Browsing: ರಾಜಕೀಯ

ರಾಜಕೀಯ

ಕಾಂಗ್ರೆಸ್ ಜನಪ್ರತಿನಿಧಿಗಳ ಪ್ರಧೇಶಾಭಿವೃದ್ಧಿ ಹಣ ಬಿಡುಗಡೆಗೆ ಸಿದ್ದು ಸಿಎಂಗೆ ಪತ್ರ

ಬೆಂಗಳೂರು,ಮೇ,೧೫: ಕಾಂಗ್ರೆಸ್ ಪಕ್ಷದ ಶಾಸಕರು, ವಿಧಾನಸಭಾ ಸದಸ್ಯರ,ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಪ್ರದೇಶಾಭಿವೃದ್ಧಿ ತಲಾ ಒಂದು ಕೋಟಿರೂ ಗಳನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಕೋರಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸದಸ್ಯರ ಕ್ಷೇತ್ರಗಳ ಅಭಿವೃದ್ಧಿಗೆಂದು ನೀಡಲಾಗುವ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ೧ ಕೋಟಿ ರೂಪಾಯಿಗಳನ್ನು ಲಸಿಕೆ ಖರೀದಿಸಿ ಜನರಿಗೆ ನೀಡಲು ಉದ್ದೇಶಿಸಿದ್ದೇವೆ. ಇದರಿಂದ ಸುಮಾರು ೯೦ ಕೋಟಿ ರೂಗಳಷ್ಟು ಸಂಗ್ರಹವಾಗುತ್ತದೆ. ಇನ್ನುಳಿದ ಹತ್ತು ಕೋಟಿ ರೂಗಳನ್ನು ಪಕ್ಷದ…

ಯುವ ಚಳವಳಿಗಾರರನ್ನು ಕೇಂದ್ರ ಹತ್ತಿಕ್ಕುತ್ತಿದೆ-ಡಿಕೆಶಿ

ಬೆಂಗಳೂರು,ಮೇ,೧೫: ಕೋವಿಡ್ ಪರಿಹಾರ ಕಾರ್ಯದಲ್ಲಿ ನಿರತರಾದವರನ್ನು ಹಾಗೂ ಯುವ ಚಳವಳಿಗಾರರನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೊರೊನಾ ಸೋಂಕಿತರಿಗೆ ಪರಿಹಾರ ಕಾರ್ಯದಲ್ಲಿ ನಿರತರಾಗಿರುವ ಭಾರತೀಐ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೊಳಪಡಿಸಿರುವುದು ಖಂಡನೀಯ ಎಂದಿದ್ದಾರೆ ಈ ಮೂಲಕ ಯುವಕರ ಚಳವಳಿಗಳನ್ನು ಹತ್ತಿಕ್ಕುವ ಹುನ್ನಾರ ನಡೆದಿದೆ ಎಂದು ಅವರು ದೂರಿದ್ದಾರೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಡಿ.ಕೆ,ಶಿವಕುಮಾರ್ ಅವರು , “ಯುವ ಚಳುವಳಿಯ ದೈತ್ಯರಲ್ಲಿ…

ಕಾಂಗ್ರೆಸ್ ನಿಂದ ವ್ಯಾಕ್ಸಿನ್ ಪ್ರಕ್ರಿಯೆಗೆ ೧೦೦ಕೋಟಿ ರೂ ನೆರವು

ಬೆಂಗಳೂರು,ಮೇ,೧೪: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಯಲು ನೀಡಲಾಗುತ್ತಿರುವ ಲಸಿಕೆ ಖರೀದಿಗೆ ರಾಜ್ಯಸರ್ಕಾರಕ್ಕೆ ಕರ್ನಾಟಕ ಕಾಂಗ್ರೆಸ್ ಪಕ್ಷ ೧೦೦ ಕೋಟಿ ರೂ ಸಹಾಯ ದನ ನೀಡಲಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಘೋಷಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಶಾಸಕರು ಹಾಗೂ ಸಂಸದರರಿಗೆ ಮಂಜೂರು ಮಾಡಿರು ಪ್ರದೇಶಾಭಿವೃದ್ಧಿ ನಿಧಿಯಲ್ಲಿ ತಲಾ ಒಂದು ಕೋಟಿ ರೂಗಳಂತೆ ಒಟ್ಟು ೧೦೦ ಕೋಟಿ ರೂಗಳನ್ನು ವ್ಯಾಕ್ಸಿನ್ ಹಂಚಿಕೆ ಪ್ರಕ್ರಿಯೆಗೆ…

