Browsing: ಬೆಂಗಳೂರು

ಬೆಂಗಳೂರು

ರಾಜ್ಯದೆಲ್ಲಡೆ ಮನೆ-ಮನೆಗೂ ತೆರಳಿ ಕೊರೊನಾ ಸೋಂಕು ಪರೀಕ್ಷೆ-ಅಶೋಕ್

ಬೆಂಗಳೂರು, ಮೇ ೨೪: ಇನ್ನೂ ಮುಂದೆ ರಾಜ್ಯದ ಎಲ್ಲಾ ಕಡೆಯೂ ಕೊರೊನಾ ಸೋಂಕಿತರ ಮನೆ-ಮನೆಗೂ ಹೋಗಿ ಪರೀಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಂದಾಯಸಚಿವ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್,ಅಶೋಕ್ ಅವರು ತಿಳಿಸಿದ್ದಾರೆ. ಈ ಮೂಲಕ ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಕೂಡ ಪ್ರತಿ ಮನೆಗಳಿಗೂ ತೆರಳಿ ವಿಶೇಷ ತಂಡ ಕೊರೊನಾ ಸೋಂಕಿತರನ್ನು ಗುರುತಿಸಲಾಗುತ್ತದೆ ಈ ಕುರಿತಂತೆ ಕಂದಾಯ ಇಲಾಖೆ ಪ್ರದಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರು ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಿದ್ದಾರೆ ಎಂದು ಅವರು ಹೇಳಿದರು.…

ದೇಸಿ ಭಾಷೆಯಲ್ಲಿ ಜ್ಞಾನವೃದ್ಧಿಸಿಕೊಳ್ಳಲು ವೈದ್ಯರಿಗೆ ನಾಗಾಭರಣ ಸಲಹೆ

ಬೆಂಗಳೂರು,ಮೇ,22: ಪಾರಂಪರಿಕ ಜ್ಞಾನದ ಜೊತೆಗೆ ವಿಜ್ಞಾನ ಮೇಳೈಸಿದಾಗ ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದುದನ್ನು ಸಾಧಿಸಲು ಸಹಕಾರಿಯಾಗಬಲ್ಲದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ  ಅಭಿಪ್ರಾಯಪಟ್ಟರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ವೈದ್ಯ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪದೀಯ ಪಾರಂಪರಿಕ ಜ್ಞಾನವನ್ನು ವಿಜ್ಞಾನದಲ್ಲಿ ಬಳಸಿಕೊಳ್ಳಬಹುದಾಗಿದೆ. ನಮ್ಮ ಪೂರ್ವಿಕರು ಆರೋಗ್ಯ ರಕ್ಷಣೆಗಾಗಿ ಪಾರಂಪರಿಕವಾಗಿ ಬಳಸುತ್ತಿದ್ದ ಗಿಡಮೂಲಿಕೆಗಳು ಇಂದಿಗೂ ನಮಗೆ ಸಂಜೀವಿನಿಯಾಗಿ ಕಾಣ ಸಿಗುತ್ತವೆ…

ಸಚಿವ ಸೋಮಶೇಖರ್ ಕಾರ್ಯಗಳ ಶ್ಲಾಘಿಸಿದ ಉಪೇಂದ್ರ

ಬೆಂಗಳೂರು,ಮೇ,20: ಕೋವಿಡ್ 19 ರ ಈ ಸಂದರ್ಭದಲ್ಲಿ ಜನ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ನಟ, ನಿರ್ದೇಶಕರಾದ ಉಪೇಂದ್ರ ಹೇಳಿದರು ಕುಂಬಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೃಪಪಟ್ಟ ಕುಟುಂಬಗಳಿಗೆ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ವೈಯಕ್ತಿಕವಾಗಿ ಕೊಡಮಾಡುವ ತಲಾ ರೂ.1 ಲಕ್ಷಗಳ ಪರಿಹಾರವನ್ನು ನೀಡಿ ಮಾತನಾಡಿದ ಉಪೇಂದ್ರ ಅವರು, ಸಚಿವರಾದ ಸೋಮಶೇಖರ್ ಅವರು ಕೊಟ್ಟಿದ್ದು ತನಗೆ,…

