Browsing: ಕ್ರೈಮ್

ಕ್ರೈಮ್

ಉಬರ್ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ

ಬೆಂಗಳೂರು, ಸೆ,23:ಒಂಟಿ ಹೆಣ್ಣನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಬೇಕಾದ ಉಬರ್ ಚಾಲಕ ಮಹಿಳೆ ಮೇಲೆ ಅತ್ಯಾಚಾರ ಮಾಡಿ ವಿಕೃತ ಮೆರದ ಘಟನೆ ನಗರದ ಮುರುಗೇಶ್ ಪಾಳ್ಯದಲ್ಲಿ ನಡೆದಿದೆ. ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಮುರುಗೇಶ್ ಪಾಳ್ಯಕ್ಕೆ ತೆರಳಲು ಯುವತಿ ಉಬರ್ ಕ್ಯಾಬ್ ಬುಕ್ ಮಾಡಿದ್ಲು. ಬುಕ್ ಮಾಡಿದ ಕೆಲವೇ ನಿಮಿಷಗಳಲ್ಲಿ ದೇವರಾಜ್ ಹಸೆರಿನ ಕ್ಯಾಬ್ ಡ್ರೈವರ್ ಪಿಕಪ್ ಪಾಯಿಂಟ್‌ಗೆ ಬಂದು ಯುವತಿಯನ್ನ ಕರೆದೊಯ್ದಿದ್ದಾನೆ. ಹೆಚ್‌ಎಸ್‌ಆರ್‌ ಲೇಔಟ್‌ನಿಂದ ಹೊರಟ ಕ್ಯಾಬ್ ಕೇವಲ 20 ನಿಮಿಷದಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಯುವತಿ ಮನೆ ಬಳಿಗೆ ಬಂದಿದೆ.…

ಅನೇಕಲ್ ಬಳಿ ರೇವೂಪಾರ್ಟಿ ಮೇಲೆ ಪೊಲೀಸರ ದಾಳಿ

ಬೆಂಗಳೂರು, ಸೆ,19:ಆನೇಕಲ್ ಸಮೀಪ ರೇವು ಪಾರ್ಟಿ ನಡೆಸುತ್ತಿದ್ದ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ತಗೆದುಕೊಂಡವರು ನಶೆಯಲ್ಲಿ ಕುಣಿಯುತ್ತಿದ್ದವರು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ರೆಸಾರ್ಟ್ ಗೆ ಹೊಂದಿಕೊಂಡಿರುವ ನಿರ್ಜನ ಪ್ರದೇಶದಲ್ಲಿ ರೇವ್ ಪಾರ್ಟಿ ನಡೆಸಲಾಗಿದೆ. ಉದ್ಯಮಿಗಳ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಡಿಜೆ. ಕಲರ್ ಫುಲ್ ಲೈಟಿಂಗ್, ಡ್ರಗ್ಸ್ ನೊಂದಿಗೆ ಭರ್ಜರಿ ಪಾರ್ಟಿ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ದಾಳಿಯ ವೇಳೆ ಅಲ್ಲಿದ್ದವರು ಪರಾರಿಯಾಗಿದ್ದು, ಬೆನ್ನಟ್ಟಿದ…

ಟಾರ್ಗೆಟ್ ಇಂಡಿಯಾ!! ,ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!!