ನಿರೀಕ್ಷೆಗಳ ಹುಸಿಗೊಳಿಸಿದ ಸಿಎಂ

ಬೆಂಗಳೂರು, ಮೇ,13:ಮುಖ್ಯಮಂತ್ರಿ ಸುದ್ದಿಗೋಷ್ಠಿ ಕರೆದಿದ್ದಾರೆ ಎಂದರೆ ಬಹುತೇಕ ಸಾಕಷ್ಟು ನಿರೀಕ್ಷೆಗಳಿದ್ದವು ಕೋವಿಡ್ ಸಂಕಷ್ಟದಲ್ಲಿ ಲಾಕ್ ಡೌನ್ ಮಾಡಿದ ಈ ಹೊತ್ತಲ್ಲಿ ಏನಾದರೂ ಆರ್ಥಿಕ ಪ್ಯಾಕೇಜ್ ಪ್ರಕಟಿಸುತ್ತಾರೆ ಎನ್ನುವ ಎಲ್ಲಾ ಆಸೆಗಳಿಗೂ ತಣ್ಣೀರೆರಚಿದ್ದಾರೆ. ಕನಿಷ್ಠ ಜನರ ಬಗ್ಗೆ ಅನುಕಂಪವೂ ಇಲ್ಲದ ಬಿ.ಎಸ್ ಯಡಿಯೂರಪ್ಪ ಜನರ ಸಮಸ್ಯೆಗಳ ಬಗ್ಗೆ ಸೌಜನ್ಯಕ್ಕೂ ಪ್ರಸ್ತಾಪ ಮಾಡದ ಅವರು ಕಠಿಣ ಕ್ರಮದಿಂದ ಕೊರೊನಾ ಸೋಂಕಿತರ ಪ್ರಮಾಣ ಇಳಿಮುಖವಾಗಿದೆ ಎಂದು ಹೇಳಿದರು. ಇನ್ನೂ 18 ವರ್ಷದ ಮೇಲಿನ ಎಲ್ಲಾ ವಯೋಮಾನದವರಿಗೂ ವ್ಯಾಕ್ಸಿನ್ ಹಾಕಲಾಗುತ್ಯದೆ ಎಂದು…

ಬಿಜೆಪಿ ಸರ್ಕಾರದ ಡಬಲ್ ಇಂಜಿನ್ ನಿಂತುಹೋಗಿದೆ; ಡಿ.ಕೆ.ಶಿ

ಬೆಂಗಳೂರು,ಮೇ,೧೩:’ಕರ್ನಾಟಕದ ಏಳಿಗೆಗೆ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಆದರೆ ಕೋವಿಡ್ ನಿರ್ವಹಣೆ, ಆಕ್ಸಿಜನ್, ಲಸಿಕೆ ಪೂರೈಕೆ ವಿಚಾರದಲ್ಲಿ ಈ ಡಬಲ್ ಇಂಜಿನ್ ಗಳು ಕೆಟ್ಟು ನಿಂತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವಾಗ್ದಾಳಿ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ’ಚಾಮರಾಜನಗರದಲ್ಲಿ ೨೪ ಜನರ ಸಾವಿಗೆ ಸರ್ಕಾರವೇ ಹೊಣೆ ಎಂದು ಹೈಕೋರ್ಟ್ ನೇಮಕ ಮಾಡಿದ್ದ ನ್ಯಾಯಮೂರ್ತಿಗಳ ಸಮಿತಿ ಈಗಾಗಲೇ…

