Browsing: ವಾಣಿಜ್ಯ

ವಾಣಿಜ್ಯ

ಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವೆ ನಿರ್ಮಲಾ, ಪಿಯೂಷ್ ಗೆ ಆಹ್ವಾನ

ಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವೆ ನಿರ್ಮಲಾ, ಪಿಯೂಷ್ ಗೆ ಆಹ್ವಾನ by- ಕೆಂಧೂಳಿ ನವದೆಹಲಿ,ಫೆ,05-ಇದೇ ತಿಂಗಳ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬುಧವಾರ ಖುದ್ದಾಗಿ ಆಹ್ವಾನಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಸಚಿವೆಯನ್ನು ಭೇಟಿಯಾದ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಆಮಂತ್ರಣ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು, ಹೂಡಿಕೆದಾರರ ಸಮಾವೇಶದ ವೈಶಿಷ್ಟ್ಯಗಳನ್ನು ಮತ್ತು ರಾಜ್ಯ ಸರಕಾರದ…

ಹೂಡಿಕೆದಾರರ ಸಮಾವೇಶಕ್ಕೆ  ರಾಜನಾಥ್ ಸಿಂಗ್, ಎಚ್ ಡಿಕೆ, ಜೋಶಿಗೆ ಅಹ್ವಾನ ನೀಡಿದ ಎಂ.ಬಿ.ಪಾಟೀಲ್

ಹೂಡಿಕೆದಾರರ ಸಮಾವೇಶಕ್ಕೆ  ರಾಜನಾಥ್ ಸಿಂಗ್, ಎಚ್ ಡಿಕೆ, ಜೋಶಿಗೆ ಅಹ್ವಾನ ನೀಡಿದ ಎಂ.ಬಿ.ಪಾಟೀಲ್   by-ಕೆಂಧೂಳಿ ನವದೆಹಲಿ,ಫೆ,04-ಇದೇ 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಬರುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ಮಂಗಳವಾರ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಮೊದಲಿಗೆ ಸೋಮಣ್ಣ…

ಜಾಗತಿಕ ಹೂಡಿಕೆದಾರರ ಸಮಾವೇಶ: ಫೆ.೧೩ರಂದು ‘ಕ್ವಿನ್ ಸಿಟಿ ಕುರಿತು ರೌಂಡ್ ಟೇಬಲ್’ ಚರ್ಚೆ

ಜಾಗತಿಕ ಹೂಡಿಕೆದಾರರ ಸಮಾವೇಶ: ಫೆ.೧೩ರಂದು ‘ಕ್ವಿನ್ ಸಿಟಿ ಕುರಿತು ರೌಂಡ್ ಟೇಬಲ್’ ಚರ್ಚೆ    by-ಕೆಂಧೂಳಿ ಬೆಂಗಳೂರು,ಫೆ,೦೪- ಈ ಬಾರಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ದೇಶ- ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಹೆಸರಾಂತ ಉದ್ಯಮಗಳ ಪ್ರತಿಷ್ಠಾನಗಳೊಂದಿಗೆ ಉದ್ದೇಶಿತ ‘ಕ್ವಿನ್ ಸಿಟಿ’ಯಲ್ಲಿ ಅತ್ಯುತ್ಕೃಷ್ಟ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳ ಕ್ಷೇತ್ರದಲ್ಲಿ ಸಹಭಾಗಿತ್ವದ ಮೂಲಕ ದಕ್ಷ ಕಾರ್ಯ ಪರಿಸರ ಸೃಷ್ಟಿಸುವ ಕುರಿತು ಪ್ರತ್ಯೇಕ ರೌಂಡ್ ಟೇಬಲ್ ಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ…

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ, ಸಕಲ ಸಿದ್ಧತೆ

ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ, ಸಕಲ ಸಿದ್ಧತೆ by ಕೆಂಧೂಳಿ ಬೆಂಗಳೂರು,ಫೆ,03-ಇದೇ ತಿಂಗಳ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳೂ ಮುಗಿದಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆ.11ರ ಸಂಜೆಯೇ ಸಮಾವೇಶವನ್ನು ಉದ್ಘಾಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಸಮಾವೇಶದ ಸಿದ್ಧತೆ ಮತ್ತು ನಾನಾ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ…

ಬಜೆಟ್ ಬಳಿಕ ಡಿಜಿಟಲ್ ವಸ್ತುಗಳು ಇಳಿಕೆ ಸಾಧ್ಯತೆ?

