Browsing: ಅಂಕಣ

ಅಂಕಣ

ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ

ಲಿಂಗಾಯತ ವೀರಶೈವ ಕೇಂದ್ರಿತ ಪಕ್ಷವಾಗಿರುವ ರಾಜ್ಯ ಬಿಜೆಪಿ ಈಗ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಒಕ್ಕಲಿಗ ಪ್ರದೇಶವನ್ನು ಆರಿಸಿಕೊಂಡಿದೆ. ಹಳೆ ಮೈಸೂರು ಭಾಗದಲ್ಲಿ ಕೇಂದ್ರೀಕರಿಸಿರುವ ಒಕ್ಕಲಿಗ ಸಮುದಾಯವನ್ನು ತನ್ನಿಚ್ಚೆಯ ರಾಜಕೀಯಕ್ಕೆ ಬಳಸಿಕೊಳ್ಳುವ ಅದರ ಯತ್ನಕ್ಕೆ ಪಕ್ಷದ ಒಳಗಿನಿಂದಲೇ ಕಿರಿಕಿರಿ ಎದುರಾಗಿದೆ. ಯೋಗೇಶ್ವರ್ ಸಿಡಿಸಿರುವ “ತ್ರಿಪಕ್ಷ ಸರ್ಕಾರ ಯಡಿಯೂರಪ್ಪನವರದು” ಎಂಬ ಬಾಂಬ್‌ನ ಸ್ವಿಚ್ ಎಲ್ಲಿದೆ ಮತ್ತು ಅದನ್ನು ಆನ್ ಆಫ್ ಮಾಡುತ್ತಿರುವವರು ಯಾರೆನ್ನುವುದೇ ಗೊತ್ತಾಗದ ಅಯೋಮಯ  ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಬಿಜೆಪಿಯಲ್ಲೀಗ ಗೌಡರ ಗದ್ದಲ ಲಿಂಗಾಯತ-ವೀರಶೈವ ಗದ್ದಲಕ್ಕೆ ಇದುವರೆಗೆ ಸೀಮಿತವಾದಂತಿದ್ದ…

ಪಾದರಕ್ಷಾಯಣ

ಪಾದರಕ್ಷಾಯಣ ಆಂದು ನಾನು ಮತ್ತು ಸಹ ಶಿಕ್ಷಕಿ ಇಬ್ಬರೂ ಕೂಡಿ ಚಪ್ಪಲಿ ಅಂಗಡಿಗೆ ಹೋದೆವು. ಚಪ್ಪಲಿ ಅವಶ್ಯಕತೆ ನನಗೆ ಸಧ್ಯಕ್ಕೆ ಇರಲಿಲ್ಳ. ಗೆಳತಿಗೆ ಸುಂದರವಾದ ಮತ್ತು ಕೈಗೆಟುಕುವ ಬೆಲೆಗೆ ಚಂದದ ವಿನ್ಯಾಸದ ಚಪ್ಪಲಿ ಸಿಕ್ಕಿತು. ನನಗೂ ಅಂತದ್ದೇ ತೆಗೆದುಕೊಳ್ಳುವ ಮನಸ್ಸಾಯಿತು. ಅಂಗಡಿಯವರನ್ನು ಕೇಳಿದೆ. ಅವರು ಪಾಪ ಹುಡುಕಿ ಹುಡುಕಿ ಸುಸ್ತಾದರು. ನನ್ನ ಅಳತೆಯ ಚಪ್ಪಲಿ ಸಿಗಲಿಲ್ಲ. ನನಗೆ ನಿರಾಶೆಯಾಯಿತು. ಅದನ್ನು ಕಂಡು “ಮೇಡಂ ಏನೂ ಚಿಂತೆ ಮಾಡಬೇಡಿ ಬುಧವಾರದ ನಂತರ ಕರೆ ಮಾಡಿ ತಂದಿಟ್ಟಿರುತ್ತೇನೆ ಬಂದು ತಗೊಂಡು…

ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು?

