Browsing: ಅಂಕಣ

ಅಂಕಣ

ಸಿದ್ದು -ಯಡ್ಡಿ ಜಗಳಬಂದಿ

ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಎಂದೂ ಸುಗಮವಾದ ಜುಗಲ್ ಬಂದಿ ಇರುವುದು ಸಾಧ್ಯವಿಲ್ಲ ಎನ್ನುವುದು ಸ್ವಾತಂತ್ರ್ಯ ಬಂದ ಲಾಗಾಯ್ತಿನಿಂದಲೂ ದೇಶ ಕಂಡಿರುವ ಸತ್ಯ. ಆಳುವ ಪಕ್ಷ ಒಂದು ಕಡೆ, ಇನ್ನೊಂದು ಕಡೆಯಲ್ಲಿ ಆಡಳಿತ ಇಲ್ಲ ಎನ್ನುವ ಕಾರಣಕ್ಕೆ ಅಳುವ ಪಕ್ಷ. ಅವುಗಳ ನಡುವೆ ಇರುವುದು ಜಗಳಬಂದಿ ಮಾತ್ರ. ಜಗಳಕ್ಕೆ ಇಂಥದೇ ಕಾರಣ ಬೇಕೆಂದೇನೂ ಇಲ್ಲ, ಕಾರಣ ತನ್ನಷ್ಟಕ್ಕೆ ಹುಟ್ಟಿಕೊಳ್ಳುತ್ತದೆ; ತಾರ್ಕಿಕ ಅಂತ್ಯ ಕಾಣದೆ ತನ್ನಷ್ಟಕ್ಕೆ ತಾನೇ ಸಾಯುತ್ತದೆ. ವಿರೋಧ ಪಕ್ಷದ ನಾಯಕರು ಅಧಿಕಾರಿಗಳನ್ನು ಕರೆದು ಅಭಿವೃದ್ಧಿ…

‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ

ಶ್ರೀ ಆರೂಢಭಾರತೀ ಸ್ವಾಮೀಜಿ ಸಂಸ್ಕೃತ ಪಾಂಡಿತ್ಯ ಪಡೆದಿದ್ದು ಧಾರ್ಮಿಕತೆಯ ಲೌಕಿಕ-ಅಲೌಕಿಕ ಬದುಕಿನ ತರ್ಕಗಳೊಂದಿಗೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ, ಹಾಗೆಯೇ ಈ ವಾರ ಶ್ರೀಗಳು ಬಾಲಕ ಸಿದ್ಧ ಪಡೆದ ‘ಓಂಕಾರದ ಸಾಧನೆಯನಿಜಸ್ವೂರಪ ಕುರಿತು ವಿವರಿಸಿದ್ದಾರೆ ಈ ವಾರದ ಜ್ಞಾನ ದೀಪ್ತಿ ಅಂಕಣದಲ್ಲಿ. ಶ್ರೀ ಆರೂಢಭಾರತೀ ಸ್ವಾಮೀಜಿ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ,ರಾಮೋಹಳ್ಳಿ ಆರೂಢದರ್ಶನ-೨ ‘ಓಂ’ಕಾರ ಸಾಧನೆಯೇ ಪ್ರಣವೋಪಾಸನೆ ತಂದೆ ಗುರುಶಾಂತಪ್ಪನು ಪುತ್ರನಾದ ಸಿದ್ಧಬಾಲಕನನ್ನು ಶಾಲೆಗೆ ಕರೆದು ತಂದನು.‘ಸಿದ್ಧನಿಗೆ ಐದು ವರ್ಷಗಳಾಗಿರುವುದುರಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕು ಎಂದು ಗುರುಗಳಲ್ಲಿ ವಿನಂತಿಸಿ,…

ಅಪ್ಪ ಅಂದ್ರೆ ಅಕಾಶ..