ಬಜೆಟ್ ಬಳಿಕ ಡಿಜಿಟಲ್ ವಸ್ತುಗಳು ಇಳಿಕೆ ಸಾಧ್ಯತೆ? – ಎಂ.ಡಿ.ದಿನೇಶ್ ರಾವ್ ನವದೆಹಲಿ, ಜ,29-ಫೆಬ್ರವರಿ ಒಂದರೊಂದು ಕೇಂದ್ರ ದಿನ ನಿತ್ಯ ಬಳಕೆಯ ವಸ್ತುಗಳಾದ ಡಿಜಿಟಲ್ ವಸಗತುಗಳ ಬೆಲೆ ಇಳಿಕೆ ಯಾಗಲಿದೆ ಎನ್ನಲಾಗುತ್ತದೆ. ಕೇಂದ್ರ ವಿತ್ತ ಸಚಿವೆ ಪೆ.1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದು ಈ ಬಾರಿ ಮದ್ಯಮವರ್ಗದ ಜನರಿಗೆ ಒಂದಿಷ್ಟು ಸಿಹಿ ಸುದ್ದಿಗಳು ಸಿಗಲಿವೆ ಎನ್ನುವ ಮಾಹಿತಿಗಳಿವೆ. ಬಜೆಟ್ ನಂತರ ಯಾವೆಲ್ಲಾ ವಸ್ತುಗಳು ಕಡಿಮೆಯಾಗಲಿವೆ ಎನ್ನುವ ಮಾಹಿತಿ ಇಲ್ಲಿದೆ.. ದಿನ ನಿತ್ಯ ಬಳಕೆ ವಸ್ತುಗಳಿಂದ ಹಿಡಿದು, ಆಟೋಮೊಬೈಲ್,…

ಯಂತ್ರೋಪಕರಣ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ.50; ಹೆಚ್.ಡಿ.ಕುಮಾರಸ್ವಾಮಿ

ಯಂತ್ರೋಪಕರಣ ಉದ್ಯಮದಲ್ಲಿ ಕರ್ನಾಟಕದ ಪಾಲು ಶೇ.50; ಹೆಚ್.ಡಿ.ಕುಮಾರಸ್ವಾಮಿ by ಕೆಂಧೂಳಿ ಬೆಂಗಳೂರು,ಜ,23- ಯಂತ್ರೋಪಕರಣ ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದು, ಕರ್ನಾಟಕವು ಭಾರತದ ಯಂತ್ರೋಪಕರಣಗಳಲ್ಲಿ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ. ಈ ರಾಜ್ಯವು ದೇಶದ ಯಂತ್ರೋಪಕರಣಗಳ ರಾಜಧಾನಿ ಎಂದು ಪ್ರಖ್ಯಾತಿ ಆಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯಂತ್ರೋಪಕರಣ…

ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ- ಸಿಎಂ ಭರವಸೆ

ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ- ಸಿಎಂ ಭರವಸೆ by ಕೆಂಧೂಳಿ ಬೆಂಗಳೂರು, ಜ,23- ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಮಂಡ್ಯ, ಹಾಸನ,ಮೈಸೂರು ಚಾಮರಾಜನಗರ ಭಾಗದ ರೈತರಿಗೆ ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.…

ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಉದ್ಯಮ ದಿಗ್ಗಜರ ಜೊತೆ ಎಂ. ಬಿ. ಪಾಟೀಲ ಸಮಾಲೋಚನೆ

