Girl in a jacket

Author kendhooli_editor

ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಕರ್ನಾಟಕ ಅಭಿವೃದ್ಧಿಗೆ ದಿಕ್ಸೂಚಿ-ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ

ಬೆಂಗಳೂರು,ಮೇ,05-ಈ ತಿಂಗಳ ಅಂತ್ಯದಲ್ಲಿ ( ಮೇ 30 ಹಾಗೂ 31ಕ್ಕೆ) ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ʼಉತ್ಪಾದನಾ ಮಂಥನ್‌ʼ ಕುರಿತ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಇಂದು ಇಲ್ಲಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ʼಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸುವ ಮುನ್ನೋಟ ಕುರಿತ ಈ ಎರಡು ದಿನಗಳ ಚಿಂತನ – ಮಂಥನ ಸಮಾವೇಶದಲ್ಲಿ ಆಯ್ದ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ…

ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಹಕಾರ: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು ಮೇ 5-ಕನ್ನಡದ ಮಹತ್ವದ ಕೃತಿಗಳು ಇಂಗ್ಲಿಷ್ ಸೇರಿ ವಿಶ್ವದ ಭಾಷೆಗಳಿಗೆ ಭಾಷಾಂತರಗೊಳ್ಳಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.‌ ಕಮಲಾ ಹಂಪನಾ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹಂಪನಾ ಅವರ ” ಚಾರು ವಸಂತ” ದೇಸೀಕಾವ್ಯದ ಪರ್ಷಿಯನ್ ಭಾಷಾ ಕೃತಿಯನ್ನು ಜನಾರ್ಪಣೆಗೊಳಿಸಿ ಮಾತನಾಡಿದರು. ಹಂಪನಾ ಕನ್ನಡ ನೆಲದ ಶ್ರೇಷ್ಠ ಸಾಂಸ್ಕೃತಿಕ ವ್ಯಕ್ತಿತ್ವ. ಇವರು ರಚಿಸಿರುವ “ಚಾರು ವಸಂತ” ವಿಶೇಷ ಕೃತಿಯಾಗಿದೆ. ಇಲ್ಲಿಯವರೆಗೆ…

ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ನಿಷೇಧ

ಬೆಂಗಳೂರು, ಮೇ,05-ಕನ್ನಡಿಗರಿಗೆ ಅವಮಾನ ಮಾಡಿ ದುರ್ವರ್ತನೆ ತೋರಿದ್ದ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧ ಮಾಡಲಾಗಿದೆ. ಕನ್ನಡ ಚಿತ್ರರಂಗದಿಂದ ಜೀವನ ಕಟ್ಟಿಕೊಂಡ ಹಿಂದಿ ಗಾಯಕ ಸೋನು ನಿಗಮ್ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದು ಕನ್ನಡದ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿ ಕುಚೇಷ್ಟೆ ಮೆರೆದಿದ್ದರು. ಇದರ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ ನಂತರ, ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಪುಂಡರು ಎಂದು…

ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್ ಗಳಿಗೆ ಹೆಚ್ಚಿಸಲು ಸರ್ಕಾರ ಬದ್ಧ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು, ಮೇ 05-“ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಜಲ ಸಂಪನ್ಮೂಲ ಸಚಿವರೂ ಆದ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “2010ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂಬಂಧ ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯವು ನಾಲ್ಕು ರಾಜ್ಯ ಸರಕಾರದ ಪ್ರತಿನಿಧಿಗಳ…

ರಾಜ್ಯದಲ್ಲಿ ಇಂದಿನಿಂದ 3 ಹಂತದ ಒಳಮೀಸಲಾತಿ ಸಮೀಕ್ಷೆ-ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು ಮೇ 5-ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಘೋಷಿಸಿದ್ದಂತೆ ಒಳ‌ಮೀಸಲಾತಿ ಜಾರಿಗೆ ನಾವು ಬದ್ದ. ಈ ದಿಕ್ಕಿನಲ್ಲಿ ಇವತ್ತಿನಿಂದ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಮೂರೂ ಹಂತಗಳಲ್ಲಿ ವೈಜ್ಞಾನಿಕ ದತ್ತಾಂಶ ಸಂಗ್ರಹ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. “ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025” ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಿದ್ದೆವು. ಪರಿಶಿಷ್ಠ ಜಾತಿಗಳಲ್ಲಿ ಒಳ ಮೀಸಲಾತಿ ಕುರಿತು…

