Browsing: ರಾಜ್ಯ

ರಾಜ್ಯ

ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ – ಅರವಿಂದ ಲಿಂಬಾವಳಿ

ಬೆಂಗಳೂರು,ಜೂ,03:ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ  ಅರವಿಂದ ಲಿಂಬಾವಳಿ ಹೇಳಿದ್ದಾರೆ. ಭಾರತದ ಕೆಟ್ಟ ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಈ ವಿಚಾರವನ್ನು ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದಾಗ , ಅವರು ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ…

ಲಾಕ್ ಡೌನ್ ವಿಸ್ತರಿಸಿ. 10 ಸಾವಿರ ಪರಿಹಾರ ಕೊಡಿ- ಎಚ್ಡಿಕೆ

ಬೆಂಗಳೂರು,ಜೂ,03:ರಾಜ್ಯದಲ್ಲಿ ಇನ್ನೂ ಒಂದುವಾರ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಕೊರೋನಾ ಸೋಂಕು, ಬೆಂಗಳೂರಿನಲ್ಲಿ ಸ್ವಲ್ಪ ತಗ್ಗಿದ್ದರೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಲ್ಲ. ಆದ್ದರಿಂದ ಸರ್ಕಾರ, ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಲಾಕ್ ಡೌನ್ ಮುಂದುವರೆಸುವುದು ಸೂಕ್ತ ಎಂದು ಹೆಚ್ ಡಿಕೆ ಹೇಳಿದ್ದಾರೆ. ಕೊರೋನಾ ಸೋಂಕಿನ ಮೊದಲ ಅಲೆಯ ಕಳೆದ ವರ್ಷದ ಏಪ್ರಿಲ್ ಮತ್ತು…

ಮಾಜಿ ಶಾಸಕ ಎನ್.ಎಸ್.ಖೇಡ್ ನಿಧನ

ವಿಜಯಪುರ ,ಜೂ,03:ವಿಜಯಪುರ ಜಿಲ್ಲೆ ಇಂಡಿ ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಎನ್.ಎಸ್.ಖೇಡ್(74) ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ರೈತ ಕುಟುಂಬದಿಂದ ಬಂದಿದ್ದ ಎನ್.ಎಸ್.ಖೇಡ್ ಅವರು ವಿಜಯಪುರ ಜಿಲ್ಲೆಯ ಮುತ್ಸದ್ದಿ ನಾಯಕ ದಿ.ಬಿ.ಎಂ.ಪಾಟೀಲ್‍ರ ಅನುಯಾಯಿಯಾಗಿ ಯುವ ವಯಸ್ಸಿನಲ್ಲಿಯೇ ರಾಜಕೀಯ ಪವೇಶ ಮಾಡಿದ್ದರು. 1980ರಲ್ಲಿ ಜನತಾ ಪಕ್ಷದಿಂದ ಲೋಕಸಭೆಯಲ್ಲಿ ಸ್ಪರ್ಧಿಸಿ, ಅತ್ಯಂತ ಕಡಿಮೆ ಮತಗಳಿಂದ ಪರಾಭವಗೊಂಡಿದ್ದ ಇವರು ಇಡೀ ರಾಜ್ಯದ ಗಮನ ಸೆಳೆದಿದ್ದರು. ಮಾಜಿ ಪ್ರಧಾನಿಗಳಾದ ಚಂದ್ರಶೇಖರ, ಎಚ್.ಡಿ.ದೇವೆಗೌಡ…

ಕೆಎಸ್‌ಆರ್‌ಟಿಸಿ ಟ್ರೇಡ್ ಮಾರ್ಕ್-ಕಾನೂನು ಸಲಹೆ ಪಡೆದು ನಿರ್ಧಾರ-ಸವದಿ

ಬೆಂಗಳೂರು,ಜೂ,೩: ಕೆಎಸ್‌ಆರ್‌ಟಿಸಿ ಎನ್ನುವ ಟ್ರೇಡ್ ಮಾರ್ಕ್ ಅನ್ನು ಮೊದಲು ಬಳಿಸಿದ್ದೆ ಕರ್ನಾಟಕ ಇದನ್ನು ಬಳಸಬಾರದು ಎಂದು ಕೇರಳ ಈಗ ತಕರಾರು ತಗೆದಿದ್ದು ಈ ಕುರಿತಂತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿ ಅವರು, ನಮ್ಮದು ಒಕ್ಕೂಟ ವ್ಯವಸ್ಥೆ ಎಂದರೆ ಫೆಡರಲ್ ಸಿಸ್ಟಮ್. ಒಂದು ರಾಜ್ಯವು ಮತ್ತೊಂದು ರಾಜ್ಯದ ಜೊತೆಗೆ ಯಾವುದೇ ಸಂಘರ್ಷವಿಲ್ಲದೆ…

