ಅಂಕಣ
ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ?
ಎಲ್ಲಿ ಶೋಭಕ್ಕ..? ಕಾಣಿಸ್ತಿಲ್ಲ ಅಕ್ಕಪಕ್ಕ? ಒಂದೆರಡು ವರ್ಷದ ಹಿಂದೆ ರಾಜ್ಯದ ಅತ್ಯಂತ ವರ್ಣರಂಜಿತ ರಾಜಕಾರಣಿಗಳ ಪಟ್ಟಿಯಲ್ಲಿದ್ದ, ನಿತ್ಯ ಸುದ್ದಿಯ ಸರಕಾಗಿದ್ದ ಶೋಭಾ ಕರಂದ್ಲಾಜೆ ಈಗ ಎಲ್ಲೂ ಕಾಣಿಸುತ್ತಿಲ್ಲ. ಹೋದಲ್ಲಿ ಬಂದಲ್ಲಿ, ಶಾಸನ ಸಭೆ ಅಧಿಕಾರಿಗಳ ಗ್ಯಾಲರಿಯಲ್ಲಿ, ವಿಧಾನ ಮಂಡಲದ ಮೊಗಸಾಲೆಯಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ, ಆಡಳಿತ ಶಕ್ತಿ ಕೇಂದ್ರ ವಿಧಾನ ಸೌಧ, ವಿಕಾಸ ಸೌಧದ ಕಾರಿಡಾರುಗಳಲ್ಲಿ ಮುಗುಳ್ನಗೆ ಚೆಲ್ಲುತ್ತ ನಿಧಾನ ಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದ, ಎದುರಿಗೆ ಬಂದವರಿಂದ ನಮಸ್ಕಾರ ಸ್ವೀಕರಿಸುತ್ತ, ಪರಿಚಯದ ಮುಖ ಎದುರಾದರೆ ಹೆಲೋ ಹೇಳಿ…