ರೋಚಕ ಜಯ ಸಾಧಿಸಿದ ರಾಯಲ್ಸ್ ಚಾಲೆಂಜರ‍್ಸ

ಬೆಂಗಳೂರು,ಮೇ,೦೪-ಕೊನೆಯ ಎಸೆತದವರೆಗೂ ರೋಚಕ ಉಳಿಸಿಕೊಂಡು ಕೊನೆಯ ಬಾಲಿನಲ್ಲಿ ಹೊಡೆದ ಹೊಡೆತ ಜಯದತ್ತ ಸಾಗಿತು, ಇದು ಕ್ರಿಕೆಟ್ ಅಭಿಮಾನಿಗಳಿಗೆ ಒಂದು ರೀತಿ ಕುತೂಹಲದಂತಿತ್ತು. ಶನಿವಾರ ಬೆಂಗಳೂರಿನಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ‍್ಸ ಮತ್ತು ಚೆನೈ ಸೂಪರ್ ಕಿಂಗ್ಸ್ ಐಪಿಎಲ್ ಪಂದ್ಯದಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ‍್ಸ್ ತಂಡ ರೋಚಕ ಜಯಗಳಿಸಿತು. ಕೊನೆಯ ಎಸೆತದವರೆಗೂ ರೋಚಕ ರಸದೌತಣ ನೀಡಿದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯು ೨ ರನ್‌ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಜಯಿಸಿತು. ಇದರೊಂದಿಗೆ ಪ್ಲೇ ಆಫ್ ಹೊಸ್ತಿಲಿಗೆ ಬಂದು ನಿಂತಿತು.…

ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಈಶ್ವರ ಖಂಡ್ರೆ ಸೂಚನೆ

ತುಮಕೂರು, ಮೇ3: ಶೀಬಿ ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದು ಪಡಿಸಲು ಮತ್ತು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ರೀತ್ಯ ಕಠಿಣ ಕ್ರಮ ಕೈಗೊಂಡು, ಅಮೂಲ್ಯವಾದ ಅರಣ್ಯ ಭೂಮಿಯನ್ನು ಸಂರಕ್ಷಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ. ತುಮಕೂರು ಜಿಲ್ಲೆ ಕಳ್ಳಂಬೆಳ್ಳ ಹೋಬಳಿ ಶೀಬಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ ಸಚಿವರು. ಬೆಂಗಳೂರು-ಪುಣೆ ಹೆದ್ದಾರಿಯ ಪಕ್ಕದಲ್ಲೇ…

625ಕ್ಕೆ 625 ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಸಚಿವ ಮಧು ಬಂಗಾರಪ್ಪ ಸನ್ಮಾನ

ಶಿರಸಿ,ಮೇ,03-: ಶಿರಸಿಯ ಸರ್ಕಾರಿ ಉರ್ದು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಪೂರ್ಣಾಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ ಕುಮಾರಿ ಶಗುಪ್ತಾ ಅಂಜುಮ್ ಅವರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಇಂದು ಸರ್ಕಾರಿ ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಿದರು. “ಕುಮಾರಿ ಶಗುಪ್ತಾ ಅಂಜುಮ್ ಅವರ ವೈದ್ಯೆಯಾಗುವ ಕನಸು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅವರ ಈ ಆಶಯ ನೆರವೇರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ಮಕ್ಕಳ…

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ- 8 ಮಂದಿ ಬಂಧನ

ಮಂಗಳೂರು, ಮೇ,03-ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘಟನೆ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ ಅಬ್ದುಲ್ ಸಫ್ವಾನ್ (29), ನಿಯಾಜ್ (28), ಕಲಂದರ್ ಶಾಫಿ (31), ಮೊಹಮ್ಮದ್ ಮುಝಮ್ಮಿಲ್ (32), ರಂಜಿತ್ (19), ನಾಗರಾಜ್ (20), ಮೊಹಮ್ಮದ್ ರಿಜ್ವಾನ್ ​(28) ಮತ್ತು ಆದಿಲ್ ಮೆಹರೂಫ್ ಬಂಧಿತರು. ಬಂಧಿತ 8 ಆರೋಪಿಗಳ ಪೈಕಿ ಇಬ್ಬರು ಹಿಂದೂಗಳಿದ್ದಾರೆ ಎಂದರು.…

ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಯಲ್ಲಿ ಕೋಮುಗಲಭೆನಿಗ್ರಹ ಪಡೆ ರಚನೆ-ಜಿ.ಪರಮೇಶ್ವರ್