ಹೆತ್ತವರ ಕಳೆದುಕೊಂಡ ಅನಾಥಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದ ಜೊಲ್ಲೆ

ಬೆಂಗಳೂರು,ಜೂಂ3: ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದುಃಖದಲ್ಲಿ ಭಾಗಿಯಾಗಿ, ಅವರ ನೆರವಿಗೆ ನಿಲ್ಲುವುದು ನಮ್ಮ ಕರ್ತವ್ಯ. ಅಂತಹ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕೋವಿಡ್-19 ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳು ಹಾಗೂ ಅವರನ್ನು ಪಾಲನೆ ಮಾಡುತ್ತಿರುವ ಪಾಲಕರ ಜೊತೆಗೆ ಗೂಗಲ್ ಮೀಟ್ ಮೂಲಕ ವಿಡಿಯೊ ಸಂವಾದ ನಡೆಸಿ, ಅವರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಂದೆ ತಾಯಿಗಳನ್ನು ಕಳೆದುಕೊಂಡ…

ರಾಜ್ಯದಲ್ಲಿ16387 ಹೊಸ ಕೇಸ್ ಪತ್ತೆ, 21199 ಜನರು ಗುಣಮುಖ

ಬೆಂಗಳೂರು,ಜೂ,02 : ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಹೊಸ ಕೇಸ್ ಪತ್ತೆಯಾಗಿವೆ. ಇಂದು ಸಂಜೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ 16387 ಜನರಲ್ಲಿ ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿದೆ. ಹಾಗೂ 463 ಜನರು ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 21199 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ…

ಶ್ರೀ ಈಶ್ವರಾನಂದ ಸ್ವಾಮೀಜಿ ಬ್ರಹ್ಮೈಕ್ಯ

ಬೆಳಗಾವಿ, ಜೂ,01:ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ಶ್ರೀ ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೋ. ಬ್ರ. ಸದ್ಗುರು ಶ್ರೀ ಈಶ್ವರಾನಂದ ಮಹಾಸ್ವಾಮೀಜಿ (65) ಇಂದು ಬೆಳಗಿನ ಜಾವ 2 ಘಂಟೆಗೆ ಬ್ರಹ್ಮಲೀನರಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಕೋವಿಡ್ ಪೀಡಿತರಾಗಿದ್ದ ಶ್ರೀಗಳು ಕೊಲ್ಲಾಪುರ ಬಳಿಯ ಕಣೇರಿ ಮಠದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಅವರನ್ನು ಮಠಕ್ಕೆ ಕರೆತರಲಾಗಿತ್ತು. ಮಠದಲ್ಲಿಯ ಕೊನೆಯುಸಿರೆಳೆದರೆಂದು ಹೇಳಲಾಗಿದೆ. ಹುಕ್ಕೇರಿ ತಾಲ್ಲೂಕಿನ ಕೊಚ್ರಿ ಎಂಬಲ್ಲಿ ಶ್ರೀ ದುಂಡಪ್ಪ ಶ್ರೀಮತಿ ಶಿವಕ್ಕ ಲೋಳಸೂರೆ…

ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ೧೨೨ ರೂ ಇಳಿಕೆ

ನವದೆಹಲಿ,ಜೂ,೦೧: ತೈಲ ಬೆಲೆ ಜೊತೆ ಜೊತೆಗೆ ಏರಿಕೆಯಾಗುತ್ತಿದ್ದ ವಾಣಿಜ್ಯ ಅನಿಲ ಸಿಲಿಂಡರ್ ದರ ಇಳಿಕೆಯಾಗಿದೆ.ಆದರೆ ಗೃಹ ಬಳಿಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕೊರೊನಾ ಮದ್ಯೆ ಅಗತ್ಯವಸ್ತುಗಳು ಏರಿಕೆ ಕಾಣುತ್ತಿದ್ದವು ಈಗ ಅನಿಲಿ ಸಿಲಿಂಡರ್ ದರ ೧೨೨ ರೂ ಕಡಿತಗೊಳಿಸಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ೧೯ ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದು, ಪ್ರತೀ ಸಿಲಿಂಡರ್ ದರದಲ್ಲಿ ೧೨೨ರೂ ಕಡಿತ ಮಾಡಿದೆ. ಆದರೆ ೧೪.೨ ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಐಒಸಿ…