ಕೊರೊನಾ ಚಿಕಿತ್ಸೆಗೆ ಬಿಬಿಎಂಪಿ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಬಿಬಿಎಂಪಿ ಹೊಸ ಹೊಸ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ ಒಂದು ರೀತಿ ಜ್ಞಾನೋದಯವಾದಂತೆ ಈಗ ಚಿಕಿತ್ಸೆಗೆ ಮೂರು ಹಂತದ ವ್ಯವಸ್ಥೆಯನ್ನು ಮಾಡಲು ಈಗ ನಿರ್ಧರಿಸಿದೆ. ಈ ಕುರಿತಂತೆ ಈ ಮೂರು ಹಂತದ ವ್ಯವಸ್ತೆ ಹೇಗಿರಬೇಕು ಸೋಂಕಿತರಿಗೆ ಚಿಕಿತ್ಸೆ ಬಗ್ಗೆ ತಗೆದುಕೊಳ್ಳಬಹುದಾದ ಜಾಗೃತಿ ಕುರಿತಂತೆ ಮಾರ್ಗಸೂಚಿಯನ್ನು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಬಿಡುಗಡೆ ಮಾಡಿದ್ದಾರೆ ಒಟ್ಟು ಮೂರು ಹಂತಗಳಲ್ಲಿ ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಪಿಟಿಸಿ) ಆರಂಭಿಸುವಂತೆ ಸೂಚಿಸಿದ್ದಾರೆ. ಸೋಂಕಿತರ ದೇಹಸ್ಥಿತಿ ಅವಲೋಕಿಸಿ…

ಆಧಾರ್ ಕಾರ್ಡ್ ಇಲ್ಲದ ಹಿರಿಯ ನಾಗರೀಕರಿಗೂ ವ್ಯಾಕ್ಸಿನ್ ಸೌಲಭ್ಯ – ಜೊಲ್ಲೆ ಭರವಸೆ

çಬೆಂಗಳೂರು ಮೇ,17:ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು ಶ್ರೀಘ್ರವೆ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಕೊರೊನಾ ಸೇನಾನಿಗಳೆಂದು ಭಾವಿಸಿ ಅವರಿಗೂ ಲಸಿಕೆಯನ್ನು ನೀಡಬೇಕು, ಹಾಗೂ ಹೈಕೋರ್ಟ್…

ಕೋವ್ಯಾಕ್ಸಿನ್ ಲಸಿಕೆ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಮೇ,17: ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೇಂದ್ರ ಕಾರ್ಯಾಲಯದಲ್ಲಿ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಏರ್ಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆ ಅಭಿಯಾನಕ್ಕೆ Ôವಸತಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಈ ವೇಳೆ ಇತ್ತೀಚೆಗೆ ಕೋವಿಡ್ ನಿಂದ ಸಾವನ್ನಪ್ಪಿದ  ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಮಹದೇವ ಪ್ರಕಾಶ್,ಸೇರಿದಂತೆ ಸಾವನ್ನಪ್ಪಿದ  ಪತ್ರಕರ್ತರುಗಳಿಗೆ ಶ್ರದ್ದಾಂಜಲಿ ಸಲ್ಲಿಸಿ ನುಡಿ ನಮನ ಸಲ್ಲಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆ.ಯು.ಡಬ್ಲು.ಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ರಾಜ್ಯಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್, ಬಂಗ್ಲೆ ಮಲ್ಲಿಕಾರ್ಜುನ,ಬಿ.ಬಿ.ಎಂ.ಪಿ.ಸದಸ್ಯ…