ಸ್ವಾಮಿಗಳವರೇ! ಆಕಾಶವು ಹೇಗೆ ನಾಶವಾಗುವುದು? ಗುರುಗಳಾದ ಶ್ರೀ ವೀರಭದ್ರಸ್ವಾಮಿಯವರು ಸಿದ್ಧನ ಮನೆಯಲ್ಲಿ ವಾಸವಾಗಿದ್ದು ಪ್ರತಿ ದಿನ ವೇದಾಂತ ಪ್ರವಚನ ಮಾಡುತ್ತಿದ್ದರು. ಸಿದ್ಧನು, ತಾಯಿ ದೇವಮಲ್ಲಮ್ಮನ ತೊಡೆಯ ಮೇಲೆ ಕುಳಿತು ಪ್ರವಚನ ಕೇಳುತ್ತಿದ್ದನು. ಒಂದು ದಿನ ಗುರುಗಳು ಪ್ರವಚನ ಮಾಡುತ್ತಾ ಹೀಗೆ ಹೇಳಿದರು: ಒಂದು ಕಾಲದಲ್ಲಿ ಪೃಥ್ವಿಯು ಸಾಗರದಲ್ಲಿ ಕರಗಿ ಹೋಗುವುದು. ಮೇರು ಪರ್ವತವಾದರೂ ಬಿದ್ದು ಹೋಗುವುದು. ಪಂಚಭೂತಗಳು ನಾಶಹೊಂದುವವು. ಸ್ವರ್ಗಾದಿ ಸಮಸ್ತ ಲೋಕಗಳು ಸಹ ಪ್ರಳಯಾಗ್ನಿಯಲ್ಲಿ ಸುಟ್ಟು ಹೋಗುವವು. ಆ ಸಮಯದಲ್ಲಿ ದೇಹವೇ ತಾನೆಂದು, ಇಲ್ಲಿ ಸುಖವನ್ನು…

ಕನ್ನಡ ಪಂಡಿತರ ಕನ್ನಡ ಸೇವೆ

ಕನ್ನಡ ಪಂಡಿತರ ಕನ್ನಡ ಸೇವೆ ಅಂದು ಜುಲೈನ ಒಂದು ಗುರುವಾರದ ಮಧ್ಯಾಹ್ನ. ಹೊರಗೆ ಜಿಟಿಪಿಟಿ ಸುರಿಯುತ್ತಿದ್ದ ಮುಂಗಾರಿನ ಮಳೆ ಊಟಕ್ಕಾಗಿ ಮನೆಗೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳ ಆತಂಕವನ್ನು ಸಹಜವಾಗಿಯೇ ಹೆಚ್ಚು ಮಾಡಿತ್ತು. ಊಟದ ಅವಧಿಗಿಂತ ಮೊದಲಿನ ಅಂದರೆ ಬೆಳಗಿನ ಶಾಲಾ ಅವಧಿಯ ಕೊನೆಯ ಪೀರಿಯಡ್ ಪ್ರಾರಂಭವಾಗಿತ್ತು. ನಾವು ಒಂಬತ್ತನೇ ತರಗತಿಯ “ಎ” ವಿಭಾಗದ ವಿದ್ಯಾರ್ಥಿಗಳಿಗೆ ಅಂದು ವೇಳಾಪಟ್ಟಿಯ ಪ್ರಕಾರ ಕನ್ನಡ ತರಗತಿ ಇತ್ತು. ನಮಗೆ ಆ ವರ್ಷ ಶಾಲೆ ಆರಂಭವಾಗಿ ಸುಮಾರು ಒಂದೂವರೆ ತಿಂಗಳುಗಳು ಕಳೆದಿದ್ದರೂ ಕನ್ನಡ ತರಗತಿಗಳು…

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು

ಜಲ ಸಂಸ್ಕೃತಿಯ ಪ್ರಾರ್ಥನೆ ಮತ್ತು ಬಲಿದಾನಗಳು ನೀರನ್ನ ಮುಗಿಲಿಗೇರಿಸಿ ದೈವೀಕರಿಸಿ ಪ್ರಾರ್ಥಿಸುವ,ನೀರನ್ನ ನೆಲದಲ್ಲೇ ಕಂಡು ಸಂಭ್ರಮದಿಂದ ಹಾಡುವ ಇಬ್ಬಗೆಯ ಸಂಸ್ಕೃತಿಗಳು ನಮ್ಮೊಳಗಿವೆ.ನೀರನ್ನ ಪಂಚಭೂತಗಳಲ್ಲಿ ಒಂದೆಂದು ಅದು ಪಶು,ಪಕ್ಷಿ,ಮೊದಲಾದ ಕೋಟ್ಯಾಂತರ ಜೀವರಾಶಿಗೂ ಸಸ್ಯ ಸಂಕುಲಕ್ಕೂ ಅಗತ್ಯವೆಂಬಂತೆಯೇ ನೀರಿನಿಂದಲೇ ಇವುಗಳೆಲ್ಲದವರ ನಾಶ ಎಂಬ ಇಬ್ಬಗೆಯ ಸತ್ಯಗಳೂ ಇವೆ. ಒಂದಕ್ಕೆ ಮನೋಹರ ರೂಪ ಅಂಟಿಕೊಂಡರೆ ಮತ್ತೊಂದಕ್ಕೆ ಭೀಕರ ಸ್ವರೂಪವಿದೆ. ” ಮಳೆಯಿಂದ ಅನ್ನ,ಯಜ್ಞದಿಂದ ಮಳೆ “ಎಂದು ಭಗದ್ಗೀತೆ ಹೇಳಿದರೆ,”ಬಿಸಿಲು ಕುಣಿದು ಬೆವತಾದ ಈಗ ಬಂದಾದ ಮಳಿಯ ಹದಕ” ಎಂದು ಬೇಂದ್ರೆಯವರ ಕವಿತೆ…

