ರಾಜ್ಯ
ವರ್ಷದಲ್ಲಿ ಗಂಗೂಬಾಯಿ ಸಂಗೀತ ವಿವಿ ಪುನಶ್ಚೇತನ: ಅಶ್ವತ್ಥನಾರಾಯಣ
ಬೆಂಗಳೂರು,ಡಿ,12: ಮೈಸೂರಿನಲ್ಲಿರುವ ಗಂಗೂಬಾಯಿ ಸಂಗೀತ ವಿಶ್ವವಿದ್ಯಾಲಯವನ್ನು ಮುಂದಿನ ಒಂದು ವರ್ಷದಲ್ಲಿ ಜಾಗತಿಕ ಗುಣಮಟ್ಟದೊಂದಿಗೆ ಪುನಶ್ಚೇತನಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ನಗರದ ಗಾಯನ ಸಮಾಜದಲ್ಲಿ ನಡೆಯುತ್ತಿದ್ದ 51ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ವ್ಯಕ್ತಿಗಳು ನೆಮ್ಮದಿಯಿಂದ ಬದುಕಬೇಕಾದರೆ ಸಂಸ್ಕೃತಿ ಮತ್ತು ಸಂಸ್ಕಾರಗಳು ಬಹಳ ಮುಖ್ಯ ಎಂದರು. ಶಿಕ್ಷಣದಲ್ಲಿ ಭಾರತೀಯತೆ ಮತ್ತು ಸಂಸ್ಕೃತಿಯ ಇತರ ಅಂಶಗಳೆಲ್ಲವೂ ಇರಬೇಕೆನ್ನುವುದು ಸದಾಶಯವಾಗಿದೆ. ಏಕೆಂದರೆ, ಕೇವಲ ಶಾಲಾಕಾಲೇಜುಗಳ ಓದಷ್ಟೇ ಮುಖ್ಯವಲ್ಲ. ಇದನ್ನು ಮನಗಂಡೇ ಪ್ರಧಾನಿ…