ಅಂಕಣ
ಬಣ್ಣದ ಬುಗರಿ
ಬಣ್ಣದ ಬುಗರಿ ಹೊರಾಂಗಣದ ಆಟಗಳಲ್ಲಿ ಗೋಲಿ, ಬಗರಿ, ಲಗೋರಿ ಇವು ಸಣ್ಣ ಸಣ್ಣ ಮಕ್ಕಳು ಇಷ್ಟ ಪಡುವ ಅತ್ಯಂತ ಸರಳ ಆಟಗಳು. ನಾವೂ ಸಹ ಬಾಲ್ಯದಲ್ಲಿ ಇವನ್ನು ಆಟವಾಡಿಯೇ ಬೆಳೆದೆವು. ಇವು ಗಂಡು ಮಕ್ಕಳ ಆಟಗಳೆಂದು ಗೊತ್ತಿದ್ದರೂ ಕೆಲವೊಮ್ಮೆ ಆಟ ಆಡುತ್ತಿದ್ದೆವು. ಹೆಣ್ಣುಮಕ್ಕಳ ಆಟಗಳಾದ ಕುಂಟುಬಿಲ್ಲೆ, ಮತ್ತು ಬೆಟ್ಟ ಹತ್ತುವ ಆಟಗಳು ಪರಿಕರಗಳೇನೂ ಇಲ್ಲದೆ ಆಡುವ ಆಟಗಳಾಗಿದ್ದವು. ನಮ್ಮ ಮನೆಯು ಶಾಲೆಯ ಪಕ್ಕದಲ್ಲೇ ಇದ್ದ ಕಾರಣ ಸದಾ ಮಕ್ಕಳ ಕಲರವ ಇರುತ್ತಿತ್ತು. ಅದರೊಂದಿಗೆ ಆಟ ಪಾಠಗಳೂ ಇರುತ್ತಿದ್ದವು.…