ಜಿಡಿಎಸ್ ನಿಂದ 2ಡಿಜಿ ಔ‍ಷಧ ಖರೀದಿಸಿ ಹಂಚಲು ಚಿಂತನೆ

ಬೆಂಗಳೂರು,ಮೇ,17: ರಾಜ್ಯದ ಕೋವಿಡ್‌ ಸ್ಥಿತಿಗತಿ ಮತ್ತು ಜೆಡಿಎಸ್‌ ವತಿಯಿಂದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಪಕ್ಷದ ಶಾಸಕರು, ಮುಖಂಡರೊಂದಿಗೆ ಸೋಮವಾರ ಆನ್‌ಲೈನ್‌ ಸಮಾಲೋಚನೆ ನಡೆಸಿದರು. ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದು, ಪರೀಕ್ಷಾ ವರದಿಗಳು ವಿಳಂಬವಾಗಿ ಬರುತ್ತಿರುವುದು ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು, ಲಸಿಕೆ ಅಭಿಯಾನ ಅವ್ಯವಸ್ಥೆ, ಆಕ್ಸಿಜನ್‌ ಪೂರೈಕೆಯಲ್ಲಿ ಅಗುತ್ತಿರುವ ಸಮಸ್ಯೆ, ತಾರತಮ್ಯ, ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ…

ಆನೇಕಲ್ ;ಬೆಡ್ ಬುಕಿಂಗ್, ಮಿನಿ ವಾರ್ ರೂಂ ಸೇವೆಗಳಿಗೆ ಚಾಲನೆ

ಪರಶಿವ ಧನಗೂರು. ಬೆಂಗಳೂರು,ಮೇ17:ಎರೆಡನೇ ಅಲೆಯ ರೂಪಾಂತರಿ ಡಬಲ್ ಮ್ಯುಟೆಂಟ್ ವೈರಸ್ ಆನೇಕಲ್ ತಾಲೂಕಿಗೆ ವಿಶೇಷ ಶಾಪವಾಗಿ ಪರಿಣಮಿಸಿದ್ದು ಈವರೆಗೆ ಬೆಡ್ ಬುಕಿಂಗ್, ಆಮ್ಲಜನಕ ಕೊರತೆ ವೆಂಟಿಲೇಷನ್ ಆಸ್ಪತ್ರೆಗಳ ಅಲಭ್ಯತೆ ಸೋಂಕಿತರನ್ನು ಸಾಕಷ್ಟು ಕಾಡಿತ್ತು. ಬೆಂಗಳೂರಿನ ಬೊಮ್ಮನಹಳ್ಳಿ ವಾರ್ ರೂಂ ಅಕ್ಷರಶಃ ಆನೇಕಲ್ ಜನತೆಗೆ ಮರೀಚಿಕೆಯಾಗಿತ್ತು. ಸಾಕಷ್ಟು ಸಾವುಗಳನ್ನು ಕಂಡ ಜನತೆಗೆ ಬೆಂಗಳೂರು ನಗರ ಜಿಲ್ಲಾದಿಕಾರಿಗಳು ರಾಜ್ಯ ಸರ್ಕಾರದ ಆದೇಶದಂತೆ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲಿಯೇ ಕೋವಿಡ್-19 ಚಿಕಿತ್ಸೆಯ ಸರಧಿ ತೀರ್ಮಾನ ಕೇಂದ್ರ (ಟ್ರೈಯಾಗಿಂಗ್ ಸೆಂಟರ್) ವನ್ನು ಚಾಲನೆಗೊಳಿಸಿದರು.…

ಬೌರಿಂಗ್ ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ;ಸುಧಾಕರ್

ಬೆಂಗಳೂರು, ಮೇ 16:ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡುತ್ತಿದ್ದು, ನಂತರ ಬೇರೆ ಜಿಲ್ಲೆಗಳಿಗೂ ಈ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸ್ಟೀರಾಯಿಡ್ ಅಧಿಕವಾಗಿ ಬಳಸಿರುವವರಿಗೆ ಹಾಗೂ ಮಧುಮೇಹ ಹೆಚ್ಚಿರುವವರಿಗೆ ಕೋವಿಡ್ ಬಂದಾಗ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಮೂಗಿನಿಂದ ಆರಂಭವಾಗುವ ಈ ರೋಗ ಕಣ್ಣಿಗೆ ಹಾನಿ ಮಾಡುತ್ತದೆ.…

ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ 50 ಸಾವಿರ ಪರಿಹಾರ:ಬಿ.ಸಿ.ಪಾಟೀಲ್

ಬೆಂಗಳೂರು,ಮೇ.16 :ಹಿರೇಕರೂರು ಮತಕ್ಷೇತ್ರದಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 50ಸಾವಿರ ರೂ.ಪರಿಹಾರ ಧನ ನೀಡುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಘೋಷಿಸಿದ್ದಾರೆ. ಹಿರೇಕೆರೂರು ಮತಕ್ಷೇತ್ರದಲ್ಲಿ ಇಲ್ಲಿಯವರೆಗೆ ಸುಮಾರು ಹದಿನೆಂಟು ಮಂದಿ‌ ಸೋಂಕಿನಿಂದ ಮೃತಪಟ್ಟಿದ್ದು,ಮೃತಪಟ್ಟವರ ಕುಟುಂಬದ ಸದಸ್ಯರನ್ನು ನಾಳೆ ಬಿ.ಸಿ.ಪಾಟೀಲ್ ಭೇಟಿಯಾಗಿ ಪರಿಹಾರ ಧನ ವಿತರಿಸಲಿದ್ದಾರೆ. ಇನ್ನು ಕೆಲವು ದಿನಗಳ ಹಿಂದೆ ಹಿರೇಕೆರೂರು ಮತಕ್ಷೇತ್ರ ವ್ಯಾಪ್ತಿಯಲ್ಲಿನ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸದಸ್ಯರು ಹಿರೇಕೆರೂರು ಸೇರಿದಂತೆ ಹಾವೇರಿ ಜಿಲ್ಲೆಯ ಸರ್ಕಾರಿ…

ಬಸವಣ್ಣನಿಗೆ ವಚನಜ್ಯೋತಿ ಬಳಗದ ವಿಶಿಷ್ಟ ನಮನ

ಬೆಂಗಳೂರು,ಮೇ,16:ವಚನಜ್ಯೋತಿ ಬಳಗ ಬಸವ ಜಯಂತಿಯನ್ನು ವಚನ ಗಾನಾಭಿಷೇಕದ ಮೂಲಕ ವಿಶಿಷ್ಟವಾಗಿ ಆಚರಿಸಿತು. ಗೂಗಲಮೀಟಿನಲ್ಲಿ ನಡೆದ ಗಾನಾಭಿಷೇಕವನ್ನು ಹಿಂದೂಸ್ಥಾನಿ ಸಂಗೀತದ ಹಿರಿಯ ವಿದ್ವಾಂಸರಾದ ಪಂ. ದೇವೇಂದ್ರಕುಮಾರ ಪತ್ತಾರ್ ಅಲ್ಲಮಪ್ರಭುಗಳ ಬಸವ ಸ್ತುತಿಯೊಂದಿಗೆ ಉದ್ಘಾಟಿಸಿದರು. ನೇತೃತ್ವ ವಹಿಸಿದ್ದ ಬಳಗದ ಮಹಾಪೋಷಕಿ 86 ವರ್ಷದ ಪಾರ್ವತಮ್ಮ ಶಿವಲಿಂಗಯ್ಯ ಪಂಡಿತರು ಅತ್ಯಂತ ಉತ್ಸಾಹದಿಂದ ಅಣ್ಣನ ವಚನ “ತನುವ ಕೊಟ್ಟು ತನು ಬಯಲಾಯಿತ್ತು” ಹಾಡಿ ಗಾನಾಭಿಷೇಕಕ್ಕೆ ಮೆರುಗು ಕೊಟ್ಟರು. ಗೋಕಾಕದ ವಿದ್ಯಾಮಗ್ದಂ, ವಿಜಯಪುರ ಚಡಚಣದ ವಿದ್ಯಾ ಕಲ್ಯಾಣಶೆಟ್ಟಿ, ಚಿಕ್ಕನಾಯಕನಹಳ್ಳಿ ಹುಳಿಯಾರಿನ ಕವಿತಾ, ಮೈಸೂರಿನ…

ಅಮೂಲಾಗ್ರ ಸುಧಾರಣೆಗೆ ಕ್ರಮ;ಅಶ್ವತ್ಥ ನಾರಾಯಣ

ಬೆಂಗಳೂರು,ಮೇ,15: ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನರಿರುವ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಸುಧಾರಿಸಲು ರಾಜ್ಯ ಕೋವಿಡ್‌ ಕಾರ್ಯಪಡೆಯು ತಜ್ಞರರದಿ ಪಡೆಯಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಆರೋಗ್ಯ…

೨ನೇ ಕಂತಿನ ಆಮ್ಲಜನಕ ಹೊತ್ತು ತಂದ ಎಕ್ಸ್ ಪ್ರೆಸ್ ರೈಲು

ಬೆಂಗಳೂರು, ಮೇ,೧೫: ಕೋವಿಡ್-೧೯ ಚಿಕಿತ್ಸೆಗಾಗಿ ಆಕ್ಸಿಜನ್ ಕೊರತೆ ಮುಂದುವರೆದಿದ್ದು ಕೇಂದ್ರ ಸರ್ಕಾರ ೨ನೆ ಬಾರಿ ರಾಜ್ಯಕ್ಕೆ ಆಕ್ಸಿಜನ್ ರವಾನೆ ಮಾಡಿದೆ. ೧೨೦ ಮೆಟ್ರಿಕ್ ಟನ್ ಆಕ್ಸಿಜನ್ ಶನಿವಾರ ಬೆಳಿಗ್ಗೆ ಎಕ್ಸ್ ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತಲುಪಿತು. ಕಳಿಂಗ ನಗರದಿಂದ ಬೇಂಗಳೂರಿಗೆ ಬೆಳಗಿನ ಜಾವ೩.೨೦ಕ್ಕೆ ತಲುಪಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ತಲಾ ೨೦ ಟನ್ ಆಕ್ಸಿಜನ್ ಸಾಮರ್ಥ್ಯದ ಒಟ್ಟು ಆರು ಕಂಟೇನರ್ ಗಳಲ್ಲಿ ಸುಮಾರು ೧೨೦ ಮೆಟ್ರಿಕ್ ಟನ್ ನಷ್ಟು ತೂಕದ ಆಮ್ಲಜನಕ ಹೊತ್ತು…

ಶುಕ್ರವಾರ ಕೋವಿಡ್‌ನಿಂದ ೩೫,೮೭೯ ಮಂದಿ ಮುಕ್ತ

ಬೆಂಗಳೂರು,ಮೇ,೧೪:ಕಳೆದ ೨೪ ಗಂಟೆಯಲ್ಲಿ ೩೫,೮೭೯ ಜನಕೋವಿಡ್ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಶುಕ್ರವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಕೋವಿಡ್ ವರದಿಯಲ್ಲಿ ತಿಳಿಸಿದೆ. ಆರೋಗ್ಯ ಮತ್ತು ಕುಟುಂಬ ಇಲಾಖೆ ಈ ವರದಿಯನ್ನು ನೀಡಿದ್ದು,ಶುಕ್ರವಾರದ ಅಂಕಿ ಅಂಶದ ಪ್ರಕಾರ, ರಾಜ್ಯದಲ್ಲಿ ಈವರೆಗೆ ಒಟ್ಟು ೧೫,೧೦,೫೫೭ ಮಂದಿ ಕೋವಿಡ್ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕರ್ನಾಟಕದಲ್ಲಿ ಇಂದು ೪೧,೭೭೯ ಹೊಸ ಪ್ರಕರಣ ವರದಿಯಾಗಿದ್ದು, ರಾಜ್ಯದಲ್ಲಿ ೫,೯೮,೬೦೫ ಸಕ್ರಿಯ ಪ್ರಕರಣಗಳಿವೆ. ಅಲ್ಲದೆ, ಶುಕ್ರವಾರ ಒಟ್ಟು ೩೭೩ ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಕೋವಿಡ್-೧೯: ದೇಶದಾದ್ಯಂತ…

ಹಿರಿಯ ಪತ್ರಕರ್ತ ಮಹಾದೇವ್ ಪ್ರಕಾಶ್ ಕೋವಿಡ್ ಗೆ ಬಲಿ

ಬೆಂಗಳೂರು, ಮೇ,14: ಹಿರಿಯ ಪತ್ರಕರ್ತ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಕಾರ್ಯದರ್ಶಿ ರಾಜಕೀಯ ವಿಶ್ಲೇಷಕ ಮಹಾದೇವ ಪ್ರಕಾಶ್ ಕೋವಿಡ್ ಗೆ ಬಲಿಯಾಗಿದ್ದಾರೆ. ಕಳೆದ ಒಂದು ವಾರದ ಹಿಂದೆ ಕೊರೊನಾ ಸೋಂಕು ತಗುಲಿದ ಕಾರಣ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯಿಸಿರೆಳದಿದ್ದಾರೆ. 65 ವರ್ಷದ ಮಹಾದೇವ್ ಪ್ರಕಾಶ್ 1975 ರಲ್ಲಿ ಲೋಕವಾಣಿ ದಿನಪತ್ರಿಕೆ ಮೂಲಕ ಪತ್ರಿಕೋದ್ಯಮ ಆರಂಭಿಸಿದ್ದ ಅವರು ನಂತರ ತಮ್ಮದೆ ಸಂಪಾದಕತ್ವದ ‘ಈ ಭಾನುವಾರ ‘ಪತ್ರಿಕೆ ತರುತ್ತಿದ್ದರು ಅಲ್ಲದೆ ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ…

ಬಿಪಿಎಲ್ ಕಾರ್ಡ್‌ದಾರರಿಗೆ ೫ ರಿಂದ ೧೦ಕೆಜಿ ಅಕ್ಕಿ ವಿತರಣೆ

ಬೆಂಗಳೂರು,ಮೇ,೧೪:ಲಾಕ್‌ಡೌನ್‌ಸಮಯದಲ್ಲಿ ಉಚಿತ ಅಹಾರ ಕಿಟ್ ಹಾಗೂ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬಹುದು ಎಂದು ನಿರೀಕ್ಷೆಯಲ್ಲಿ ರಾಜ್ಯದ ಜನರಿಗೆ ಬದಲಾಗಿ ಬಿಪಿಎಲ್ ಕಾರ್ಡ್‌ದಾರರಿಗೆ ವಿತಿರಿಸುವ ಅಕ್ಕಿಯನ್ನು ೫ ರಿಂದ ೧೦ ಕೇಜಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೇ, ಜೂನ್ ತಿಂಗಳಿಗೆ ಉಚಿತವಾಗಿ ೧೦ ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಪ್ರತಿ ಕೆಜಿಗೆ ೧೫ರಂತೆ ೧೦ ಕೆಜಿ ಅಕ್ಕಿಯನ್ನು ಎಪಿಎಲ್ ಅರ್ಜಿದಾರರಿಗೂ ಈ ಅವಧಿಯಲ್ಲಿ ಆಹಾರ ಇಲಾಖೆ ವಿತರಣೆ ಮಾಡಲಿದೆ. ಈ ಕುರಿತು ಆಹಾರ…

ಬಸವ ಪತ್ಥಳಿಗೆ ಸಿಎಂ ಮಾಲಾರ್ಪಣೆ

ಬೆಂಗಳೂರು, ಮೇ 14 : ಬಸವ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿ.ಡಿ.ಎ. ಅಧ್ಯಕ್ಷ ಎಸ್. ಆರ್.ವಿಶ್ವನಾಥ್, ಸಂಸದ ಪಿ.ಸಿ.ಮೋಹನ್ ,ಬಿ.ಬಿ.ಎಂ.ಪಿ ಆಯುಕ್ತ ಗೌರವ್ ಗುಪ್ತಾ, ಬಸವ ಸಮಿತಿ ಅಧ್ಯಕ್ಷ ಡಾ: ಸಿ.ಸೋಮಶೇಖರ್ ಉಪಸ್ಥಿತರಿದ್ದರು.

