ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತೆ ಮುನ್ನಲೆಗೆ ಬಂದ ಚರ್ಚೆ
ಬೆಂಗಳೂರು,ಏ,೧೯- ಈಗ ಮತ್ತೆ ದಿಡೀರ್ ಅಂತ ಕೆಪೆಸಿಸಿ ಅಧ್ಯಕ್ಷರ ಬದಲಾವಣೆ ಕುರಿತ ವಿಷಯಕ್ಕೆ ಚಾಲನೆ ಸಿಕ್ಕಿದೆ.ಇಬ್ಬರು ನಾಯಕರ ಎರಡು ಗಂಟೆಯ ಭೇಟೆ ಇದಕ್ಕೆ ಮುನ್ನುಡಿ ಬರೆದಂತೆ ಕಾಣುತ್ತಿದೆ. ಹೌದು ಶುಕ್ರವಾರ ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಸಂಜಯನಗರ ನಿವಾಸಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಪರಸ್ಪರ ನಡೆಸಿದ ಚರ್ಚೆ ಈಗ ಮತ್ತೆ ಕೆಪಿಸಿಸಿ ಗಾದಿಯ ಚರ್ಚೆಗೆ ಮುನ್ನಡುಗಿ ಬರೆದಂತಾಗಿದೆ, ಹಿಂದುಳಿವ ಸಮುದಾಯದ ಈ ನಾಯಕರು…