ಸಿದ್ದು-ಡಿಕೆಶಿ ಹಾವು ಏಣಿ ಆಟ

ಮುಂದಿನ ಮುಖ್ಯಮಂತ್ರಿ ಯಾರೆಂಬ ಬಹಿರಂಗ ಹೇಳಿಕಾ ಸಮರ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ತಣ್ಣಗಾಗಿದೆ. ಆದರೆ ಒಳಗೊಳಗೆ ಪರಸ್ಪರ ಇರಿಯುವ ಹುನ್ನಾರ ಸಾಗಿದೆ. ಪಕ್ಷವನ್ನು ಗೆಲ್ಲಿಸುವ ಸಾಮೂಹಿಕ ಯೋಚನೆಯಾಗಲೀ ಯೋಜನೆಯಾಗಲೀ ಕಾರ್ಯತಂತ್ರವಾಗಲೀ ಕಾಣಿಸುತ್ತಿಲ್ಲ. ಹೈಕಮಾಂಡ್ ಕೂಡಾ ಈ ವಿಚಾರದಲ್ಲಿ ಸ್ಪಷ್ಟ ನಿಲುವು ನಿರ್ಧಾರ ವ್ಯಕ್ತಪಡಿಸದೆ ಇರುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ. ಸಿದ್ದು-ಡಿಕೆಶಿ ಹಾವು ಏಣಿ ಆಟ ಹೈಕಮಾಂಡ್ ಸೂಚನೆಗೆ ಜಗ್ಗದಬಗ್ಗದ ರೀತಿಯಲ್ಲಿ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಕರ್ನಾಟಕದಲ್ಲಿ ಮುಂದುವರಿದಿದೆ. ಕೆಲವರು ಬಹಿರಂಗದಲ್ಲಿ ತಮ್ಮ ಅಂತರಂಗವನ್ನು ಬಿಚ್ಚಿಡುತ್ತಿದ್ದರೆ ಹಲವರು ಅಂತರಂಗದಲ್ಲಿ…

ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ!

೨೦೧೨ ಛತ್ತೀಸಗಢದ ಬಿಜಪುರ ಜಿಲ್ಲೆ ಸರ್ಕೇಗುಡದಲ್ಲಿ ನಡೆದ ಹುಸಿಬಾಂಬ್ ಎನೌಂಟರ್ ನಡೆದು ಒಂಬತ್ತು ವರ್ಷಗಳಾಗಿವೆ ಈ ಕುರಿತು ವರದಿ ನೀಡಿದ ಆಯೋಗ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ೧೭ ಮಂದಿಯ ಪೈಕಿ ಯಾರೂ ಮೌವೋವಾದಿಗಳಾಗಿರಲಿಲ್ಲ ಎಂದು ಹೇಳಿದೆ ಆದರೂ ಈ ಬಗ್ಗೆ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಇದೇ ಈ ದೇಶದ ದುರಂತ ಆದಿವಾಸಿಗಳ ನರಮೇಧ- ನ್ಯಾಯವಿನ್ನೂ ಬಿಸಿಲುಗುದುರೆ! ಈ ದೇಶದಲ್ಲಿ ದಲಿತರು ಆದಿವಾಸಿಗಳು ಅಲ್ಪಸಂಖ್ಯಾತರು ಮಲತಾಯಿ ಮಕ್ಕಳು. ಛತ್ತೀಸಗಢದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ ೨೦೧೨ರಲ್ಲಿ ನಡೆದ ಹುಸಿ ಎನ್ಕೌಂಟರೊಂದು…