ಐಟಿಐ ಆಸ್ಪತ್ರೆಗೆ ಸಚಿವ ಬಸವರಾಜ್ ದಿಡೀರ್ ಭೇಟಿ

ಇನ್ನೊಂದು ವಾರದಲ್ಲಿ ಲಿಕ್ವಿಡ್ ಆಕ್ಸಿಜನ್ ಮತ್ತು 300 ಬೆಡ್ ಗಳ ವ್ಯವಸ್ಥೆ- ಸುತ್ತೂರು ಶ್ರೀಗಳು ಮೈಸೂರು,10: ಮೈಸೂರಿನಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಾಗಿ ಹಲವು ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು, ಬೆಡ್ ಮತ್ತು ಆಕ್ಸಿಜನ್ ಕೊರತೆ ಕುರಿತು ಇಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ‌ನ ನೇತೃತ್ವದಲ್ಲಿ ಸುತ್ತೂರು ಶಾಖಾ ಮಠದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕೊರೋನಾ ನಿರ್ವಹಣೆಗೆ ಸಚಿವ…

ಏಕಕಾಲದಲ್ಲಿ ಎರಡು ತಂಡಗಳು ಕಣಕ್ಕಿಳಿಯಲಿವೆ; ಗಂಗೋಲಿ

ನವದೆಹಲಿ,10: ಟೀಂ ಇಂಡಿಯಾ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಹಾಗೂ ಶ್ರೀಲಂಕಾ ವಿರುದ್ದ ಸರಣಿ ಆಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ಈ ಮೂಲಕ ಇಂಗ್ಲೆಂಡ್‌ ಹಾಗೂ ಶ್ರೀಲಂಕಾಕ್ಕೆ ಪ್ರತ್ಯೇಕ ತಂಡಗಳು ತೆರಳಲಿವೆ ಎನ್ನುವ ಸುಳಿವನ್ನು ಗಂಗೂಲಿ ನೀಡಿದ್ದಾರೆ. ಟೀಂ ಇಂಡಿಯಾ ಜೂನ್‌ನಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದು ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾಗೂ ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದೆ. ಇದೇ ವೇಳೆ ಜುಲೈನಲ್ಲಿ ಭಾರತ ತಂಡ ಶ್ರೀಲಂಕಾಕ್ಕೆ ತೆರಳಲಿದ್ದು, 3…

ಕೆ.ಬಿ. ಶಾಣಪ್ಪ ನಿಧನಕ್ಕೆ ಡಿ.ಕೆ. ಶಿವಕುಮಾರ್ ಸಂತಾಪ

ಬೆಂಗಳೂರು,10:ಮಾಜಿ ಸಚಿವ ಕೆ.ಬಿ. ಶಾಣಪ್ಪ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ‘ಜನಪರ ಹೋರಾಟಗಾರ, ಮಾಜಿ ಸಂಸದರು, ಮಾಜಿ ಸಚಿವರಾಗಿದ್ದ ಕೆ.ಬಿ ಶಾಣಪ್ಪ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಅವರು ಹಿರಿಯ ನಾಯಕರು, ಹೈದರಾಬಾದ್ ಕರ್ನಾಟಕ ಭಾಗದ ಜನರ ಧ್ವನಿಯಾಗಿ ಕೆಲಸ ಮಾಡಿದವರು. ಆ ಭಾಗದ ನಾನಾ ಅಭಿವೃದ್ಧಿ ಕಾರ್ಯಗಳ ಹಿಂದೆ ಶಾಣಪ್ಪನವರ ಹೋರಾಟದ ಪರಿಶ್ರಮವಿದೆ. ಕಾರ್ಮಿಕರು ಹಾಗೂ ಶೋಷಿತ ವರ್ಗದ ಹಿತಕ್ಕಾಗಿ ಅವಿರತ ಶ್ರಮಿಸಿದ ನಾಯಕರು ಎಂದು…