ಮಂಗಳೂರು,ಮೇ,೦೩-ರಾಜ್ಯದಲ್ಲಿ ಕೋಮುಗಲಭೆಯನ್ನು ಹತ್ತಿಕ್ಕಲು ಕರಾವಳಿಯಲ್ಲಿ ಕೋಮುಗಲಭೆ ನಿಗ್ರಹ ಪಡೆ ರಚಿಸುವುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ತಿಳಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸುಹಾಸ್‌ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು ವರ್ಷಗಳೀಂದ ಕೋಮುಗಲಭೆಯಾಗುತ್ತಿವೆ ಈ ಹಿನ್ನೆಲೆಯಲ್ಲಿ ಇನ್ನುವುಂದೆ ಇಂತ ಘಟನೆಗಳು ಸಂಭವಿಸದಂತೆ ಕೋಮುಗಲಭೆ ನಿಗ್ರಹ ಪಡೆಯನ್ನು ರಚಿಸುತ್ತೇವೆ ಎಂದರು. ಈ ಘಟನೆಯನ್ನು ಜನಸಮುದಾಯ ಇಷ್ಟ ಪಡೋದಿಲ್ಲ. ಸುಹಾಸ್ ಹಾಗೂ ಅಶ್ರಫ್ ಕೊಲೆಯಿಂದ ಜಿಲ್ಲೆಯ ಕೋಮುಸೌಹಾರ್ದಕ್ಕೆ…

ಸುಹಾಸ್ ಶೆಟ್ಟಿ ಹತ್ಯೆಪ್ರಕರಣ-ಐವರು ಆರೋಪಿಗಳು ಪೊಲೀಸರ ವಶ

ಮಂಗಳೂರು,ಮೇ,೦೩-ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸುಹಾಸ್ ಶೆಟ್ಟಿ ಕೊಲೆ ಮಾಡಿದ್ದ ಆರೋಪಿಗಳು ಸ್ವಿಪ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ, ಹತ್ಯೆಗೆ ಬಳಸಿದ್ದ ಆಯುಧಗಳನ್ನು ಕಾರಿನಲ್ಲಿಯೇ ಬಿಸಾಡಿ ಹೋಗಿದ್ದರು. ಕೊಲೆ ಬಳಿಕ ಆರೋಪಿಗಳು ಮಂಗಳೂರಿನಲ್ಲಿಯೇ ಅವಿತು ಕುಳಿತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಆಗಾಗಲೇ ಆರೋಪಿಗಳನ್ನು ಗುರುತಿಸಿ ಪೊಲೀಸರು…

ಲಕ್ಷ್ಮಿ ಹೆಬ್ಬಾಳಕರ್ ವಿರುದ್ದ ನೀಂದನೆ ಕೇಸ್- ಸಿ.ಟಿ.ರವಿ.ಅರ್ಜಿ ವಜಾ

ಬೆಂಗಳೂರು, ಮೇ,02-ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವಹೇಳನಕಾರಿ ಪದ ಬಳಿಸಿ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ದ ದಾಖಲಾಗಿದ್ದ  ಎಫ್ ಐಆರ್ ರದ್ದು ಪಡಿಸುವಂತೆ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪ್ರಕರಣ ರದ್ದು ಕೋರಿ ಸಿಟಿ ರವಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ದೂರುದಾರ ಮಹಿಳೆಯ ವಿರುದ್ಧ ಮಾತನಾಡಿದ್ದಾರೆ ಎಂದು ಹೇಳಲಾದ ಮಾತು, ಮಾತನಾಡಿದ್ದರೆ ಅಥವಾ…

ಯತ್ನಾಳ್ ಸವಾಲು ಸ್ವೀಕರಿಸಿ ಸಚಿವ ಶಿವಾನಂದ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ

ಬೆಂಗಳೂರು, ಮೇ,02-ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸವಾಲು ಸ್ವೀಕರಿಸಿ  ಸಚಿವ ಶಿವಾನಂದ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಶಿವಾನಂದ ಪಾಟೀಲ ಶುಕ್ರವಾರ ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.ಯತ್ನಾಳ್ ಅವರು ಇತ್ತೀಚೆಗೆ ಶಿವಾನಂದ ಪಾಟೀಲ ಅವರನ್ನು ಉದ್ದೇಶಿಸಿ, ಅವರು ಪಾಟೀಲರೇ ಅಲ್ಲ, ‘ರಾಜಕೀಯಕ್ಕಾಗಿ ಪಾಟೀಲ’ ಅಂತ ಸರ್‌ನೇಮ್ ಸೇರಿಸಿದ್ದು, ಅಪ್ಪನಿಗೆ ಹುಟ್ಟಿದವ ಆದರೆ ಶುಕ್ರವಾರದೊಳಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ನನ್ನ ಮುಂದೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದರು. ಆ ಸವಾಲು…