ಇನ್ವೆಸ್ಟ್ ಕರ್ನಾಟಕ; ದೆಹಲಿಯಲ್ಲಿ ಉದ್ಯಮ ದಿಗ್ಗಜರ ಜೊತೆ ಎಂ. ಬಿ. ಪಾಟೀಲ ಸಮಾಲೋಚನೆ by ಕೆಂಧೂಳಿ ನವದೆಹಲಿ,ಜ,22-ಮುಂದಿನ ತಿಂಗಳು 11ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ʼಇನ್ವೆಸ್ಟ್‌ ಕರ್ನಾಟಕ 2025ʼರ ಪೂರ್ವಸಿದ್ಧತೆಗಳ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರವು ಬುಧವಾರ ಇಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿತು. ಐಟಿಸಿ ಲಿಮಿಟೆಡ್‌, ರಿನ್ಯೂ ಪವರ್‌, ಸಂವರ್ಧನ ಮದರ್‌ಸನ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌, ಹ್ಯಾವೆಲ್ಸ್‌, ಕೆಇಐ ಇಂಡಸ್ಟ್ರೀಸ್‌, ದಾಲ್ಮಿಯಾ, ಫ್ಲೆಕ್ಸಿಬಸ್‌ ಮತ್ತಿತರ ಕಂಪನಿಗಳ ಉನ್ನತಾಧಿಕಾರಿಗಳ ಜೊತೆಗೆ ರಾಜ್ಯದ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು…

ಟಾಟಾ ಮೋಟರ್ಸ್ ಕಾರುಗಳ ಬೆಲೆ ಏರಿಸಿದ ಕಂಪನಿ

ನವದೆಹಲಿ,ಏ,23: ಪೆಟ್ರೋಲ್, ಡೀಸೆಲ್ ಹೀಗೆ ಪ್ರತಿಯೊಂದರ ಬೆಲೆ ಏರಿಕೆಯ ಪ್ರವೃತ್ತಿಯನ್ನು ಅನುಸರಿಸಿ, ಟಾಟಾ ಮೋಟಾರ್ಸ್ ಭಾರತದಲ್ಲಿ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಇನ್‌ಪುಟ್ ವೆಚ್ಚದಲ್ಲಿನ ಏರಿಕೆಯನ್ನು ಸರಿದೂಗಿಸಲು, ಸ್ವದೇಶಿ ವಾಹನ ತಯಾರಿಕಾ ಕಂಪನಿ ವಿವಿಧ ಮಾದರಿ ಆಧಾರದ ಮೇಲೆ ಸರಾಸರಿ 1.1 ರಷ್ಟು ದುಬಾರಿಯಾಗುತ್ತವೆ. ಬೆಲೆ ಏರಿಕೆಯು ಇಂದಿನಿಂದ ಅಂದರೆ 23 ಏಪ್ರಿಲ್ 2022 ರಿಂದ ಕಾರಿನ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಟಾಟಾ ಮೋಟಾರ್ಸ್ ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಿರುವುದು ಇದೇ ಮೊದಲಲ್ಲ. ಅವರು ಜನವರಿ…

