ಕ್ರೈಮ್
ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಹಣಮಾಡುತ್ತಿದ್ದ ದಂಧೆ ಕೋರನ ಬಂಧನ!
ಬೆಂಗಳೂರು,ಸೆ,02: ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಸಾರ್ಜನಿಕರಿಗೆ ವಂಚಿಸುತ್ತಿದ್ದ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಿಪುಣ್(30) ಬಂಧಿತ ಆರೋಪಿಯಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ. ಕೇರಳದ ತ್ರಿಸೂರ್ ಜಿಲ್ಲೆಯವನಾದ ನಿಪುಣ್, ಕೇರಳದ ವಿದ್ಯಾರ್ಥಿಗಳನ್ನು ಯಾಮಾರಿಸಲು ಮುಂದಾಗಿದ್ದ. ಹುಳಿಮಾವು ಬಳಿಯ ನ್ಯಾನಪ್ಪನಹಳ್ಳಿಯ ಆವನಿ ಶ್ರಂಗೇರಿನಗರದ ಮನೆಯಲ್ಲಿ ಈ ನಕಲಿ ಪಾಸ್ ಪೋರ್ಟ್ ದಂದೆ ನಡೆಸುತ್ತಿದ್ದ. ಕೇರಳ ಮೂಲದ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕೋವಿಡ್ ನೆಗೆಟಿವ್ ವರದಿಗಳನ್ನ ಹಣಕ್ಕಾಗಿ ತಯಾರಿಸಿ ಕೊಡುವುದರ ಜೊತೆಗೆ ಮುಖ್ಯವಾಗಿ ವಿದೇಶಗಳಿಗೆ ಎಡತಾಕುವ ವಿದ್ಯಾರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆದು…