ಬೆಂಗಳೂರು
ರಾಜ್ಯದೆಲ್ಲಡೆ ಮನೆ-ಮನೆಗೂ ತೆರಳಿ ಕೊರೊನಾ ಸೋಂಕು ಪರೀಕ್ಷೆ-ಅಶೋಕ್
ಬೆಂಗಳೂರು, ಮೇ ೨೪: ಇನ್ನೂ ಮುಂದೆ ರಾಜ್ಯದ ಎಲ್ಲಾ ಕಡೆಯೂ ಕೊರೊನಾ ಸೋಂಕಿತರ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಂದಾಯಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್,ಅಶೋಕ್ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಕೂಡ ಪ್ರತಿ ಮನೆಗಳಿಗೂ ತೆರಳಿ ವಿಶೇಷ ತಂಡ ಕೊರೊನಾ ಸೋಂಕಿತರನ್ನು ಗುರುತಿಸಲಾಗುತ್ತದೆ ಈ ಕುರಿತಂತೆ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ಅವರು ಹೇಳಿದರು.…