ಸಿದ್ದರಾಮಯ್ಯಗೆ ಜ್ವರ-ಮೂರು ದಿನ ವಿಶ್ರಾಂತಿ

ಬೆಂಗಳೂರು, ಜೂ, ೦೧: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಸೋಮವಾರ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ, ಈ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಯನ್ನು ಕೂಡ ಮಾಡಿಸಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತ ವೈದ್ಯ ಡಾ. ರವಿ ಕುಮಾರ್ ಅವರು ಆರೋಗ್ಯ ತಪಾಸಣೆ ನಡೆಸಿದ್ದು, ಎರಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ, ಆದರೂ ಜ್ವರ ಇರುವ…

ಆಸ್ತಿಗಾಗಿ ಸಹೋದರರ ನಡುವೆ ಜಗಳ-ಅಣ್ಣನನ್ನೇ ಕೊಂದ ಪಾಪಿ

ಮಂಡ್ಯ,ಜೂ,೦೧: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರ ನಡುವೆ ನಡೆದ ಜಗಳ ಅಣ್ಣನನ್ನು ಬಲಿತಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ ಅರಳಕುಪ್ಪೆ ಗ್ರಾಮದ ಬಾಲಕೃಷ್ಣ (೫೪) ಮೃತ ದುರ್ದೈವಿ ಅಣ್ಣನಾಗಿದ್ದು, ಸುರೇಶ್ ಕೊಲೆ ಮಾಡಿದ ತಮ್ಮನಾಗಿದ್ದಾನೆ. ಕೊಲೆಯಾದ ಬಾಲಕೃಷ್ಣ ಮೈಸೂರಿನಲ್ಲಿ ವಾಸ ಮಾಡುತ್ತಿದ್ದು, ಲಾಕ್‌ಡೌನ್ ಆಗಿರುವ ಕಾರಣ ಅರಳಕುಪ್ಪೆ ಗ್ರಾಮಕ್ಕೆ ಬಂದಿದ್ದರು. ಜಮೀನು ವಿಚಾರದಲ್ಲಿ ಬಾಲಕೃಷ್ಣ ಹಾಗೂ ಸುರೇಶ್ ನಡುವೆ ಈ ಹಿಂದೆ ಜಗಳವಾಗಿತ್ತು. ಹೀಗಾಗಿ ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಬೇರೆ ಬೇರೆ…

ಯೂಟ್ಯೂಬ್‌ನಲ್ಲಿ ಹೈಕೋರ್ಟ್ ಕಲಾಪ

ಬೆಂಗಳೂರು,ಮೇ,೩೨: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪವನ್ನು ಯೂಟ್ಯೂಬ್‌ನಲ್ಲಿ ನೇರಪ್ರಸಾರ ಮಾಡಲಾಯಿತು. ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪ ವೀಕ್ಷಿಸಲು ಅವಕಾಶ ಸಿಗಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಈ ಮಹತ್ವದ ಕ್ರಮ ತೆಗೆದುಕೊಂಡರು. ೩೧ರ ಮಧ್ಯಾಹ್ನ ೨.೪೦ರಿಂದ ಹೈಕೋರ್ಟ್ ಕಲಾಪದ ಯುಟ್ಯೂಬ್ ನೇರ ಪ್ರಸಾರ ಆರಂಭವಾಯಿತು. ಕೋರ್ಟ್ ಹಾಲ್೧ರಲ್ಲಿ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನ್ಯಾಯಪೀಠದಲ್ಲಿದ್ದರು. ಪ್ರಾಯೋಗಿಕವಾಗಿ ಕಲಾಪವನ್ನು ಯುಟ್ಯೂಬ್‌ನಲ್ಲಿ…

ಕೊರೊನಾ ವಾರಿಯರ್ಸ್ ದಾದಿಯರ ಜೊತೆ ಸಿಎಂ ಸಂವಾದ

ಬೆಂಗಳೂರು,ಮೇ,೩೧: ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂವಾದ ನಡೆಸಿದರು. ಕೋವಿಡ್-೧೯ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಗಳ ಸ್ಟಾಫ್ ನರ್ಸ್ ಗಳೊಂದಿಗೆ ಸಂವಾದ ನಡೆಸಿದ ಮುಖ್ಯಮಂತ್ರಿ,ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲಿ ಅಪಾಯ ಲೆಕ್ಕಿಸದೆ, ಸೋಂಕಿತರ ಶುಶ್ರೂಷೆಯಲ್ಲಿ ನಿರತರಾಗಿರುವ ಎಲ್ಲ ನರ್ಸ್ ಗಳ ಪರಿಶ್ರಮ, ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು. ವೈಯಕ್ತಿಕ ಕಷ್ಟ-ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿರುವ ಶುಶ್ರೂಷರ ಕರ್ತವ್ಯ ಪ್ರಜ್ಞೆ ಅನುಕರಣೀಯ ಎಂದರು. ಪ್ರಸ್ತುತ ರಾಜ್ಯದಲ್ಲಿ ೨೧ ಸಾವಿರದ ೫೭೪ ಸ್ಟಾಫ್ ನರ್ಸ್…