ಜ್ಞಾನ – ವಿಜ್ಞಾನ

ಪರಿಚಯ: ಕವಯತ್ರಿಯಾಗಿ ಕನ್ನಡಸಾಹಿತ್ಯದಲ್ಲಿ ಗುರುತಿಸಿಕೊಂಡು ಹಲವು ಪ್ರಾಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ವಿಶಾಲಾ ಆರಾಧ್ಯ ಅವರು ಕನ್ನಡ ಎಂ. ಎ. ಪದವೀಧರರು. ಮೂಲತ: ಬೆಂಗಳೂರಿನವರಾದ ಇವರು ಸಮಾಜದ ಸಮಸ್ಯೆಗಳು, ಮನುಷ್ಯನ ಸಂಬಂಧಗಳು, ಮಕ್ಕಳ ಒಳಮನಸ್ಸನ್ನು ಒಳಹೊಕ್ಕು ನೋಡುವ ದೃಷ್ಠಿಯುಳ್ಳವರು. ೩೦ ವರ್ಷಗಳಿಂದ ಅಕ್ಷರಲೋಕದ ಒಡನಾಟದಲ್ಲಿರುವ ಇವರ ಸಾಹಿತ್ಯ ಅನೇಕ ಪತ್ರಿಕೆ, ವಾರಪತ್ರಿಕೆ, ಮಾಸಿಕಗಳಲ್ಲಿ ಪ್ರಕಟವಾಗಿದ್ದರೂ ಅವರ ಮೊದಲ ಪುಸ್ತಕ ಬಿಡಿಗಡೆಯಾಗಿದ್ದು ೨೦೧೭ ರಲ್ಲಿ. ಇದುವರೆವಿಗೂ ೫ ಪುಸ್ತಕಗಳನ್ನು ಕನ್ನಡನಾಡಿಗೆ ನೀಡಿರುವ ಇವರ ಪುಸ್ತಕಗಳು ‘ಕಸಾಪ’ ದ…

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು!

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು! ನೇರಳೆ ತೋಟದಿಂದ ಸಿದ್ಧಬಾಲಕನು ಹುಡುಗರೊಂದಿಗೆ ಮನೆಯಕಡೆಗೆ ಹೊರಟನು. ದಾರಿಯಲ್ಲಿ ಒಂದು ಹಾವು ಬಿದ್ದಿತ್ತು. ಅದನ್ನು ಕಂಡೊಡನೆಯೇ ಹುಡುಗರೆಲ್ಲಾ ಭಯಪಟ್ಟು ಕಂಗಾಲಾಗಿ ಅತ್ತಿತ್ತ ದೂರಕ್ಕೆ ಓಡಿಹೋದರು. ಸಿದ್ಧನು ಹೆದರಲಿಲ್ಲ.ಹತ್ತಿರಕ್ಕೆ ಹೋಗಿ ಪರಿಶೀಲಿಸಿದನು. ಒಂದು ಸಣ್ಣ ಕಲ್ಲನ್ನು ಎಸೆದನು. ಅದು ಅಲುಗಾಡಲಿಲ್ಲ.ಹಾವು ಸತ್ತಿರುವುದನ್ನು ಮನಗಂಡನು.ಬಳಿಕ ಮಿತ್ರರನ್ನೆಲ್ಲಾ ಕೂಗಿ ಕರೆದನು. “ಏಕೆ ಹೆದರುತ್ತೀರೋ? ಬನ್ನಿ! ಇದು ಸತ್ತ ಹಾವು” ಎಂದನು. ಹುಡುಗರು ನಂಬಲಿಲ್ಲ. ಮುಂದಕ್ಕೆ ಹೆಜ್ಜೆ ಇಡಲು ಹಿಂಜರಿದರು. ಆಗ ಸಿದ್ಧನು, ಆ ಸತ್ತ ಹಾವನ್ನು…

ಸ್ನೇಹ,ನಂಬಿಕೆ ಮತ್ತು ಅಗೋಚರ ಶಕ್ತಿ…

ಸ್ನೇಹ,ನಂಬಿಕೆ ಮತ್ತು ಅಗೋಚರ ಶಕ್ತಿ ಭಾರತ್ ವಿಜಯ್ ಮಿಲ್ಸ್ ಕಾಂಪೌಂಡಿನಲ್ಲಿ ಕಾಲಿಡುತ್ತಿದ್ದಂತೆಯೇ ಜೊತೆಯಲ್ಲಿದ್ದ ಸಹೋದ್ಯೋಗಿ ಖತ್ರಿ ನಾವು ಹೋಗಬೇಕಿದ್ದ ಮಾರ್ಕೆಟಿಂಗ್ ವಿಭಾಗದತ್ತ ಸರಸರನೆ ನಡೆಯತೊಡಗಿ ನನಗೆ ದಾರಿತೋರಿಸುವಂತೆ ಮುನ್ನಡೆಯತೊಡಗಿದ್ದ. ಮುಖ್ಯ ದ್ವಾರದಲ್ಲಿದ್ದ ರಿಸೆಪ್ಷನ್ ನಲ್ಲಿ ನಾವು ಎಕ್ಸ್ ಪೋರ್ಟ್ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅನೆರಾವ್ ಅವರನ್ನು ಭೇಟಿ ಮಾಡಲು ಬಂದಿದ್ದೇವೆ ಎಂದು ನೊಂದಾಯಿಸಿ ಮೊದಲನೇ ಮಹಡಿಯಲ್ಲಿದ್ದ ಅನೆರಾವ್ ಅವರ ಕೋಣೆಗೆ ಹೋದೆವು. ಅನೆರಾವ್ ಯಾವುದೋ ಮೀಟಿಂಗ್ ನಲ್ಲಿ ವ್ಯಸ್ತವಾಗಿದ್ದ ಕಾರಣ ಅವರ ಕೋಣೆಯಿಂದ ಮೂರನೇ ಕೋಣೆಯಲ್ಲಿದ್ದ ಸಿಇಒ…