Writing; ಪರಶಿವ ಧನಗೂರು ಟಾರ್ಗೆಟ್ ಇಂಡಿಯಾ!! ಭಾರತದ ನೆಲದಲ್ಲಿ ಬಾಂಬ್ ಬಿತ್ತುವ ಟಾಸ್ಕ್..!! ಈ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಮತ್ತೆ ತನ್ನ ಹಳೇ ಚಾಳಿ ಮುಂದುವರಿಸಿರುವ ಕೊಳಕು ಮನಸ್ಸಿನ ಭಯೋತ್ಪಾದಕರ ನೆಲೆಬೀಡಾದ ಈ ಪಾಕಿಸ್ತಾನ ಭಾರತದ ಮೇಲೆ ಹೆಚ್ಚಿನ ಹಿಂಸಾತ್ಮಕ-ವಿಧ್ವಂಸಕ ದಾಳಿಗೆ ಈಗ ಮತ್ತೊಂದು ಬ್ರಹತ್ ಸಂಚು ರೂಪಿಸಿ ಕುಳಿತಿರುವ ಸಾಧ್ಯತೆಯೇ ಗೋಚರಿಸುತ್ತಿದೆ! ಅತ್ತ ಆಫ್ಘಾನಿಸ್ತಾನದದಲ್ಲಿ ಕ್ರೂರ ಭಯೋತ್ಪಾದಕ ತಾಲಿಬಾನಿಗಳಿಗೆ ಅಧಿಕಾರ ಸಿಗುತ್ತಿದ್ದಂತೆ ಮತ್ತಷ್ಟು ರೆಕ್ಕೆ ಪುಕ್ಕ ಕಟ್ಟಿ…

ಕೌಟುಂಬಿಕ ಕಲಹ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಬೆಂಗಳೂರು,ಸೆ,17:ಕಂದಮ್ಮನನ್ನು ಕೊಂದು ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ತಿಗಳರಪಸಳ್ಯದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಶಾಸಕರ  ಪತ್ರಿಕ ಸಂಪಾದಕ ಶಂಕರ್ ಕುಟುಂಬದ ಐದು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು ಶಂಕರ್ ಪತ್ನಿ ಭಾರತಿ(50), ಮಗಳು ಸಿಂಚನ(33), 2ನೇ ಮಗಳು ಸಿಂಧುರಾಣಿ (30), ಮಗ ಮಧುಸಾಗರ್(27), ಹಾಗೂ 9 ತಿಂಗಳ ಮಗು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸಿಂಚನ ಮಗಳು ಬದುಕುಳಿದಿದ್ದಾಳೆ. ನಾಲ್ಕು ದಿನಗಳ ಹಿಂದೆ ಬ್ಯಾಡರ್ ಹಳ್ಳಿಯ ಚೇತನ್ ಸರ್ಕಲ್ 4 ಕ್ರಾಸ್ ನಲ್ಲಿರೋ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರೋ…

ಹಾಸ್ಯ ನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ

ವಿಜಯಪುರ,ಸೆ,೧೪: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಸೋದರಳಿಯನ ಪತ್ನಿ ಮೇಲೆ ಹಲ್ಲೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ, ಅಕ್ಕನ ಪುತ್ರ ಫಯಾಜ್ ಕರಜಗಿ ಪರವಾಗಿ ನಿಂತು ರಾಜು ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಫಯಾಜ್ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಲವಂತಾಗಿ ವಿಷ ಕುಡಿಸಿರುವ ಆರೋಪ ಮಾಡಲಾಗಿದ್ದು, ಪ್ರಸ್ತುತ ಸನಾ ಕರಜಗಿ(ಫಯಾಜ್ ಪತ್ನಿ) ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಸನಾ ಕರಜಗಿ ಅವರ ತಾಯಿ ಫಾತಿಮಾ…

ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!!

Writing: ಪರಶಿವ ಧನಗೂರು ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!! ಒಂದು ಕಾಲಕ್ಕೆ ದಂತಚೋರ, ಕಾಡುಗಳ್ಳ,ನರಹಂತಕ ವೀರಪ್ಪನ್ ಹಾವಳಿಯಿಂದ ಕುಖ್ಯಾತಿ ಪಡೆದಿದ್ದ ಕರ್ನಾಟಕ ತಮಿಳುನಾಡು ಗಡಿಯ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಈಗ ಮತ್ತೆ ಕಾಡುಗಳ್ಳ ಮರಿವೀರಪ್ಪನ್ ಗಳ ಕಾಟ ಮಿತಿಮೀರುತ್ತಿದೆ! ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಬಸವನಬೆಟ್ಟ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ರಾತ್ರಿವೇಳೆ ಎರಡು ಜಿಂಕೆ ಗಳನ್ನು ಗುಂಡಿಟ್ಟು ಕೊಂದು ಬೇಟೆಯಾಡುತಿದ್ದ ಮೂವರು ಕಾಡುಗಳ್ಳರ ಮೇಲೆ ಗುಂಡಿನ…

ಡಬಲ್ ಮರ್ಡರ್ ವ್ಯಕ್ತಿಗಳ ಚಹರೆ ಪತ್ತೆ;ಗಾಂಜಾ ಏಟಿಗೆ ಬಲಿಯಾದ್ರಾ ಇಬ್ಬರು?

ಬೆಂಗಳೂರು,ಸೆ,02: ನಗರದ ಹೊರವಲಯದ ಆನೇಕಲ್ ತಾಲ್ಲೂಕಿನ ಸಿಂಗೇನ ಅಗ್ರಹಾರದ ಗೋಲ್ಡ್ ಕಾಯಿನ್ ಕ್ಲಬ್ ಎದುರಿನ ನಿರ್ಜನ ನೀಲಗಿರಿ ತೋಪಿನಲ್ಲಿ ನಡೆದಿದ್ದ ಡಬಲ್ ಮರ್ಡರ್ ವ್ಯಕ್ತಿಗಳ ಮಾಹಿತಿ ಲಭ್ಯವಾಗಿದ್ದು ರವಿಕುಮಾರ್ ಮತ್ತುಕೊಲ್ಕತ್ತಾ ಮೂಲದ ಚಂದನ್ ಗುಪ್ತಾ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದ ಸಮೀಪದ ಏರಿಯಾದ ನಿವಾಸಿ ರವಿಕುಮಾರ್. ಚಂದನ್ ಹುಸ್ಕೂರು ಸಮೀಪದ ಘಟ್ಟಹಳ್ಳಿಯಲ್ಲಿ ವಾಸವಿದ್ದನೆನ್ನಲಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್, ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್  ಆಗಮಿಸಿ ಸ್ಥಳಪರಿಶೀಲನೆ ನಡೆಸಿ ಈ ನಿಗೂಢ ಕೋಲೆಗಳ ಹಿಂದಿನ ಸತ್ಯ…

ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಹಣಮಾಡುತ್ತಿದ್ದ ದಂಧೆ ಕೋರನ ಬಂಧನ!

ಬೆಂಗಳೂರು,ಸೆ,02: ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಸಾರ್ಜನಿಕರಿಗೆ ವಂಚಿಸುತ್ತಿದ್ದ‌ ದಂಧೆಕೋರನನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ನಿಪುಣ್(30) ಬಂಧಿತ ಆರೋಪಿಯಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದ. ಕೇರಳದ ತ್ರಿಸೂರ್ ಜಿಲ್ಲೆಯವನಾದ ನಿಪುಣ್, ಕೇರಳದ ವಿದ್ಯಾರ್ಥಿಗಳನ್ನು ಯಾಮಾರಿಸಲು ಮುಂದಾಗಿದ್ದ. ಹುಳಿಮಾವು ಬಳಿಯ ನ್ಯಾನಪ್ಪನಹಳ್ಳಿಯ ಆವನಿ ಶ್ರಂಗೇರಿನಗರದ ಮನೆಯಲ್ಲಿ ಈ ನಕಲಿ ಪಾಸ್ ಪೋರ್ಟ್ ದಂದೆ ನಡೆಸುತ್ತಿದ್ದ. ಕೇರಳ ಮೂಲದ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದ ಕೋವಿಡ್ ನೆಗೆಟಿವ್ ವರದಿಗಳನ್ನ ಹಣಕ್ಕಾಗಿ ತಯಾರಿಸಿ ಕೊಡುವುದರ ಜೊತೆಗೆ ಮುಖ್ಯವಾಗಿ ವಿದೇಶಗಳಿಗೆ ಎಡತಾಕುವ ವಿದ್ಯಾರ್ಥಿಗಳಿಂದ ಲಕ್ಷ-ಲಕ್ಷ ಹಣ ಪಡೆದು…

ಕಾರು ಅಪಘಾತ; ಏಳು ಮಂದಿ ಸಾವು

ಬೆಂಗಳೂರು,ಆ.೩೧: ತಡರಾತ್ರಿ ನಗರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ; ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇವರು ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಈ ಅವಘಡ ಸಂಭಿಸಿದೆ.ಕೋರಮಂಗಲ ೮೦ ಅಡಿ ರಸ್ತೆಯ ಮಂಗಳ ಕಲ್ಯಾಣ ಮಂಟಪದ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಕಾರು ಆಡಿ ಕ್ಯೂ ಎನ್ನಲಾಗಿದ್ದು, ವೇಗವಾಗಿ ಬಂದಿದ್ದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ತಡರಾತ್ರಿ ಬಹಳ ವೇಗವಾಗಿ ಬಂದ ಕಾರು ಫುಟ್‌ಪಾತ್‌ಗೆ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ೭…

ಜಮೀನು ವಿವಾದಕ್ಕೆಒಂದೇ ಕುಟುಂಬದ ನಾಲ್ವರು ಹತ್ಯೆ

ಬಾಗಲಕೋಟೆ,ಆ,28: ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರು ಹತ್ಯೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದ ಜಮೀನೊಂದರಲ್ಲಿ ನಡೆದಿದೆ. ಜಮೀನು ವಿಚಾರಕ್ಕೆ ಎರಡು ಕುಟುಂಬದ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮುದರೆಡ್ಡಿ ಎಂಬುವರ ಕುಟುಂಬದ ನಾಲ್ವರನ್ನು ಮತ್ತೊಂದು ಕಡೆಯವರು ಹತ್ಯೆ ಮಾಡಿದ್ದಾರೆ. ಹನುಮಂತ (48), ಮಲ್ಲಪ್ಪ (44), ಈಶ್ವರ (40) ಹಾಗೂ ಬಸವರಾಜ್ (36) ಎಂಬುವರು ಕೊಲೆಗೀಡಾಗಿದ್ದಾರೆ.ಪುಠಾಣಿ ಎಂಬ ಕುಟುಂಬಸ್ಥರು ಈ ನಾಲ್ವರನ್ನು ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ. ಸ್ಥಳಕ್ಕೆ ಜಮಖಂಡಿ…

ಮೈಸೂರು ಐವರು ಅತ್ಯಾಚಾರ ಆರೋಪಿಗಳ ಬಂಧನ

ಬೆಂಗಳೂರು, ಆ,೨೮: ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿನಡೆದಿದ್ದ, ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ತಮಿಳುನಾಡಿನಲ್ಲಿಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಘಟನೆ ನಡೆದ ಐದು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಮೈಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.ಘಟಮಾ ಸ್ಥಳದಲ್ಲಿ ತಮಿಳುನಾಡು ಬಸ್‌ಟಿಕೆಟ್ ದೊರೆತ ಹಿನ್ನೆಯಲ್ಲಿ ಅದೇ ಜಾಡು ಹಿಡಿದು ತನಿಖಾ ತಂಡ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದರೆ, ಓರ್ವನನ್ನು ಚಾಮರಾಜನಗರದವನು ಎಂದು ಹೇಳಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು.…

ಮೈಸೂರು ಚಾಮುಂಡಿಬೆಟ್ಟದ ತಪ್ಪಲಲ್ಲಿ ಯುವತಿ ಮೇಲೆ ಸಾಮೂಹಿಕ‌ ಅತ್ಯಾಚಾರ

ಮೈಸೂರು,ಆ,25: ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ. ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಮಂಗಳವಾರ ಸಂಜೆ ಘಟನೆ ಸಂಭವಿಸಿದೆ. ಹಾಡಹಗಲೇ ಯುವಕನಿಗೆ ಗುಂಡು ಹಾರಿಸಿ ಜ್ಯುವೆಲ್ಲರಿ ಶಾಪ್ ದರೋಡೆ, ಯುವತಿಗೆ ಚಾಕುವಿನಿಂದ ಇರಿತ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಚಾಮುಂಡಿ ಬೆಟ್ಟಕ್ಕೆ ಯುವತಿಯು ತನ್ನ ಪ್ರಿಯಕರನ ಜೊತೆ ತೆರಳಿದ್ದಳು. ಅವರಿಬ್ಬರು ಬೈಕ್​ನಲ್ಲಿ ವಾಪಸ್ ಬರುವಾಗ ಲಲಿತಾದ್ರಿಪುರ ರಸ್ತೆಯ…

ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ; ಶೀಘ್ರ ಆರೋಪಿಗಳ ಪತ್ತೆ- ಗೃಹಸಚಿವರ ಭರವಸೆ

ಬೆಂಗಳೂರು,ಆ,12: ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ತಡರಾತ್ರಿ 1.25 ರ ವೇಳೆಗೆ ಈ ಘಟನೆ ಜರುಗಿದ್ದು, ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಬೆಂಕಿಗಾಹುತಿ ಆಗಿವೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಜನ ವ್ಯಕ್ತಿಗಳು ಪೆಟ್ರೋಲ್ ಕ್ಯಾನ್​ಗಳನ್ನ ತಂದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಮನೆಯ ಅಂಗಳದೊಳಗೆ ಈ ಕಾರುಗಳನ್ನ ನಿಲ್ಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಗೃಹಸಚಿವ ಅರಗ ಜ್ಞಾನೇಂದ್ರ ಬೇಟಿ…

ಬೆಳ್ಳಂಬೆಳಿಗ್ಗೆ ರೌಡಿಗಳ ಮನೆಮೇಲೆ ದಾಳಿ,18 ರೌಡಿಗಳ ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು, ಜು,31:ಇತ್ತೀಚೆಗೆ ನಗರದಲ್ಲಿ ಮಿತಿಮೀರುತ್ತಿರುವ ಸಮಾಜ ಘಾತಕ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸರು ಈ ಘಟನೆಗಳಿಗೆ ಕಾರಣವಾಗುತ್ತಿರುವ ಪುಡಾರಿಗಳ ಮನೆಮೇಲೆ ದಾಳಿ ಮಾಡಿ 18 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಇಂದು ಬೆಳ್ಳಂಬೆಳಿಗ್ಗೆ ರೌಡಿಗಳ ಮನೆ ಮೇಲೆ ದಾಳಿ ನಡೆಸಲಾಗಿದ್ದು,ಪುಡಾರಿಗಳಿಗೆ ಪುಂಡಾಟ ನಡೆಸದಂತೆ‌ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಯಲ್ಲಿ ಕುಖ್ಯಾತ ರೌಡಿಗಳಾದ ಹಂದಿ ಶಿವ,ಅತಾವುಲ್ಲಾ,ತೇಜಸ್,ಮಣಿಕಾಂತ,ಆನಂದ್ ಅಲಿಯಾಸ್ ಬ್ರಿಡ್ಜ್, ಗೆಜ್ಜೆ ವೆಂಕಟೇಶ ಸೇರಿದಂತೆ 63 ರೌಡಿಗಳ ಮನೆ ಮೇಲೆ…

ಸಿನಿಮಾ ರಂಗದಲ್ಲಿ ಕಾಸ್ಟ್ ಕೌಚಿಂಗ್ ತಲೆಹಿಡುಕರ ಹಾವಳಿ!!