ಬೆಂಗಳೂರು ವಿಮಾನ ನಿಲ್ದಾಣಕ್ಕೆ  `ಅತ್ಯುತ್ತಮ ವಿಮಾನ ನಿಲ್ದಾಣ’ ಪುರಸ್ಕಾರ

ಬೆಂಗಳೂರು,ಮಾ,26: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವು ತನ್ನ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಪ್ರಶಂಸೆಗೆ ಒಳಗಾಗಿದ್ದು ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆಗೆ ವಿಂಗ್ಸ್ ಇಂಡಿಯಾ ಅವಾರ್ಡ್ಸ್ 2022ರಲ್ಲಿ ಎರಡು ಪ್ರಮುಖ ಪುರಸ್ಕಾರಗಳನ್ನು ಗೆದ್ದಿದೆ. ಬೆಂಗಳೂರು ವಿಮಾನ ನಿಲ್ದಾಣವು ಸಾಮಾನ್ಯ ವಿಭಾಗದಲ್ಲಿ `ಶ್ರೇಷ್ಠ ವಿಮಾನ ನಿಲ್ದಾಣ’ ಎಂಬ ಪುರಸ್ಕಾರಕ್ಕೆ ಭಾಜನವಾಗಿದೆ ಮತ್ತು `ಏವಿಯೇಷನ್ ಇನ್ನೊವೇಷನ್’ ಪುರಸ್ಕಾರ ಗಳಿಸಿದೆ. ಈ ಮಾನ್ಯತೆಯು ಉದ್ಯಮದ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲಿ ಒಂದಾಗಿದೆ ಮತ್ತು ಗ್ರಾಹಕ ಸೇವೆ, ಸೌಲಭ್ಯಗಳು ಮತ್ತು ಆವಿಷ್ಕಾರಗಳ ಮೌಲ್ಯಮಾಪನದ ನಂತರ…

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದಿಂದ ಸಮೀಕ್ಷೆ; ಕರ್ನಾಟಕದಲ್ಲೇ ನಿಷೇಧಿತ ತಂಬಾಕು ಹೆಚ್ಚು ಬಳಕೆ

ಬೆಂಗಳೂರು,ಮಾ,02: ತಂಬಾಕು ಸೇವನೆ ಹಾಗೂ ಜಾಹಿರಾತಿಗೆ ಕಡಿವಾಣವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಬಗ್ಗೆ ರಾಜರೋಷವಾಗಿ ಜಾಹೀರಾತು ನೀಡಲಾಗುತ್ತಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ಸೂಮರ್ ಲಾ ಆಂಡ್ ಪ್ರಾಕ್ಟೀಸಸ್ ಸಹಯೋಹದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. 2019ರಲ್ಲಿ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವೆರಿ ಸಿಸ್ಟಮ್ಸ್ (ಇಎನ್‌ಡಿಎಸ್) ಮತ್ತು ಹೀಟೆಡ್ ತಂಬಾಕು ಪದಾರ್ಥ ಇವುಗಳ ಮೇಲೆ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ನಿಷೇಧ ಹೇರಿದೆ. ಈ ಬಗ್ಗೆ ಎಲ್ಲಿಯೂ ಜಾಹಿರಾತು ನೀಡುವಂತಿಲ್ಲ. ಆದರೆ, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್,…

ಮೆಕ್‌ಡೊನಾಲ್ಡ್ಸ್‌ನ  ವೆಸ್ಟ್ ಲೈಫ್ ಡೆವಲಪ್‌ಮೆಂಟ್ ಸಂಸ್ಥೆಯ ತ್ರೈಮಾಸಿಕ ಹಣಕಾಸು ಫಲಿತಾಂಶ ಘೋಷಣೆ