ಚಾಮರಾಜನಗರದಲ್ಲಿ ಸಾವನ್ನಪ್ಪಿದವರು 24 ಅಲ್ಲ 36

ಬೆಂಗಳೂರು,ಮೇ,13: ಚಾಮರಾಜನಗರ ಆಸ್ಪತರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರು24 ಮಂದಿಯಲ್ಲ 36 ಮಂದಿ ಎಂದು ಸಮಿತಿ ಹೈಕೋರ್ಟ್ ಗೆ ವರದಿ ಸಲ್ಲಿಸಿದೆ. ನ್ಯಾ.ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿ ಮೇ 2ರ ರಾತ್ರಿ 10.30ರಿಂದ ತಡರಾತ್ರಿ 2.30ರವರೆಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಈ 4 ಗಂಟೆಗಳ ಅವಧಿಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಾಗಿ ಆಕ್ಸಿಜನ್ ಇರಲಿಲ್ಲ ಎಂದು ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆಡಿಟ್ ವರದಿ ಪ್ರಕಾರ ಆಕ್ಸಿಜನ್ ಕೊರತೆಯಿಂದ ಮೂವರು ಸಾವನ್ನಪ್ಪಿದ್ದಾರೆ. ಮೆದುಳಿನ ಆಘಾತದಿಂದ 7 ರೋಗಿಗಳು ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ…

ನ್ಯಾಯಾಧೀಶರು ಸರ್ವಜ್ಞರಲ್ಲ- ಸಿ.ಟಿ.ರವಿ

ಬೆಂಗಳೂರು,ಮೇ,13: ಲಸಿಕೆ ನೋಡಿಕೆ ಸಂಬಂಧ ರಾಜ್ಯ ಸರ್ಕಾರದ ವಿರುದ್ದ ಹೈಕೋರ್ಟ್ ತರಾಟೆಗೆ ರಾಜ್ಯದಲ್ಲಿ ಕೊರೋನಾ ಲಸಿಕೆ ಕೊರತೆ ಮತ್ತು ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನ್ಯಾಯಾಧೀಶರು ಸರ್ವಜ್ಞರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.Υ ಗುರುವಾರ ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ತಜ್ಞರ ಸಮಿತಿ ನೀಡುವ ವರದಿಯನ್ನು ಆಧರಿಸಿಯೇ ಕೆಲಸ ಮಾಡುತ್ತದೆ ಕೇಂದ್ರ ಸರ್ಕಾರ ಹೇಳಿದೆ. ಇದನ್ನ ಸುಪ್ರೀಂಕೋರ್ಟ್ ಕೂಡ ಒಪ್ಪಿದೆ ಎಂದು ತಿಳಿಸಿದರು…

ಆಕ್ಸಿಜನ್ ಟ್ಯಾಂಕರ್ ಖರೀದಿ;ನಿರಾಣಿ ಕಾರ್ಯಕ್ಕೆ ಕಟೀಲು ಮೆಚ್ಚುಗೆ

ಬೆಂಗಳೂರು,ಮೇ,13: ಆಮ್ಲಜನಕ ಟ್ಯಾಂಕರ್ ಖರೀದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಖನಿಜ ಅಭಿವೃದ್ಧಿ ನಿಧಿ (ಎಂಡಿಎಫ್) ಅಡಿಯಲ್ಲಿ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಎಂಡಿಎಫ್ ಅಡಿಯಲ್ಲಿ ಆಕ್ಸಿಜನ್ ಸಂಗ್ರಹಿಸಲು ಅಗತ್ಯವಾದ ಆಮ್ಲಜನಕ ಟ್ಯಾಂಕರ್ ಖರೀದಿಸಲು ಮತ್ತು ಅದನ್ನು ಜಿಲ್ಲೆಯ ಆಸ್ಪತ್ರೆಗಳಿಗೆ ಸಾಗಿಸಲು ಕೋವಿಡ್ -19 ಗೆ ಚಿಕಿತ್ಸೆ ನೀಡಲು ಸಚಿವ…

1 6 7 8 9
error: Content is protected !!