Writing- ಪರಶಿವ ಧನಗೂರು ಈಗ ಸದ್ಯಕ್ಕೆ ಭಾರತೀಯ ಸಿನಿಮಾ ರಂಗದಲ್ಲಿ ನಟಿ ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾನ ನೀಲಿಚಿತ್ರಗಳರ್ಯಾಕೆಟ್ ನಿಂದ ಕಲಾ ಮಾಧ್ಯಮಕ್ಕೆ ಕಳಂಕ ಮೆತ್ತುಕೊಂಡು ಭಾರತೀಯ ಚಿತ್ರರಂಗವೇ ಜಗತ್ತಿನೆದುರು ತಲೆತಗ್ಗಿಸುವಂತಾಗಿದೆ. “ಯಂತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ..!” ಎಲ್ಲಿ ಮಹಿಳೆಯರನ್ನು ಗೌರವಾದರಗಳಿಂದ ಕಾಣಲಾಗುತ್ತದೋ ಅಲ್ಲಿ ದೇವಾನೂ ದೇವತೆಗಳಿರುತ್ತಾರೆ. ಎಂದು ಶತಮಾನಗಳಿಂದಲೂ ಪಠಿಸುತ್ತಲೇ ಬರುತ್ತಿರುವ, ದೇಶದ ಉದ್ದಗಲಕ್ಕೂ ಸಾವಿರಾರು ಹೆಣ್ಣು ದೇವತೆಗಳ ದೇವಾಲಯಗಳನ್ನು ಕಟ್ಟಿಸಿ, ದಿನನಿತ್ಯ ಪೂಜೇ ಪುರಸ್ಕಾರ ಗಳಲ್ಲಿ ತೊಡಗಿರುವ, ಭಾರತೀಯರಾದ…

ಬಿಎಸ್‌ವೈ ರಾಜೀನಾಮೆ;ಮನನೊಂದ ಅಭಿಮಾನಿ ಆತ್ಮಹತ್ಯೆ!

ಗುಂಡ್ಲುಪೇಟೆ.ಜು,೨೭: ಬಿಎಸ್‌ವೈ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೊಮ್ಮಲಪುರದಲ್ಲಿ ಜರುಗಿದೆ. ಗ್ರಾಮದ ರ.ವಿ ( ೩೫) ಎಂಬಾತ ನಿನ್ನೆ ಸಂಜೆ ತಮ್ಮ ಅಂಗಡೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಬಿಎಸ್‌ವೈ ಅಪ್ಪಟ ಅಭಿಮಾನಿಯಾಗಿದ್ದ ರವಿಯನ್ನು ಗ್ರಾಮದಲ್ಲಿ “ರಾಜಾಹುಲಿ” ಎಂದು ಅಡ್ಡ ಹೆಸರಿನಲ್ಲಿ ಕರೆಸಿಕೊಳ್ಳುತ್ತಿದ್ದರು. ನಿನ್ನೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದರಿಂದ ಬೇಸರಗೊಂಡು ಅತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸಾಲದಿಂದ ಬೇಸತ್ತು..? ರವಿ ಸಾಲ ಮಾಡಿದ್ದ ಒತ್ತಡ…

ಸೈಲೆಂಟ್ ಸುನೀಲ್ ಸೇರಿ 58 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ

ಬೆಂಗಳೂರು, ಜು,24: ನಗರದ ನಟೋರಿಯಸ್ ರೌಡಿ ಸೈಲೆಂಟ್ ಸುನೀಲ ಸೇರಿದಂತೆ58 ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿನಡೆಸಿದ್ದಾರೆ. ರೌಡಿಗಳ ಕಾಳುಗಳನ್ನು ಹತ್ತಿಕ್ಕಲು ಮುಂದಾಗಿರುವ ಪೊಲೀಸರು ಈ ದಾಳಿ ನಡೆಸಿದ್ದು ಈ ವೇಲಕೆ 28 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಹಾಗೂ ಹಲವು ರೌಡಿಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮಾರಕಾಸ್ತ್ರ ಹಾಗೂ ಗಾಂಜಾ ಜಪ್ತಿ ಮಾಡಿದ್ದರು. ರೌಡಿಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನೀಲ್,…