ಬೆಂಗಳೂರು,ಫೆ,14: ಮೆಕ್‌ಡೊನಾಲ್ಡ್ಸ್‌ನ ರೆಸ್ಟೋರೆಂಟ್‌ನ ಮಾಸ್ಟರ್ ಫ್ರಾಂಚೈಸಿಯಾದ ವೆಸ್ಟ್‌ಲೈಫ್‌ ಡೆವಲಪ್‌ಮೆಂಟ್ ಸಂಸ್ಥೆಯ ಡಿಸೆಂಬರ್ ಅಂತ್ಯಕ್ಕೆ ತ್ರೈಮಾಸಿಕ ಹಣಕಾಸು ಫಲಿತಾಂಶವನ್ನು ಪ್ರಕಟಿಸಿದೆ. ಇಂದೆಂದೂ ಕಾಣದಷ್ಟೂ ಉತ್ತಮ ಫಲಿತಾಂಶವನ್ನು ವೆಸ್ಟ್‌ಲೈಫ್ ಡೆವಲಪ್‌ಮೆಂಟ್ ಸಂಸ್ಥೆ ಸಾಧಿಸಿದೆ. 4,763.8 ಮಿಲಿಯನ್ ನಷ್ಟು ಆದಾಯ ಕಂಡುಬಂದಿದ್ದು, ಇದು ಶೇ. 46.7ರಷ್ಟು ಹೆಚ್ಚಳ ಎನ್ನಲಾಗಿದೆ. ಇನ್ನು ವಾರ್ಷಿಯ ಆದಾಯದಲ್ಲೂ 836.2 ಮಿಲಿಯನ್ ಕಂಡು ಬಂದಿದ್ದು, ಇದು ಶೇ. 61ರಷ್ಟು ಹೆಚ್ಚಳವಾಗಿದೆ. ಇನ್ನೂ ರೆಸ್ಟೋರೆಂಟ್ ಆಪರೇಟಿಂಗ್ ಮಾರ್ಜಿನ್ ಶೇ.60.3ರಷ್ಟು ಏರಿಕೆಯಾಗಿದ್ದು, 1,075 ಮಿಲಿಯನ್‌ಗೆ ತಲುಪಿದೆ. ಜೊತೆಗೆ ಮೆಕ್‌ಡೊನಾಲ್ಡ್ಸ್‌ನ ಡೆಲಿವರಿಯಲ್ಲೂ…

2020ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ವಿದೇಶಿಹೂಡಿಕೆಗೆ ದುಬೈ ಭೇಟಿ ನೆರವು: ನಿರಾಣಿ

ಬೆಂಗಳೂರು,ಅ.21-‘ದುಬೈ ಎಕ್ಸ್ ಪೋ 2020’ಭೇಟಿಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ರಾಜ್ಯದಲ್ಲಿ ಅನೇಕ ಪ್ರತಿಷ್ಠಿತ ಉದ್ಯಮಿಗಳು ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇದರಿಂದ ಉದ್ಯೋಗ ಅವಕಾಶಗಳು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್‌. ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು. ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮೂರು ದಿನಗಳಲ್ಲಿ ಕಾಲ ನಡೆದ ದುಬೈ ಎಕ್ಸ್ ಪೋ ದಲ್ಲಿ ಐಟಿಬಿಟಿ ಸಚಿವ ಡಾ. ಅಶ್ವಥ್ ನಾರಾಯಣ, ದುಬೈ-ಭಾರತೀಯ ಕೌನ್ಸಿಲರ್ ಡಾ. ಅಮನ್ ಪುರಿ, ಹೆಚ್ಚುವರಿ ಮುಖ್ಯ…

೧೧೦ರತ್ತ ಪೆಟ್ರೋಲ್ ಬೆಲೆ,ಡಿಸೆಲ್೧೦೦ರತ್ತ..!

ಬೆಂಗಳೂರು ,ಅ,೦೯: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ ೧೧ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ೩೧ ಪೈಸೆ ಏರಿಸಿ ೧ ಲೀಟರ್ ಪೆಟ್ರೋಲ್ ಅನ್ನು ೧೦೭.೧೪ ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ ೧ ಲೀಟರ್ ಪೆಟ್ರೋಲ್‌ಗೆ ೨೨ ಪೈಸೆ ಏರಿಸಲಾಗಿದ್ದು, ಅತ್ಯಧಿಕ ೧೦೯.೧೯ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್…