ಲೇಖಕಿಯ ಪರಿಚಯ ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ.ಎ.ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ, ಇ-ಪತ್ರಿಕೆಗಳಲ್ಲಿ, ವೆಬ್ಸೈಟ್ ಗಳಲ್ಲಿ ಪ್ರಕಟವಾಗಿದ್ದು ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ ದತ್ತಿ ಮತ್ತು ‘ಕಲೇಸಂ’ ನ…

ಆರೋಢದರ್ಶನ-೧ ಲೌಕಿಕ -ಅಲೌಕಿಕ ವಿದ್ಯೆಯ ತರ್ಕ!

ಲೇಖಕರ ಪರಿಚಯ: ಡಾ|| ಆರೂಢ ಭಾರತೀ ಸ್ವಾಮೀಜಿ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಲ್ಲೂಕಿನ ಹುಣಸ್ಯಾಳ ಪಿ.ಬಿಯಲ್ಲಿ ಬಸಗೊಂಡಪ್ಪ ಮತ್ತು ಶಾವಂತ್ರವ್ವ ದಂಪತಿಯ ಪುತ್ರರಾಗಿ ೧೯೬೮ ಜೂನ್ ೩೦ರಲ್ಲಿ ಜನಸಿದ್ದು, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿ ಸಂಸ್ಕೃತ ಹಾಗೂ ಪ್ರೌಢಶಾಲೆ ಕಲಿತು ಅಲ್ಲಿಂದ ಆದಿಚುಂಚನಗಿರಿಯಲ್ಲಿ ಸಂಸ್ಕೃತ ಅಧ್ಯಯನ ಮುಂದುವರೆಸಿದರು ಆನಂತರ ಬೆಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ ಮಂದಿರದಲ್ಲಿದ್ದು ಶ್ರೀಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಂಸ್ಕೃತ ವ್ಯಾಕರಣ,ಅದ್ವೈತವೇದಾಂತ,ಅಲಂಕಾರ ತರ್ಕಶಾಸ್ತ್ರಗಳಲ್ಲಿ ಎಂಎ ವಿದ್ಯವತ್ ಪೂರೈಸಿದರು.ಅಲ್ಲದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ…

ಜನನಿ ಜನ್ಮಭೂಮಿ

ವಿಶಾಲಾ ಆರಾಧ್ಯ ರಾಜಾಪುರ ಈ ತಿಂಗಳ ಮಾರ್ಚ್ ಎರಡನೇ ಭಾನುವಾರದಂದು ವಿಶ್ವ ಅಮ್ಮಂದಿರ ದಿನವನ್ನು ಆಚರಿಸಿದೆವು. ತಮ್ಮ ತಮ್ಮ ಅಮ್ಮಂದಿರನ್ನು ಮಾತನಾಡಿಸಿಯೋ ಫೋಟೋ ಕ್ಲಿಕ್ಕಿಸಿಯೋ ಎಲ್ಲರೂ ಅಮ್ಮನ ಫೋಟೋವನ್ನು ನಮ್ಮ ನಮ್ಮ ಸ್ಟೇಟಸ್ ಗಳಲ್ಲಿ ವಿಜೃಂಭಿಸಿದೆವು. ನಂತರ ಅಮ್ಮನ ಬಗ್ಗೆ ಯೋಚಿಸಿ ಅವಳೊಡನಿದ್ದು ಅವರ ಭಾವನೆಗಳು, ವಿಚಾರಗಳ ಆಗುಹೋಗುಗಳನ್ನು ನಾವು ಸರಿಯಾಗಿ ವಿಚಾರಿಸುತ್ತೇವೆಯೇ? ಎಂಬ ಸ್ವ ವಿಮರ್ಶೆ ಮಾಡಿಕೊಳ್ಳೋಣ. ನಮ್ಮ ಹುಟ್ಟಿಗೂಮುನ್ನವೇ ಜೀವಾಂಕುರವಾದಾಗಿನಿಂದ ನಮ್ಮನ್ನು ತನ್ನ ಹೊಟ್ಟೆಯಲ್ಲಿ ಪೊರೆದವಳನ್ನು ಅಲ್ಲಿಂದಲೇ ಕಾಲುಗಳನ್ನು ಚಾಚಿ ಒದೆಯಲು ಶುರುಮಾಡುತ್ತೇವೆ. ಅದು…

1 8 9 10
error: Content is protected !!