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ; ಈಭಾರಿಯೂ ಮಹಿಳೆಯರೆ ಮೇಲುಗೈ,ದಕ್ಷಣ ಕನ್ನಡ ಜಿಲ್ಲೆ ಪ್ರಥಮ

ಬೆಂಗಳೂರು, ಮೇ,02-ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಚಾ ಫಲಿತಾಂಶ ಪ್ರಕಟವಾಗಿದ್ದು ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದು ಎಂದಿನಂತೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು ,ಫಲಿತಾಂಶದ ವಿವರ ನೀಡಿದರು. ಈ ಬಾರಿ ಶೇ.66.1ರಷ್ಟು ಅಂದರೆ ಕಳೆದ ವರ್ಷಕ್ಕಿಂತ 8% ಫಲಿತಾಂಶ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಬಾರಿ 22 ವಿದ್ಯಾರ್ಥಿಗಳು 625 ಅಂಕಗಳಿಗೆ…

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ- ನಾಲ್ಕು ವಿಶೇಷ ತಂಡ ರಚನೆ- ಪರಮೇಶ್ವರ್

ಬೆಂಗಳೂರು, ಮೇ,02-ರೌಡಿ ಶೀಟರ್,ಹಿಂದೂಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಆರೋಪಿಗಳ ಪತ್ತೆ 4 ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಮಂಗಳೂರಿನಲ್ಲಿ ನಿನ್ನೆ ಸಂಜೆ ಸುಹಾಸ್ ಶೆಟ್ಟಿ ಎಂಬುವವರ ಹತ್ಯೆಯಾಗಿದೆ. ನಾವು ಈಗಾಗಲೇ ಅದನ್ನು ಗಮನಿಸಿದ್ದು, ಆರೋಪಿಗಳನ್ನ ಬಂಧಿಸಲು ನಾವು 4 ವಿಭಿನ್ನ ತಂಡಗಳನ್ನು ರಚಿಸಿದ್ದೇವೆ. ನಾವು ಅವರನ್ನು ಕಾನೂನಿನ ವ್ಯಾಪ್ತಿಗೆ ತರಲಿದ್ದೇವೆ ಎಂದರು. ದಕ್ಷಿಣ ಕನ್ನಡದಲ್ಲಿ ನಾವು ಸಾಕಷ್ಟು ಶಾಂತಿ ಮತ್ತು ಸಾಮರಸ್ಯವನ್ನು…

ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಅನಾವರಣ

ಮಧುಸೂದನ್ ಹವಾಲ್ದಾರ್ ನಿರ್ಮಾಣ, ನಿರ್ದೇಶನ ಹಾಗೂ ಸಂಗೀತ ನಿರ್ದೇಶನದ “ಮೋಳಿಗೆ ಮಾರಯ್ಯ” ಚಿತ್ರದ ಹಾಡುಗಳ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ನೆರವೇರಿತು. ಬೇಲಿಮಠದ ಶ್ರೀಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಭಕ್ತಿಪ್ರಧಾನ ಈ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ನಿವೃತ್ತ ಐ ಎ ಎಸ್ ಅಧಿಕಾರಿ ಸಿ.ಸೋಮಶೇಖರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಧುಸೂದನ್ ಹವಾಲ್ದಾರ್ ಅವರು ಮಹಾನ್ ಶರಣರಾದ “ಮೋಳಿಗೆ ಮಾರಯ್ಯ” ಅವರ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತಿರುವುದು…

ರೌಡಿಶೀಟರ್ ,ಹಿಂದೂಕಾರ್ಯಕರ್ತ ಸುಹಾಸ್ ಹತ್ಯೆಹಿನ್ನೆಲೆ ಬೂದಿಮುಚ್ಚಿದ ಕೆಂಡದಂತಿರುವ ಮಂಗಳೂರು

ಮಂಗಳೂರು,ಮೇ,02-ರೌಡಿಶೀಟರ್ ಸುಹಾಸ್ ಹತ್ಯೆ ಈಗ ಮಂಗಳೂರಿನಲ್ಲಿ ಮತ್ತೊಂದು ಆಯಾಮ ಪಡೆದುಕೊಂಡಿದ್ದು ಹಿಂದು ಸಂಘಟನೆ ಮತ್ತು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಹತ್ಯೆಯಾದ ಸುಹಾಸ್ ಶೆಟ್ಟಿ 2022 ರಲ್ಲಿ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮತ್ತು ರೌಡಿಶೀಟರ್ ಕೂಡ ಈತನ ಪರ ಈಗ ವಕಾಲತ್ತು ವಹಿಸುವ ಮೂಲಕ ಮತ್ತೊಂದು ಸಂಘರ್ಷಕ್ಕೆ ನಿಂತಂತಾಗಿದೆ. ಸುಹಾಸ್ ಶೆಟ್ಟಿಯನ್ನುಗುರುವಾರ ರಾತ್ರಿ 8.27 ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ…