ಕೋವಿಡ್‌ ಹಳ್ಳಿಗಳೂ ಅವಲಂಬಿತವಾಗಿವೆ –ರಾಹುಲ್ ಗಾಂಧಿ

ನವದೆಹಲಿ10; ಕರೋನಾ ಎರಡನೇ ಅಲೆಯ ಹಟ್ಟಹಾಸ ನಗರಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಆ ದೇವರ ಕರುಣೆಯಿಂದಲೇ ಇಂದು ನಗರ ಮತ್ತು ಹಳ್ಳಿಗಳು ಉಳಿದಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿಬೀಸಿದಂತಿದೆ. ಭಾರತದ ಹಳ್ಳಿಗಳಲ್ಲಿಯೂ COVID-19 ಪ್ರಕರಣಗಳು ಶೀಘ್ರವಾಗಿ ಹಬ್ಬುತ್ತಿರುವುದರ ಬಗ್ಗೆ ಟ್ವಿಟರ್‌ನಲ್ಲಿ ಮಾಧ್ಯಮಯೊಂದರ ವರದಿಯನ್ನು ಉಲ್ಲೇಖಿಸಿದ ಅವರು ನಗರಗಳ ನಂತರ ಈಗ ದೇಶದ ಹಳ್ಳಿಗಳೂ ದೇವರ ಮೇಲೆ ಅವಲಂಬಿತವಾಗಿವೆ (ಪರಮಾತ್ಮ ನಿರ್ಭರ್) ಎಂದು ರಾಹುಲ್ ಗಾಂಧಿ ಟ್ವೀಟ್…

ಸಿಎಂ ಬದಲಾವಣೆ ಖಚಿತ ; ಪರ್ಯಾಯ ಮುಖ್ಯಮಂತ್ರಿ ಯಾರು?

ಬೆಂಗಳೂರು,10:ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರ ಬದಲಾವಣೆ ಖಚಿತವಾಗಿದ್ದು ಅವರ ಸ್ಥಾನಕ್ಕೆ ಯಾರು ಸೂಕ್ತ ಎಂಬ ಚರ್ಚೆ ಸೋಶಿಯಲ್ ಮೀಡಿಯಾ ದಲ್ಲಿ ಎರಡು ದಿನಗಳಿಂದ ಆರಂಭವಾಗಿದೆ.ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೆಲವರು ಖಚಿತವಾಗಿ ಹೇಳುತ್ತಿದ್ದಾರೆ .ಮತ್ತೆ ಕೆಲವರು ಗೋವಿಂದ ಕಾರಜೋಳ,dr ಅಶ್ವತ್ಥ ನಾರಾಯಣ,ಆರ್ ಅಶೋಕ್,ಜಗದೀಶ ಶೆಟ್ಟರ್,ಅರವಿಂದ ಬೆಲ್ಲದ್ ಮುಂತಾದವರ ಹೆಸರುಗಳನ್ನು ಪ್ರಸ್ತಾಪಿಸುತ್ತಿದ್ದಾರೆ.ನಾನೂ ಕೂಡ ನನ್ನ ಆಯ್ಕೆಯನ್ನು ಪ್ರಸ್ತಾಪಿಸುತಿದ್ದೇನೆ.ರಾಜ್ಯದ ಸಚಿವರಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ನೈತಿಕ ಶಕ್ತಿಯನ್ನು ಹೊಂದಿರುವ ಏಕೈಕ ವ್ಯಕ್ತಿ ಕೋಟಾ…

ಸಿಎಂಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು,10; ಲಾಕ್ ಡೌನ್ ಜಾರಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಅನೇಕ ಸಲಹೆ ನೀಡಿದ್ದಾರೆ. ದುಡಿಯುವ ವರ್ಗಕ್ಕೆ ನೆರವಾಗಬೇಕು ಎಂದು ಒತ್ತಾಯಿಸಿದ್ದು, 10 ಕೆಜಿ ಅಕ್ಕಿ ಜೊತೆಗೆ ಬೇಳೆ, ಅಡುಗೆ ಎಣ್ಣೆ ಮುಂತಾದ ರೇಷನ್ ಕೊಡಬೇಕು. ಪ್ರತಿ ಬಿಪಿಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂ., ನಂತರ ತಿಂಗಳಿಗೆ 6 ಸಾವಿರ ರೂಪಾಯಿ ನೀಡಬೇಕು. ಚಾಲಕರಾಗಿ ದುಡಿಯುವ ವರ್ಗಕ್ಕೆ 10 ಸಾವಿರ ರೂಪಾಯಿ ಕೊಡಬೇಕು ಎಂದು ಸಿಎಂಗೆ ಪತ್ರ ಬರೆದು…

1 13 14 15
error: Content is protected !!