ಕೊಪ್ಪಳವೆಂಬ ಮಹಾಕೊಪಣಾಚಲ

ಕೊಪ್ಪಳವೆಂಬ ಮಹಾಕೊಪಣಾಚಲ ಕೊಪ್ಪಳವು ಮಧ್ಯ ಕರ್ನಾಟಕದ ಪ್ರಸಿದ್ಧ ಪ್ರಾಚೀನ ಎಡೆ. ಇದು ಶಿಲಾಯುಗ ಕಾಲದಿಂದಲೂ ಮಾನವನ ವಸತಿ ತಾಣ. ನೂತನ ಶಿಲಾಯುಗದ ಕೊಡಲಿ, ಮಡಕೆಗಳು, ಬೃಹತ್ ಶಿಲಾಯುಗದ ಕಲ್ಗೋರಿಗಳು(ಮೋರೇರ ಮನೆ) ಇಲ್ಲಿವೆ. ಮೌರ್ಯ ಅಶೋಕನ ಎರಡು ಬಂಡೆಗಲ್ಲು ಶಾಸನಗಳು ಕಂಡುಬಂದಿರುವುದು ಇಲ್ಲಿನ ಗವಿಮಠ ಮತ್ತು ಪಾಲ್ಕಿಗುಂಡುಗಳಲ್ಲಿ. ಶಾತವಾಹನ ಕಾಲದ ೫೫೩೪ ಮುದ್ರಾಂಕಿತ ನಾಣ್ಯಗಳ ರಾಶಿಯೇ ಇಲ್ಲಿನ ಚಿಕ್ಕಸಿಂಧೋಗಿಯಲ್ಲಿ ದೊರೆತಿರುವುದು ಗಮನಾರ್ಹ. ಬ್ರಾಹ್ಮಿ ಲಿಪಿಯಲ್ಲಿರುವ ಸಿರಿಸತಕನಿ ಎಂಬ ನಾಣ್ಯ ದೊರೆತಿದೆ. ಚಂದ್ರವಳ್ಳಿಯ ಕ್ರಿ.ಶ. ೪೫೦ರ ಶಾಸನದಲ್ಲಿ ಕುಪಣ ಉಲ್ಲೇಖವಿದ್ದು,…

ಒಂದು ಗುಜರಾತಿ ರಾಜಕೀಯ ಕವಿತೆ ಎಬ್ಬಿಸಿದ ಕೋಲಾಹಲ!

ಒಂದು ಗುಜರಾತಿ ರಾಜಕೀಯ ಕವಿತೆ ಎಬ್ಬಿಸಿದ ಕೋಲಾಹಲ! ಐವತ್ತೊಂದರ ಹರೆಯದ ಆ ಗೃಹಿಣಿಯ ಹೆಸರು ಪಾರುಲ್ ಖಕ್ಕಡ್. ಅಹ್ಮದಾಬಾದ್ ನಿಂದ ೨೦೦ ಕಿ.ಮೀ.ದೂರದಲ್ಲಿರುವ ಅಮ್ರೇಲಿಯ ನಿವಾಸಿ. ಕವಿತೆಯೊಂದನ್ನು ಬರೆದು ವಿವಾದದ ಬಿರುಗಾಳಿಗೆ ಸಿಕ್ಕಿದ್ದಾರೆ. ಆದರೂ ಧೃತಿಗೆಡದೆ ನಿಂತಿದ್ದಾರೆ ಈ ದಿಟ್ಟ ಹೆಣ್ಣುಮಗಳು. ಬೆಂಬಲ ನೀಡಿದ ಬರೆಹಗಾರ ಲೋಕಕ್ಕೆ ಅವರು ನೀಡಿರುವ ಜವಾಬು- ’ಯಾವುದೇ ಒತ್ತಡ ಕಿರುಕುಳ ನನ್ನನ್ನು ಬಾಧಿಸಿಲ್ಲ, ನಿಮಗೆ ಸರಿ ತೋಚಿದ್ದನ್ನು ನೀವು ಮಾಡಿರಿ’. ಇತ್ತೀಚೆಗೆ ತಮ್ಮನ್ನು ಸಂಪರ್ಕಿಸಲು ಬಯಸಿದ ಬಿ.ಬಿ.ಸಿ. ಸುದ್ದಿ ಸಂಸ್ಥೆಯ ಬಾತ್ಮೀದಾರನಿಗೆ…