ಮಾಸ್ಟರ್ ಚೆಫ್ ತಮಿಳು ಆವೃತ್ತಿಯಲ್ಲಿ ಆಗಸ್ಟ್ ರಿಂದ ದೂರದರ್ಶನಕ್ಕೆ ಲಗ್ಗೆ

ರಾಮನಗರ ಜು 13: ಆಹಾರ ಪ್ರಿಯರನ್ನು ಒಗ್ಗೂಡಿಸುವ ಉದ್ದೇಶದೊಂದಿಗೆ ಇನ್ನೋವೇಟಿವ್ ಫಿಲ್ಮ್ ಅಕಾಡೆಮಿ (ಐಎಫ್‍ಎ) ಇಂದು ಬಹು ನಿರೀಕ್ಷಿತ ಪಾಕಶಾಲೆಯ ಪ್ರದರ್ಶನ – ಮಾಸ್ಟರ್ ಚೆಫ್ ತಮಿಳು ಆವೃತ್ತಿ ಬಿಡುಗಡೆ ದಿನಾಂಕವನ್ನು ರಾಮನಗರದ ಬಿಡದಿಯಲ್ಲಿರುವ ಇನ್ನೋವೇಟಿವ್ ಫಿಲ್ಮ್‍ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಿದೆ. ಪ್ರಾದೇಶಿಕ ಸ್ವರೂಪದಲ್ಲಿ ಅಂತರರಾಷ್ಟ್ರೀಯ ಗೌರವಾನ್ವಿತ ಪ್ರದರ್ಶನವನ್ನು ದೂರದರ್ಶನ ಪರದೆಗಳಿಗೆ ತರುವ ಮೂಲಕ, ಐಎಫ್‍ಎ ಎಂಡೆಮೋಲ್ ಶೈನ್ ಸಹಯೋಗದೊಂದಿಗೆ ಆಗಸ್ಟ್, 2021 ರಿಂದ ಪ್ರಾರಂಭವಾಗುವ ಮನೆ ಅಡುಗೆ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ. ಕಾರ್ಯಕ್ರಮದ ಬಿಡುಗಡೆಯ ಭಾಗವಾಗಿ…

ಕೊರೊನಾ ಔಷಧಗಳ ಮೇಲಿನ ಜಿಎಸ್ ಟಿ ಕಡಿತ

ನ ವದೆಹಲಿ,ಜೂ.12: ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ ಜಿಎಸ್ ಟಿ ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಚಿಕಿತ್ಸೆ…

ಬಿಟ್ಕಾಯಿನ್ನ‌ನಂತ ಕಿಪ್ಟೋಕರೆನ್ಸೆಗಳ ಬಗ್ಗೆ ರಿಜರ್ವಬ್ಯಾಂಕ್ ದೃಷ್ಟಿಕೋನಬದಲಾಗಿಲ್ಲ;ಶಕ್ತಿಕಾಂತ್ ದಾಸ್ ಸ್ಪಷ್ಟನೆ

ಮುಂಬೈ,ಜೂ,04: ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ರಿಸರ್ವ್ ಬ್ಯಾಂಕಿನ ದೃಷ್ಟಿಕೋನವು ಬದಲಾಗಿಲ್ಲ ಆ ಬಗ್ಗೆ ಕಳವಳಗಳನ್ನುಹೊಂದಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಆರ್‌ಬಿಐ ನೀತಿ ನಿರೂಪಣೆ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಯಾವುದೇ ಸಾರ್ವಭೌಮತ್ವವನ್ನು ಹೊಂದಿರದ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿರುವ ಆರ್‌ಬಿಐ ಈ ವಿಷಯದ ಬಗ್ಗೆ 2018 ರಲ್ಲಿ ಮೊದಲ ಬಾರಿಗೆ ಸುತ್ತೋಲೆ ಹೊರಡಿಸಿತ್ತು. ಅಂತಹಾ ಕ್ಷೇತ್ರಗಳಲ್ಲಿ ವ್ಯವಹರಿಸುವ, ನಿಯಂತ್ರಿಸುವ ಘಟಕಗಳನ್ನು ಅದು ನಿರ್ಬಂಧಿಸಿತ್ತು. ಆದಾಗ್ಯೂ, 2020…

