ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು!
ಹಕ್ಕುಗಳು ನಮ್ಮವು- ಕರ್ತವ್ಯಗಳು ನಿಮ್ಮವು! ಭಾರತೀಯರು ತಮ್ಮ ಮೂಲಭೂತ ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳಿಗಾಗಿ ಹೋರಾಡುತ್ತ ಬಂದ ಕಾರಣ ಸಮಯ ಪೋಲಾಯಿತಲ್ಲದೆ ದೇಶ ದುರ್ಬಲವಾಯಿತು ಎಂದಿದ್ದಾರೆ ಪ್ರಧಾನಮಂತ್ರಿ ಮೋದಿ. ಮೋದಿಯವರು ಮೂಲಭೂತ ಹಕ್ಕುಗಳಿಗೆ ಮೂಲಭೂತ ಕರ್ತವ್ಯಗಳನ್ನು ತಳುಕು ಹಾಕುತ್ತಿರುವುದು ಇದೇ ಮೊದಲೇನೂ ಅಲ್ಲ. ಪ್ರಾಯಶಃ ಕಡೆಯ ಬಾರಿಯೂ ಅಲ್ಲ. ಈ ಹಿಂದೆಯೂ ಇಂತಹ ಮಾತುಗಳನ್ನು ಆಡಿರುವುದು ಉಂಟು. ಮೂಲಭೂತ ಹಕ್ಕುಗಳಿಂದ ದೇಶ ದುರ್ಬಲವಾಗಿಲ್ಲ. ಮೇಲು ಕೀಳುಗಳ, ಏಣಿಶ್ರೇಣಿಯ, ಕರ್ಮಸಿದ್ಧಾಂತದ, ಜಾತಿ ವ್ಯವಸ್ಥೆಯ ಯಥಾಸ್ಥಿತಿವಾದಿ ಅಸ್ತ್ರಗಳ ಅಡಿಪಾಯ…