ಸಹಕಾರ ಸಂಘಗಳ ಸಾಲಕಂತುಗಳ ಕುರಿತು ಸರ್ಕಾರ ಹೊರಡಿಸಿರುವ ಸುತ್ತೋಲೆ ವಾಪಾಸ್ ಪಡೆಯುವಂತೆ ಸಿಎಂಗೆ ಸಿದ್ದು ಪತ್ರ

ಬೆಂಗಳೂರು,ಮೇ,31 : ಸಹಕಾರ ಸಂಘಗಳ ಮೂಲಕ ಸದಸ್ಯರು ಪಡೆದಿರುವ ಸಾಲ,ಕಂತುಗಳ ಪಾವತಿಯನ್ನು ಮುಂದೂಡಿರುವ ಸರ್ಕಾರ ಜೂನ್ ಬಳಿಕ ಪೂರ್ತಿ ಬಾಕಿ ಕಟ್ಟಬೇಕು ಎಂದು ಆದೇಶ ಹೊರಡಿಸಿದೆ. ಈ ಸುತ್ತೋಲೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ  ಆಗ್ರಹಿಸಿದ್ದಾರೆ. ಸಾಲ,ಕಂತುಗಳ ಪಾವತಿ ಅವಧಿಯನ್ನು ಮುಂದೂಡಿ ಬಳಿಕ ಪೂರ್ತಿ ಕಟ್ಟಬೇಕು ಎಂಬ ಆದೇಶ ಜನರಿಗೆ ಹಾಕಿರುವ ಟೋಪಿ ಎಂದು ಅವರು ಕಿಡಿ ಕಾರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ಕೊರೊನಾ…

ರಾಜ್ಯದಲ್ಲಿ ನಾಳೆ ಭಾರೀ ಮಳೆ ಸಾಧ್ಯತೆ

ಬೆಂಗಳೂರು ,ಮೇ 31:ಕೇರಳಕ್ಕೆ ಜೂನ್ 3 ರಿಂದ ಮುಂಗಾರು ತಡವಾಗಿ ಪ್ರವೇಶಲಿದ್ದು,ಇದರ ಪರಿಣಾಮ ನಾಳೆ ರಾಜ್ಯದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ 5 ದಿನಗಳವರೆಗೆ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ನಾಳೆಯಿಂದ ಮೂರು ದಿನ ಭಾರೀ ಮಳೆಯಾಗಲಿದೆ. ಇಂದಿನಿಂದ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ…

ಟೀಕಿಸಿದ ಜನಪ್ರತಿನಿಧಿಗಳಿಗೆ ಲೆಕ್ಕಪತ್ರಗಳ ಮೂಲಕ ತಿರುಗೇಟು ನೀಡಿದ ರೋಹಿಣಿ

ಮೈಸೂರು, ಮೇ 31: ಮೈಸೂರು ಜಿಲ್ಲಾಧಿಕಾರ ಹಾಗೂ ಜನಪ್ರತಿನಿಧಿಗಳ ಜತೆಗಿನ ಕತ್ತಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ..ಆದರೆ ಇದ್ಯಾವುದಕ್ಕೂ ಜಗ್ಗದ ರೋಹಿಣಿ ತಮ್ಮ ಮೇಲಿನ ಆರೋಪಗಳಿಗೆ ಕಡಕ್ಕಾಗಿಯೇ ಉತ್ತರ ನೀಡುತ್ತಾ ಬಂದಿದ್ದಾರೆ. ಈಗ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಿದ್ದಾರೆ. ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇವರ ಬೆನ್ನಲ್ಲೇ ಶಾಸಕ ಸಾ.ರಾ ಮಹೇಶ್ ಸಹ ಡಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.…