ಮತ್ತೇ ತೈಲೋತ್ಪನ್ನಗಳ ದರ ಏರಿಕೆ

ನವದೆಹಲಿ,ಮೇ,೨೭: ಕಳೆದ ಎರಡು ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿರಲಿಲ್ಲ ಇಂದು ಮತ್ತೇ ದಿಡೀರ್ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್‌ಗೆ ೨೫ ಪೈಸೆ , ಡೀಸೆಲ್ ೩೦ ಪೈಸೆ ಎರಿಕೆ ಕಂಡಿದೆ ಆ ಮೂಲಕ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ದರ ೧೦೦ ರೂ ಗಡಿದಾಟಿದೆ. ಕಳೆದೊಂದು ವಾರದ ಅಂತರದಲ್ಲಿ ಸತತ ೬ನೇ ಬಾರಿಗೆ ತೈಲೋತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಇಂದಿನ ದರ ಏರಿಕೆ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ೯೩.೭೪ರೂ ಮತ್ತು ಡೀಸೆಲ್ ೮೪.೬೭ರೂ ಗೆ ಏರಿಕೆಯಾಗಿದೆ.…

ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ ಕೇಂದ್ರಕ್ಕೆ ವರ್ಗಾವಣೆ

ನವದೆಹಲಿ, ಮೇ,21:ಆರ್ ಬಿ ಐ ಹೆಚ್ಚುವರಿ ಹಣ 99,122 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಒಪ್ಪಿಗೆ ನೀಡಿದೆ. ಈ ಸಂಬಂಧ ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದಲ್ಲಿ ನಡೆದ ಆರ್ ಬಿ ಐ ಮಂಡಳಿ ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆರ್‌ಬಿಐ ಮಂಡಳಿಯ ಪ್ರಕಾರ, ಪ್ರಸ್ತುತ ಆರ್ಥಿಕ ಪರಿಸ್ಥಿತಿ, ಜಾಗತಿಕ ಮತ್ತು ದೇಶೀಯ ಸವಾಲುಗಳು ಮತ್ತು ಕೋವಿಡ್ ಎರಡನೇ ಅಲೆ ಆರ್ಥಿಕತೆಯ ಮೇಲೆ ಉಂಟು ಮಾಡಿರುವ ಪ್ರತಿಕೂಲ ಪರಿಣಾಮವನ್ನು ತಗ್ಗಿಸುವ ಸಲುವಾಗಿ…

ಭಾರೀ ಏರಿಕೆ ಕಂಡ ಚಿನ್ನದ ಬೆಲೆ

ಮುಂಬ್ಯೆ,ಮೇ,೧೮: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯಾಗಿದೆ. ಎರಡು ದಿನಗಳ ಹಿಂದೆ ೧೦ ಗ್ರಾಂಗೆ ೨೨ ಕ್ಯಾರೆಟ್ ಚಿನ್ನದ ಬೆಲೆ ೪೫,೦೬೦ ರೂ ಇತ್ತು ಇಂದು೪೬,೩೪೦ ರೂಗೆ ಏರಿಕೆಯಾಗಿದೆ. ಅದರೆ ದೇಶದ ಬೇರೆ ಬೇರೆ ನಗರಗಳಲ್ಲಿ ಬೆಲೆಯಲ್ಲಿ ಒಂದಿಷ್ಟು ವ್ಯತ್ಯೆಯಗಳಾಗಿವೆ ಎಲ್ಲಿ ಯಾವ ನಗರದಲ್ಲಿ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ: ಬೆಂಗಳೂರಿನಲ್ಲಿ ೨೪ ಕ್ಯಾರೆಟ್ ೧೦ ಗ್ರಾಂ ಚಿನ್ನದ ಬೆಲೆ ೨ ದಿನಗಳ ಹಿಂದೆ ೪೮,೯೮೦ ರೂ. ಇದ್ದುದು ಇಂದು ೪೯,೨೭೦ ರೂ.ಗೆ ಏರಿಕೆಯಾಗಿದೆ. ೨೨ ಕ್ಯಾರೆಟ್‌ನ…

error: Content is protected !!