ರೀಲ್ ಮತ್ತು ರಿಯಲ್

           ರೀಲ್ ಮತ್ತು ರಿಯಲ್ ಆ ನಮ್ಮ ಊರಿನ ಅಂದ ಬಣ್ಣಿಸಲು ಬಲು ಸೊಗಸು. ಮೊದಲಿಗೇ ಒಂದು ಬಾವಿ ಇತ್ತು. ಅದು ಇಷ್ಟು ಸುಂದರವಾಗಿತ್ತೆಂದರೆ ಅದು ಥೇಟ್ ಗೋಡೆ ಗಡಿಯಾರದ ತರ ಇತ್ತು. ಗಡಿಯಾರದ ಕೆಳಭಾಗದಂತೆ ಇರುವ ಭಾಗದಲ್ಲಿ ಮೆಟ್ಟಿಲುಗಳು ಮಧ್ಯದಲ್ಲಿರುವ ಸಂಖ್ಯೆಗಳ ದುಂಡಾದ ಭಾಗ ಬಾವಿಯ ನೀರು ಇದ್ದಂತ ಸುಂದರ ಬಾವಿ. ಅದರ ಪಕ್ಕ ಸ್ವಲ್ಪವೇ ಜಾಗ ಅಂದರೆ ಒಂದು ಮೀ. ಜಾಗ ಬಿಟ್ಟಿದ್ದರು ಅಲ್ಲಿ ಒಂದು ಮನೆ ಇತ್ತು.…

ಸಂತೆ ಎಂಬ ಸಾಂಸ್ಕೃತಿಕ ಸಂಕಥನ

ಸಂತೆ ಎನ್ನುವುದು ಭಾರತೀಯ ಸಂಸ್ಕೃತಿಯ ಒಂದು ಹೆಗ್ಗರಿತು, ಈ ಮೂಲಕವೇ ಜಾನಪದ ಪರಂಪರೆಯ ಉನ್ನತೀಕರಣವೂ ಕೂಡ ಇಂತ ಸಂತೆ ಈಗ ಬದಲಾವಣೆಗೊಂಡಿದೆ ಮಾಲ್‌ಗಳ ಸಂಸ್ಕೃತಿಯಾಗಿದೆ ಈ ಬಗ್ಗೆ ಕುರಿತು ಡಾ.ಶಿವಕುಮಾರ್ ಕಂಪ್ಲಿ ಅವರ ಲೇಖನ ಸ್ತುತ್ಯರ್ಹವಾಗಿದೆ. ಸಂತೆ ಎಂಬ ಸಾಂಸ್ಕೃತಿಕ ಸಂಕಥನ ಆನ್ ಲೈನ್ ಶಾಪಿಂಗ್ ,ಬಿಗ್ ಬಜಾರ್,ಸೂಪರ್ ಮಾರ್ಕೆಟ್ ಗಳಂತಹ ಪದಾರ್ಥ ಕೇಂದ್ರಿತ ಮಾರುಕಟ್ಟೆಗಳ ನೆನಪುಗಳು ಹಳ್ಳಿ ನೆನಪುಗಳ ಸಾಂಸ್ಕೃತಿಕ ಸಂತೆಯನ್ನ ನೆನಪಿಸಿತು.” ಅವ್ವನ ಸೆರಗ ಚುಂಗಿಡಿದು ಹೊಲಗಳ ಹಸಿರು,ಕರಿ ಕಲ್ಲು ದಾರಿಗಳ ಕಾಲು ನಡಿಗೆಯಲ್ಲಿ…