ಹಾಡುಹಗಲೇ ಬ್ಯಾಂಕಿಗೆ ನುಗ್ಗಿ ರೌಡಿ ಹತ್ಯೆ

ಬೆಂಗಳೂರು, ಜು.19:ಪತ್ನಿಯ ಜೊತೆಗೆ ಬ್ಯಾಂಕ್ ಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಮಾಡಿದ ಘಟನೆ ಹಾಡುಹಗಲೆ ನಡೆದಿದೆ. ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನ ಯೂನಿಯನ್ ಬ್ಯಾಂಕ್ ನಲ್ಲಿ ರೌಡಿ ಬಬ್ಲು ಮತ್ತು ಆತನ ಪತ್ನಿ ವ್ಯವಹಾರ ನಡೆಸುತ್ತಿದ್ದಾಗ ಈ ಕೃತ್ಯ ಜರುಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಪತ್ನಿ ಜತೆ ಕೋರಮಂಗಲ 8ನೆ ಬ್ಲಾಕ್‍ನಲ್ಲಿರುವ ಯೂನಿಯನ್ ಬ್ಯಾಂಕ್ ಶಾಖೆ (ಕಾಪೆರ್ರೇಷನ್ ಬ್ಯಾಂಕ್)ಗೆ ಬಬ್ಲು ಬಂದಿದ್ದನು. ಆತನನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಬ್ಯಾಂಕ್‍ನೊಳಗೆ…

ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಪಡೆದು ಹೋಗಿದ್ದ ೧೧ ಖೈದಿಗಳು ನಾಪತ್ತೆ?

ಬೆಂಗಳೂರು, ಜು,18: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆಗಾಗ ಪೆರೋಲ್ ಮೇಲೆ ಹೊರಗೆ ಹೋದವರು ಪರಾರಿಯಾಗುವುದು ಇದ್ದೆ ಇರುತ್ತದೆ. ಈಗ ಮತ್ತೆ ೧೧ ಮಂದಿ ಖೈದಿಗಳು ಪೆರೋಲ್ ಮೇಲೆ ಹೋದವರು ನಾಪತ್ತೆಯಾಗಿದ್ದಾರೆ.ಇದು ಪೊಲೀಸರಿಗೆ ತಲೆನೋವಾಗಿ ಪರಿಷಮಿಸಿದೆ. ಸಜಾ ಬಂಧಿಗಳಿಗೆ ವರ್ಷಕ್ಕೆ ಮೂರು ತಿಂಗಳು ಪೆರೋಲ್ ಪೆರೋಲ್ ಮೇಲೆ ರಜೆಗೆ ಹೋಗಲು ಅವಕಾಶವಿದೆ . ವರ್ಷಕ್ಕೆ 90 ದಿನಗಳು ಹೊರಗೆ ಇರಬಹುದು ಒಂದೇ ಬಾರಿ ಮೂರು ತಿಂಗಳು ಸಿಗದಿದ್ದರೂ ಹಂತ ಹಂತವಾಗಿ ಪೆರೋಲ್ ರಜೆ ಪಡೆಯಬಹುದು. ಹೀಗಾಗಿ ಕಾರಗೃಹ ಅಧಿಕಾರಿಗಳು…

ಆನೇಕಲ್;೫೬ ಆರೋಪಿಗಳ ಬಂಧನ ೭೪ ಲಕ್ಷ ಅಧಿಕ ಮೌಲ್ಯದ ವಸ್ತುಗಳ ವಶ

ನೇಕಲ್,ಜು.೧೫: ಸುಲಿಗೆ ಕಳ್ಳತನ ಸೇರಿದಂತೆ ೩೭ ಪ್ರಕರಣಗಳಲ್ಲಿ ಭಾಗಿಯಾಗಿದ್ದ ೫೬ ಆರೋಪಿಗಳನ್ನು ಬಂಧಿಸಿರುವ ಆನೇಕಲ್ ಉಪ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಸಂಬಂಧ ೭೪ ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ವರವಲಯದ ಸುತ್ತ ಹಲವಾರು ರಾಬರಿಗಳು ಮತ್ತು ಕಳ್ಳತನಗಳು ನಡೆಯುತ್ತಿದ್ದವು ಕೆಲವು ಕ್ಲಿಸ್ಟ್ ಪ್ರಕರಣಗಳನ್ನು ಬೆನ್ನು ಹತ್ತಿ ಪೊಲಿಸುರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ . ಹಲವು ಕ್ಲಿಷ್ಟ ಪ್ರಕರಣಗಳನ್ನು ಭೇದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ…

error: Content is protected !!