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು, ಮೇ,01-ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದ್ದು ಎಲ್ಲಾ ಶಾಲೆಗಳಲ್ಲೂ ಮಧ್ಯಾಹ್ನದ ನಂತರ ಪ್ರಕಟಿಸಲಿದೆ. ನಾಳೆ ಬೆಳಗ್ಗೆ 12.30ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಘೋಷಣೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಹೆಚ್.ಬಸವರಾಜೇಂದ್ರ ಅವರು, 2025ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಪರೀಕ್ಷೆಗಳು ದಿನಾಂಕ: 21-03-2025 ರಿಂದ 04-04-2025ರವರೆವಿಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ…

ಚಾಲಕನ ನಿಯಂತ್ತಣ ತಪ್ಪಿ ಇನ್ನೋವ ಕಾರು ಪಲ್ಟಿ:ಮೂವರ ಸಾವು

ಚಿತ್ರದುರ್ಗ,ಮೇ,01-:ತಾಲೂಕಿನ ಕಾತ್ರಾಳ್ ಗ್ರಾಮದ ಬಳಿ ಗುರುವಾರ ಬೆಳಗ್ಗೆ ರಸ್ತೆ ವಿಭಜಕಕ್ಕೆ ಇನೋವ ಕಾರು ಡಿಕ್ಕಿಯಾಗಿ ಮೂವರು ಮೃಪತಟ್ಟಿದ್ದು, ನಾಲ್ವರು ಮಂದಿ ಗಾಯಗೊಂಡಿದ್ದಾರೆ ಮಿಳುನಾಡು ಮೂಲದ ಅರ್ಜುನ್ (೨೮), ಶರವಣ (೩೧), ಸೇಂಥಿಲ್ (೨೯) ಮೃತ ದುರ್ದೈವಿಗಳು. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಓರ್ವ, ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರಲ್ಲಿ ಅರ್ಜುನ್ ಎಂಬ ವ್ಯಕ್ತಿಯು ತಮೀಳುನಾಡಿನ ಚನ್ನೆöÊನಲ್ಲಿ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಲ್ಮಾನ್, ನವೀನ್, ಗೋಕುಲ್ ಸೆಂಥಿಲ್ ಕುಮಾರ್, ರಮೇಶ್,…

ಭೋವಿಗಳ ಜಾತಿಗಣತಿ ಕೈಪಿಡಿಯಲ್ಲಿ ಅನ್ಯಾಯ – ಸರ್ಕಾರ ಸ್ಪಂದಿಸದಿದ್ದರೆ ಕೋರ್ಟ್ ಮೊರೆ : ಇಮ್ಮಡಿ ಶ್ರೀ

ಚಿತ್ರದುರ್ಗ,ಮೇ,01- ಭೋವಿ ಸಮುದಾಯ ಶ್ರಮ ಹಾಗೂ ಕುಲಕಸುಬುಗಳನ್ನು ಬದುಕನ್ನಾಗಿಸಿಕೊಂಡಿದೆ. ಆದರೆ, ರಾಜ್ಯದಲ್ಲಿ ಒಳಮೀಸಲಾತಿ ಜಾರಿಗಾಗಿ ಜಾತಿಸಮೀಕ್ಷೆ ಕಾರ್ಯ ವೇಳೆ ಕುಲಕಸುಬು ನೋಂದಣಿಗೆ ಅವಕಾಶ ಇಲ್ಲದ ರೀತಿ ಕೈಪಿಡಿ ಸಿದ್ಧಪಡಿಸಿರುವುದು ಸರಿಯಲ್ಲ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ. ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತಿಗಣತಿ ಕಾರ್ಯ ಸ್ವಾಗತರ್ಹ. ಒಳಮೀಸಲಾತಿ ಜಾರಿ ಪರ ನಾವಿದ್ದೇವೆ. ಆದರೆ, ನ್ಯಾಯಯುತ, ಪಾರದರ್ಶಕವಾಗಿ ಆಗಬೇಕು. ಆದರೆ, ಯಾವುದೋ ಒಂದು ಸಮುದಾಯದ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಕೈಪಿಡಿ ಸಿದ್ಧಪಡಿಸಿದಂತೆ…

1 20 21 22 23 24 126
Girl in a jacket