ಲಿ ವವಾಹಿಕ ಜೀವನಕ್ಕೆ ಕಾಲಿಟ್ಟರು. ಕನ್ನಡ ತಾರೆಯರು ಈ ಜೋಡಿಗೆ ಶುಭ ಹಾರೈಸಿದರು ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ನಟ ಧನಂಜಯ್ ಮತ್ತು ಡಾಕ್ಟರ್ ಧನ್ಯತಾ ಜೋಡಿಯ ವಿವಾಹ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ ೮:೩೦ರಿಂದ ೧೦ ಗಂಟೆ ವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಗೋಲ್ಡ್…

1 4 5 6 7 8 95
Girl in a jacket