ಅನಾಥಮಕ್ಕಳಿಗೆ ಬಾಲಸೇವಾಯೋಜನೆ ಘೋಷಿಸಿ ,ಪ್ರಧಾನಿ,ಸಿಎಂಗೆ ಸ್ವಾಗತಿಸಿದ ಜೊಲ್ಲೆ

ಬೆಂಗಳೂರು,ಮೇ,29: ಮಹಾಮಾರಿ ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿರುವ ಪ್ರಧಾನಿ ಹಾಗೂ ಸಿಎಂಗೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ವಾಗತಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಕೊರೊನಾ ಸೋಂಕಿನಿಂದ ಬಹಳಷ್ಟು ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳಿಗೆ ಪೋಷಕರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತಹ ಮಕ್ಕಳನ್ನು ನಮ್ಮ ಇಲಾಖೆ ಗುರುತಿಸಿ ಅವರಿಗೆ ನೆರವು ನೀಡಲು ಈಗಾಗಲೇ…

ಕೋವಿಡ್ ನಿಂದ ಹೆತ್ತವರ ಕಳೆದುಕೊಂಡ ಮಕ್ಕಳಿಗೆ ಪರಿಹಾರ ಘೋಷಣೆ

ಬೆಂಗಳೂರು, ಮೇ 29: ಕೋವಿಡ್-19 ದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ನೆರವಿಗಾಗಿ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ಈ ಯೋಜನೆಯಡಿ, ಕೊರೊನಾ ಕಾರಣವಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು…

ಕೊರೊನಾ ಸ್ಥಿತಿಗತಿ ನೋಡಿ ಲಾಕ್‌ಡೌನ್ ವಿಸ್ತರಣೆ ಕುರಿತು ನಿರ್ಧಾರ-ಸಿಎಂ

ಬೆಂಗಳೂರು,ಮೇ,೨೯: ಕೊರೊನಾ ಸೋಂಕಿತರ ಸಂಖ್ಯೆಯ ಮೇಲೆ ಆಧರಿಸಿ ಮುಂದಿನ ವಾರ ಲಾಕ್‌ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎನ್ನುವ ಕುರಿತು ಜೂನ್ ೫ ರಂದು ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ ಜಿಲ್ಲೆಗಳನ ಸ್ಥಿತಿಗತಿ ಕುರಿತು ಮತ್ತು ಮುಂದೆ ತಗೆದುಕೊಳ್ಳಬೇಕಾದ ಸಿದ್ದತೆಗಳ ಕುರಿತು ವಿಡಿಯೋಕಾನ್ಫರೆನ್ಸ್ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ ೭ರ ವರೆಗೆ ಎಂದಿನಂತೆ ಲಾಕ್‌ಡೌನ್ ಇರುತ್ತದೆ. ಜೂನ್ ೭ರ ನಂತರ ಲಾಕ್‌ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್‌ಡೌನ್…

ಮೃತ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರ ನೀಡಿ-ಸಿದ್ದು ಒತ್ತಾಯ

ಬೆಂಗಳೂರು,ಮೇ,೨೯: ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದ ಆಧಾರದ ಮೆಲೆ ಕರ್ತವ್ಯ ನಿರ್ವಹಿಸುತ್ತಿದ್ದ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ನಿಧನ ಹೊಂದಿದೆ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೊರೊನಾ ವಾರಿಯರ್ಸ್‌ಗೆ ಬಾಕಿ ಉಳಿಸಿಕೊಂಡಿರುವ ವೇತನವನ್ನೂ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಕೊರೋನ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ…

೧೧ ಸಾವಿರ ಕೋಟಿ ಜಿಎಸ್‌ಟಿ ಹಣ ಬಿಡುಗಡೆಗೆ ಕೇಂದ್ರಕ್ಕೆ ಮನವಿ

ಬೆಂಗಳೂರು,ಮೇ,೨೯: ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಬರಬೇಕಾಗಿರುವ ಜಿಎಸ್‌ಟಿ ಪರಿಹಾರ ನಷ್ಟದ ಬಾಕಿ ಮೊತ್ತ ರೂ.೧೧ ಸಾವಿರ ಕೋಟಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಎಸ್ಟಿ ಮಂಡಳಿಯ ರಾಜ್ಯ ಪ್ರತಿನಿಧಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಎಂರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದಾರೆ. ಜಿಎಸ್ಟಿ ಮಂಡಳಿಯ ೪೩ನೆ ಸಭೆಯಲ್ಲಿ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಬಸವರಾಜ ಬೊಮ್ಮಾಯಿಯವರು ಮಾತನಾಡಿದರು. ೨೦೨೧-೨೨ನೆ ಸಾಲಿನ…

1 26 27 28 29 30 33
error: Content is protected !!