ಸಿದ್ದು ಡಿಕೆಶಿ ನಡುವೆ ನಿಲ್ಲದ ಕಾದಾಟ

ಕರ್ನಾಟಕದಲ್ಲಿ ಹಾಲಿ ಸಿಎಂ ಯಡಿಯೂರಪ್ಪ ಪದಚ್ಯುತಿ ಯತ್ನ ಆಡಳಿತ ಪಕ್ಷದೊಳಗಡೆ ಗುದಮುರಗಿ ನಡೆಸಿದೆ. ಅದೇ ಕಾಲಕ್ಕೆ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ನ ಅಜೆಂಡವಾಗಿದೆ. ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನೆ ಭವಿಷ್ಯದ ಮುಖ್ಯಮಂತ್ರಿ ಎಂದು ಟಾಂಟಾಂ ಮಾಡುತ್ತಿದ್ದಾರೆ. ಡಿಕೆಶಿ ಬೆಂಬಲಿಗರು ಬಾಯಿ ಬಿಡುತ್ತಿಲ್ಲ ಹಾಗಂತ ಬಾಯಿಬಾಯಿ ಬಿಡುತ್ತಲೂ ಇಲ್ಲ. ಏತನ್ಮಧ್ಯೆ ಬಾಯಿ ಮುಚ್ಚಿ ಕೂರುವಂತೆ ಸಿದ್ದು ಬೆಂಬಲಿಗರನ್ನೂ ಒಳಗೊಂಡಂತೆ ಕಾಂಗ್ರೆಸ್ಸಿಗರಿಗೆ ಏಐಸಿಸಿ ತಾಕೀತು ಮಾಡಿದೆ. ಕೆಪಿಸಿಸಿ ಪುನಾರಚನೆಗೆ ಡಿಕೆಶಿ ಮುಂದಾಗಿದ್ದಾರೆ ಆದರೆ ಅದಕ್ಕೆ…

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ

ವಿಷಯ-ವಿಷಯವಾಸನೆ-ಇಂದ್ರಿಯನಿಗ್ರಹ. ನೇರಳೆ ಹಣ್ಣಿನ ರಾಶಿಯ ಬಗ್ಗೆ ಆಡಿದ ಸಿದ್ಧನ ಮಾತು, ಹುಡುಗರ ಜ್ಞಾನದ ಕಣ್ಣನ್ನು ತೆರೆಸಿತು! ಈಶನನ್ನು ,ಈಶರೂಪಿ ಸಿದ್ಧನನ್ನು ಮರೆತಿದ್ದಕ್ಕೆ ಮರುಕಪಟ್ಟರು. ” ತಾವು ತಪ್ಪು ಮಾಡಿರುವುದರಿಂದ ಇನ್ನು ಹಣ್ಣು ತಿನ್ನುವುದು ಬೇಡ, ಇವುಗಳನ್ನು ಇಲ್ಲಿಯೇ ಬಿಟ್ಟು ಮನೆಗೆ ಹಿಂದಿರುಗೋಣ” – ಎಂದರು. ಆಗ ಸಿದ್ಧ ಹೇಳಿದನು; ” ಹಣ್ಣು ಬಿಡಬಹುದು, ಆದರೆ ಅವುಗಳನ್ನು ನೋಡುವ ಕಣ್ಣುಗಳನ್ನು ಬಿಡಲಾಗದು”. ಹಣ್ಣು ಹೆಣ್ಣು ಗಂಡು ಹೊನ್ನು ಮಣ್ಣು ಮತ್ತೊಂದು ಇವೆಲ್ಲ ವಿಷಯಗಳು . ಈ ಎಲ್ಲಾ ಪ್ರಾಪಂಚಿಕ…

ಪ್ರಾಮಾಣಿಕತೆ ಮತ್ತು ಬದುಕಿನ ಹಾದಿ…

ಪ್ರಾಮಾಣಿಕತೆ ಮತ್ತು ಬದುಕಿನ ಹಾದಿ… ಅದು 1996ರ ಏಪ್ರಿಲ್ ಮಾಸ. ಜೆ. ಸಿ. ರಸ್ತೆಯಲ್ಲಿರುವ ಕೆನರಾಬ್ಯಾಂಕ್ ಪ್ರಧಾನಕಚೇರಿಯವರು ಗ್ರಾಮೀಣ ಭಾಗಗಳಲ್ಲಿ ತಾಂತ್ರಿಕ ಅಭಿವೃದ್ದಿಯನ್ನ ಹೇಗೆ ಕಾರ್ಯಗತಗೊಳಿಸಬಹುದು ಎನ್ನುವುದರ ಕುರಿತು ಮೂರು ದಿನಗಳ ಒಂದು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದರು. ಬೆಂಗಳೂರು ಮೂಲದ ಎಲ್ಲಾ ದೊಡ್ಡ ಕಂಪನಿಗಳ ಪ್ರತಿನಿಧಿಗಳನ್ನೂ ಕಾರ್ಯಾಗಾರಕ್ಕೆ ಆಹ್ವಾನಿಸಿದ್ದರು. ನಾನು ಮತ್ತು ನನ್ನ ಹಿರಿಯ ಸಹೋದ್ಯೋಗಿ ಜೈನ್ ಈ ಕಾರ್ಯಾಗಾರದಲ್ಲಿ ನಮ್ಮ ಕಂಪನಿಯ ಪ್ರತಿನಿಧಿಗಳು ಎಂದು ನಾಮಕರಣ ಮಾಡಲ್ಪಟ್ಟಿದ್ದೆವು. ಕಂಪನಿಯವತಿಯಿಂದ ಕಾರ್ಯಾಗಾರಕ್ಕೆ ಬಂದ ಎಲ್ಲಾ ಪ್ರತಿನಿಧಿಗಳಿಗೆ ಸಣ್ಣ…

