ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ಕರ್ನಾಟಕ ಅಭಿವೃದ್ಧಿಗೆ ದಿಕ್ಸೂಚಿ-ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ
ಬೆಂಗಳೂರು,ಮೇ,05-ಈ ತಿಂಗಳ ಅಂತ್ಯದಲ್ಲಿ ( ಮೇ 30 ಹಾಗೂ 31ಕ್ಕೆ) ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ʼಉತ್ಪಾದನಾ ಮಂಥನ್ʼ ಕುರಿತ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ಇಂದು ಇಲ್ಲಿ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ʼಕರ್ನಾಟಕವನ್ನು ʼಜಾಗತಿಕ ತಯಾರಿಕಾ ಕೇಂದ್ರʼವನ್ನಾಗಿ ಅಭಿವೃದ್ಧಿಪಡಿಸುವ ಮುನ್ನೋಟ ಕುರಿತ ಈ ಎರಡು ದಿನಗಳ ಚಿಂತನ – ಮಂಥನ ಸಮಾವೇಶದಲ್ಲಿ ಆಯ್ದ ಪ್ರಮುಖ ತಯಾರಿಕಾ ವಲಯಗಳು ಮತ್ತು ನವೋದ್ಯಮಗಳ ಸಿಇಒ ಹಾಗೂ…



