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್

ಇಬ್ರಾಹಿಂ ಆದಿಲ್‌ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್ ಕರ್ನಾಟಕದ ಚರಿತ್ರೆಯಲ್ಲಿ ವಿಜಯಪುರದ ಆದಿಲ್‌ಶಾಹಿಗಳ ಪಾತ್ರ ಗಮನಾರ್ಹ. ಈ ಮನೆತನವು ಎರಡು ಶತಮಾನ(೧೬-೧೭)ಗಳ ಕಾಲ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ನಡೆಸಿದೆ. ಈ ಮನೆತನದ ಅರಸರಲ್ಲಿ ೨ನೆಯ ಇಬ್ರಾಹಿಂ ಆದಿಲ್‌ಶಹನ(೧೫೮೦-೧೬೨೭) ಕಾಲ ವರ್ಣರಂಜಿತವಾದದ್ದು. ತನ್ನ ೪೭ ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ಸುಭದ್ರಗೊಳಿಸಿದ್ದನು. ಆಡಳಿತವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ದೃಷ್ಟಿಕೋನವುಳ್ಳ ವ್ಯಕ್ತಿತ್ವ ಅವನದಾಗಿತ್ತು. ಇವನ ಅವಧಿಯಲ್ಲಿ ರಾಯಚೂರು ಮತ್ತು ಮುದಗಲ್ಲು ಕೋಟೆಯ…

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?

ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ? ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ. ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ.…

ಸೀರೆ-ಸೆರಗು ಒಂದು ಜನಪದ ನೋಟ

ಸೀರೆ-ಸೆರಗು ಒಂದು ಜನಪದ ನೋಟ ’ ಸೀರೆ’ ಎಂಬ ಪದವು ವಿಭಿನ್ನ ಸಂಸ್ಕೃತಿಗಳನ್ನ ಸಾರುವ ಪದ. ಇದು ನಾಡನ್ನ ಉತ್ತರ ದಕ್ಷಿಣಗಳೆಂದೂ,ವಿಭಜಿಸುವುದು. ಕರ್ನಾಟಕ,ಮಹಾರಾಷ್ಟ್ರ,ಕೇರಳ,ಗುಜರಾತಿ,ಬೆಂಗಾಲಿ ಎಂದು ಉಡುವ ಕ್ರಮಗಳಲ್ಲಿನ ವೈವಿಧ್ಯತೆಗಳನ್ನ ತೋರುವವುದು. ಬ್ರಹ್ಮಣರು,ಮಾರವಾಡಿಗಳು,ಮುಸ್ಲಿಮರು, ಗೌಡತೀರು,ನೌಕರಸ್ಥರು,ಕೂಲಿಗಳು,ಗೃಹಿಣಿಯರು,ವಿಧವೆಯರು,ಕಲಾವಿದರು,ಸಾಮಾನ್ಯರು ಎಂಬ ಬಹುರೂಪಗಳನ್ನ,ಅಜ್ಜಿ,ಅವ್ವ,ಮಗಳು ಎಂಬ ತಲೆ ತಲಾಂತರಗಳನ್ನ ಸಾರುವುದು. ಸೀರೆ ಬಡತನವನ್ನ ತೋರುವ ರೀತಿಯಂತೆಯೇ ಸೀರೆಗೆ ಶ್ರೀಮಂತಿಕೆಯನ್ನೂ ಸಾರುವ ಸಾಮರ್ಥ್ಯವಿದೆ. ಋತುಮತಿ ಶಾಸ್ತ್ರ,ನಿಶ್ಚಿತ ಶಾಸ್ತ್ರ,ಧಾರೆ ಶಾಸ್ತ್ರ,ಪ್ರಸ್ತ,ಸೀಮಂತ,ತೊಟ್ಟಿಲ ಸೀರೆ,ವಿಧವಾ ಸೀರೆ ಎಂಬ ರೂಪಗಳನ್ನ ಪಡೆದಿರುವಂತೆಯೇ ಇದು ದೈನಂದಿನ ಸೀರೆ,ವೃತ್ತಿ ಸೀರೆ,ವಿಶೇಷ ಸಂದರ್ಭಗಳ ಸೀರೆ ಎಂದು ಆಯ್ಕೆಯನ್ನೂ…

1 6 7 8 9 10
error: Content is protected !!